Murugha Shri Arrest: ಅತ್ಯಾಚಾರ ಕೇಸ್​ನಲ್ಲಿ ಮುರುಘಾಶ್ರೀ ಅರೆಸ್ಟ್​

ಮುರುಘಾ ಶ್ರೀ ಅರೆಸ್ಟ್​

ಮುರುಘಾ ಶ್ರೀ ಅರೆಸ್ಟ್​

ಅತ್ಯಾಚಾರ ಕೇಸ್ ಸಂಬಂಧ ಮುರುಘಾ ಮಠದ ಮುರುಘಾ ಶ್ರೀಗಳನ್ನು ಬಂಧಿಸಲಾಗಿದೆ. ಚಿತ್ರದುರ್ಗದಲ್ಲಿ ಶ್ರೀಗಳನ್ನು ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿಯರು ಹೇಳಿಕೆ ದಾಖಲಿಸ್ತಿದ್ದಂತೆ ಮುರುಘಾ ಶ್ರೀಗಳನ್ನು ಬಂಧಿಸಲಾಗಿದೆ.

  • Share this:

ಅತ್ಯಾಚಾರ ಕೇಸ್ ಸಂಬಂಧ ಮುರುಘಾ ಮಠದ ಮುರುಘಾ ಶ್ರೀಗಳನ್ನು (Murugha Shree Arrest) ಬಂಧಿಸಲಾಗಿದೆ. ಚಿತ್ರದುರ್ಗದಲ್ಲಿ (Chitradurga) ಶ್ರೀಗಳನ್ನು ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿಯರು ಹೇಳಿಕೆ ದಾಖಲಿಸ್ತಿದ್ದಂತೆ ಮುರುಘಾ ಶ್ರೀಗಳನ್ನು ಅರೆಸ್ಟ್ ಮಾಡಲಾಗಿದೆ. ಕೆಲವೇ ಗಂಟೆಗಳ ಮುನ್ನ ಹಾಸ್ಟೇಲ್ ವಾರ್ಡನ್ (Hostel Warden) ರಶ್ಮಿಯವರನ್ನು ವಿಚಾರಣೆ ನಡೆಸಲಾಗಿತ್ತು. ಅತ್ಯಾಚಾರ ಕೇಸ್ (Rape Case) ದಾಖಲಾಗಿ 7 ದಿನದ ಬಳಿಕ ಮುರುಘಾ ಶ್ರೀಗಳನ್ನು ಬಂಧಿಸಲಾಗಿದೆ. ಚಿತ್ರದುರ್ಗದ ಮುರುಘಾ ಮಠದಲ್ಲೇ ಶ್ರೀಗಳನ್ನು ರಾತ್ರಿ 10.15ಕ್ಕೆ ಪೊಲೀಸರು (Police) ಬಂಧಿಸಿದ್ದಾರೆ. ಮುರುಘಾ ಶ್ರೀಗಳ ಬಂಧನಕ್ಕೂ ಮುನ್ನ ಮಠದ ಸುತ್ತ ಭಾರೀ ಭದ್ರತೆ (Mutt Around Security) ಕೈಗೊಳ್ಳಾಗಿತ್ತು. ಬಳಿಕ ಭಾರೀ ಭದ್ರತೆಯಲ್ಲಿ ಮುರುಘಾ ಶ್ರೀಗಳನ್ನು ವಶಕ್ಕೆ ಪಡೆಯಲಾಯ್ತು.


ಅತ್ಯಾಚಾರ ಕೇಸ್ ಸಂಬಂಧ ಮುರುಘಾ ಮಠದ ಮುರುಘಾ ಶ್ರೀಗಳನ್ನು ಬಂಧಿಸಲಾಗಿದೆ. ಮಠದಲ್ಲಿ ತಮ್ಮ ಮೇಲೆ ಶ್ರೀಗಳು ಅತ್ಯಾಚಾರ ಎಸಗಿದ್ದಾರೆ ಅಂತಾ ಸಂತ್ರಸ್ತ ಬಾಲಕಿಯರು ಆರೋಪಿಸಿದ್ದರು. ಈ ಬಗ್ಗೆ ದೂರು ದಾಖಲಾಗಿತ್ತು. ಮುರುಘಾ ಶ್ರೀ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಇಂದು ಬಂಧನವಾಗಿದೆ.


ಭಕ್ತವೃಂದಕ್ಕೆ ತೊಂದರೆ ಕೊಡಬಾರದೆಂದು ಶ್ರೀಗಳ ತೀರ್ಮಾನ
ಮುರುಘಾ ಶ್ರೀಗಳ ಬಂಧನದ ಬಳಿಕ ಬಸವೇಶ್ವರ ಆಸ್ಪತ್ರೆ ಸುಪರಿಡೆಂಟ್ ಪಾಲಕ್ಷಪ್ಪ ಪ್ರತಿಕ್ರಿಯಿಸಿದ್ದಾರೆ. ಮುರುಘಾ ಶ್ರೀಗಳು ವಾಲಂಟರಿಯಾಗಿ ಪೋಲೀಸರಿಗೆ ಶರಣಾಗಿದ್ದಾರೆ. ಭಕ್ತವೃಂದಕ್ಕೆ ತೊಂದರೆ ಕೊಡಬಾರದೆಂದು ಮುರುಘಾ ಶ್ರೀಗಳ ಈ ತೀರ್ಮಾನ ಕೈಗೊಂಡಿದ್ದಾರೆ ಅಂತಾ ಹೇಳಿದ್ದಾರೆ.


ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ಮೂವರು ಆರೋಪಿಗಳು ನಾಪತ್ತೆ?


ಮುರುಘಾ ಶ್ರೀಗಳ ಆರೋಗ್ಯವನ್ನ ಪರಿಶೀಲನೆ ಮಾಡಿದ್ದೇವೆ. ಸದ್ಯ ಉಸಿರಾಟ, ಬಿಪಿ ಸರಿಯಾಗಿದೆ. ಆದರೆ ಶ್ರೀಗಳಿಗೆ ಮೊದಲು ಕೊರೋನಾ ಬಂದಿತ್ತು. ಈಗ ಬಿಪಿ, ಉಸಿರಾಟ ತೊಂದರೆ ಆಗಬಹುದು ಅಂತಾ ಬಸವೇಶ್ವರ ಆಸ್ಪತ್ರೆ ಸುಪರಿಡೆಂಟ್ ಪಾಲಕ್ಷಪ್ಪ ಹೇಳಿದ್ದಾರೆ.


ಮುರುಘಾ ಶ್ರೀಗಳ ಬಂಧನಕ್ಕೂ ಮುನ್ನ ಮುರುಘಾ ಮಠಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯ್ಕ್, ಮೊಳಕಾಲ್ಮೂರು ಠಾಣೆಯ ಸಿಪಿಐ ಸತೀಶ್ ಆಗಮಿಸಿದ್ದರು. ಅಧಿಕಾರಿಗಳು ಮಫ್ತಿಯಲ್ಲಿ ಮುರುಘಾಶ್ರೀ ಭೇಟಿಗೆ ಆಗಮಿಸಿದ್ದರು.


ಅತ್ಯಾಚಾರ ಕೇಸ್ ದಾಖಲಾಗಿ 7 ದಿನದ ಬಳಿಕ ಅರೆಸ್ಟ್
ಮುರುಘಾ ಶ್ರೀ ಈ ಕೇಸ್ನಲ್ಲಿ ಎ1 ಆರೋಪಿ. ಈಗ ಪ್ರಕರಣ ದಾಖಲಾಗಿ 7 ದಿನದ ಬಳಿಕ ಶ್ರೀಗಳನ್ನು ಬಂಧಿಸಲಾಗಿದೆ. ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಬಂಧಿಸಿರಲಿಲ್ಲ. ಇದಕ್ಕೆ ಹಲವೆಡೆ ಆಕ್ರೋಶ ವ್ಯಕ್ತವಾಗಿತ್ತು. ಚಿತ್ರದುರ್ಗ, ಮೈಸೂರಿನಲ್ಲಿ ಮುರುಘಾ ಶ್ರೀಗಳ ವಿರುದ್ಧ ಪ್ರತಿಭಟನೆಗಳು ನಡೆದಿತ್ತು. ಶ್ರೀಗಳ ಬಂಧನಕ್ಕೆ ಒತ್ತಾಯಿಸಿದ್ರು.


ಮಠದ ಇಬ್ಬರು ವಿದ್ಯಾರ್ಥಿನಿಯರು ಅತ್ಯಾಚಾರ ಕೇಸ್ ದಾಖಲಿಸಿದ್ದರೂ ಪೊಲೀಸರು ಶ್ರೀಗಳ ತನಿಖೆಗೆ ಒತ್ತುಕೊಟ್ಟಿರಲಿಲ್ಲ. 164 ಹೇಳಿಕೆ ಪಡೆದರೂ ಶ್ರೀಗಳ ಬಂಧನವಾಗಿರಲಿಲ್ಲ. ಇದೀಗ ಪ್ರಕರಣ ದಾಖಲಾಗಿ 7 ದಿನದ ಬಳಿಕ ಬಂಧಿಸಲಾಗಿದೆ.


ನಾಳೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಮುರುಘಾ ಶ್ರೀ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದರು.


ಇದನ್ನೂ ಓದಿ: ಮೈಸೂರಿನ ಹೋಟೆಲ್​​ನಲ್ಲಿ 21 ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು! ಕೊಲೆಗೈದಿರುವ ಶಂಕೆ


ಮೂರು ಆರೋಪಿಗಳು ನಾಪತ್ತೆ
ಮುರುಘಾಶ್ರೀ ಪೋಕ್ಸೋ ಪ್ರಕರಣದ ಐವರು ಆರೋಪಿಗಳಲ್ಲಿ A-3 ಆರೋಪಿ ಮಠದ ಉತ್ತರಾಧಿಕಾರಿ ಬಸವಾದಿತ್ಯ, A-4 ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಹಾಗೂ A-5 ಆರೋಪಿ ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ. ಇನ್ನು A-1 ಆರೋಪಿಯಾಗಿರುವ ಮುರುಘಾಶ್ರೀ ಮುರುಘಾಮಠದಲ್ಲೇ ವಾಸ್ತವ್ಯ ಹೂಡಿದ್ದಾರೆ. ಅತ್ತ A- 2 ಆರೋಪಿಯಾಗಿರುವ ಲೇಡಿ ವಾರ್ಡನ್ ರಶ್ಮಿ ಸದ್ಯ ಸಾಂತ್ವನ ಕೇಂದ್ರದಲ್ಲಿದ್ದಾರೆ.

Published by:Thara Kemmara
First published: