ಬಂಟ್ವಾಳದಲ್ಲಿ ಹಿಂದೂ ಯುವಕನ್ನು ರಕ್ಷಿಸಿದ್ದ ಮುಸ್ಲಿಂ ಹುಡುಗರು; ಅಭಿನಂದಿಸಿದ ಸಿದ್ದರಾಮಯ್ಯ

ಬಂಟ್ವಾಳದ ಹಿಂದೂ ಯುವಕನನ್ನು ಕಾಪಾಡಿದ ನಾಲ್ವರು ಮುಸ್ಲಿಂ ಯುವಕರ ಪೋಟೋಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್‌ ಮೂಲಕ ಈ ಯುವಕರಿಗೆ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

news18-kannada
Updated:May 25, 2020, 8:35 PM IST
ಬಂಟ್ವಾಳದಲ್ಲಿ ಹಿಂದೂ ಯುವಕನ್ನು ರಕ್ಷಿಸಿದ್ದ ಮುಸ್ಲಿಂ ಹುಡುಗರು; ಅಭಿನಂದಿಸಿದ ಸಿದ್ದರಾಮಯ್ಯ
ಬಂಟ್ವಾಳದಲ್ಲಿ ಹಿಂದೂ ಯುವಕನನ್ನು ಕಾಪಾಡಿದ್ದ ಮುಸ್ಲಿಂ ಯುವಕರು.
  • Share this:
ಬೆಂಗಳೂರು (ಮೇ 25); ಇತ್ತೀಚೆಗೆ ಬಂಟ್ವಾಳದ ಯುವಕನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ, ಈ ವೇಳೆ ಪ್ರಾಣದ ಹಂಗೂ ತೊರೆದು ಐವರು ಮುಸ್ಲಿಮ್ ಯುವಕರು ನದಿಗೆ ಹಾರಿಗೆ ಆತನ ಪ್ರಾಣ ಉಳಿಸಲು ಪ್ರಯತ್ನಿಸಿದ್ದರು. ಆದರೆ, ದುರಾದೃಷ್ಟವಶಾತ್‌ ನದಿಯಿಂದ ಹೊರಬಂದ ಕೆಲವೇ ಕ್ಷಣದಲ್ಲಿ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ಬಂಟ್ವಾಳದ ಹಿಂದೂ ಯುವಕನನ್ನು ಕಾಪಾಡಲು ಪ್ರಯತ್ನಿಸಿದ ಈ ಐವರೂ ಮುಸ್ಲಿಂ ಯುವಕರ ಪೋಟೋಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್‌ ಮೂಲಕ ಈ ಯುವಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

"ಬಂಟ್ವಾಳದಲ್ಲಿ ನದಿಗೆ ಹಾರಿದ್ದ ಹಿಂದೂ ಯುವಕನನ್ನು ಉಳಿಸಲು ಪ್ರಾಣದ ಹಂಗು ತೊರೆದು ನದಿಗೆ ಹಾರಿದ್ದ ನಾಲ್ವರು ಮುಸ್ಲಿಮ್ ಯುವಕರ ಪ್ರಯತ್ನಕ್ಕೆ ಶಹಭಾಸ್ ಅನ್ನಲೇಬೇಕು. ಧರ್ಮದ ಹೆಸರಲ್ಲಿ ಮನೆ-ಮನಸ್ಸುಗಳನ್ನು ಒಡೆಯುವ ವಿಚ್ಛಿದ್ರಕಾರಿ ಕೃತ್ಯಗಳ ನಡುವೆ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿರುವ ಈ ಯುವಕರಿಗೆ ಅಭಿನಂದನೆಗಳು" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.



ಅಸಲಿಗೆ ಈ ಪ್ರಕರಣವನ್ನು ತಿರುಚಿ ಕೋಮು ಗಲಭೆ ಸೃಷ್ಟಿಸುವ ಎಲ್ಲಾ ಪ್ರಯತ್ನಗಳೂ ನಡೆದಿದ್ದವು. ಈ ಕುರಿತು ಸ್ವತಃ ಟ್ವೀಟ್‌ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ, "ಕೆಲವು ಜಿಹಾದಿಗಳು ಬಂಟ್ವಾಳದಲ್ಲಿ ಹಿಂದೂ ಯುವಕನನ್ನು ನದಿ ನೀರಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇಂತಹ ಜಿಹಾದಿಗಳನ್ನು ಮಟ್ಟಹಾಕಬೇಕು" ಎಂದು ಬರೆದುಕೊಂಡಿದ್ದರು. ಆದರೆ, ಈ ಹೇಳಿಕೆ ಸುಳ್ಳು ಎಂದು ತಿಳಿದ ಕೆಲವೇ ಗಂಟೆಗಳಲ್ಲಿ ಅದನ್ನು ಡಿಲೀಟ್‌ ಮಾಡಿದ್ದರು.

ಇದನ್ನೂ ಓದಿ : ಸಾಮಾಜಿಕ ಅಂತರದಲ್ಲೇ ಹೋಟೆಲ್‌ನಲ್ಲಿ ಊಟ-ತಿಂಡಿ ಮಾಡಬಾರದೇಕೆ?; ಕ್ಯಾಂಟೀನ್ ಮಾಲೀಕರ ಪ್ರಶ್ನೆ
First published: May 25, 2020, 8:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading