• Home
  • »
  • News
  • »
  • state
  • »
  • Murugha Swamiji: ಜೈಲಿನಲ್ಲೇ ಚೆಕ್​ಗೆ ಸಹಿ ಹಾಕಲು ಅನುಮತಿ ಕೋರಿದ ಮುರುಘಾ ಸ್ವಾಮೀಜಿ; ಮನವಿ ಸಲ್ಲಿಸಲು ಹೈಕೋರ್ಟ್​ ಸೂಚನೆ

Murugha Swamiji: ಜೈಲಿನಲ್ಲೇ ಚೆಕ್​ಗೆ ಸಹಿ ಹಾಕಲು ಅನುಮತಿ ಕೋರಿದ ಮುರುಘಾ ಸ್ವಾಮೀಜಿ; ಮನವಿ ಸಲ್ಲಿಸಲು ಹೈಕೋರ್ಟ್​ ಸೂಚನೆ

ಶಿವಮೂರ್ತಿ ಮುರುಘಾ ಶರಣರು

ಶಿವಮೂರ್ತಿ ಮುರುಘಾ ಶರಣರು

ನಿಮ್ಮ ಸಮಸ್ಯೆಯಿಂದ‌ ಯಾವುದೇ ಸಿಬ್ಬಂದಿಯನ್ನು ಉಪವಾಸಕ್ಕೆ ದೂಡಬಾರದು. ಇವರ ಬಂಧನಕ್ಕೆ ಮೊದಲು ಹೇಗೆ ಸಂಬಳ ನೀಡಲಾಗುತ್ತಿತ್ತು ಎನ್ನುವ ಬಗ್ಗೆ ವಿವರವಾದ ಮಾಹಿತಿ ಇರುವ ಮೆಮೊ ಸಲ್ಲಿಸಿ ಎಂದು ಮುರುಘಾ ಶರಣರ ಪರ ವಕೀಲರಿಗೆ ಸೂಚನೆ ನೀಡಿದೆ.

  • Share this:

ಬೆಂಗಳೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಸ್ವಾಮೀಜಿ (Murugha Swamiji) ಜೈಲಿನಿಂದಲೇ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ (Cheque) ಸಹಿ ಮಾಡಲು ಅವಕಾಶ ನೀಡಬೇಕು ಎಂಬ ಕೋರಿಕೆಯನ್ನು ಸಲ್ಲಿಸಿದ್ರು.  ಈ ಬಗ್ಗೆ ಪ್ರತಿಕ್ರಿಯಿಸಿರುವ ಹೈಕೋರ್ಟ್ (High Court) , ಈ ಬಗ್ಗೆ ನಿರ್ದಿಷ್ಟ ಮನವಿ ಸಲ್ಲಿಸಿ ಎಂದು ಅವರ ಪರ ವಕೀಲರಿಗೆ ನಿರ್ದೇಶಿಸಿದೆ. ಈ ಕುರಿತಂತೆ ಆರೋಪಿ ಮುರುಘಾ ಶ್ರೀಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು (Criminal application) ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು (ಸೆಪ್ಟೆಂಬರ್​ 28) ರಂದು ವಿಚಾರಣೆ ನಡೆಸಿತು.


ಮಕ್ಕಳು, ಸಿಬ್ಬಂದಿಯನ್ನು ಉಪವಾಸಕ್ಕೆ ದೂಡಬಾರದು


ವಾದ ಆಲಿಸಿದ ಹೈಕೋರ್ಟ್, ನಿಮ್ಮ ಸಮಸ್ಯೆಯಿಂದ‌ ಯಾವುದೇ ಸಿಬ್ಬಂದಿಯನ್ನು ಉಪವಾಸಕ್ಕೆ ದೂಡಬಾರದು. ಇವರ ಬಂಧನಕ್ಕೆ ಮೊದಲು ಹೇಗೆ ಸಂಬಳ ನೀಡಲಾಗುತ್ತಿತ್ತು ಎನ್ನುವ ಬಗ್ಗೆ ವಿವರವಾದ ಮಾಹಿತಿ ಇರುವ ಮೆಮೊ ಸಲ್ಲಿಸಿ ಎಂದು ಮುರುಘಾ ಶರಣರ ಪರ ವಕೀಲರಿಗೆ ಸೂಚನೆ ನೀಡಿತು.


Murugha Swamy judicial custody extend 14 days mrq
ಇಂದು ಮಧ್ಯಾಹ್ನ ಮುರುಘಾ ಸ್ವಾಮಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಪ್ರಕರಣದ ಎ2 ಆರೋಪಿ ಲೇಡಿ ವಾರ್ಡನ್ ರಶ್ಮಿ ನ್ಯಾಯಂಗ ಬಂಧನ ಸಹ ಸೆ.27ರವರೆಗೆ ವಿಸ್ತರಣೆಯಾಗಿದೆ.


ನೌಕರರಿಗೆ ಸಂಬಳ ನೀಡಲು ಶಿವಮೂರ್ತಿ ಸ್ವಾಮೀಜಿ ಸಹಿ ಬೇಕಿದೆ


ಹೈಕೋರ್ಟ್​ ಮೆಟ್ಟಿಲೇರುವ ಮೊದಲು ಜೈಲಿನಿಂದಲೇ ಚೆಕ್, ದಾಖಲೆಗಳಿಗೆ ಸಹಿ ಹಾಕಲು ಅನುಮತಿ ಕೋರಿ ಮುರುಘಾ ಶರಣರ ಪರ ವಕೀಲರು ಚಿತ್ರದುರ್ಗದ ಸೆಷನ್​ ಕೋರ್ಟ್​ಗೆ ಮನವಿ ಮಾಡಿದ್ದರು. ಆದರೆ ಕೋರ್ಟ್, ಸೆ 20ರಂದು ಅನುಮತಿ ನಿರಾಕರಿಸಿ ಆದೇಶ ಹೊರಡಿಸಿತ್ತು. ಮುರುಘಾ ಮಠದಿಂದ ನಡೆಸಲಾಗುತ್ತಿರುವ ಎಸ್​ಜೆಎಂ ವಿದ್ಯಾಪೀಠದ ಸುಮಾರು 5000 ನೌಕರರಿಗೆ ವೇತನ ನೀಡಲು ಚೆಕ್​ಗೆ ಅಧ್ಯಕ್ಷರಾದ ಶಿವಮೂರ್ತಿ ಶರಣರ ಸಹಿ ಅಗತ್ಯವಾಗಿದೆ ಎಂಬ ಸ್ವಾಮೀಜಿ ವಕೀಲರ ವಾದವನ್ನು ಸೆಷನ್ ಕೋರ್ಟ್​ ಒಪ್ಪಿರಲಿಲ್ಲ.


ಹೈಕೋರ್ಟ್​ಗೆ ವಕೀಲರ ಮನವಿ 


ಈ ಹಿಂದೆ ಚಿತ್ರದುರ್ಗದ  ಶಿವಮೂರ್ತಿ ಮರುಘಾ ಶರಣರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಪೊಲೀಸ್ ತನಿಖೆಯು ಕೋರ್ಟ್ ನಿಗಾದಲ್ಲಿ ನಡೆಯುವಂತೆ ನಿರ್ದೇಶನ‌ ನೀಡಬೇಕು ಎಂದು ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ವಕೀಲರು ಮನವಿ ಮಾಡಿದ್ದರು.ಈ‌‌ ಸಂಬಂಧ  ರಿಜಿಸ್ಟ್ರಾರ್ ಜನರಲ್ ಅವರಿಗೆ ಬೆಂಗಳೂರಿನ ವೃತ್ತಿಪರ ವಕೀಲರಾದ ಸಿದ್ಧಾರ್ಥ ಭೂಪತಿ, ಶ್ರೀರಾಮ್ ಟಿ. ನಾಯಕ್, ಬಿ‌.ಎಸ್.ಗಣೇಶ ಪ್ರಸಾದ್, ವಿ.ಗಣೇಶ್ ಹಾಗೂ ಕೆ‌.ಎ.ಪೊನ್ನಣ್ಣ ಲಿಖಿತ ಮನವಿ ಸಲ್ಲಿಸಿದ್ದಾರೆ.


ಇದನ್ನೂ ಓದಿ:  Bengaluru: ಕದ್ದ ಕಾರ್​ನ್ನೇ ಮನೆ ಮಾಡ್ಕೊಂಡು ಜೀವನ ನಡೆಸ್ತಿದ್ದ ದಂಪತಿ ಅರೆಸ್ಟ್


ಒಂದೂವರೆ ವರ್ಷದಿಂದ ನಿರಂತರವಾಗಿ ಲೈಂಗಿಕ ಕಿರುಕುಳ


‘ಮುರುಘಾ ಶರಣರು ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 16 ವರ್ಷದ ಬಾಲಕಿಯ ಮೇಲೆ ಕಳೆದ ಮೂರೂವರೆ ವರ್ಷಗಳಿಂದ ಹಾಗೂ 15ರ ಬಾಲಕಿಗೆ ಒಂದೂವರೆ ವರ್ಷದಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ‌. ಈ ಸಂಬಂಧ ಎಫ್‌ಐಆರ್‌ ದಾಖಲಾಗಿದ್ದರೂ ಪೊಲೀಸರ ತನಿಖೆ ಸಂಪೂರ್ಣ ಲೋಪಗಳಿಂದ ಕೂಡಿದೆ‘
ಎಂದು ವಕೀಲರು ಮನವಿಯಲ್ಲಿ ಆಕ್ಷೇಪಿಸಿದ್ದರು.


ಇದನ್ನೂ ಓದಿ: Encroachment Case: ಬಾಗ್ಮನೆ ಟೆಕ್​​ಪಾರ್ಕ್​ ಒತ್ತುವರಿ ಕೇಸ್​; ಲೋಕಾಯುಕ್ತ ವಿಚಾರಣೆಗೆ ಹೈಕೋರ್ಟ್​ ತಡೆ


‘ಮುರುಘಾ ಶರಣರು ನಾಡಿನ ಪ್ರಭಾವಿ ಮಠಾಧೀಶರಾಗಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿ ತನಿಖೆ ನಡೆಸಬೇಕಾದ ಪೊಲೀಸರು ಇನ್ನೂ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ದಸ್ತಗಿರಿ ಮಾಡಿಲ್ಲ. ಏತನ್ಮಧ್ಯೆ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಆರೋಪಿ ಮುರುಘಾ ಶರಣರನ್ನು ಅವರಿದ್ದ ಮುರುಘಾ ಮಠಕ್ಕೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಅವರನ್ನು ಬೆಂಬಲಿಸುವ ಮಾತುಗಳನ್ನಾಡಿ ಅವರ ರಕ್ಷಣೆಗೆ ನಿಂತಿದ್ದಾರೆ. ಅಂತೆಯೇ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಹೇಳಿಕೆಯೊಂದನ್ನು ನೀಡಿ, ಈ ಪ್ರಕರಣದಲ್ಲಿ ಮಠದ ನೌಕರನ ಪಿತೂರಿ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಸರ್ಕಾರ ಆರೋಪಿಯ ಹಿತ ಕಾಪಾಡುವಲ್ಲಿ ಸಜ್ಜಾಗಿ ನಿಂತಿರುವುದು ಕಂಡು ಬರುತ್ತಿದೆ ಎಂದು ವಕೀಲರು ಆರೋಪಿಸಿದ್ದರು.

Published by:ಪಾವನ ಎಚ್ ಎಸ್
First published: