ಭಾರತ(India) ವಿವಿಧತೆಯ ಬೀಡು ಎಂಬುದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲ ಧರ್ಮಗಳ ಜನರು ಒಟ್ಟಿಗೆ ಸಾಮರಸ್ಯದಿಂದ ಬದುಕುತ್ತಿರುವ ದೇಶ ಇದು. ಇನ್ನು ಕರ್ನಾಟಕದ ಸಹ್ಯಾದ್ರಿ ತಪ್ಪಲಿನ ಶಿವಮೊಗ್ಗದ(Shivmogga) ಸಾಗರ(Sagar) ತಾಲೂಕು ಸಾಮರಸ್ಯದ ಬದುಕಿಗೆ ಮತ್ತೊಂದು ಉತ್ತಮ ಉದಾಹರಣೆಯನ್ನು ನೀಡಿದೆ. ಇಲ್ಲಿನ ಹಿಂದೂ ದೇವಾಲಯವೊಂದರಲ್ಲಿ (Hindu Temple)ಮುಸ್ಲಿಂ ಮಹಿಳೆ (Muslim Lady)ಹಾಗೂ ಹಾಗೆಯೇ ಕುಟುಂಬಸ್ಥರು ಈ ನವರಾತ್ರಿಯ ಸಮಯದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಮಾಡುತ್ತಾರೆ.
ಬೆಂಗಳೂರಿನಿಂದ 375 ಕಿಮೀ ದೂರವಿರುವ ಈ ಮಲೆನಾಡಿನ ತಪ್ಪಲಿನಲ್ಲಿ ಫಮೀದಾ ಶರೀಫ್ ಮತ್ತು ಅವರ ಕೆಲ ಸಂಬಂಧಿಕರು ಭಗವತಿ ಅಮ್ಮ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಈ ದೇವಲಯವನ್ನು ರಯಲ್ವೆ ಇಲಾಖೆ ನೀಡಿದ ಜಾಗದಲ್ಲಿ ಫಮೀದಾ ಅವರ ದಿವಂಗತ ಪತಿ ಇಬ್ರಾಹಿಂ ಶರೀಫ್ ಅವರು 50 ವರ್ಷದ ಹಿಂದೆ ನಿರ್ಮಿಸಿದ್ದರು. ಈ ದೇವಾಲಯದ ಬಗ್ಗೆ ಮಾತನಾಡಿದ ಅವರು, ನನ್ನ ಪತಿ ಯುವಕರಾಗಿದ್ದಾಗ ಅವರ ಕನಸಿನಲ್ಲಿ ದುರ್ಗಾ ದೇವಿ ಆಗಾಗ ಕಾಣಿಸಿಕೊಳ್ಳುತ್ತಿದ್ದಳು. ಆಗ ಸಾಗರದ ಸಂತ ವರದಹಳ್ಳಿ ಶ್ರೀಧರ ಸ್ವಾಮಿ ಅವರನ್ನು ಭೇಟಿ ಮಾಡಿ ಸಲಹೆ ಕೇಳಿದರು. ಆದ ಸ್ವಾಮಿಗಳು ಪ್ರತಿದಿನ ದೇವಿಯನ್ನು ಆರಾಧಿಸಲು ತಿಳಿಸಿದ್ದರು ಎಂದು ಫಮೀದಾ ಹೇಳಿದ್ದಾರೆ.
ಇದನ್ನೂ ಓದಿ: ಮಳೆಯಿಂದ ಫೀಡರ್ಗಳಿಗೆ ಹಾನಿ - ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್
ಕೇರಳ ಮೂಲದವರಾಗಿರುವ ಇಬ್ರಾಹಿಂ ರೈಲ್ವೆ ಇಲಾಖೆ ಜೊತೆ ಸೇರಿ ದೇವಾಲಯ ನಿರ್ಮಿಸಲು ನಿರ್ಧರಿಸಿದರು. ಆದರೆ ಅವರ ಈ ಯೋಜನೆಯನ್ನು ಹಲವಾರು ಜನರು ವಿರೋಧಿಸಿದ್ದರು. ಆದರೆ ಎಲ್ಲಾ ವಿರೋಧಗಳನ್ನು ದಾಟಿ ಅವರು ಆ ದೇವಾಲಯವನ್ನು ನಿರ್ಮಿಸುವಲ್ಲಿ ಶರೀಫ್ ಯಶಸ್ವಿಯಾದರೂ. ಅಲ್ಲದೇ ಹಿಂದೂಗಳ ಕಮಿಟಿ ನಿರ್ಮಿಸಿ ಅದನ್ನು ಅವರಿಗೆ ಒಪ್ಪಿಸುವ ತನಕ ಸಹ ದೇವಾಲಯವನ್ನು ಅದ್ಭುತವಾಗಿ ನೋಡಿಕೊಂಡಿದ್ದಲ್ಲದೇ, ಪ್ರತಿದಿನ ಪೂಜೆ ನೆರವೇರಿಸುತ್ತಿದ್ದರು.
ಕೆಲ ವರ್ಷಗಳ ನಂತರ ಅವರು ಬೇರೆ ಸ್ಥಳಕ್ಕೆ ತೆರಳಿದರೂ ಸಹ ಅವರು ಮತ್ತು ಅವರ ಕುಟುಂಬಸ್ಥರು ವಿಶೇಷ ಸಂದರ್ಭಗಳಲ್ಲಿ ಪೂಜೆಯನ್ನು ಮಾಡುವ ಸಂಪ್ರಾದಯವನ್ನು ಮುಂದುವರೆಸಿಕೊಂಡು ಬಂದಿದ್ದರು. ಶರೀಫ್ ಅವರ ನಿಧನದ ನಂತರ ಸಹ ಅವರ ಕುಟುಂಬಸ್ಥರು ವಿಶೇಷ ಪೂಜೆಗಳನ್ನು ಮಾಡುವುದನ್ನ ನಿಲ್ಲಿಸಿಲ್ಲ ಎನ್ನುತ್ತಾರೆ ಫಮೀದಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ