Murugha Shri: ಮುರುಘಾ ಶ್ರೀಗಳ ಜಾಮೀನು ಅರ್ಜಿ ನಾಳೆಗೆ ಮುಂದೂಡಿಕೆ

ಶ್ರೀಗಳ ಜಾಮೀನು‌ ಅರ್ಜಿ ವಿಚಾರಣೆ ಮಾತ್ರ ನಾಳೆಗೆ ಮುಂದೂಡಿಕೆಯಾಗಿದೆ. ತಕರಾರು ಏನಾದ್ರೂ ಇದ್ರೆ ಸಲ್ಲಿಕೆ ಮಾಡುವಂತೆ ಪಿಪಿಗೆ ಹೇಳಿದ್ರು, ಕೇವಲ ಒಂದು ದಿನ ಮಾತ್ರ ಮುಂದಕ್ಕೆ ಹೋಗಿದೆ ಎಂದು ಶ್ರೀಗಳ ಪರ ವಕೀಲ ವಿಶ್ವನಾಥಯ್ಯ (Lawyer Vishwanath) ಹೇಳಿದ್ದಾರೆ.

ಮುರುಘಾ ಶ್ರೀ

ಮುರುಘಾ ಶ್ರೀ

 • Share this:
  ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳ (Murugha Mutt Seer) ಜಾಮೀನು ಅರ್ಜಿ (Bail Plea) ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ನಾಳೆ ಸರ್ಕಾರಿ ಪರ ವಕೀಲರಿಗೆ (Public prosecutor) ಆಕ್ಷೇಪಣೆ ಸಲ್ಲಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ. ಶ್ರೀಗಳ ಜಾಮೀನು‌ ಅರ್ಜಿ ವಿಚಾರಣೆ ಮಾತ್ರ ನಾಳೆಗೆ ಮುಂದೂಡಿಕೆಯಾಗಿದೆ. ತಕರಾರು ಏನಾದ್ರೂ ಇದ್ರೆ ಸಲ್ಲಿಕೆ ಮಾಡುವಂತೆ ಪಿಪಿಗೆ ಹೇಳಿದ್ರು, ಕೇವಲ ಒಂದು ದಿನ ಮಾತ್ರ ಮುಂದಕ್ಕೆ ಹೋಗಿದೆ ಎಂದು ಶ್ರೀಗಳ ಪರ ವಕೀಲ ವಿಶ್ವನಾಥಯ್ಯ (Lawyer Vishwanath) ಹೇಳಿದ್ದಾರೆ.

  ಮುರುಘಾಶರಣ ತನಿಖೆಗೆ ಹೆಚ್​ಜೆಪಿ ಪಾರ್ಟಿ ಒತ್ತಾಯ

  ಮುರುಘಾಮಠ ರಾಜ್ಯದ ಪ್ರತಿಷ್ಠಿತ ಮಠವಾಗಿದ್ದು, ಶ್ರೀಗಳ ಮೇಲೆ ಲೈಂಗಿಕ‌ದೌರ್ಜನ್ಯ ಆರೋಪ ಬಂದಿದೆ. ಸೂಕ್ತ ತನಿಖೆ ನಡೆಯುತ್ತಿಲ್ಲವೆಂಬ ಮಾತಿದೆ. ಇದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆಮಾಡಿದೆ. ಹಾಗಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಹಿಂದೂಸ್ತಾನ ಜನತಾ ಪಾರ್ಟಿ ಆಗ್ರಹ ಮಾಡಿದೆ.

  ಅಪಾದನೆ ಬಂದ ನಂತರ ಆರೋಪಿ ಬಂಧಿಸಬೇಕು/ ದೂರು ದಾಖಲಾಗಿ ಏಳು ದಿನವಾದರೂ ಆರೋಪಿಯನ್ನು ಬಂಧಿಸಿಲ್ಲ. ಅವರನ್ನ ವಿಚಾರಣೆಗೂ ಒಳಪಡಿಸಿಲ್ಲ. ಬಂಧಿಸಿದರೆ ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭಯವೇ ಎಂದು ಪ್ರಶ್ನೆ ಮಾಡಿದರು.

  ಸ್ಚಾಮೀಜಿಗೆ ಐಷಾರಾಮಿ ಬಂಗಲೆ ವಾಸ್ತವ್ಯ ಸರಿಯೇ?

  ದೌರ್ಜನ್ಯಕ್ಕೆ ಒಳಗಾದ ಮಕ್ಕಳು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಸ್ಚಾಮೀಜಿಗೆ ಐಷಾರಾಮಿ ಬಂಗಲೆ ವಾಸ್ತವ್ಯ ಸರಿಯೇ? ಇದು ಎಂಥಹ ನ್ಯಾಯ ಹೇಳಿಕೂಡಲೇ ಪ್ರಕರಣವನ್ನ ಸಿಬಿಐಗೆ ಒಪ್ಪಿಸಿ, ಸಾರ್ವಜನಿಕರ ಅನುಮಾನವನ್ನ ಬಗೆಹರಿಸಿ ಎಂದು ಹೆಚ್​ಜೆಪಿ ಪಾರ್ಟಿ ಆಗ್ರಹ ಮಾಡಿದೆ.

  ಇದನ್ನೂ ಓದಿ:  Vehicle Rules: ಕಾರಿನ ಕಿಟಕಿಗೆ 'ಬ್ಲ್ಯಾಕ್ ಸನ್ ಫಿಲ್ಮ್' ಹಾಕಿದ್ದೀರಾ? ಭಾರೀ ದಂಡ ಕಟ್ಟಬೇಕಾದೀತು ಎಚ್ಚರ!

  ಮುರುಘಾ ಮಠದ ಗೇಟ್​​ಗಳೆಲ್ಲಾ ಬಂದ್; ಹೆಚ್ಚುವರಿ ಪೊಲೀಸರ ನಿಯೋಜನೆ

  ಸಂತ್ರಸ್ತ ವಿದ್ಯಾರ್ಥಿನಿಯರು ನ್ಯಾಯಾಧೀಶರ ಮುಂದೆ ಸಿಆರ್​ಪಿಸಿ ಸೆಕ್ಷನ್ 164ರ ಅಡಿಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಇಂದು ಈ ಹೇಳಿಕೆ ಮುಚ್ಚಿದ ಲಕೋಟೆಯಲ್ಲಿ ಪೊಲೀಸರ ಕೈ ಸೇರಲಿದೆ. ನಂತರ ಮುರುಘಾ ಶ್ರೀಗಳ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗಬಹುದು.

  ಬುಧವಾರ ರಾತ್ರಿ ಮುರುಘಾ ಮಠದ ಎಲ್ಲಾ ದ್ವಾರಗಳನ್ನು ಬಂದ್ ಮಾಡಲಾಗಿದೆ. ರಾತ್ರಿ ಹೆಚ್ಚುವರಿಯಾಗಿ 25 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮುಖ್ಯದ್ವಾರವೊಂದು ತೆರೆಯಲಾಗಿದ್ದು, ಮಠದಿಂದ ಹೊರಗೆ ಮತ್ತು ಮಠದೊಳಗೆ ಪ್ರವೇಶಿಸುವ ಎಲ್ಲರನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ನೋಟಿಸ್

  ಇತ್ತ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಏಳು ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ಚಿತ್ರದುರ್ಗ ಎಸ್ ಪಿ ಪರಶುರಾಮ್ ಅವರಿಗೆ ಸೂಚನೆ ನೀಡಿದೆ.

  ಆರೋಪಿಯ ವಿರುದ್ಧ ಪೊಲೀಸರು ಕೈ ಗೊಂಡ ಕ್ರಮ ಏನು? ಸಂತ್ರಸ್ತ ಬಾಲಕಿಯರ ಪ್ರಸ್ತುತ ಸ್ಥಿತಿ ಏನು? ಪ್ರಸ್ತುತ ಪಕರಣ ಯಾವ ಹಂತದಲ್ಲಿದೆ? ದಾಖಲಿಸಿರುವ ಎಫ್​ಐಆರ್ ಪ್ರತಿಯಲ್ಲೇನಿದೆ? ಸಂತ್ರಸ್ತ ಬಾಲಕಿಯರಿಂದ ದಾಖಲಿಸಿಕೊಂಡ 164 ಹೇಳಿಕೆ ಏನು? ಎಂದು ಕೇಳಿದೆ.

  ಇದನ್ನೂ ಓದಿ:  Idgah Maidan: ಈದ್ಗಾ ಮೈದಾನದಲ್ಲಿ ಗಣೇಶನ ಜೊತೆ ರಾರಾಜಿಸಿದ ಸಾವರ್ಕರ್ ; ಆದೇಶ ಉಲ್ಲಂಘಿಸಿದ್ರೂ ಸಂಘಟಕರ ಸಮರ್ಥನೆ

  ಸಂತ್ರಸ್ತ ಯುವತಿಗೆ ಯಾವ ರೀತಿ ರಕ್ಷಣೆ ಒದಗಿಸಲಾಗಿದೆ ಸೇರಿದಂತೆ ಪ್ರಕರಣದ ಇಂಚಿಚೂ ಮಾಹಿತಿಯನ್ನು ನೋಟಿಸ್ ತಲುಪಿದ ಏಳು ದಿನಗಳ ಒಳಗೆ ವಿವರಣೆ ನೀಡುವಂತೆ ಖಡಕ್ ಸೂಚನೆ ನೀಡಿದೆ.

  ಅಟ್ರಾಸಿಟಿ ಪ್ರಕರಣವೂ ದಾಖಲು

  ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ದೂರು ದಾಖಲಾಗಿದೆ. ಹೌದು ಲೈಂಗಿಕ ಕಿರುಕುಳದ ಬಗ್ಗೆ ಆರೋಪ ಮಾಡಿರುವ ಒಬ್ಬರಲ್ಲಿ ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯಾಗಿದ್ದು, ಈ ಹಿನ್ನಲೆಯಲ್ಲಿ ಶ್ರೀಗಳ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ (ಅಟ್ರಾಸಿಟಿ) ಪ್ರಕರಣ ದಾಖಲಾಗಿದೆ
  Published by:Mahmadrafik K
  First published: