• Home
  • »
  • News
  • »
  • state
  • »
  • Murugha Swamy Case: ಮನೆಗೆ ಹೋದ ಕೇವಲ ಅರ್ಧ ಗಂಟೆಯಲ್ಲಿ ಹಿಂದಿರುಗಿದ ಸಂತ್ರಸ್ತ ಬಾಲಕಿ

Murugha Swamy Case: ಮನೆಗೆ ಹೋದ ಕೇವಲ ಅರ್ಧ ಗಂಟೆಯಲ್ಲಿ ಹಿಂದಿರುಗಿದ ಸಂತ್ರಸ್ತ ಬಾಲಕಿ

ಮುರುಘಾ ಶ್ರೀ

ಮುರುಘಾ ಶ್ರೀ

ಮನೆಗೆ ಆಗಮಿಸಿದ್ದ ಬಾಲಕಿಯನ್ನು ಸೌಭಾಗ್ಯ ಮತ್ತು ಬಸವರಾಜನ್ ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಾಲಕಿ ತನ್ನ ಮನೆಯಲ್ಲಿ ಇರಲಾಗದು ಎಂದು ಹೇಳಿರುವ ಹಿನ್ನೆಲೆ ವಿಚಾರಣೆ ನಡೆಸಿ ಬಾಲ‌ಮಂದಿರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

  • News18 Kannada
  • Last Updated :
  • Chitradurga, India
  • Share this:

ಆಗಸ್ಟ್ 26ರಂದು ಮುರುಘಾ ಸ್ವಾಮಿ (Murugha Swamy Case) ವಿರುದ್ಧ ಎರಡನೇ ಪೋಕ್ಸೋ ಪ್ರಕರಣ (POCSO Case) ದಾಖಲಾಗಿತ್ತು. ಈ ಪ್ರಕರಣದ ಸಂತ್ರಸ್ತ ಬಾಲಕಿಯರನ್ನು (Victim) ಗುರುವಾರ ಪೋಷಕರ ಜೊತೆ ಮನೆಗೆ ಕಳುಹಿಸುವ ಪ್ರಕ್ರಿಯೆ ನಡೆಸಲಾಗಿತ್ತು. ಪ್ರಕರಣ ದಾಖಲಾದ ದಿನದಿಂದ ಸಂತ್ರಸ್ತ ಬಾಲಕಿಯರನ್ನು ಚಿತ್ರದುರ್ಗದ (Chitradurga) ಬಾಲಮಂದಿರದಲ್ಲಿ ಇರಿಸಲಾಗಿತ್ತು. ಆದ್ರೆ ಇಬ್ಬರಲ್ಲಿ ಓರ್ವ ಬಾಲಕಿ ಮನೆಗೆ ತೆರಳಿ ಅರ್ಧ ಗಂಟೆಯಲ್ಲಿ ವಾಪಸ್ ಆಗಿದ್ದಾನೆ. ಬಾಲಮಂದಿರದಿಂದ ತೆರಳಿದ ಬಾಲಕಿ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಮನೆಗೆ ಹೋಗಿದ್ದಾಳೆ. ಅಲ್ಲಿ ಎಸ್ ಕೆ ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯರನ್ನು ಭೇಟಿಯಾಗಿದ್ದಾಳೆ.


ಮನೆಗೆ ಆಗಮಿಸಿದ್ದ ಬಾಲಕಿಯನ್ನು ಸೌಭಾಗ್ಯ ಮತ್ತು ಬಸವರಾಜನ್ ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಾಲಕಿ ತನ್ನ ಮನೆಯಲ್ಲಿ ಇರಲಾಗದು ಎಂದು ಹೇಳಿರುವ ಹಿನ್ನೆಲೆ ವಿಚಾರಣೆ ನಡೆಸಿ ಬಾಲ‌ಮಂದಿರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.


ಇಂದು ನ್ಯಾಯಾಂಗ ಬಂಧನ ಅವಧಿ ಅಂತ್ಯ


ಇಂದು ಮುರುಘಾ ಸ್ವಾಮಿ ನ್ಯಾಯಾಂಗ ಬಂಧನ ಅವಧಿ ಅಂತ್ಯವಾಗಲಿದ್ದು, ನ್ಯಾಯಾಲಯದ ಎದುರು ಆರೋಪಿಯನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮುರುಘಾ ಸ್ವಾಮಿಯನ್ನು ಜಿಲ್ಲಾ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗುತ್ತದೆ. ಪ್ರಕರಣದ ಎರಡನೇ ಆರೋಪಿ ಲೇಡಿ ವಾರ್ಡನ್ ರಶ್ಮಿಯ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾಗಲಿದೆ. ಶಿವಮೊಗ್ಗದ ಕಾರಾಗೃಹದಿಂದ ರಶ್ಮಿಯನ್ನು ಚಿತ್ರದುರ್ಗಕ್ಕೆ ಕರೆತರಲಾಗುತ್ತಿದೆ.


Murugha swamy case victim girl return to police station mrq
ಮುರುಘಾ ಮಠ


ಎರಡನೇ ಪೋಕ್ಸೋ ಪ್ರಕರಣದ ಹಿನ್ನೆಲೆ ಪೊಲೀಸರು ಇಬ್ಬರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ಕೇಳುವ ಸಾಧ್ಯತೆಗಳಿವೆ. ಒಂದು ವೇಳೆ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಲ್ಲಿ, ಸ್ಥಳ ಮಹಜರು ನಡೆಸಲಾಗುತ್ತದೆ. ಇದುವರೆಗೂ ಇಬ್ಬರಿಗೂ ಜಾಮೀನು ಸಿಕಿಲ್ಲ. ಮುರುಘಾ ಸ್ವಾಮಿ ಜಾಮೀನು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಅಕ್ಟೋಬರ್ 26ಕ್ಕೆ ಅರ್ಜಿಯ ವಿಚಾರಣೆ ಬರಲಿದೆ.


ಮುರುಘಾ ಸ್ವಾಮಿ ವಿರುದ್ಧ ಮೂರನೇ ಎಫ್​ಐಆರ್


ಜೈಲಿನಲ್ಲಿರುವ  ಮುರುಘಾ ಸ್ವಾಮಿಗೆ (Murugha Swamy) ಮತ್ತೊಂದು ಸಂಕಷ್ಟ ಎದುರಾಗಿದೆ. ಮುರುಘಾ ಸ್ವಾಮಿ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಚಿತ್ರದುರ್ಗ (Chitradurga) ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಠದ ಆವರಣದಲ್ಲಿರುವ ಹಾಸ್ಟೆಲ್​ನಲ್ಲಿ ಇಬ್ಬರು ಮಕ್ಕಳು (Children) ಪತ್ತೆ ಆಗಿದ್ದರು. ನಾಲ್ಕೂವರೆ ವರ್ಷದ ಓರ್ವ ಬಾಲಕಿ ಹಾಗೂ 16 ವರ್ಷದ ಮತ್ತೋರ್ವ ಬಾಲಕಿ ಪತ್ತೆ ಆಗಿದ್ದರು.


ಇದನ್ನೂ ಓದಿ:  Bengaluru: ಬೆಂಗಳೂರಲ್ಲಿ ಮನೆ ಕಟ್ಟೋಕೆ 5 ಲಕ್ಷ ಸಹಾಯಧನ!

 ಮಕ್ಕಳ ರಕ್ಷಣಾ ಘಟಕದಿಂದ ದೂರು ದಾಖಲು


ಇಬ್ಬರು ಬಾಲಕಿಯರ ಬಗ್ಗೆ ಮಡಿಲು ಯೋಜನೆಗೆ ಮಾಹಿತಿ ನೀಡದೇ ಅಕ್ರಮ ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ. ಹಾಗೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡದಿರುವುದು ಅಕ್ರಮ ಎಂದು ಸಾಮಾಜಿಕ ಹೋರಾಟಗಾರ ಮಧುಕುಮಾರ್ ನೀಡಿದ್ದ ದೂರನ್ನು ಪರಿಶೀಲಿಸಿದ ಮಕ್ಕಳ ರಕ್ಷಣಾ ಘಟಕ ಪೊಲೀಸ್​ ಠಾಣೆಗೆ ದೂರು ನೀಡಿದೆ.



Murugha swamy case victim girl return to police station mrq
ಮುರುಘಾ ಮಠ




ಎಫ್​ಐಆರ್​ನಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ. A1 ಶಿವಮೂರ್ತಿ ಮುರುಘಾ ಸ್ವಾಮಿ,  A2 ಕಾರ್ಯದರ್ಶಿ ಪರಮಶಿವಯ್ಯ, A3 ವಾರ್ಡನ್ ರಶ್ಮಿ ಮತ್ತು A4 ಮಡಿಲು ದತ್ತು ಕೇಂದ್ರದ ಮುಖ್ಯಸ್ಥೆ ವೀಣಾ ಆರೋಪಿಗಳಾಗಿದ್ದಾರೆ.

ಪ್ರಭಾರ ಪೀಠಾಧ್ಯಕ್ಷರ ನೇಮಕ


ಚಿತ್ರದುರ್ಗದ  ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕವಾಗಿದೆ. ಹಲವರ ವಿರೋಧದ ನಡುವೆಯೂ ಕಾನೂನು ಪ್ರಕ್ರಿಯೆ (Legal Process) ಮೂಲಕ ಅಧಿಕೃತವಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಿಸಲಾಗಿದೆ.


ಇದನ್ನೂ ಓದಿ:  GT Devegowda: ಜೆಡಿಎಸ್​ ಬಿಡಲ್ಲ ಎಂದು ಗಳಗಳನೇ ಕಣ್ಣೀರಿಟ್ಟ ಜಿಟಿಡಿ; ಪುತ್ರ ಹರೀಶ್​ಗೆ ಸಿಗುತ್ತಾ ಟಿಕೆಟ್​?

 ಈ ಬಗ್ಗೆ ಹೈಕೋರ್ಟ್ (High Court) ಅನುಮತಿ ಪಡೆದು ಬಸವಪ್ರಭುಶ್ರೀ ನೇಮಕ ಕುರಿತು ಮುರುಘಾಮಠ  ಅಕ್ಟೋಬರ್ 16ರಂದು ಅಧಿಕೃತ ಪ್ರಕಟಣೆ ಹೊರಡಿಸಿತ್ತು. ಮಠದ ಧಾರ್ಮಿಕ, ಸೇವಾ, ಪೂಜಾ ಕಾರ್ಯಗಳು ಮಠದ ಪರಂಪರೆ ಮುಂದುವರಿಸಿಕೊಂಡು ಹೋಗಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Published by:Mahmadrafik K
First published: