ಬಸವತತ್ವಕ್ಕೆ ಮಾರುಹೋದ ಮುಸ್ಲಿಂ ವ್ಯಕ್ತಿ; ಗದಗದಲ್ಲಿ ಪೀಠಾಧಿಪತಿಯಾಗಲಿದ್ದಾರೆ ದಿವಾನ್ ಶರೀಫ್​ ಮುಲ್ಲಾ

ಶ್ರೀ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿಗಳು ಲಿಂಗದೀಕ್ಷೆ ನೀಡಿ ಅವರನ್ನು ಶಿಷ್ಯrನ್ನಾಗಿ ಸ್ವೀಕಾರ ಮಾಡಿದ್ದಾರೆ. ದಿವಾನ್ ಶರೀಫ್​ ಅವರು ಬಸವತತ್ವದ‌ ಆಧಾರದ ಮೇಲೆ‌ ಮುಂದಿನ ಜೀವನ ನಡೆಸಲಿದ್ದಾರೆ.

ಲಿಂಗಾಯತ ಧರ್ಮಕ್ಕೆ ಬದಲಾದ ಮುಸ್ಲಿಂ ಯುವಕ

ಲಿಂಗಾಯತ ಧರ್ಮಕ್ಕೆ ಬದಲಾದ ಮುಸ್ಲಿಂ ಯುವಕ

 • Share this:
  ಗದಗದ ಮುಸ್ಲಿಂ ವ್ಯಕ್ತಿಯೋರ್ವ ಬಸವತತ್ವಕ್ಕೆ ಮಾರುಹೋಗಿದ್ದರು. ಬಸವತತ್ವದ ಆಧಾರದ ಮೇಲೆ ಮುಂದಿನ ಜೀವನ ನಡೆಸಬೇಕು ಎನ್ನುವ ಕನಸು ಕಂಡರು.‌ ಕೊನೆಗೂ ಲಿಂಗದೀಕ್ಷೆ ಪಡೆದು ಇವಾಗ ಒಂದು ಮಠಕ್ಕೆ ಪೀಠಾಧಿಪತಿಯಾಗಲು ಹೊರಟಿದ್ದಾರೆ.

  'ಕುಲದ ನೆಲೆಯನೇನಾದರೂ ಬಲ್ಲಿರಾ?' ಎನ್ನುವ ಕನಕದಾಸರ ಮಾತಿನಂತೆ, ಇಲ್ಲೋರ್ವ ವ್ಯಕ್ತಿಯೋರ್ವ ನಡೆದುಕೊಂಡಿದ್ದಾರೆ. ಹುಟ್ಟಿದ್ದು ಮುಸ್ಲಿಂ ಸಮುದಾಯದಲ್ಲಿ. ಆದರೆ ಬಸವತತ್ವಕ್ಕೆ ಮಾರು ಹೋಗಿ ಲಿಂಗ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ.  ಹೌದು, ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದ ಮುನ್ನ ಎಂಬ ಹೆಸರಿನ ಯುವಕ ದಿವಾನ್ ಶರೀಫ ಮುಲ್ಲಾ ಎಂದು ಹೆಸರು ಬದಲಾವಣೆ ಮಾಡಿಕೊಂಡು ಲಿಂಗದೀಕ್ಷೆ ಪಡೆದುಕೊಂಡಿದ್ದಾರೆ.

  ಶ್ರೀ ಮುರುಘರಾಜೇಂದ್ರ ಕೋರಣೇಶ್ವರ ಸ್ವಾಮೀಜಿಗಳು ಲಿಂಗ ದೀಕ್ಷೆ ನೀಡಿ ಅವರನ್ನು ಶಿಷ್ಯನನ್ನಾಗಿ ಸ್ವೀಕಾರ ಮಾಡಿದ್ದಾರೆ. ದಿವಾನ್ ಶರೀಫ ಅವರು ಬಸವತತ್ವದ‌ ಆಧಾರದ ಮೇಲೆ‌ ಮುಂದಿನ ಜೀವನ ನಡೆಸಲಿದ್ದಾರೆ. ಹಿಂದು ಮುಸ್ಲಿಂ ಭಾವೈಕ್ಯತೆ ಸಾರುವ ನಿಟ್ಟಿನಲ್ಲಿ ಸಮಾಜವನ್ನು ಉದ್ಧಾರ ಮಾಡಲಿದ್ದಾರೆ.

  32 ವರ್ಷದ ದಿವಾನ್ ಶರೀಫ ಮುಲ್ಲಾ ಅವರು ಅಸೂಟಿ ಗ್ರಾಮದ ಹೊರವಲಯದಲ್ಲಿ ಎರಡು ಎಕರೆ ಜಮೀನಿನಲ್ಲಿ ಕೋರಣೇಶ್ವರ ಮಠವೊಂದನ್ನು ನಿರ್ಮಾಣ ಮಾಡುತ್ತಿದ್ದು ಅದೇ ಮಠಕ್ಕೆ ಶರೀಫ ಪೀಠಾಧಿಪತಿ ಆಗಲಿದ್ದಾರೆ. ಶರೀಫ ಅವರಿಗೆ ಈಗಾಗಲೇ ಮದುವೆಯಾಗಿದ್ದು, ನಾಲ್ಕು ಜನ ಮಕ್ಕಳೂ ಸಹ ಇದ್ದಾರೆ. ತಂದೆ ರಹೀಮ ಸಾಬ್ ಹಾಗೂ ತಾಯಿ ಫಾತೀಮ ಕೋರಣೇಶ್ವರ ಮಠದ ಭಕ್ತರಾಗಿದ್ದರು. ಹಾಗಾಗಿ ತಮ್ಮ ಜಮೀನಿನಲ್ಲಿ ಮಠವನ್ನು ಕಟ್ಟಿಸಿ ಬಸವತತ್ವವನ್ನು ಪರಿಪಾಲನೆ ಮಾಡಬೇಕು ಅಂತಾ ಲಿಂಗದೀಕ್ಷೆ ತೆಗೆದುಕೊಂಡಿರೋದಾಗಿ ಹೇಳ್ತಾರೆ ಮುಲ್ಲಾ ಶರೀಫ್ ಸ್ವಾಮಿಗಳು.  ಇದನ್ನೂ ಓದಿ: ಮತ್ತೆ ಚಿಕನ್​​​, ಎಗ್​​​, ಮಟನ್​​ ತಿಂದು ದೇವಸ್ಥಾನ ಉದ್ಘಾಟನೆ ಮಾಡಿದ್ರಾ ಸಿದ್ದರಾಮಯ್ಯ?

  ಹಿಂದ- ಮುಸ್ಲಿಂ ಸಮಾಜದವರು ಭಾವೈಕ್ಯತೆಯಿಂದ ಬಾಳಬೇಕು, ಎಲ್ಲಾ ಸಮುದಾಯದವರಿಗೂ ದೇವರೊಬ್ಬನೇ ನಾಮ ಹಲವು ಎನ್ನುವ ಮಾತಿನಂತೆ ನಾವೆಲ್ಲರೂ ಒಂದಾಗಿ ಬಾಳಬೇಕು ಎನ್ನುವ ನಿಟ್ಟಿನಲ್ಲಿ ಶಾಂತಿಯ ಮಂತ್ರ ಜಪಿಸುತ್ತಾ, ಜಗತ್ತು ಉದ್ಧಾರ ಮಾಡಲು ಹೊರಟ್ಟಿದ್ದಾರೆ ಈ ಸ್ವಾಮೀಜಿ. ಇವರ ಈ ಪ್ರಯತ್ನಕ್ಕೆ ಸಾರ್ವಜನಿಕರೂ ಕೈಜೋಡಿಸಿದರೆ, ಬಸವಣ್ಣ ಕಂಡ ಸಮಸಮಾಜದ ಪರಿಕಲ್ಪನೆ ನಿಜವಾಗುತ್ತದಲ್ಲವೇ.

  (ವರದಿ: ಸಂತೋಷ ಕೊಣ್ಣೂರ)
  First published: