ಮುರುಘಾ ಶ್ರೀಗಳ (Murugha Shri) ವಿರುದ್ದ ಅತ್ಯಾಚಾರ (Rape Case), ಪೋಕ್ಸೋ ಪ್ರಕರಣ ದಾಖಲಾಗಿದೆ. ತಡರಾತ್ರಿ ಮೈಸೂರಿಂದ (Mysuru) ಬಿಗಿಭದ್ರತೆಯಲ್ಲಿ ಇಬ್ಬರು ಬಾಲಕಿಯರನ್ನು ಅಧಿಕಾರಿಗಳು ಚಿತ್ರದುರ್ಗಕ್ಕೆ ಕರೆತಂದಿದ್ದಾರೆ. ಇಂದು ಬಾಲಕಿಯರ ವೈದ್ಯಕೀಯ ಪರೀಕ್ಷೆ (Medical Test) ನಡೆಯಿತು. ಬಳಿಕ ನ್ಯಾಯಾಧೀಶರ (Judge) ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಇದರ ನಡುವೆ ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ಹಿನ್ನೆಲೆ ದೂರುದಾರ ಬಸವರಾಜನ್ ಜೊತೆ ವಿವಿಧ ಮಠಾಧೀಶರು (Swamiji) ಸಭೆ ನಡೆಸಿದರು. ಕೇಸ್ ವಾಪಸ್ ಪಡೆಯುವಂತೆ ಮನವಿ ಮಾಡಿದ್ರು. ಆದರೆ ಸಂಧಾನ ಸಭೆ (Meeting) ವಿಫಲ ಆಗಿದೆ. ಇನ್ನು ಪೊಲೀಸರ ಮುಂದೆ, ನ್ಯಾಯಾಧೀಶರ ಮುಂದೆ ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ರೆ ಶ್ರೀಗಳಿಗೆ ಸಂಕಷ್ಟ ಫಿಕ್ಸ್ ಎನ್ನಲಾಗಿದೆ.
ಆಡಳಿತಾಧಿಕಾರಿ ಬಸವರಾಜನ್ ಜೊತೆ ರಹಸ್ಯ ಸಭೆ
ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ಹಿನ್ನೆಲೆ ಎಸ್.ಕೆ.ಬಸವರಾಜನ್ ಜೊತೆ ವಿವಿಧ ಮಠಾಧೀಶರು ಸಭೆ ನಡೆಸಿದರು. ಹೊಸದುರ್ಗ ಭಗೀರಥ ಮಠದ ಪುರುಷೋತ್ತಮಾನಂದಪುರಿ ಶ್ರೀ, ಗಾಣಿಗ ಮಠದ ಬಸವಕುಮಾರ ಶ್ರೀ, ಇತರೆ ಶ್ರೀಗಳು, ಮುಖಂಡರು ಸಭೆ ನಡೆಸಿದರು. ಬಸವರಾಜನ್ ಜೊತೆ ಶ್ರೀಗಳ ಸಭೆಯ ಫೋಟೋ ವೈರಲ್ ಆಗಿದೆ.
ಬಸವರಾಜನ್ ಜೊತೆಗಿನ ಸಂಧಾನ ವಿಫಲ
ಮುರುಘಾ ಶ್ರೀಗಳ ವಿರುದ್ಧ ದೂರು ನೀಡಿದ್ದ ಮಠದ ಆಡಳಿತಾಧಿಕಾರಿ ಬಸವರಾಜನ್ ಜೊತೆ ರಹಸ್ಯ ಸಭೆ ನಡೆದಿದೆ. ಭಗೀರಥ ಸ್ವಾಮೀಜಿಗಳು ರಸಹ್ಯ ಸ್ಥಳದಲ್ಲಿ ಸಭೆ ನಡೆಸಿದ್ರು. ಪ್ರಕರಣದ ಹಿಂದೆ ಬಸವರಾಜನ್ ಇರೋದಾಗಿ ಆರೋಪ ಮಾಡಲಾಗಿತ್ತು. ಆದರೆ ಸಂಧಾನ ವಿಫಲ ಆಗಿದೆ.
ಇದನ್ನೂ ಓದಿ: ಪೋಕ್ಸೋ ಕಾಯ್ದೆ ಎಷ್ಟು ಕಠಿಣವಾಗಿದೆ? ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆಯೇನು?
ಕಾನೂನಿನಲ್ಲಿ ಮುರುಘಾ ಶ್ರೀಗೆ ಇರುವ ದಾರಿಗಳೇನು?
ದಾರಿ 1: ಕೌಂಟರ್ ಕಂಪ್ಲೇಂಟ್!
ಕೌಂಟರ್ ಕಂಪ್ಲೇಂಟ್ ನೀಡಿದ್ರೆ ಎರಡು ಕೇಸ್ ಏಕಕಾಲದಲ್ಲಿ ತನಿಖೆಯಾಗುತ್ತೆ. ಈ ವೇಳೆ ಷಡ್ಯಂತ್ರ ಬಯಲಾಗುವ ಸಾಧ್ಯತೆ ಕೂಡ ಇರುತ್ತೆ. ಆದರೆ ಈಗಾಗಲೇ ಸ್ವಾಮೀಜಿ ಬದಲು ಹಾಸ್ಟೇಲ್ ವಾರ್ಡನ್ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಬ್ಲಾಕ್ ಮೇಲ್ ದೂರು ನೀಡಲಾಗಿದೆ. ಹೀಗಾಗಿ ಈ ದಾರಿಯೂ ಸದ್ಯಕ್ಕೆ ಫ್ಲಾಪ್ ಆಗಲಿದೆ.
ದಾರಿ 2: ನಿರೀಕ್ಷಣಾ ಜಾಮೀನು ಅರ್ಜಿ
ಸದ್ಯ ಮುರುಘಾ ಶ್ರೀಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ನಾಳೆ ಅರ್ಜಿ ಸಲ್ಲಿಸಬಹುದು. ಆದರೆ ಪೋಕ್ಸೋ ಕೇಸ್ ಹಿನ್ನಲೆ ಜಾಮೀನು ಕಷ್ಟ. ಆದರೆ ನ್ಯಾಯಾಲಯ ಯಾವ ರೀತಿ ಪರಿಗಣಿಸತ್ತೆ ಕಾದು ನೋಡಬೇಕಿದೆ.
ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಸಂತ್ರಸ್ತ ಬಾಲಕಿಯರ ಮೆಡಿಕಲ್ ಟೆಸ್ಟ್ ನಡೆಯಿತು. ಇಂದೇ ಜಡ್ಜ್ ಎದುರು ಹಾಜರು ಪಡಿಸುವ ಸಾಧ್ಯತೆ ಇದೆ. ನಂತರ ಪೊಲೀಸ್ ಅಧಿಕಾರಿಗಳು ಮುರುಘಾ ಶ್ರೀಗಳಿಗೆ ನೋಟೀಸ್ ನೀಡುವ ಸಾಧ್ಯತೆ ಇದೆ. ಮುರುಘಾ ಶ್ರೀ ಸೇರಿ ಒಟ್ಟು ಐವರು ಆರೋಪಿಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಮಠದಲ್ಲೇ ಕುಳಿತು ತನಿಖೆಗೆ ತಯಾರಿ ನಡೆಸ್ತಿರುವ ಶ್ರೀಗಳು
ಈಗಾಗಲೇ ಮುರುಘಾ ಶ್ರೀಗಳು ಕಾನೂನು ಹೋರಾಟಕ್ಕೆ ಸಿದ್ಧ ಎಂದಿದ್ದಾರೆ. ಹಾಗಾಗಿ ಎರಡನೇ ದಿನವೂ ಮಠವನ್ನ ಬಿಟ್ಟು ಅತ್ತಿತ್ತ ಹೋಗದ ಶ್ರೀಗಳು ತನಿಖೆ ಸಂಬಂಧ ತಯಾರಿ ನಡೆಸ್ತಿದ್ದಾರೆ. ಇತ್ತ ಎಲ್ಲಾ ಬೆಳವಣಿಗೆ ನಡುವೆಯೂ ಮಠಕ್ಕೆ ಹಲವು ಮಠಾಧೀಶರು, ಮುಖಂಡರು ಭೇಟಿ ನೀಡಿ ಮುರುಘಾ ಶ್ರೀಗಳಿಗೆ ಧೈರ್ಯ ಹೇಳುತ್ತಿದ್ದಾರೆ.
ಇದನ್ನೂ ಓದಿ: ಪೋಕ್ಸೋ ವ್ಯೂಹದಲ್ಲಿ ಮುರುಘಾ ಶ್ರೀಗಳು; ಡಿಕೆ ಮೇಲೆ ರಾಹುಲ್ ಗಾಂಧಿ ಮುನಿಸು!
ಮುರುಘಾ ಶ್ರೀಗಳಿಗೆ ಮುಂದಿನ ಹಂತದಲ್ಲಿ ಕಂಟಕ ಫಿಕ್ಸ್ ಎನ್ನಲಾಗ್ತಿದೆ. ಈಗಾಗಲೇ ಪೊಲೀಸರ ಮುಂದೆ ಸಂತ್ರಸ್ತ ಬಾಲಕಿಯರು ಹೇಳಿಕೆ ನೀಡಿದ್ದಾರೆ. 3 ವರ್ಷಗಳಿಂದ ಸ್ವಾಮೀಜಿಯಿಂದ ಲೈಂಗಿಕ ಕಿರುಕುಳ ಅನುಭವಿಸಿರೋದಾಗಿ ಮಕ್ಕಳು ಹೇಳಿದ್ದಾರೆ. ನ್ಯಾಯಾಧೀಶರ ಮುಂದೆಯೂ ಅದೇ ಹೇಳಿಕೆ ನೀಡಿದ್ರೆ ಸ್ವಾಮೀಜಿಗೆ ಸಂಕಷ್ಟ ಫಿಕ್ಸ್ ಎನ್ನಲಾಗ್ತಿದೆ.
ಪೋಕ್ಸೋ ಕೇಸ್ ನಲ್ಲಿ ಮಕ್ಕಳ ಹೇಳಿಕೆ ತುಂಬಾ ಮುಖ್ಯ ಆಗುತ್ತೆ. ಸೆಕ್ಷನ್ 164 ಅಡಿ ಸಂತ್ರಸ್ಥ ಮಕ್ಕಳು ಹೇಳಿಕೆ ನೀಡಿದ್ರೆ ಮುರುಘಾ ಶ್ರೀಗಳನ್ನ ವಶಕ್ಕೆ ಪಡೆಯೋದು ಗ್ಯಾರೆಂಟಿ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ