• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress: ಹಿಂದೂಯೇತರರಿಗೆ ದೇವಾಲಯಗಳ ಬಳಿ ವ್ಯಾಪಾರ ವಹಿವಾಟಿಗೆ ಗುತ್ತಿಗೆ ನೀಡಬಾರದೆಂಬ ನಿಯಮ ಕಾಂಗ್ರೆಸ್ ಸರ್ಕಾರದಲ್ಲೇ ಜಾರಿ

Congress: ಹಿಂದೂಯೇತರರಿಗೆ ದೇವಾಲಯಗಳ ಬಳಿ ವ್ಯಾಪಾರ ವಹಿವಾಟಿಗೆ ಗುತ್ತಿಗೆ ನೀಡಬಾರದೆಂಬ ನಿಯಮ ಕಾಂಗ್ರೆಸ್ ಸರ್ಕಾರದಲ್ಲೇ ಜಾರಿ

ನಿಯಮ ಬರೆದಿರುವ ಪ್ರತಿ

ನಿಯಮ ಬರೆದಿರುವ ಪ್ರತಿ

ಕಾಂಗ್ರೆಸ್ ಸರ್ಕಾರದಲ್ಲೇ ಮಾಡಿರುವ ಈ ನಿಯಮಗಳನ್ನೇ ಮುಂದಿಟ್ಟು ಇಂದು ಹಿಂದೂಪರ ಸಂಘಟನೆಗಳು ಮುಸ್ಲಿಂ ವ್ಯಾಪಾರಸ್ಥರಿಗೆ ಹಿಂದೂ ದೇವಾಲಯಗಳ ಬಳಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಕಟುವಾಗಿ ಪ್ರತಿಪಾದಿಸುತ್ತಿವೆ.

  • Share this:

ಕೊಡಗು(ಮಾ.25): ರಾಜ್ಯದಲ್ಲಿ ಹಿಂದೂ ದೇವಾಲಯಗಳಿಗೆ (Hindu Temoles) ಸಂಬಂಧಿಸಿದಂತೆ 2003 ರಲ್ಲಿ ಏಕರೂಪ ಕಾಯ್ದೆ ತಂದಿದ್ದೆವಷ್ಟೇ, ಹಿಂದೂ ದೇವಾಲಯಗಳ ಆಸ್ತಿ, ಕಟ್ಟಡ ಮತ್ತು ನಿವೇಶನಗಳನ್ನು ಗುತ್ತಿಗೆ ನೀಡಬಾರದು ಎಂದು ಮಾಡಿರುವುದು ನನಗೆ ಗೊತ್ತಿಲ್ಲ ಅಂತ ಮುಜರಾಯಿ ಖಾತೆ ಮಾಜಿ ಸಚಿವೆ ಕೊಡಗಿನ ಸುಮಾ ವಸಂತ್ (Suma Vasant) ಹೇಳಿದ್ದಾರೆ. ಬಪ್ಪಿನಾಡು ಸೇರಿದಂತೆ ವಿವಿಧೆಡೆ ಹಿಂದೂ ದೇವಾಲಯಗಳ ಜಾತ್ರಾ ಮಹೋತ್ಸವದ ಸಂದರ್ಭ ಮುಸಲ್ಮಾನ ವ್ಯಾಪಾರಿಗಳಿಗೆ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶ ನೀಡದಿರುವ ವಿಷಯ ತೀವ್ರ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಮುಜರಾಯಿ ಖಾತೆ ಮಾಜಿ ಸಚಿವೆ ಸುಮಾವಸಂತ್ ಅವರೊಂದಿಗೆ ನ್ಯೂಸ್ 18 ಕನ್ನಡ ನಡೆಸಿದ ಸಂದರ್ಶನದಲ್ಲಿ ಅವರು ಹೀಗೆ ಹೇಳಿದ್ದಾರೆ. ಸುಮಾ ವಸಂತ್ ಅವರು 2001 ರ ಡಿಸೆಂಬರ್ 17 ರಿಂದ 2004 ರವರೆಗೆ ಮುಜರಾಯಿ ಖಾತೆ ಸಚಿವೆಯಾಗಿದ್ದರು.


ಈ ನಡುವೆ 2002 ರಲ್ಲಿ ಹಿಂದೂ ಧರ್ಮದಾಯ ಮತ್ತು ದತ್ತಿ ಇಲಾಖೆ ನಿಯಮಗಳಿಗೆ ತಿದ್ದುಪಡಿ ತರಲಾಗಿತ್ತು. ನಿಯಮ 31(17) ರ 12 ನೇ ಅಂಶದಲ್ಲಿ ಹಿಂದೂ ದೇವಾಲಯ ಸಂಸ್ಥೆಗಳ ಸಮೀಪದ ಆಸ್ತಿ, ಕಟ್ಟಡ ಜಮೀನು ಅಥವಾ ನಿವೇಶನಗಳನ್ನು ಗುತ್ತಿಗೆಗೆ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ನಿಯಮ ಮಾಡಲಾಗಿದೆ.


ಕಾಂಗ್ರೆಸ್ ಸರ್ಕಾರದ ಸಮಯದಲ್ಲೇ ಈ ನಿಯಮ


ಯಾವಾಗಲೂ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತದೆ ಎನ್ನುವ ಆಪಾದನೆ ಹೊತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿಯೇ ಇಂತಹ ನಿಯಮಗಳನ್ನು ಜಾರಿಗೆ ತಂದಿದ್ದು ಯಾಕೆ ಎನ್ನುವ ದೊಡ್ಡ ಪ್ರಶ್ನೆ ಎದುರಾಗಿದೆ. ಇದಕ್ಕೂ ಪ್ರತಿಕ್ರಿಯಿಸಿರುವ ಮಾಜಿ ಸಚಿವೆ ಸುಮಾ ವಸಂತ್ ಇದು ಹೇಗೆ ಜಾರಿಗೆ ಬಂದಿತು ಎನ್ನೋದೆ ಗೊತ್ತಿಲ್ಲ, ಅಧಿಕಾರಿಗಳು ಸೇರಿಸಿರಬಹುದು. ಅಷ್ಟಕ್ಕೂ ಇಂತಹ ನಿಯಮಗಳನ್ನು ಆಯಾ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತಗಳು ಮಾಡಿರುತ್ತವೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ.


ಇದು ನಿಜವೇ?


ಅದು ಹೇಗೆ ಸಾಧ್ಯ, ಎರಡು ಸದನಗಳಲ್ಲಿ ಚರ್ಚೆ ಆಗಿ ಬಳಿಕವಷ್ಟೇ ನಿಯಮಗಳು ಜಾರಿಗೆ ಬರುತ್ತವೆ ಅಲ್ಲವೇ ಎಂಬ ನ್ಯೂಸ್ 18 ಕನ್ನಡದ ಪ್ರಶ್ನೆಗೆ ಸುಮಾವಸಂತ್ ಅವರು ಮೌನವಹಿಸಿದ್ದರು. ಏನೆ ಆದರೂ ಹಿಂದಿನಿಂದಲೂ ಸೌಹಾರ್ದತೆಯಿಂದ ಎಲ್ಲವೂ ಇತ್ತು.


ಕಾಂಗ್ರೆಸ್ ಸರ್ಕಾರ ಮಾಡಿದ ನಿಯಮಗಳು


ಆದರೆ ಚುನಾವಣೆ ಅತ್ತಿರ ಬರುತ್ತಿರುವುದರಿಂದ ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿ ಇದನ್ನು ದಾಳವನ್ನಾಗಿ ಮಾಡಿಕೊಂಡಿವೆ ಎಂದು ಆಪಾದಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲೇ ಮಾಡಿರುವ ಈ ನಿಯಮಗಳನ್ನೇ ಮುಂದಿಟ್ಟು ಇಂದು ಹಿಂದೂಪರ ಸಂಘಟನೆಗಳು ಮುಸ್ಲಿಂ ವ್ಯಾಪಾರಸ್ಥರಿಗೆ ಹಿಂದೂ ದೇವಾಲಯಗಳ ಬಳಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಕಟುವಾಗಿ ಪ್ರತಿಪಾದಿಸುತ್ತಿವೆ.


ಇದನ್ನೂ ಓದಿ: Muslim Shops: ಮುಸ್ಲಿಮರ ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂ ಸಂಘಟನೆಗಳ ಚಿಂತನೆ


ರಾಜ್ಯ ಪೂರ್ವ ವಿಂಗಡಣೆ ಕರ್ನಾಟಕದಲ್ಲಿ ಹಿಂದೂ ದೇವಾಲಯಗಳಿಗೆ ಸಂಬಂಧಿಸಿದಂತೆ ಇದ್ದ ನಿಯಮಗಳಿಗೆ ತಿದ್ದುಪಡಿ ಮಾಡಿ 2003 ರಲ್ಲಿ ಏಕರೂಪ ಕಾಯ್ದೆ ತಂದಿದ್ದೆವು. ಹಿಂದೂಯೇತರ ಅಂದರೆ ಜೈನ, ಬೌದ್ಧ ಮತ್ತು ಸಿಖ್ಖರಿಗೆ ಹಿಂದೂ ದೇವಾಲಯಗಳ ಒಳಭಾಗದಲ್ಲಿ ಯಾವುದೇ ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲ ಎಂದು ಮಾಡಿದ್ದೆವು ಅಷ್ಟೇ ಎಂದಿದ್ದಾರೆ.


ಆದರೆ ಇದರಿಂದ ದೇವಾಲಯಗಳ ಹೊರ ಭಾಗದಲ್ಲಿ ವ್ಯಾಪಾರ ವಹಿವಾಟಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಎಲ್ಲರೂ ಸೌಹಾರ್ದತೆಯಿಂದ ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಈಗ ಸಮಸ್ಯೆ ಎದುರಾಗಿದ್ದರು ಅದನ್ನು ಅವರದೆ ಸರ್ಕಾರ ಇರುವುದರಿಂದ ಸರಿಪಡಿಸಲು ಅವಕಾಶವಿತ್ತು.


ಇದನ್ನೂ ಓದಿ: Bengaluru: ‘ಹಿಂದೂಗಳೇ ಮುಸ್ಲಿಂ ಹೋಟೆಲ್​ಗಳಿಗೆ ಹೋಗ್ಬೇಡಿ‘, ‘ಅವ್ರ ಅಂಗಡಿಯಲ್ಲಿ ಮಾಂಸ ಖರೀದಿಸಬೇಡಿ’; ಕಾಳಿ ಸ್ವಾಮೀಜಿ ಕರೆ


ಅದಕ್ಕೆ ಬದಲಾಗಿ ರಾಜಕೀಯ ಲಾಭ ಪಡೆಯಲು ಮುಂದಾಗಿವೆ ಎಂದು ಆರೋಪಿಸಿದ್ದಾರೆ. ಏನೆ ಆದರೂ ಅಂತಹ ಒಂದು ನಿಯಮವನ್ನು ಕಾಂಗ್ರೆಸ್ ಸರ್ಕಾರವೇ ಮಾಡಿತ್ತು ಎಂಬುದು ನಿರ್ವಿವಾದ.

First published: