• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Hamsalekha: ಸಿದ್ದರಾಮಯ್ಯ ಪ್ರಜಾಪ್ರಭುತ್ವಕ್ಕೆ ದೊಡ್ಡ ಧ್ವನಿ; ಸಂಗೀತ ನಿರ್ದೇಶಕ ಹಂಸಲೇಖ

Hamsalekha: ಸಿದ್ದರಾಮಯ್ಯ ಪ್ರಜಾಪ್ರಭುತ್ವಕ್ಕೆ ದೊಡ್ಡ ಧ್ವನಿ; ಸಂಗೀತ ನಿರ್ದೇಶಕ ಹಂಸಲೇಖ

ಪುಸ್ತಕ ಬಿಡುಗಡೆ ಸಮಾರಂಭ

ಪುಸ್ತಕ ಬಿಡುಗಡೆ ಸಮಾರಂಭ

ಓಬಿಸಿ ಎಂದರೆ? ಎಷ್ಟು ಓದಿದರು ಓದಿದ್ದೇವೆ ಎಂದು ಯಾರು ಹೇಳುವುದಿಲ್ಲ ಅವರೇ ಓಬಿಸಿ. ನಾನು ಮೂರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದೇನೆ, ಆದರೂ ಓದಿದ್ದೇನೆ ಎಂದು ಹೇಳಲ್ಲ ಎಂದು ಹೇಳಿದರು.

  • Share this:

ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ (Retired judge HN Nagamohan Das) ಬರೆದಿರುವ ‘ಮೀಸಲಾತಿ ಭ್ರಮೆ ಮತ್ತು ವಾಸ್ತವ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ಆಯೋಜಿಸಲಾಗಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯನವರು (Ex CM Siddaramaiah) ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಯ ಪುಸ್ತಕವನ್ನು ಬಿಡುಗೊಡೆಗೊಳಿಸಿದರು. ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ, ಬಂಜಗೆರೆ ಜೈ ಪ್ರಕಾಶ್, ಬಿ.ಎಂ. ಹನೀಫ್, ಟಿ.ಆರ್. ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha), ಮಾಜಿ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಪ್ರಜಾಪ್ರಭುತ್ವಕ್ಕೆ ದೊಡ್ಡ ಧ್ವನಿ ಎಂದು ಹೇಳಿದರು.


ಸಿದ್ದರಾಮಯ್ಯ ಪ್ರಜಾಪ್ರಭುತ್ವಕ್ಕೆ ದೊಡ್ಡ ಧ್ವನಿಯಾಗಿದ್ದಾರೆ. ನನ್ನದು ಚಿಕ್ಕ ಬಾಯಿ, ಇಲ್ಲಿ ದೊಡ್ಡ ದೊಡ್ಡ ಮಾತು ಆಡಬೇಕಿದೆ.ಪ್ರತಿಭೆ ಎಂದರೇನು? ಎಂದು ಕೇಳುತ್ತಿದ್ದರು. ಪ್ರತಿಭೆ ಎಂದರೆ ನಾನೇ. ನಾನೇದಾದರೂ ಆರ್ಯರ ತರ ಕಾಣುತ್ತಿದ್ದೇನಾ? ನಾನು ಪ್ಯೂರ್ ದ್ರಾವಿಡನ್. ನಾನು ಒರಿಜಿನಲ್ ಪ್ರತಿಭೆ ಎಂದರು.


ಕಾನೂನುಗಳನ್ನು ಹಾಡುಗಳಾಗಿ ರಚನೆ ಮಾಡಬೇಕು


ಅವತ್ತು ಬುದ್ಧ, ಬಸವ, ಅಂಬೇಡ್ಕರ್ ಇಂದು ಮೋಹನದಾಸ್ ಸಮಾಜದಲ್ಲಿ ನಡೆದ ಘಟನೆಗಳ ಬಗ್ಗೆ ಹನಿಫ್ ಹೇಳಿದರು. ಆದರೆ ನಾವು ನಮ್ಮ ಮನೆ ಬಾಗಿಲ ಕೀ ಇನ್ನೊಬ್ಬರಿಗೆ ಕೊಟ್ಟು, ಬಾಗಿಲು ಕಾಯುತ್ತಿದ್ದೇವೆ. ನಾವು ಯಾವಾಗ ಇನ್ ಆಕ್ಟಿವ್ ಆಗುತ್ತೇವೋ, ಆಗ ಇನ್ನೊಬ್ಬರು ಆಕ್ಟಿವ್ ಆಗ್ತಾರೆ.


ಇದನ್ನೂ ಓದಿ:  Karnataka Politics: ಸಿದ್ದರಾಮಯ್ಯ ಎಡಬಿಡಂಗಿ, ರಾಹುಲ್ ಗಾಂಧಿ ಕೌಲ ಬ್ರಾಹ್ಮಣ ಅನ್ನೋದು ಸುಳ್ಳು; ಸಿ ಟಿ ರವಿ ವಾಗ್ದಾಳಿ


ನಾವು ಹಾಡಬೇಕಿರುವುದು ಹರಿಕಥೆಯಲ್ಲ ಸರ್, ನಾವು ಕಾನೂನುಗಳನ್ನು ಹಾಡುಗಳಾಗಿ ಹಾಡಬೇಕಿದೆ. 20ಕ್ಕೂ ಹೆಚ್ಚು ಕವಿಗಳು ಸೇರಿ ಕಾನೂನು ಹಾಡುಗಳ ರಚಿಸುವ ಕೆಲಸ ಮಾಡುತ್ತೇವೆ. ಹಣ ಹಾಕಿ ಈ ಕಾರ್ಯಕ್ರಮ ರೂಪಿಸುತ್ತೇವೆ. ಸಂವಿಧಾನದ ಪುಸ್ತಕವನ್ನು ಜಾನಪದ ಹಾಡಗಳ ಮೂಲಕ ಹಾಡಬೇಕು ಎಂದು ಹೇಳಿದರು.


ಓಬಿಸಿ ಎಂದರೆ ಯಾರು?


ಅನುಭವ ಮಂಟಪ ಹಂಗಿಲ್ಲದ ಮೀಸಲಾತಿ ನೀಡಿದೆ. ಸಂವಿಧಾನ ಗೀತೆ, ಬಡವರ ಗೀತೆಯನ್ನ ಹಾಡಬೇಕು. ನಾನು ಯಾವ ಜಾತಿ ಎಂದು ಗೊತ್ತಿರಲಿಲ್ಲ. ಈ ಪುಸ್ತಕ ಕೈಗೆ ಬಂದಾಗ ನಾನು ಯಾವ ಜಾತಿ ಎಂದು ಕೇಳಿದೆ. ಆಗ ನೇಕಾರ ಎಂದು ಗೊತ್ತಾಯಿತು. ನೇಕಾರ ಯಾವದರಲ್ಲಿ ಬರುತ್ತೆ ಎಂದು ಕೇಳಿದಾಗ ಓಬಿಸಿ ಎಂದರು


ಓಬಿಸಿ ಎಂದರೆ? ಎಷ್ಟು ಓದಿದರು ಓದಿದ್ದೇವೆ ಎಂದು ಯಾರು ಹೇಳುವುದಿಲ್ಲ ಅವರೇ ಓಬಿಸಿ. ನಾನು ಮೂರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದೇನೆ, ಆದರೂ ಓದಿದ್ದೇನೆ ಎಂದು ಹೇಳಲ್ಲ ಎಂದು ಹೇಳಿದರು.


ಸಂವಿಧಾನ ಎಲ್ಲರಿಗೂ ಪರಿಚಯಿಸಬೇಕು


ಈ ವೇಳೆ ಮಾತನಾಡಿದ ನಿವೃತ್ತ ನ್ಯಾ.  ಹೆಚ್.ಎನ್ ನಾಗಮೋಹನದಾಸ್, ಅಕ್ಷರಸ್ಥರಿಗೆ ಸಂವಿಧಾನ ಓದಿ ಅರಿಯುವುದು ಸಾಧ್ಯ. ಆದರೆ ಅನಕ್ಷರಸ್ಥರಿಗೆ  ಸಂವಿಧಾನ ತಿಳಿಸುವುದು ಹೇಗೆ? ಮಹಾಭಾರತ, ರಾಮಾಯಣದಂತಹ ಮಹಾನ್ ಕಾವ್ಯಗಳನ್ನು ಟಿವಿ ಸೀರಿಯಲ್, ಸಿನಿಮಾ, ಹಾಡು, ನಾಟಕಗಳ ಮೂಲಕ ತಿಳಿಸಲು ಸಾಧ್ಯವಾಗಿದೆ.


ಅನಕ್ಷರಸ್ಥರಿಗೆ ಸಂವಿಧಾನವನ್ನು ನಾವು ಇದೆ‌ ಮಾದರಿಯಲ್ಲಿ ಯಾಕೆ ತಿಳಿಸಬಾರದು? ಅದನ್ನು ಮಾಡಲು ಈಗ ಹಂಸಲೇಖ ಮುಂದೆ ಬಂದಿದ್ದಾರೆ. ಸಂವಿಧಾನದ ಬಗ್ಗೆ ಹಾಡು, ನಾಟಕ, ಸೀರಿಯಲ್ ಏನೇ ಮಾಡಿದರೂ ನಮ್ಮ ಸಂಪೂರ್ಣ ಸಹಾಯ ಇರಲಿದೆ ಎಂದು ಹೇಳಿದರು.


ಇದನ್ನೂ ಓದಿ:  Chakravarti Sulibele: ಮಕ್ಕಳು ಜಾಣರು, ಶಾಸಕರು-ಸಂಸದರಿಗಾಗಿ ಪಠ್ಯ ಪುಸ್ತಕ ಪರಿಷ್ಕರಣೆ! ಸೂಲಿಬೆಲೆ ಟಾಂಗ್


ಅಂದು ಗೋಕಾಕ್ ಚಳವಳಿ, ಇಂದು ಕುಪ್ಪಳ್ಳಿ ಕಹಳೆ: ಹಂಸಲೇಖ


ಕಾಂಗ್ರೆಸ್ ಆಯೋಜನೆಯ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಂಸಲೇಖ ಅವರು, ಪಠ್ಯ ಪುಸ್ತಕ ಪರಿಷ್ಕರಣೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಕುವೆಂಪು ಅವರ ಸಮಾಧಿಗೆ ಪುಷ್ಪಾರ್ಚನೆ ನಡೆಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯ್ತು. ಕುಪ್ಪಳಿಯಿಂದ ತೀರ್ಥಹಳ್ಳಿವರೆಗೆ 18 ಕಿ.ಮೀ. ಪಾದಯಾತ್ರೆ ನಡೆಯುತ್ತಿದ್ದು, ಸಾಹಿತಿಗಳು ಹಾಗೂ ವಿದ್ವಾಂಸರುಗಳು ಭಾಗಿಯಾಗಿದ್ದರು.

Published by:Mahmadrafik K
First published: