• Home
  • »
  • News
  • »
  • state
  • »
  • Shivamogga: ಮುಸಲ್ಮಾನ್ ಗೂಂಡಾಗಳಿಗೆ ಪೊಲೀಸರ ಹಾಗೂ ಸರ್ಕಾರದ ಭಯವಿಲ್ಲ; ಕಲ್ಲು ತೂರಾಟಕ್ಕೆ ಈಶ್ವರಪ್ಪ ಪ್ರತಿಕ್ರಿಯೆ

Shivamogga: ಮುಸಲ್ಮಾನ್ ಗೂಂಡಾಗಳಿಗೆ ಪೊಲೀಸರ ಹಾಗೂ ಸರ್ಕಾರದ ಭಯವಿಲ್ಲ; ಕಲ್ಲು ತೂರಾಟಕ್ಕೆ ಈಶ್ವರಪ್ಪ ಪ್ರತಿಕ್ರಿಯೆ

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ಬಿಗಿ ಕ್ರಮ ಕೈಗೊಳ್ಳಬೇಕು. ಹಿಂದು ಅಂತಾ ಗಮನಿಸಿ ಪ್ರಕಾಶ್ ಮೇಲೆ ಹಲ್ಲೆ ನಡೆದಿದೆ.  ಶಿವಮೊಗ್ಗದಲ್ಲಿ ಪಿಎಫ್​ಐ ಸಂಘಟನೆ ಇನ್ನು ಜೀವಂತವಾಗಿ ಇದೆಯೋ ಇಲ್ಲವೋ ಎಂಬುದನ್ನು ಪೊಲೀಸರು ಗಮನಿಸಬೇಕು ಎಂದು ಹೇಳಿದರು.

  • Share this:

ಸೋಮವಾರ ರಾತ್ರಿ ಸುಮಾರು 11.30 ವೇಳೆ ಶಿವಮೊಗ್ಗದ ಸಿಗೇಹಟ್ಟಿಯಲ್ಲಿ ನಡೆದ ಕಲ್ಲು ತೂರಾಟದ (Stone Pelting Case) ಘಟನೆಯನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ಖಂಡಿಸಿದ್ದಾರೆ. ಮುಸಲ್ಮಾನ ಗೂಂಡಾಗಳಿಗೆ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ (Police Department) ಮತ್ತು ಸರಕಾರದ (Government) ಭಯ ಇಲ್ಲ. ಹರ್ಷನ ಕೊಲೆ (Harsha Murder Case) ಪ್ರಕರಣ ಎನ್​ಐಎಗೆ (NIA)ವಹಿಸಿದ ನಂತರ ಸಾಕಷ್ಟು ಪ್ರಕರಣ ಬೆಳಕಿಗೆ ಬಂದಿದೆ. ಲಾಂಗ್ ಮಚ್ವು ಬಳಸಿಲ್ಲ, ಕಲ್ಲಿನಿಂದ ಹೊಡೆದಿದ್ದಾರೆ. ಪಿಎಫ್​ಐ (PFI) ಸಂಘಟನೆ ಕೈವಾಡ ಇದೆಯೋ ಅಥವಾ ಬೇರೆ ಗೂಂಡಾಗಳ ಕೈವಾಡ ಇದೆಯೋ ಎಂಬುವುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ ಎಂದರು. ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳಬೇಕು. ಸರಕಾರ ಸಹ ಹೆಚ್ಚಿನ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.


ಶಿವಮೊಗ್ಗದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು. ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಯಾರೂ ಕೂಡಾ ಉತ್ತೇಜನ ಕೊಡುವಂತಹ ಮಾತು ಆಡಿಲ್ಲ ಎಂದು ಸ್ಪಷ್ಟಪಡಿಸಿದರು.


ಪಿಎಫ್​ಐ ಸಂಘಟನೆ ಜೀವಂತವಾಗಿದೆಯಾ?


ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ಬಿಗಿ ಕ್ರಮ ಕೈಗೊಳ್ಳಬೇಕು. ಹಿಂದು ಅಂತಾ ಗಮನಿಸಿ ಪ್ರಕಾಶ್ ಮೇಲೆ ಹಲ್ಲೆ ನಡೆದಿದೆ.  ಶಿವಮೊಗ್ಗದಲ್ಲಿ ಪಿಎಫ್​ಐ ಸಂಘಟನೆ ಇನ್ನು ಜೀವಂತವಾಗಿ ಇದೆಯೋ ಇಲ್ಲವೋ ಎಂಬುದನ್ನು ಪೊಲೀಸರು ಗಮನಿಸಬೇಕು ಎಂದು ಹೇಳಿದರು.


ಮುಸಲ್ಮಾನ ಹಿರಿಯರು ಅವರ ಮಕ್ಕಳಿಗೆ ಬುದ್ಧಿ ಹೇಳಬೇಕು. ರಾಷ್ಟ್ರ ದ್ರೋಹಿ ಚಟುವಟಿಕೆಯಲ್ಲಿ‌ ಭಾಗವಹಿಸದಂತೆ ತಿಳಿಹೇಳಬೇಕು. ನೀವು ಬುದ್ಧಿ ಹೇಳದಿದ್ದರೆ ಅರೆಸ್ಟ್ ಆಗ್ತಾರೆ. ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ


ಶಿವಮೊಗ್ಗದಲ್ಲಿ ಹಿಂದುತ್ವ ಜಾಗೃತಿ ಆಗಿರೋದು ಕಂಡು ಸಹಿಸದೇ ಇಂತಹ ದುಷ್ಕೃತ್ಯ ನಡೆಸಿದ್ದಾರೆ. ಹಿಂದು ಸಮಾಜದಲ್ಲಿ ಇಂತಹ ದುಷ್ಕೃತ್ಯ ನಡೆದಿಲ್ಲ. ಮುಸಲ್ಮಾನ ಗೂಂಡಾಗಳೇ ಇಂತಹ ಕೆಲಸ ಮಾಡ್ತಿದ್ದಾರೆ. ಹರ್ಷನ ಮನೆ ಬಳಿ ಹೋಗಿ ಬೆದರಿಕೆ ಹಾಕಿದವರ ಬಂಧಿಸಬೇಕು. ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.


ಇದನ್ನೂ ಓದಿ:  Shivamogga: ಹಿಂದೂ ಕಾರ್ಯಕರ್ತ ಹರ್ಷ ಸೋದರಿ ಅಶ್ವಿನಿ ವಿರುದ್ಧ FIR ದಾಖಲು 


ಕಾಂಗ್ರೆಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಲಿ


ಹರ್ಷನ ಕೊಲೆ ನಂತರ ಇಂತಹ ಘಟನೆ ಕಡಿಮೆಯಾಗಿತ್ತು. ಆದರೆ ನಿನ್ನೆ ಮತ್ತೆ ಘಟನೆ ನಡೆದಿದೆ. ಕೇಂದ್ರ ಹಾಗು ರಾಜ್ಯ ಸರಕಾರ ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಶಿವಮೊಗ್ಗ ಹಾಳು ಮಾಡಬೇಕು ಎಂಬುದನ್ನು ಕೆಲವೇ ಮುಸಲ್ಮಾನರು ಮಾಡ್ತಿದ್ದಾರೆ. ಇಂತಹ ಘಟನೆ ನಡೆದಾಗ ಕಾಂಗ್ರೆಸ್ ಸೇರಿದಂತೆ ಬೇರೆ ಪಕ್ಷದವರು ಬಾಯಿ ಬಿಡೋದೇ ಇಲ್ಲ. ನಮ್ಮ ಜೊತೆ ಕಾಂಗ್ರೆಸ್ ಇದೆ ಎಂಬ ಮನೋಭಾವನೆ ಮುಸಲ್ಮಾನ ಗೂಂಡಾಗಳಿಗಿದೆ ಎಂದು ವಾಗ್ದಾಳಿ ನಡೆಸಿದರು.


ರಾತ್ರಿ ನಡೆದಿದ್ದೇನು?


ಶಿವಮೊಗ್ಗದಲ್ಲಿ ಮತ್ತೆ ಕಲ್ಲು ತೂರಾಟ ಸಹ ನಡೆಸಲಾಗಿದೆ. ಘಟನೆಯಲ್ಲಿ ಪ್ರಕಾಶ್ ಎಂಬವರು ಗಾಯಗೊಂಡಿದ್ದು, ನಗರದ ಮೆಗ್ಗಾನ್ ಆಸ್ಪತ್ರೆಗೆ  ದಾಖಲಿಸಲಾಗಿದೆ. ಭರ್ಮಪ್ಪ ನಗರದ 2ನೇ ಕ್ರಾಸ್ ನಿವಾಸಿಯಾಗಿರುವ ಗಾಯಾಳು ಪ್ರಕಾಶ್ ಕಲ್ಲು ತೂರಾಟ ನಡೆದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ.


ಇದನ್ನೂ ಓದಿ:  Shivamogga: ಲಾಂಗ್ ಝಳಪಿಸಿ, ಜೀವ ಬೆದರಿಕೆ ಹಾಕಿದ್ರು: ಹರ್ಷನ ಸೋದರಿ ಸ್ಪೋಟಕ ಹೇಳಿಕೆ 


ಮನೆ ಮುಂಭಾಗ ನಿಂತಿದ್ದ ವೇಳೆ ಗಾಯಗೊಂಡಿದ್ದಾರೆ. ನಗರದ ಸಿಗೇಹಟ್ಟಿಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕೆಲಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರ (Police) ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Published by:Mahmadrafik K
First published: