• Home
  • »
  • News
  • »
  • state
  • »
  • Murugha Swamy Case: ಚಾರ್ಜ್​​ಶೀಟ್​ ಸಲ್ಲಿಕೆ, ಔಷಧಿ ಬೆರೆಸಿದ ಸೇಬು ನೀಡಿ ದೌರ್ಜನ್ಯ; ಮಕ್ಕಳಿಗೆ ಕೊಲೆ ಬೆದರಿಕೆ

Murugha Swamy Case: ಚಾರ್ಜ್​​ಶೀಟ್​ ಸಲ್ಲಿಕೆ, ಔಷಧಿ ಬೆರೆಸಿದ ಸೇಬು ನೀಡಿ ದೌರ್ಜನ್ಯ; ಮಕ್ಕಳಿಗೆ ಕೊಲೆ ಬೆದರಿಕೆ

ಮುರುಘಾ ಸ್ವಾಮಿ

ಮುರುಘಾ ಸ್ವಾಮಿ

ಸದ್ಯ ಮಠದ ಹಾಸ್ಟೆಲ್​​ನಲ್ಲಿದ್ದ ಮತ್ತಷ್ಟು ಮಕ್ಕಳ ವಿಚಾರಣೆ ನಡೆಸಲಾಗುತ್ತಿದೆ. ಸಂತ್ರಸ್ತರ ಹೇಳಿಕೆ ಅಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ವೇಳೆ ಮತ್ತಷ್ಟು ಮಕ್ಕಳು ದೂರು ನೀಡಿದರೆ ಮುರುಘಾ ಸ್ವಾಮಿಗೆ ಕಂಟಕ ಎದುರಾಗಲಿದೆ.

  • Share this:

ಚಿತ್ರದುರ್ಗ ಮುರುಘಾ ಮಠದ (Murugha Mutt, Chitradurga) ಶಿವಮೂರ್ತಿ ಸ್ವಾಮಿ (Shivamurthy Swamy) ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ (POCSO Case) ತನಿಖೆ ನಡೆಸಿರುವ ಪೊಲೀಸರು ಚಾರ್ಜ್​ಶೀಟ್​ (Chargesheet) ಸಲ್ಲಿಕೆ ಮಾಡಿದ್ದಾರೆ. ಮುರುಘಾ ಸ್ವಾಮಿ (Murugha Swamy) ವಿರುದ್ಧ ಎರಡು ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಈಗ ಮೊದಲ ಪ್ರಕರಣಕ್ಕೆ ಸಂಬಂಧ ಪೊಲೀಸರು 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಡಿವೈಎಸ್​​​​ಪಿ ಅನಿಲ್‌ (DySP Anil) ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆದಿತ್ತು. ನ್ಯೂಸ್ 18ಗೆ  ಪೊಲೀಸ್ ಮೂಲದಿಂದ ಚಾರ್ಜ್​ಶೀಟ್​​ನಲ್ಲಿರುವ ಅಂಶಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ.


ಒಟ್ಟು 694 ಪುಟಗಳ ಚಾರ್ಜ್​​​ಶೀಟ್ ಸಲ್ಲಿಕೆ ಮಾಡಲಾಗಿದೆ. 347 ಪುಟಗಳ ಎರಡು ಸೆಟ್ ಚಾರ್ಜ್​​ಶೀಟ್ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ. ಫೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆಯಡಿ ಕೇಸ್ ದಾಖಲಾಗಿದೆ.


ಆರೋಪಿಗಳ ಪಟ್ಟಿ


A1ಮುರುಘಾ ಸ್ವಾಮಿ, A2 ಲೇಡಿ ವಾರ್ಡನ್ (ರಶ್ಮಿ), A 4 ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ ಚಾರ್ಜ್​​​ಶೀಟ್​​ ಸಲ್ಲಿಕೆಯಾಗಿದೆ.A 3 ಮಠದ ಉತ್ತರಾಧಿಕಾರಿ , A5 ವಕೀಲ ಗಂಗಾಧರಯ್ಯ ಭಾಗಿ ಆಗಿರುವ ಮಾಹಿತಿ ಇಲ್ಲ. ತನಿಖೆ ಮುಂದುವರಿಕೆ ಎಂದು ಮಾಹಿತಿ ನೀಡಲಾಗಿದೆ.


murugha swamy case police filed chargesheet mrq
ಮುರುಘಾ ಸ್ವಾಮಿ


ಜೀವ ಬೆದರಿಕೆ ಹಾಕ್ತಿದ್ದ ರಶ್ಮಿ


ಲೇಡಿ ವಾರ್ಡನ್ ರಶ್ಮಿ ಮೂಲಕ ಬಾಲಕಿಯರನ್ನು ಕರೆಸಿ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಮುರುಘಾ ಸ್ವಾಮಿ ವಿರುದ್ಧ ಕೇಳಿಬಂದಿದೆ. ಮತ್ತು ಬರುವ ಔಷಧಿ ಬೆರೆಸಿದ ಸೇಬು ನೀಡಿ ಮಕ್ಕಳನ್ನು  ಕಚೇರಿ, ಬೆಡ್ ರೂಂ, ಬಾತ್ ರೂಂಗೆ ಕರೆದೊಯ್ದು ಬಲತ್ಕಾರ ಮಾಡಲಾಗಿದೆ. ವಿರೋಧಿಸಿದರೆ ವಾರ್ಡನ್ ರಶ್ಮಿ ಜೀವ ಬೆದರಿಕೆ ಹಾಕ್ತಿದ್ದರು ಎಂದು ತಿಳಿದು ಬಂದಿದೆ.


ಆಂಧ್ರ ಮೂಲದ ಬಾಲಕಿಯ ರೇಪ್ & ಮರ್ಡರ್​?


ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಗಂಭೀರ ಆರೋಪ ಬಂದಿದೆ. ಕೆಲ ವರ್ಷದ ಹಿಂದೆ ಓರ್ವ ಬಾಲಕಿಯ ರೇಪ್ & ಮರ್ಡರ್ ನಡೆದಿತ್ತು ಎಂಬ ಸಂತ್ರಸ್ತ ಬಾಲಕಿಯರ ಹೇಳಿಕೆ ಆಧರಿಸಿ ಪೊಲೀಸರ ತನಿಖೆ ನಡೆಸುತ್ತಿದ್ದಾರೆ.


ಇದನ್ನೂ ಓದಿ:  PSI Riot: ನಾನೇ ಈ ಅಪಾರ್ಟ್​ಮೆಂಟ್​ ಬಾಸ್, ನಂದೇ ರೂಲ್ಸ್​​! ಅಕ್ಕಪಕ್ಕದ ನಿವಾಸಿಗಳ ಮೇಲೆ ಪಿಎಸ್ಐ ಹಲ್ಲೆ!


ಆಂಧ್ರ ಪ್ರದೇಶ ಮೂಲದ ಬಾಲಕಿ ಮಠದ ಹಾಸ್ಟೆಲ್​​​ನಲ್ಲಿದ್ದಳು. ಆಂಧ್ರಕ್ಕೆ ತೆರಳಿದ್ದ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಆದ್ರೆ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂತ್ರಸ್ತ ಮಕ್ಕಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆ ಬಾಲಕಿ ಯಾರು? ಅಪಘಾತ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.


murugha swamy case police filed chargesheet mrq
ಮುರುಘಾ ಸ್ವಾಮಿ


ಮತ್ತಷ್ಟು ಮಕ್ಕಳ ವಿಚಾರಣೆ


ಸದ್ಯ ಮಠದ ಹಾಸ್ಟೆಲ್​​ನಲ್ಲಿದ್ದ ಮತ್ತಷ್ಟು ಮಕ್ಕಳ ವಿಚಾರಣೆ ನಡೆಸಲಾಗುತ್ತಿದೆ. ಸಂತ್ರಸ್ತರ ಹೇಳಿಕೆ ಅಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ವೇಳೆ ಮತ್ತಷ್ಟು ಮಕ್ಕಳು ದೂರು ನೀಡಿದರೆ ಮುರುಘಾ ಸ್ವಾಮಿಗೆ ಕಂಟಕ ಎದುರಾಗಲಿದೆ.


ಇದನ್ನೂ ಓದಿ:   Acid Attack: ಯುವತಿ ಮೇಲೆ ಆ್ಯಸಿಡ್ ಸುರಿದಿದ್ದ ನಾಗನಿಗೆ ಗ್ಯಾಂಗ್ರಿನ್ ನೋವು! ಇದು ದೇವರೇ ನೀಡಿದ ಶಿಕ್ಷೆ ಎಂದ ಸಂತ್ರಸ್ತೆ


ಚಾರ್ಜ್​ಶೀಟ್ ಸಲ್ಲಿಕೆ ಸ್ಟಾಲಿನ್ ಪ್ರತಿಕ್ರಿಯೆ


ಇನ್ನೂ ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟಾಲಿನ್, ಇದೊಂದು ಒಳ್ಳೆಯ ಬೆಳವಣಿಗೆ. ಸದ್ಯ ಪೊಲೀಸರ ತನಿಖೆಯ ಬಗ್ಗೆ ಮಾತನಾಡಲ್ಲ. ಅವರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿರುತ್ತಾರೆ. ಚಾರ್ಜ್​ಶೀಟ್​ ಸಲ್ಲಿಕೆಯಾಗಿರುವ ಕಾರಣ ದೌರ್ಜನ್ಯಕ್ಕೆ ಒಳಗಾಗಿರುವ ಮಕ್ಕಳು ಮುಂದೆ ಬರಬಹುದು. ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವರೆಗೂ ನಮ್ಮ ಸಂಸ್ಥೆ ಕೆಲಸ ಮಾಡಲಿದೆ ಎಂದು ಮಾಹಿತಿ ನೀಡಿದರು.

Published by:Mahmadrafik K
First published: