Gadaga: ಗಾನಯೋಗಿಯ ನಾಡಲ್ಲಿ ಅದ್ಧೂರಿ ಸಂಗೀತ ಜಾತ್ರೆ; ಪಂಚಾಕ್ಷರಿ ಗವಾಯಿಗಳ 78ನೇ ಸ್ವರ ಸಮಾರಾಧನೆ

ಡಾ. ರಾಜ್ ಕುಮಾರ್ ಅವರೂ ಪುಟ್ಟರಾಜರಿಂದ ಸಂಗೀತದ ಪಟ್ಟು ಕಲೆತರು. ಜಾತ್ರೆಯ ನಿಮಿತ್ತ ಮಠದ ಭಕ್ತರು, ಶ್ರೀಗಳ ಶಿಷ್ಯರು ಮಠಕ್ಕೆ ಬಂದು ಸಂಗೀತ ಸೇವೆ ಸಲ್ಲಿಸುತ್ತಾರೆ.

ಸಂಗೀತ ಜಾತ್ರೆ ಸಂಭ್ರಮ

ಸಂಗೀತ ಜಾತ್ರೆ ಸಂಭ್ರಮ

  • Share this:
ಗದಗ (ಜೂ 18) : ಸಂಗೀತದ (Music) ನಾಡು, ಕಲಾವಿದರ ಕಾಶಿ ಗದಗನ ವಿರೇಶ್ವರ ಪುಣ್ಯಾಶ್ರಮದ ಜಾತ್ರಾ ಮಹೋತ್ಸವ ನಿಮಿತ್ತ ಸಂಗೀತ ರಥೋತ್ಸವ ನಡೀತು. ಜೂನ್ 14 ರಿಂದ 18 ವರೆಗೆ ನಾಲ್ಕು ದಿನ ಅದ್ಧೂರಿ ಜಾತ್ರೆ ನಡೆದಿದೆ. ಸಂಗೀತ ಜಾತ್ರೆಯಲ್ಲಿ ಈ ಬಾರಿ ನೂತನ ತೇರಿನಿಂದ ರಥೋತ್ಸವ ನೆರವೇರಿಸಿದ್ದು ವಿಶೇಷವಾಗಿತ್ತು. ಶ್ರೀ ಮಠಕ್ಕೆ ಅಡಿಪಾಯ ಹಾಕಿದ್ದ ಪಂಡಿತ ಪಂಚಾಕ್ಷರಿ ಗವಾಯಿಗಳ (Panchakshara Gawai) 78 ಪುಣ್ಯ ಸ್ಮರಣೆ ಹಾಗೂ ಅಂಧ ಅನಾಥರ ಪಾಲಿನ ಸೂರ್ಯ, ಪದ್ಮ ಭೂಷಣ ಪಂಡಿತ ಪುಟ್ಟರಾಜ ಕವಿ ಗವಾಯಿಗಳ 12 ವರ್ಷದ ಪುಣ್ಯಾರಾಧನೆ ನಿಮಿತ್ತ ಈ ಬಾರಿ ಜಾತ್ರೆ ನಡೆದಿದೆ.

ಸಂಗೀತದ ಜಾತ್ರೆ, ಕಲಾವಿದರ ಜಾತ್ರೆ

ಅಂಧರಿಗೆ ಸಂಗೀತದ ಮೂಲಕ ಉಭಯ ಗುರುಗಳು ಬದುಕು ಕಟ್ಟಿಕೊಟ್ಟವರು ಹೀಗಾಗಿ ಈ ಜಾತ್ರೆಯನ್ನ ಸಂಗೀತದ ಜಾತ್ರೆ, ಕಲಾವಿದರ ಜಾತ್ರೆ ಅಂತಾನೇ ಕರೆಯಲಾಗುತ್ತೆ. ಈ ಬಾರಿ ವಿಶೇಷ ಆಕರ್ಷಣೆ ಅಂದ್ರೆ ನೂತನವಾಗಿ ನಿರ್ಮಾಣವಾಗಿರೋ ತೇರು. ಹುಬ್ಬಳ್ಳಿ ಮೂಲದ ಕಾಷ್ಠ ಶಿಲ್ಪಿ ಚೆನ್ನಪ್ಪ ಬಡಿಗೇರ್ ತಂಡ ಈ ರಥ ನಿರ್ಮಾಣ ಮಾಡಿದೆ. 12 ಫೀಟ್ ಅಗಲ, ಮೂವತ್ತು ಫೀಟ್ ಎತ್ತರದ ತೇರು ಜಾತ್ರೆಯ ಮುಖ್ಯ ಆಕರ್ಷಣೆ.

ಪಂಚಾಕ್ಷರಿ ಗವಾಯಿಗಳ ಗದ್ದುಗೆಗೆ ಹೂವಿನ ಅಲಂಕಾರ

ಪ್ರತಿ ಬಾರಿಯಂತೆ ಈ ಬಾರಿಯೂ ಪುಟ್ಟರಾಜರ ಹಾಗೂ ಪಂಚಾಕ್ಷರಿ ಗವಾಯಿಗಳ ಗದ್ದುಗೆಗೆ ಹೂವಿನ ಅಲಂಕಾರ ಮಾಡ್ಲಾಗಿದೆ.. ಬೆಂಗಳೂರಿನಿಂದ ತರೆಸಿದ್ದ ಕಲರ್ ಕಲರ್ ಹೂವಿನಿಂದ ಅಜ್ಜನ ಸನ್ನಿಧಿಯ ಅಲಂಕಾರ ಮಾಡಲಾಗುತ್ತು. ಪಂಚಾಕ್ಷರಿ ಗವಾಯಿಗಳು ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳು ನಾಡಿನಾದ್ಯಂತ ದೊಡ್ಡ ಶಿಷ್ಯ ಬಳಗ ಹೊಂದಿದವರು.

ಇದನ್ನೂ ಓದಿ: Tirupati: ತಿರುಪತಿ ಗಿರಿವಾಸ 'ಸಿರಿ' ವೆಂಕಟೇಶ, ಒಂದೇ ತಿಂಗಳಲ್ಲಿ ತಿಮ್ಮಪ್ಪನ ಹುಂಡಿಗೆ ಬಿತ್ತು 139 ಕೋಟಿ ರೂಪಾಯಿ!

ಪದ್ಮಭೂಷಣ ಪಂಡಿತ ವೆಂಕಟೇಶ ಕುಮಾರ, ಪಂಡಿತ ಡಿ ಕುಮಾರ್ ದಾಸ್, ಪಂಡಿತ ರಘುನಾಥ್ ನಾಕೋಡ ಸೇರಿದಂತೆ ಘಟಾನುಘಟಿ ಸಂಗೀತ ದಿಗ್ಗಜರು ಗದಗಿನ ಪುಣ್ಯಾಶ್ರಮದ ಆಶ್ರಯದಲ್ಲಿ ಬೆಳೆದವರು. ಡಾ. ರಾಜ್ ಕುಮಾರ್ ಅವರೂ ಪುಟ್ಟರಾಜರಿಂದ ಸಂಗೀತದ ಪಟ್ಟು ಕಲೆತರು. ಜಾತ್ರೆಯ ನಿಮಿತ್ತ ಮಠದ ಭಕ್ತರು, ಶ್ರೀಗಳ ಶಿಷ್ಯರು ಮಠಕ್ಕೆ ಬಂದು ಸಂಗೀತ ಸೇವೆ ಸಲ್ಲಿಸುತ್ತಾರೆ.

ಅಹೋರಾತ್ರಿ ಸಂಗೀತ ಸೇವೆ

ಹೀಗಾಗಿ ಶ್ರೀಮಠದ ಆವರಣದಲ್ಲಿ ಸಂಗೀತ ಝೇಂಕಾರ ಪ್ರತಿಕ್ಷಣ ಕಿವಿಯ ಮೇಲೆ ಬೀಳುತ್ತೆ. ಸಂಗೀತ ತೇರಿನ ನಂತ್ರ ಅಹೋರಾತ್ರಿ ಸಂಗೀತ ಸೇವೆಯೂ ಜರಗುತ್ತೆ.. ಪುಣೆ, ಮಧ್ಯಪ್ರದೇಶ, ಗ್ವಾಲಿಯರ್ ಸೇರಿದಂತೆ ರಾಷ್ಟ್ರಮಟ್ಟದ ಹಿರಿಯ ಕಿರಿಯ ಕಲಾವಿದರು ಸಂಗೀತ ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಲಕ್ಷ ಸಂಭಾವನೆ ಪಡೆಯುವ ಕಲಾವಿದರೂ ಅಜ್ಜನ ಸನ್ನಿಧಿಯಲ್ಲಿ ಉಚಿತ ಕಲಾ ಸೇವೆಸಲ್ಲಿಸುತ್ತಾರೆ ಅಂತಾ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಕಲ್ಲಯ್ಯಜ್ಜನವರು ಹೇಳಿದ್ರು.

ಸಂಗೀತ ಕಲೆಯೊಂದಿಗೆ ತ್ರಿಭಾಷಾ ಸಾಹಿತಿ

ಪಂಡಿತ ಪುಟ್ಟರಾಜರು ಸಂಗೀತ ಕಲೆಯೊಂದಿಗೆ ತ್ರಿಭಾಷಾ ಸಾಹಿತಿಗಳಾಗಿದ್ದರು‌. ಶ್ರೀಗಳು ನೂರಾರು ನಾಟಕಗಳನ್ನ ರಚಿಸಿದ್ದಾರೆ.. ನಾಟಕ ಕಂಪನಿಗಳ ಮೂಲಕ ಕಲಾವಿದರಿಗೆ ದಾರಿ ತೋರಿದವರು, ಹೀಗಾಗಿ ನಾಡಿನ ವೃತ್ತಿ ರಂಗ ಭೂಮಿ ಕಲಾವಿದರು ಜಾತ್ರೆಗೆ ಆಗಮಿಸಿ ಕಲಾ ದೈವದ ಆರಾಧನೆ ಮಾಡುತ್ತಾರೆ. ಕುಂಟಕೋಣ ಮೂಕ ಜಾಣ ನಾಟಕ ಖ್ಯಾತಿಯ ದಯಾನಂದ ಬೀಳಗಿ ಅವರೂ ಈ ಬಾರಿಯ ಜಾತ್ರೆಯಲ್ಲಿ ಭಾಗಿಯಾಗಿದ್ರು. ಕಲಾವಿದರಿಗೆ ಅಜ್ಜನ ಸನ್ನಿಧಿ ಕಾಶಿ ಇದ್ದಂತೆ. ಚಿಕ್ಕಂದಿನಿಂದಲೂ ಜಾತ್ರೆಗೆ ಬರುತ್ತಿದ್ದೇವೆ.

ಇದನ್ನೂ ಓದಿ: Spiritual Tourism: ಕೋವಿಡ್ ಬಂದ್ಮೇಲೆ ಭಾರತದಲ್ಲಿ ದೇವರ ದರ್ಶನ ಮಾಡುವವರ ಸಂಖ್ಯೆ ಹೆಚ್ಚಳ! ಕಾರಣ ಏನು ಗೊತ್ತಾ?

ವರ್ಷ ಪೂರ್ತಿ ರಂಗ ಸೇವೆಯಲ್ಲಿ ನಿರತರಾಗುವ ಕಲಾವಿದರು ಜಾತ್ರೆಯ ನಿಮಿತ್ತ ಒಂದೆಡೆ ಸೇರುತ್ತೇನೆ. ವಿವಿಧ ಕಾರ್ಯಕ್ರಮ ಮಾಡುತ್ತೇವೆ‌. ಎರಡು ವರ್ಷದಿಂದ ಕಾರ್ಯಕ್ರಮಗಳು ಆಗಿಲ್ಲ.. ಬರುವ ವರ್ಷದಿಂದ ಕಾರ್ಯಕ್ರಮ ನಡೆಸುವ ವಿಶ್ವಾಸ ಇದೆ ಅಂತಾ ಕಲಾವಿದರು ಸಹ ಹೇಳಿದ್ರು. ಧರ್ಮ ಸಮ್ಮೇಳನ, ಕೀರ್ತನ ಮೇಳ,  ಸೇರಿದಂತೆ ಪ್ರವಚನ ಕಾರ್ಯಕ್ರಮಗಳು, ಆರೋಗ್ಯ ಶಿಬಿರ, ನಾಲ್ಕು ದಿನ ನಡೆದ್ವು.. ಅನ್ನ ಪ್ರಸಾದ ಹಾಗೂ ಸಂಗೀತದ ಜಾತ್ರೆ ಮೂಲಕ ಆಜ್ಜನ ಜಾತ್ರೆ ಅದ್ದೂರಿಯಾಗಿ ನಡೆದಿದೆ.
Published by:Pavana HS
First published: