Murugha Shri: ಮುರುಘಾ ಶ್ರೀ ಅರೆಸ್ಟ್, ಮಠದ ಸುತ್ತ ಪೊಲೀಸ್ ಸರ್ಪಗಾವಲು

ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಆವರಣದ ಸುತ್ತಮುತ್ತ ಪೊಲೀಸರ ಸರ್ಪಗಾವಲು ಹಾಕಲಾಗಿದೆ, ಹಾವೇರಿ ಬಳಿಯಲ್ಲಿ ಶರಣರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಮುರುಘಾ ಶ್ರೀ

ಮುರುಘಾ ಶ್ರೀ

  • Share this:
ಪೋಕ್ಸ್ ಅಡಿ (POCSO) ಪ್ರಕರಣ ದಾಖಲಾಗಿದ್ದ ಹಿನ್ನೆಲೆ ಇಂದು ಚಿತ್ರದುರ್ಗ ಪೊಲೀಸರು ಮುರುಘಾ ಶ್ರೀಗಳನ್ನು(Murugha Shri)  ವಶಕ್ಕೆ ಪಡೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಆವರಣದ ಸುತ್ತಮುತ್ತ ಪೊಲೀಸರ (Police Protection) ಸರ್ಪಗಾವಲು ಹಾಕಲಾಗಿದೆ, ಹಾವೇರಿ ಬಳಿಯಲ್ಲಿ ಶರಣರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಶರಣರನ್ನು ಹಾವೇರಿಯಿಂದ ಚಿತ್ರದುರ್ಗಕ್ಕೆ ಕರೆದುಕೊಂಡು ಬರಲಾಗುತ್ತಿದೆ.  ಇಂದು ಸಂಜೆ ಅಥವಾ ನಾಳೆ ಮುರುಘಾ ಶರಣರನ್ನುನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ. ಇತ್ತ ಶ್ರೀಗಳ ವಶಕ್ಕೆ ಪಡೆದಿರುವ ಸುದ್ದಿ ಬೆನ್ನಲ್ಲೇ ಮಠಕ್ಕೆ ಭಕ್ತರು ಆಗಮಿಸು ತ್ತಿದ್ದಾರೆ.

24 ಗಂಟೆಯಲ್ಲಿ ಸಂತ್ರಸ್ತರ ಹೇಳಿಕೆಯನ್ನು ಸಿಆರ್​ಪಿಸಿ ಸೆಕ್ಷನ್ 164ರ ಅಡಿ ದಾಖಲಿಸಬೇಕಿತ್ತು. ಆದ್ರೆ 52 ಗಂಟೆ ಕಳೆದರೂ ಇದುವರೆಗೂ ಹೇಳಿಕೆ ದಾಖಲಿಸಿರೋದು ಅನುಮಾನಕ್ಕೆ ಕಾರಣವಾಗಿದೆ. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು ಎಂಬುವುದು ನಮ್ಮ ಉದ್ದೇಶ. ನಾನು ನಂಬಿದ್ದ ಸ್ವಾಮೀಜಿ ವಿಕೃತಕಾಮಿ ಆಗಿದ್ದು ಹೇಗೆ ಎಂಬುದರ ಬಗ್ಗೆ ನನಗೆ ಆತಂಕವಾಗಿದೆ ಎಂದು ಒಡನಾಡಿ ಸಂಸ್ಥೆಯ ಪರಶು ಆಕ್ರೋಶ ಹೊರಹಾಕಿದರು.

30 ವಿದ್ಯಾರ್ಥಿಗಳು ಸಂಪರ್ಕ

ಬಂಧನ ಆಗಿದೆಯೋ ಇಲ್ಲವೋ ಎಂಬುವುದು ನನಗೆ ಗೊತ್ತಿಲ್ಲ. ಮಕ್ಕಳಿಗೆ ಅದೆಷ್ಟು ಬಾರಿ ಕೌನ್ಸಿಲಿಂಗ್ ಮಾಡುತ್ತಾರೆ. ಈ ಪ್ರಕರಣದ ಬೆನ್ನಲ್ಲೇ ಸುಮಾರು 30 ವಿದ್ಯಾರ್ಥಿಗಳು ನನ್ನನ್ನು ಸಂಪರ್ಕ ಮಾಡಿದ್ದಾರೆ ಅಂದ್ರೆ ಅಲ್ಲಿಯ ಜನರಿಗೆ ತನಿಖಾಧಿಕಾರಿಗಳ ಮೇಲೆ ನಂಬಿಕೆ ಇಲ್ಲ ಎಂದರ್ಥ ಅಲ್ಲವಾ ಎಂದು ಸ್ಪೋಟಕ ಹೇಳಿಕೆ ನೀಡಿದರು.

Murugha Shri arrested in haveri mrq
ಮುರುಘಾ ಶ್ರೀ


ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರು, ಮಠದ ಆಡಳಿತಾಧಿಕಾರಿ ವಿರುದ್ಧ ದೂರು

ಯಾರ ಜೊತೆಯೂ ರಾಜಿ ಇಲ್ಲ

ನನ್ನ ಹೆಗಲ ಮೇಲೆ ಯಾರೂ ಬಂದೂಕು ಇರಿಸಲು ಸಾಧ್ಯವಿಲ್ಲ. ಮಕ್ಕಳು ನನ್ನ ಬಳಿ ಬಂದಾಗ ಅವರ ಧ್ವನಿಯನ್ನು ಕೇಳಿದ್ದೇವೆ. ತಂದೆಯಾದವನು ವಿಕೃತಿ ಆಗಿರೋದು ಕೇಳಿ ಶಾಕ್ ಆಗಿತ್ತು. ನಾನು ಯಾರ ಜೊತೆಗೂ ರಾಜಿ ಆಗಲ್ಲ. ಬೇಕಾದ್ರೆ ನನ್ನ ಸಂಸ್ಥೆ ಇಂದೇ ಮುಚ್ಚಿ ಹೋದ್ರೂ ನನಗೆ ಚಿಂತೆ ಇಲ್ಲ ಎಂದು ಒಡನಾಡಿ ಸಂಸ್ಥೆ ಮುಖ್ಯಸ್ಥ ಪರಶು ಹೇಳಿದರು.

ಶ್ರೀಗಳ ಆಡಿಯೋ ಹೇಳಿಕೆ

ಸದ್ಯ ಮುರುಘಾ ಮಠದಲ್ಲಿಯೇ ಶ್ರೀಗಳು ವಾಸವಾಗಿದ್ದರು. ನಿನ್ನೆ ಈ ಪ್ರಕರಣ ಸಂಬಂಧ ಆಡಿಯೋ ಹೇಳಿಕೆ ಬಿಡುಗಡೆಗೊಳಿಸಿದ್ದ ಶ್ರೀಗಳು, ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದರು. ಒಂದು ವೇಳೆ ಸಂಧಾನ ವಿಫಲವಾದ್ರೆ ಕಾನೂನು ಹೋರಾಟಕ್ಕೆ ಶ್ರೀಗಳು ಸಿದ್ಧ ಎಂದು ಹೇಳಿದ್ದಾರೆ.ಶರಣರಿಗೆ ವಿವಿಧ ಸಂಘಟನಗಳ ಬೆಂಬಲ

ಮುರುಘಾ ಶರಣರ ಮೇಲೆ ಬಂದಿರುವ ಆರೋಪ ಆಧಾರರಹಿತ, ಅಲ್ಲದೇ ಮಠ ಹಾಗೂ ಮುರುಘಾ ಶರಣರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಭಾಗವಾಗಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿದೆ. ಇದೀಗ ಸ್ವಾಮೀಜಿಗಳ ಬೆಂಬಲಕ್ಕೆ ಭಕ್ತರು ಹಾಗೂ ದಲಿತ ಸಂಘಟನೆಗಳು ನಿಂತಿವೆ

ಬಾಲಕಿಯರ 164 ಹೇಳಿಕೆ ಬಳಿಕ ಏನಾಗಬಹದು?

ಬಾಲಕಿಯರು ಹೇಳಿಕೆ ನೀಡಿದ ಬಳಿಕ ನ್ಯಾಯಾಲಯ ಆರೋಪಿಯ ಬಗ್ಗೆ ಕೇಳಬಹುದು. ಆರೋಪಿ ಬಂಧನ ಆಗಿದ್ದಾರಾ ಅಂತ ತನಿಖಾಧಿಕಾರಿಗೆ ಕೇಳಬಹುದು. ಬಂಧನ ಆಗಿಲ್ಲ ಅಂತ ಹೇಳಿದರೆ. ಯಾಕೆ ಬಂಧಿಸಿಲ್ಲ ಅಂತಾನೂ ಕೋರ್ಟ್ ತನಿಖಾಧಿಕಾರಿಗೆ ಕೇಳಬಹುದು. ಜೊತೆಗೆ ಆರೋಪಿಯ ಬಂಧನ ಮಾಡುವಂತೆ ಕೋರ್ಟ್ ಸೂಚನೆಯೂ ನೀಡಬಹುದು. ಪೋಕ್ಸೋ ಪ್ರಕರಣದಲ್ಲಿ ಕೇಸ್ ದಾಖಲಾದರೆ ಆರೋಪಿಯ ಬಂಧನ ಆಗುತ್ತದೆ. ಆದ್ರೆ ಈ ಪ್ರಕರಣದಲ್ಲಿ ಎರಡೂ ದಿನಗಳಾದರೂ ಆರೋಪಿಯ ಬಂಧನ ಆಗಿಲ್ಲ.

ಇದನ್ನೂ ಓದಿ: Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು

ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದ ಸ್ವಾಮೀಜಿ

ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹಿನ್ನಲೆ ಮುರಾಘಾ ಮಠದಲ್ಲಿ ಸಭೆ ನಡೆಯಿತು. ಮುರುಘಾ ಶರಣರ ನೇತೃತ್ವದಲ್ಲಿ ಭಕ್ತರು ಮತ್ತು ಮಠಾಧೀಶರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಶ್ರೀಗಳು, ಸುಳ್ಳು ಕೇಸ್ ವಿರುದ್ಧ ಧೈರ್ಯದಿಂದ ಒಗ್ಗಟ್ಟಾಗಿ ಹೋರಾಡುವುದಾಗಿ ಹೇಳಿದರು.
Published by:Mahmadrafik K
First published: