ಮುರುಘಾಮಠ ವಿವಾದ; ದಯಾಮರಣ ಕೋರಿದ ಶಿವಯೋಗಿ ಸ್ವಾಮೀಜಿ

ಕಳೆದ ಒಂಭತ್ತು ವರ್ಷಗಳಿಂದ ಮಠದಿಂದ ದೂರವಾಗಿ ನರಕಯಾತನೆ ಅನುಭವಿಸುತ್ತಿದ್ದೇನೆ. ನನ್ನನ್ನು ಧಾರವಾಡದ ಮುರುಘಾ ಮಠದ ಪೀಠಾಧಿಪತಿಯಾಗಿ ಮುಂದುವರಿಸಬೇಕು. ಇಲ್ಲವೆ ವಿರೋಧಿಗಳು ವಿಷ ಹಾಕಿ ಸಾಯಿಸುವ ಮೊದಲು ನನಗೆ ದಯಾಮರಣ ಕೊಡಿ ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.

Latha CG | news18
Updated:November 28, 2018, 4:30 PM IST
ಮುರುಘಾಮಠ ವಿವಾದ; ದಯಾಮರಣ ಕೋರಿದ ಶಿವಯೋಗಿ ಸ್ವಾಮೀಜಿ
ಶಿವಯೋಗಿ ಸ್ವಾಮೀಜಿ
Latha CG | news18
Updated: November 28, 2018, 4:30 PM IST
-ಪರಶುರಾಮ್​ ಜಿ ತಹಶಿಲ್ದಾರ್​,

ಧಾರವಾಡ,(ನ.28): ಧಾರವಾಡದ ಪ್ರತಿಷ್ಠಿತ ಮುರುಘಾಮಠದ ಪೀಠಾಧಿಪತಿ ನೇಮಕ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮಠದ ಮಾಜಿ ಪೀಠಾಧಿಪತಿ ಶಿವಯೋಗಿ ಸ್ವಾಮೀಜಿ ಮಠದ ಸಂಪೂರ್ಣ ಜವಾಬ್ದಾರಿ ತನಗೆ ಸೇರಿದ್ದು ಎನ್ನುತ್ತಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ಗೂಂಡಾಗಿರಿ ಮಾಡಿ ತಮ್ಮನ್ನು ಮಠದಿಂದ ಹೊರಹಾಕಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ಧಾರವಾಡದ ಮುರುಘಾಮಠ ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಮಠಗಳಲ್ಲಿ ಒಂದು. ಐತಿಹಾಸಿಕ ಹಿನ್ನೆಲೆಯ ಮಠ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದೆ. ಮಠದ ಪೀಠಾಧಿಪತಿ ವಿಚಾರಕ್ಕೆ ಸಂಬಂಧಿಸಿದಂತೆ 2009ರಲ್ಲಿ ನಡೆದ ಗಲಾಟೆ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮಠದ ಮಾಜಿ ಪೀಠಾಧಿಪತಿ ಶಿವಯೋಗಿ ಸ್ವಾಮೀಜಿ ಮಠವನ್ನು ತನ್ನ ಸುಪರ್ದಿಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ತಮಗೆ ಮೋಸ ಮಾಡಿದ್ದಾರೆ. ಗೂಂಡಾಗಳ ಮೂಲಕ ದಬ್ಬಾಳಿಕೆ ಮಾಡಿ ಮುರುಘಾ ಮಠದಿಂದ ತಮ್ಮನ್ನು ಹೊರಹಾಕಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿ, ಬೆದರಿಸಿ ಪೀಠತ್ಯಾಗ ಪತ್ರ ಬರೆಸಿಕೊಂಡಿದ್ದಾರೆ. 2008 ಚುನಾವಣೆಯಲ್ಲಿ ವಿನಯ ಕುಲಕರ್ಣಿ ಸೋಲಿಗೆ ನಾನು ಕಾರಣ ಎಂದು ಭಾವಿಸಿ ನನ್ನನ್ನು ಮಠದಿಂದ ಹೊರದಬ್ಬಲಾಗಿದೆ ಎಂದು ಶಿವಯೋಗಿ ಸ್ವಾಮೀಜಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಡಿಕೆಶಿ ಮನೆಗೆ ತೆರಳಿ ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ; ಭೇಟಿ ಹಿಂದಿನ ಉದ್ದೇಶವಾದರೂ ಏನು?

ಶಿವಯೋಗಿ ಸ್ವಾಮೀಜಿ ಮುರುಘಾಮಠದ ಪೀಠಾಧಿಪತಿಯಾಗಿದ್ದಾಗ ಓರ್ವ ಮಹಿಳೆಯ ಜೊತೆ ಅನೈತಿಕ ಸಂಬಂಧವಿತ್ತು. ಆಕೆಗೆ ಮಠದ ಜಮೀನನ್ನು ಬರೆದುಕೊಟ್ಟಿದ್ದರು ಎಂದು ಹೇಳಲಾಗಿತ್ತು. ಇದೇ ಕಾರಣಕ್ಕೆ ಅವರನ್ನು ಮಠದಿಂದ ಹೊರಗೆ ಹಾಕಿ ಮಲ್ಲಿಕಾರ್ಜುನ ಸ್ವಾಮೀಜಿಗಳನ್ನು ಪೀಠಾಧ್ಯಕ್ಷರಾಗಿ ಮಾಡಲಾಗಿತ್ತು. ಆದರೆ ಶಿವಯೋಗಿ ಸ್ವಾಮೀಜಿಗಳು ತಮ್ಮ ವಿರುದ್ಧದ ಆರೋಪ ಸುಳ್ಳು ಎನ್ನುತ್ತಿದ್ದಾರೆ. ದುರುದ್ದೇಶದಿಂದ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿನಯ ಕುಲಕರ್ಣಿ ಮತ್ತವರ ತಂಡದವರು ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿದ್ದಾರೆ. ಅವರಿಗೆ ತಾಕತ್ತಿದ್ದರೆ ಆರೋಪಗಳನ್ನು ಸಾಬೀತು ಮಾಡಲಿ ಎಂದು ಶಿವಯೋಗಿ ಸ್ವಾಮೀಜಿ ಸವಾಲು ಹಾಕಿದ್ದಾರೆ.

ಕಳೆದ ಒಂಭತ್ತು ವರ್ಷಗಳಿಂದ ಮಠದಿಂದ ದೂರವಾಗಿ ನರಕಯಾತನೆ ಅನುಭವಿಸುತ್ತಿದ್ದೇನೆ. ನನ್ನನ್ನು ಧಾರವಾಡದ ಮುರುಘಾ ಮಠದ ಪೀಠಾಧಿಪತಿಯಾಗಿ ಮುಂದುವರಿಸಬೇಕು. ಇಲ್ಲವೆ ವಿರೋಧಿಗಳು ವಿಷ ಹಾಕಿ ಸಾಯಿಸುವ ಮೊದಲು ನನಗೆ ದಯಾಮರಣ ಕೊಡಿ ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ. ದಯಾಮರಣ ಕೋರಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಇದನ್ನೂ ನೋಡಿ:
Loading...

First published:November 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ