ಚಿತ್ರದುರ್ಗ ಬೆಟ್ಟದ ಮೇಲೆ ನನ್ನ ಪ್ರೇಮ ಪ್ರಕರಣ ನಡೆದಿತ್ತು: ಹಂಸಲೇಖ

ಇಡೀ ಭಾರತದ ಡಿಕ್ಷನರಿಗಳಿಂದ ಶೂದ್ರ ಅನ್ನೋ ಪದವನ್ನ ಕಿತ್ತು ಬಿಸಾಕಬೇಕು, ನಾವು ಶುದ್ದರು, ಶೂದ್ರರಲ್ಲ. ಶೂದ್ರ ಹೋಗಿ ಶುದ್ಧವಾಗಬೇಕು ಎಂದು ಅವರು ಪ್ರತಿಪಾದಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಚಿತ್ರದುರ್ಗ: ನನ್ನ ಪಾಲಿಗೆ ಡಾರ್ಜಿಲಿಂಗ್ ಅಂದರೆ ಅದು ಚಿತ್ರದುರ್ಗ (Chitradurga).  ನಾನು ಯಾವತ್ತೂ ಕಾಶ್ಮೀರವನ್ನು ನೋಡಿಲ್ಲ. ಮೈಸೂರು ಸೇರಿದಂತೆ ಅಲ್ಲಿ ಇಲ್ಲಿ ನನ್ನ ಹೆಂಡತಿ ಜೊತೆಯಲ್ಲಿ ಇಲ್ಲಿವರೆಗೂ ಹಾಡಿಕೊಂಡು ಬಂದಿದ್ದೇನೆ. ನನಗೆ ನನ್ನ ಹೆಂಡತಿ ಜೊತೆಯಲ್ಲಿ ಪ್ರೀತಿ ಮಾಡುತ್ತಿದ್ದ ಕಾಲದಲ್ಲಿ ಕಣ್ಣಿಗೆ, ಬಸ್ಸಿಗೆ, ಚಾರ್ಜಿಗೆ ಕರೆಕ್ಟಾಗಿ ಮಾಚ್ ಆಗ್ತಿದ್ದದ್ದು ಚಿತ್ರದುರ್ಗದ ಬೆಟ್ಟ. ಇಡೀ ನನ್ನ ಪ್ರೇಮ ಪ್ರಕರಣವೆಲ್ಲಾ (Love) ಚಿತ್ರದುರ್ಗದ ಬೆಟ್ಟದ ಮೇಲೆ ನಡೆದಿದೆ. ನಾನು ಪ್ರೇಮಿಸುತ್ತಿದ್ದ ವೇಳೆ ದುರ್ಗಕ್ಕೆ ಬರುತ್ತಿದ್ದೆ. ಬೆಳಗ್ಗೆಯಿಂದ ಸಂಜೆವರೆಗೆ ಕೋಟೆಯಲ್ಲೇ ಇರುತ್ತಿದ್ದೆವು ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಚಿತ್ರದುರ್ಗದಲ್ಲಿ ತಾವು ಕಳೆದ ದಿನಗಳನ್ನು ನೆನಪಿಸಿಕೊಡರು. (Hamsalekha) ತಿಳಿಸಿದರು.

  ಚಿತ್ರದುರ್ಗದ ತ.ರಾ.ಸು ರಂಗಮಂದಿರದಲ್ಲಿ ಮಾನವ ಬಂದುತ್ವ ವೇದಿಕೆ ಆಯೋಜಿಸಿದ್ದ ರಾಜ್ಯ ಮಾನವ ಬಂಧುತ್ವ ಅಧಿವೇಶನ ಸಮಾರೋಪ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಅವರು ಮಾತನಾಡಿದರು.

  ಶೂದ್ರ ಪದ ಕಿತ್ತು ಬಿಸಾಕಿ
  ಇಡೀ ಭಾರತದ ಡಿಕ್ಷನರಿಗಳಿಂದ ಶೂದ್ರ ಅನ್ನೋ ಪದವನ್ನ ಕಿತ್ತು ಬಿಸಾಕಬೇಕು, ನಾವು ಶುದ್ದರು, ಶೂದ್ರರಲ್ಲ. ಶೂದ್ರ ಹೋಗಿ ಶುದ್ಧವಾಗಬೇಕು. ಸಿಂಹಾಸನದ ಮೇಲೆ ಕುಳಿತವನ ಕಾಲು ನೆಲಕ್ಕೆ ತಗುಲಬೇಕು, ಆಗ ಅವನು ಪ್ರಜೆ ಪ್ರಭುವಾಗುತ್ತಾನೆ, ಶುದ್ಧತೆಯನ್ನು ಹೊಂದಿದವರನ್ನು ಅಧಿಕಾರಕ್ಕೆ ತನ್ನಿ, ಶೂದ್ರ ಹೋಗಿ ಶುದ್ಧವಾಗಬೇಕೆಂಬುದರ ಬಗ್ಗೆ ಎಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ವೇಳೆ ಹಾಡು ಬರೆದು ಹಾಕುತ್ತೇನೆ ಎಂದು ಚಿತ್ರದುರ್ಗದಲ್ಲಿ ನಾದಬ್ರಹ್ಮ, ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ‌.

  ನೀವ್ಯಾರೂ ಅಶಿಕ್ಷಿತರಲ್ಲ
  ಮಾನವ ಬಂಧುತ್ವ ವೇದಿಕೆಯ ಹೆಸರಿನಲ್ಲಿ ಇಷ್ಟೆಲ್ಲ ಜನ ಸೇರಿದ್ದು ಖುಷಿಯಾಗಿದೆ. ನೀವು ಸಮಾಜಕ್ಕೆ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ. ಕೊಡುವ, ಬೆಳೆ, ಭೂಮಿಗೆ ಗೊಬ್ಬರ ಕೊಡುವ ಕಾಮಧೇನು ಆಗಬೇಕು. ನೀವ್ಯಾರೂ ಅಶಿಕ್ಷಿತರಲ್ಲ. ನಿಮಗೆ ಯುದ್ಧ ಅಂದರೇನು ಎಂಬ ಬಗ್ಗೆ ವಂಶ ಪಾರಂಪರ್ಯವಾಗಿ ಗೊತ್ತಿದೆ. ಯುದ್ಧದಲ್ಲಿ ನಾವು ಯಾವತ್ತೂ ಸೋತಿಲ್ಲ ಎಂಬ ಕಿರೀಟ ನಿಮ್ಮ ತಲೆ ಮೇಲೆ ಇರುವುದರಿಂದ ಮೇಲೆ ಕಲಾವಿದ ಸಾಯುತ್ತಾನೆಯೆ ಹೊರತು ಸುಳ್ಳು ಹೇಳಲ್ಲ ಎಂದು ತಿಳಿಸಿದರು.

  ಇನ್ನೂ ನಾನು ಕಂಡ ಮೇರುನಟ ಡಾ. ರಾಜ್ ಕುಮಾರ್, ಅವರ ಹೆಸರಲ್ಲೇ ರಾಜ್ ಇದ್ದರೂ ರಾಜಕೀಯಕ್ಕೆ ಬರದೆ ಕನ್ನಡ ನಾಡು ನುಡಿಗಾಗಿ ಬಂದರು. ನಾನು ಚಿತ್ರರಂಗಕ್ಕೆ ಪ್ರವೇಶಿಸಿದ್ದು ಚಿತ್ರದುರ್ಗದಿಂ. ನಾನು ವಿವೇಕ ವೇದಿಕೆ ಕಟ್ಟಿದ್ದು ಚಳ್ಳಕೆರೆಯಲ್ಲಿ, ಯಶಸ್ಸು ಗಳಿಸಿದ್ದು ಚಿತ್ರದುರ್ಗದಲ್ಲಿ ಎಂದು ಅವರು ಹೇಳಿದರು.

  ಇದನ್ನೂ ಓದಿ: Ram Navami: ಕರ್ನಾಟಕದಲ್ಲಿ ರಾಮರಾಜ್ಯ ನಿರ್ಮಾಣ ನಮ್ಮ ಗುರಿ: ಸಚಿವ ಆರ್ ಅಶೋಕ್

  ಇಂದು ಯಾವ ಭಾರತೀಯನೂ ಏಕಾಂಗಿಯಲ್ಲ, ಎಲ್ಲರೂ ಸಾಲಗಾರರು. ಶಸ್ತ್ರಾಸ್ತ್ರಗಳ ಸಾಲದ ಭಾರ ಭಾರತೀಯರ ಮೇಲಿದೆ. ನಾಡಿನ ಸಮಸ್ಯೆ ಪರಿಹರಿಸಿ ಉಪಾಯ ಕಂಡುಹಿಡಿಯಲು ಇದೊಂದು ಅವಕಾಶ. ನೀವೆಲ್ಲ ಎಚ್ಚರವಾಗಿರಬೇಕು, ನಮ್ಮನ್ನು ಯುದ್ಧಕ್ಕೆ ಕೆಣಕಿ ಅವರು ಬಲಿಹಾಕಲು ಯತ್ನಿಸುತ್ತಿಸಿದ್ದಾರೆ ಎಂದರು.

  ಶೂದ್ರ ಹೋಗಿ ಶುದ್ಧವಾಗಬೇಕು
  ಸೋಲದ ಯೋಧರಿಗೆ ವಿಷಭರಿತ ಸೇಬು ಹಂಚಲಾಗುತ್ತಿದೆ. ನೀವು ಬುದ್ಧ ಆಗಬೇಡಿ, ಶುದ್ಧರಾಗಿ ಸಾಕು. ನಾವು ಮಾಡುವ ಕೆಲಸದಲ್ಲಿ ಶುದ್ಧತೆ ಇರಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾನಗಳು ಯುದ್ಧದಲ್ಲಿ ತೊಡಗಿದ್ದವು. ಸಂವಿಧಾನ ಬಂತು ಯುದ್ಧ ನಿಂತಿತು ಎಂದಿದ್ದಾರೆ. ಅಲ್ಲದೇ ದೇಶದ ನಿಘಂಟುಗಳಿಂದ ಶೂದ್ರ ಪದ ತೆಗೆದುಹಾಕಬೇಕು. ಶೂದ್ರ ಹೋಗಿ ಶುದ್ಧವಾಗಬೇಕು.

  ಇದನ್ನೂ ಓದಿ: Pramod Muthalik: ಕೋಲಾರ ಪಾಕಿಸ್ತಾನದಲ್ಲಿ ಇಲ್ಲ: ಕೇಸರಿ ಬಾವುಟ ಹಾರಿಸಿ ಕಿಡಿಕಾರಿದ ಪ್ರಮೋದ್ ಮುತಾಲಿಕ್

  ಸಿಂಹಾಸನದ ಮೇಲೆ ಕುಳಿತವನ ಕಾಲು ನೆಲದ‌ ಮೇಲಿರಬೇಕು. ಶುದ್ಧತೆಯನ್ನು ಹೊಂದಿದವರನ್ನು ಅಧಿಕಾರಕ್ಕೆ ತನ್ನಿ. ಶೂದ್ರ ಹೋಗಿ ಶುದ್ಧವಾಗಬೇಕೆಂಬುದರ ಬಗ್ಗೆ ಹಾಡು ಬರೆಯುವೆ. ಎಪ್ರಿಲ್ 14 ಅಂಬೇಡ್ಕರ್ ಜಯಂತಿ ವೇಳೆ ಹಾಡು ಬರೆದು ಹಾಕುತ್ತೇನೆ ಎಂದು ನಾದಬ್ರಹ್ಮ ಹಂಸಲೇಖ ತಿಳಿಸಿದರು.
  Published by:guruganesh bhat
  First published: