Murugha Shri Case: ಮುರುಘಾ ಶರಣರ ಕೇಸ್ ತನಿಖೆಯಲ್ಲಿ ಸಾಲು ಸಾಲು ವೈಫಲ್ಯಗಳು!

ಇಂದು ಬೆಳಗ್ಗೆ ಎಸ್​ಪಿ ಪರಶುರಾಮ್ ಮತ್ತು ಡಿವೈಎಸ್​​ಪಿ ಅನಿಲ್ ಅವರು ಶ್ರೀಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದ ಮುರುಘಾ ಶರಣರು ಮೌನಕ್ಕೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮುರುಘಾ ಶ್ರೀ

ಮುರುಘಾ ಶ್ರೀ

  • Share this:
    ಪೋಕ್ಸೋ ಆರೋಪ (POCSO Allegation) ಎದುರಿಸುತ್ತಿರುವ ಚಿತ್ರದುರ್ಗದ ಮರುಘಾ ಮಠದ ಶಿವಮೂರ್ತಿ ಸ್ವಾಮೀಜಿ (Murugah Shri) ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು (Police Custody), ವಿಚಾರಣೆ ಎದುರಿಸುತ್ತಿದ್ದಾರೆ. ಶರಣರ ವಿರುದ್ಧ ಎಫ್​ಐಆರ್ (FIR) ದಾಖಲಾದ ಬಳಿಕ ಪೊಲೀಸರ ತನಿಖೆ ಬಗ್ಗೆ ಒಡನಾಡಿ ಸಂಸ್ಥೆ (Odanadi Organization)  ಆರಂಭದಿಂದಲೂ ಅನುಮಾನ ವ್ಯಕ್ತಪಡಿಸುತ್ತಲೇ ಬಂದಿದೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶರಣರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ (Jayadeva Hospital) ಶಿಫ್ಟ್ ಮಾಡಲು ಎಲ್ಲಾ ತಯಾರಿಗಳು ನಡೆದಿದ್ದವು. ಆದ್ರೆ ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ವಿಚಾರಣೆ ನಡೆಸುವಂತೆ ಸೂಚಿಸಿದೆ. ವಿಚಾರಣೆ ಜೊತೆಯಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ (Medical Treatment) ನೀಡಲು ಸಹ ಆದೇಶಿಸಿದೆ.

    ಗುರುವಾರ ರಾತ್ರಿ ಮುರುಘಾ ಶರಣರನ್ನು ಮಠದಲ್ಲಿಯೇ ವಿಚಾರಣೆ ನಡೆಸಲಾಗಿತ್ತು. ನಂತರ ಶರಣರನ್ನು ಬಂಧಿಸಿ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಪೊಲೀಸರು ಆರೋಪಿಯನ್ನ ತಮ್ಮ ವಶಕ್ಕೆ ಕೇಳದ ಹಿನ್ನೆಲೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆದ್ರೆ ಬೆಳಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು. ಹೀಗಾಗಿ ಪೊಲೀಸರ ತನಿಖೆಯ ಬಗ್ಗೆ ಒಂದಿಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

    1.ಮುರುಘಾ ಶರಣರ ಬಂಧಿಸಿದ ನಂತರ 24 ಗಂಟೆ ಅವಕಾಶ ಇದ್ರೂ 2 ಗಂಟೆ ರಾತ್ರಿಯಲ್ಲಿ ಜಡ್ಜ್ ಮುಂದೆ ಹಾಜರುಪಡಿಸಿದ್ದೇಕೆ?

    2.ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಪೊಲೀಸ್ ಕಸ್ಟಡಿ ಕೇಳಿಲ್ಲ ಯಾಕೆ?

    3.ನ್ಯಾಯಾಧೀಶರ ಮುಂದೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕೇಳಿದ್ಯಾಕೆ?

    4.ಜೈಲಿಗೆ ಕಳುಹಿಸಿದ ನಂತರ ಅನಾರೋಗ್ಯ ನೆಪದಲ್ಲಿ ಆಸ್ಪತ್ರೆ ಸೇರಿಸೋ ಫ್ಲ್ಯಾನ್ ಆಗಿತ್ತಾ?

    5.ನ್ಯಾಯಾಧೀಶರ ಅನುಮತಿ ಕೇಳದೇ ತರಾತುರಿಯಲ್ಲಿ ಆಸ್ಪತ್ರೆಗೆ ಸೇರಿಸಿದ್ಯಾಕೆ?

    ಇದನ್ನೂ ಓದಿ: Murugha Mutt Case: ಮುರುಘಾ ಸ್ವಾಮೀಜಿಗೆ ಪೊಲೀಸ್ ಕಸ್ಟಡಿ, ಮೈಮೇಲೆ ಪೆಟ್ರೋಲ್ ಸುರಿದುಕೊಂಡ ಭಕ್ತ!

    6.ಆರೋಪಿ ಆಸ್ಪತ್ರೆಗೆ ಸೇರಿದ ಮೇಲೂ ಕೋರ್ಟ್ ಗಮನಕ್ಕೆ ಯಾಕೆ ಕೊಟ್ಟಿಲ್ಲ?

    7.ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದಾಗ ಕಸ್ಟಡಿಗೆ ಕೇಳದ ಪೊಲೀಸರು ಬೆಳಿಗ್ಗೆ ಕಸ್ಟಡಿಗೆ ಕೇಳಿದ್ಯಾಕೆ?

    8.ಆರೋಪಿಯನ್ನು ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರಿಗೆ ಶಿಫ್ಟ್ ಮಾಡಲು ಪ್ರಯತ್ನ ನಡೆದಿತ್ತಾ?

    9.ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಅಂತ ಜಿಲ್ಲಾ ವೈದ್ಯರು ಹೇಳಿದ್ಯಾಕೆ‌?

    10.ಎದೆನೋವು ಅಂತ ವೀಲ್ ಚೇರ್ ನಲ್ಲಿ ಇದ್ದವರು ಕೋರ್ಟ್​​ಗೆ ನಡ್ಕೊಂಡು ಹೋಗಿದ್ಯಾಕೆ?

    11.ನಡ್ಕೊಂಡು ಹೋಗಿದ್ದು ಅಷ್ಟೇ ಅಲ್ಲದೇ ಮೊದಲ ಮಹಡಿಗೆ ಮೆಟ್ಟಿಲು ಹತ್ತಿ ಹೋದ್ರು‌, ಇಲ್ಲಿ ಎದೆನೋವು ಇರಲಿಲ್ಲವೇ?

    12.ವೀಲ್ ಚೇರ್ ನಲ್ಲಿ ಆಸ್ಪತ್ರೆಗೆ ಬಂದು ಐಸಿಯುಗೆ ದಾಖಲಾಗಿದ್ದವರು ಅಷ್ಟು ಬೇಗ ಚೇತರಿಸಿಕೊಂಡ್ರಾ?

    13.ಕೋರ್ಟ್​​ಗೆ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದ ಪೊಲೀಸರು ಮೆಡಿಕಲ್ ಟೆಸ್ಟ್ ಬಳಿಕ ಆಂಬುಲೆನ್ಸ್ ನಲ್ಲಿ ಕರೆದೊಯ್ದಿದ್ದು ಯಾಕೆ?

    ಇದನ್ನೂ ಓದಿ: Hubballi: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಸಂಭ್ರಮದ ಗಣೇಶೋತ್ಸವ, ಕುಣಿದು ಕುಪ್ಪಳಿಸಿದ ಮುತಾಲಿಕ್!

    14.ಇಷ್ಟೆಲ್ಲಾ ಮಾಡಿರೋ ಪೊಲೀಸರು‌ ಆರೋಪಿಯನ್ನು  ಡಿವೈಎಸ್​ಪಿ ಕಚೇರಿಯ ಸೆಲ್​ನಲ್ಲಿ ಇರಿಸಿರೋದು ಯಾಕೆ?

    ಇಂದು ವಿಚಾರಣೆ ಆರಂಭ

    ಇಂದು ಬೆಳಗ್ಗೆ ಎಸ್​ಪಿ ಪರಶುರಾಮ್ ಮತ್ತು ಡಿವೈಎಸ್​​ಪಿ ಅನಿಲ್ ಅವರು ಶ್ರೀಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದ ಮುರುಘಾ ಶರಣರು ಮೌನಕ್ಕೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪೊಲೀಸರ ವಿರುದ್ಧ ಭಕ್ತರ ಆಕ್ರೋಶ

    ನ್ಯಾಯಾಲಯ ಮುರುಘಾ ಸ್ವಾಮೀಜಿಯನ್ನು ಮೂರು ದಿನಗಳವರೆಗೆ ಪೊಲೀಸ್​ ಕಸ್ಟಡಿಗೆ (Police Custody) ಒಪ್ಪಿಸಿದೆ. ಇದರಿಂದ ಬೇಸತ್ತ ಭಕ್ತನೊಬ್ಬ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಮುಂಭಾಗ ಹೈಡ್ರಾಮಾ ಮಾಡಿದ್ದಾನೆ. ಮೈಮೇಲೆ ಪೆಟ್ರೋಲ್ (Petrol) ಸುರಿದುಕೊಂಡು ನಾಟಕವಾಡಿದ್ದಾನೆ. ಆತನನ್ನು ತಿಪ್ಪೇರುದ್ರಸ್ವಾಮಿ ಅಂತಾ ಗುರುತಿಸಲಾಗಿದೆ. ಇನ್ನು ಮುರುಘಾ ಮಠದ ಬೆಂಬಲಿಗರು ಸರ್ಕಾರ, ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ.
    Published by:Mahmadrafik K
    First published: