• Home
  • »
  • News
  • »
  • state
  • »
  • Murugha Swamy Case: ಮುರುಘಾ ಸ್ವಾಮಿ ಕೇಸ್; ಪೊಲೀಸರಿಂದ ಒಡನಾಡಿ ಸಂಸ್ಥೆ ಮುಖ್ಯಸ್ಥರ ವಿಚಾರಣೆ

Murugha Swamy Case: ಮುರುಘಾ ಸ್ವಾಮಿ ಕೇಸ್; ಪೊಲೀಸರಿಂದ ಒಡನಾಡಿ ಸಂಸ್ಥೆ ಮುಖ್ಯಸ್ಥರ ವಿಚಾರಣೆ

ಒಡನಾಡಿ ಸಂಸ್ಥೆಯ ಮುಖ್ಯಸ್ಥರು

ಒಡನಾಡಿ ಸಂಸ್ಥೆಯ ಮುಖ್ಯಸ್ಥರು

ಇಷ್ಟು ದಿನಗಳ ಕಾಲ ಬೇಲ್ ಅರ್ಜಿ ಸಲ್ಲಿಸಿ ಜೈಲಿಂದ ಹೊರ ಬರುವ ಪ್ರಯತ್ನದಲ್ಲಿದ್ದ ಆರೋಪಿಗಳಿಗೆ ಚಾರ್ಜ್ ಶೀಟ್ ಮತ್ತೊಂದು ಸಂಕಷ್ಟ ತಂದಿದೆ. ಚಾರ್ಜ್ ಶೀಟ್ ಸಲ್ಲಿಕೆಯೇನೋ ಆಗಿದೆ, ಆದರೇ ಪ್ರಕರಣದ ತನಿಖೆ ಮಾತ್ರ ಇನ್ನೂ ಮುಂದುವರೆದಿದೆ. 

  • Share this:

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರ (Minor Girls) ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಸ್ವಾಮಿ (Murugha Swamy) ಜೈಲು ಸೇರಿದ್ದಾರೆ. ಪ್ರಕರಣ ದಾಖಲಾಗಿ ಎರಡು ತಿಂಗಳು ಕಳೆದಿದ್ದು, ತನಿಖಾಧಿಕಾರಿಗಳು (Investigation Officer) ನ್ಯಾಯಾಲಯಕ್ಕೆ ಚಾರ್ಜ್​​​ಶೀಟ್ (Charge sheet) ಸಲ್ಲಿಕೆ ಮಾಡಿದ್ದಾರೆ. ಸೋಮವಾರ ಅದೇ ಮೊದಲ ಪ್ರಕರಣದ ಮತ್ತಷ್ಟು ಸಾಕ್ಷಿಗಳಾಗಿರುವ ಒಡನಾಡಿ ಸಂಸ್ಥೆಯ ಮುಖ್ಯಸ್ಥರನ್ನ ಕರೆಸಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಸ್ವಾಮಿಯ ಪೋಕ್ಸೋ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ. ಅದಕ್ಕೆ ಸಂಬಂಧಿಸಿದ ಇಂಚಿಂಚೂ ಮಾಹಿತಿಯನ್ನ ಕಲೆ ಹಾಕಿರುವ ತನಿಖಾಧಿಕಾರಿ ಡಿವೈಎಸ್​​ಪಿ ಅನಿಲ್ ಕುಮಾರ್ ತಂಡ ಈಗಾಗಲೇ A1 ವಿರುದ್ದ 347, A2 & A4 ಆರೋಪಿಗಳ ವಿರುದ್ಧ 347 ಪುಟಗಳ ಎರಡು ಪತ್ಯೇಕ ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ.


ಇಷ್ಟು ದಿನಗಳ ಕಾಲ ಬೇಲ್ ಅರ್ಜಿ ಸಲ್ಲಿಸಿ ಜೈಲಿನಿಂದ ಹೊರ ಬರುವ ಪ್ರಯತ್ನದಲ್ಲಿದ್ದ ಆರೋಪಿಗಳಿಗೆ ಈ ಚಾರ್ಜ್​​ಶೀಟ್ ಮತ್ತೊಂದು ಸಂಕಷ್ಟ ತಂದಿದೆ. ಚಾರ್ಜ್​​ಶೀಟ್ ಸಲ್ಲಿಕೆಯೇನೋ ಆಗಿದೆ. ಆದರೆ ಪ್ರಕರಣದ ತನಿಖೆ ಮಾತ್ರ ಇನ್ನೂ ಮುಂದುವರಿದಿದೆ.


ಮೂರು ಗಂಟೆಗೂ ಅಧಿಕ ಕಾಲ ವಿಚಾರಣೆ


ಸೋಮವಾರ ಮೈಸೂರಿನ ಒಡನಾಡಿ ಸಂಸ್ಥೆ ಮುಖ್ಯಸ್ಥರಾದ ಸ್ಟ್ಯಾನ್ಲಿ ಹಾಗೂ ಪರಶು ಸೇರಿದಂತೆ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಕಚೇರಿಗೆ ಕರೆಸಿ ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದಾರೆ.


Murugha mutt swamy judicial custody extended till november 3 2022 mrqMurugha mutt swamy judicial custody extended till november 3 2022 mrq
ಮುರುಘಾ ಸ್ವಾಮಿ


ಅಷ್ಟೆ ಅಲ್ಲದೇ ನಾಲ್ವರ ಬಳಿಯೂ ಪ್ರತ್ಯೇಕವಾಗಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನ ಪಡೆದು, ಅವರ ಹೇಳಿಕೆಗಳನ್ನ ಪತ್ರದಲ್ಲಿ ಬರೆಸಿಕೊಂಡು, ವಿಡಿಯೋ ಮಾಡಿ ಸಾಕ್ಷಿಗಳಾಗಿ ದಾಖಲಿಸಿಕೊಂಡಿದ್ದಾರೆ.


ತನಿಖಾಧಿಕಾರಿಗಳು ಕೇಳಿದ್ದೇನು?


ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಟ್ಯಾನ್ಲಿ ಮತ್ತು ಪರುಶು ಮೊದಲನೇ ಪ್ರಕರಣ ಕುರಿತು ಹಾಜರಾಗಿ ಹೇಳಿಕೆ ನೀಡುವಂತೆ ಪೊಲೀಸರು ನೋಟಿಸ್ ನೀಡಿದ್ರು. ಆದ್ದರಿಂದ ನಾವು ನಮ್ಮ ಸಂಸ್ಥೆಯ ಸಿಬ್ಬಂದಿ ಹಾಜರಾಗಿ ಪೊಲೀಸರಿಗೆ ಅವರು ಕೇಳಿದ ಮಾಹಿತಿಯನ್ನ ನೀಡಿದ್ದೇವೆ.


ಈ ಪ್ರಕರಣದಲ್ಲಿ ಮೊತ್ತೊಬ್ಬ ಆರೋಪಿಯನ್ನ ಬಂಧಿಸಿದ್ದಾರೆ. ಚಾರ್ಜ್​​ಶೀಟ್ ಕೂಡಾ ಮಾಡಿರೋದನ್ನು ನಾವು ಸ್ವಾಗತಿಸುತ್ತೇವೆ. ಚಾರ್ಜ್​​ಶೀಟ್ ಬಳಿಕ ನಮ್ಮ ಹೇಳಿಕೆ ಅಗತ್ಯವಿರುವ ಕಾರಣ ಹೇಳಿಕೆ ಪಡೆದಿದ್ದಾರೆ. ತನಿಖಾಧಿಕಾರಿಗಳು ಅವರ ಕರ್ತವ್ಯ ನಿರ್ವಹಿಸಿದ್ದಾರೆ. ನಾವು ಅದನ್ನು ಪ್ರಶ್ನಿಸುವಂತಿಲ್ಲ ಎಂದಿದ್ದಾರೆ.


ಇದನ್ನೂ ಓದಿ:  Veerendra Heggade: ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸುಳ್ಳು ವದಂತಿ; ಮೆರವಣಿಗೆಯಲ್ಲಿ ಬಂದು ಕೋರ್ಟ್​ ಮುಂದೆ ಶರಣಾದ ವ್ಯಕ್ತಿ


ಪ್ರಕರಣ ದಾಖಲಾದ ಬಳಿಕ ಹಲವರ ವಿಚಾರಣೆ


ಇನ್ನೂ ಮೊದಲ ಪೋಕ್ಸೋ ಪ್ರಕರಣ ದಾಖಲಾದ ಬಳಿಕ  ಹಲವರನ್ನ ಪೊಲೀಸರು ಕರೆತಂದು ವಿಚಾರಣೆ ಮಾಡಿದ್ದಾರೆ. ಇದಕ್ಕೆ ಇನ್ನಷ್ಟು ಸಾಕ್ಷಿಗಳನ್ನೂ ಕಲೆ ಹಾಕುವ ಸಾಧ್ಯತೆ ಇದೆ. ಆ ನಿಟ್ಟಿನಲ್ಲಿ ಪೊಲೀಸರ ತನಿಖಾ ತಂಡ ಕಾರ್ಯ ನಿರ್ವಹಿಸುತ್ತಿದೆ.


ಒಡನಾಡಿ ಸಂಸ್ಥೆಯ ಮುಖ್ಯಸ್ಥರು
ಮುರುಘಾ ಸ್ವಾಮಿ


ವಿಚಾರಣೆಗೆ ಹಾಜರಾಗಿದ್ದ ಒಡನಾಡಿಯ ಮತ್ತೊಬ್ಬ ಮುಖ್ಯಸ್ಥರಾದ ಪರುಶು ಪ್ರತಿಕ್ರಿಯೆ ನೀಡಿ, ನಮ್ಮ ಬಳಿಗೆ ಮಕ್ಕಳು ಬಂದಿದ್ದು, ಅವರು ನೀಡಿದ ಹೇಳಿಕೆ ಹಾಗೂ CWC ನಲ್ಲಿ ನೀಡಿದ್ದ ಹೇಳಿಕೆ, ಅವರಿಗೆ ವಸತಿ, ಊಟ, ಸೇರಿದಂತೆ ಅವರ ಖರ್ಚನ್ನ ಯಾರು ನೀಡಿದ್ದಾರೆ ಅನ್ನೋ ಮಾಹಿತಿಯನ್ನ ಪೊಲೀಸರು ಕೇಳಿದರು. ಅದಕ್ಕೆ ಸಮರ್ಪಕ ಉತ್ತರವನ್ನ ನೀಡಿದ್ದೇವೆ ಎಂದಿದ್ದಾರೆ.


ಇದನ್ನೂ ಓದಿ:  Hubballi: ಬಿಜೆಪಿ ಕಚೇರಿ ಮುಂದೆ ಹೈಡ್ರಾಮಾ; ಕಾಂಗ್ರೆಸ್ ಪ್ರತಿಭಟನೆಯಲ್ಲಿ ಹಾರಾಡಿದ ಕೇಸರಿ ಶಾಲು


ಎರಡನೇ ಪ್ರಕರಣ ಮುರುಘಾ ಸ್ವಾಮಿಗೆ ಸಂಕಷ್ಟ


ಒಟ್ಟಾರೆ ಮುರುಘಾ  ಸ್ವಾಮಿ ಸೇರಿ ಐವರ ವಿರುದ್ಧ ದಾಖಲಾದ ಮೊದಲ ಪೋಕ್ಸೋ ಪ್ರಕರಣದ ತನಿಖೆ ಪ್ರಮುಖ ಘಟ್ಟಕ್ಕೆ ಬಂದಿದೆ.ಇತ್ತ ಮುರುಘಾ ಸ್ವಾಮಿ ತಮ್ಮ ವಕೀಲರ ಮೂಲಕ ಕೋರ್ಟ್ ಗೆ  ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇವೆಲ್ಲದರ ನಡುವೆಯೇ 2ನೇ ಪೋಕ್ಸೋ ಪ್ರಕರಣ, ಮಠದಲ್ಲಿ ಮಕ್ಕಳನ್ನು ಅನಧಿಕೃತವಾಗಿ ಇಟ್ಟಿದ್ದ ಕುರಿತ ಪ್ರಕರಣ ದಾಖಲಾಗಿದ್ದು ಸ್ವಾಮಿಗೆ ಸಂಕಷ್ಟ ತಂದಿದೆ.

Published by:Mahmadrafik K
First published: