• Home
  • »
  • News
  • »
  • state
  • »
  • Murugha Mutt: ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧ 2ನೇ ಫೊಕ್ಸೋ ಪ್ರಕರಣ, 3 ದಿನ ಪೊಲೀಸ್ ಕಸ್ಟಡಿಗೆ!

Murugha Mutt: ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧ 2ನೇ ಫೊಕ್ಸೋ ಪ್ರಕರಣ, 3 ದಿನ ಪೊಲೀಸ್ ಕಸ್ಟಡಿಗೆ!

ಮುರುಘಾ ಸ್ವಾಮೀಜಿ

ಮುರುಘಾ ಸ್ವಾಮೀಜಿ

ಮೊದಲ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 8ರವೆಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ಕೋರ್ಟ್ ಆದೇಶ ನೀಡಿತು. ಕೋರ್ಟಿಗೆ ಹಾಜರಾಗಿದ್ದ ಮೊದಲ ಪ್ರಕರಣದ ಎ-2 ಹಾಸ್ಟೆಲ್ ವಾರ್ಡನ್ ಮಹಿಳೆಯನ್ನು ಶಿವಮೊಗ್ಗ ಮಹಿಳಾ ಕಾರಾಗೃಹದಿಂದ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದರು.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಚಿತ್ರದುರ್ಗ(ನ.04): ಅಪ್ರಾಪ್ತ ಬಾಲಕಿಯರ ಮೇಲೆ  ಚಿತ್ರದುರ್ಗ ಡಾ. ಶಿವಮೂರ್ತಿ ಮುರುಘಾ ಶರಣರು (Murugha Sharana) ಲೈಂಗಿಕ ದೌರ್ಜನ್ಯದಲ್ಲಿ (Sexual Assault) ಜೈಲು ಸೇರಿದ್ದಾರೆ. ಸ್ವಾಮಿ ವಿರುದ್ಧ ಈಗಾಗಲೇ ಎರಡು ಪೋಕ್ಸೋ ಪ್ರಕರಣ ದಾಖಲಾಗಿವೆ. ಸದ್ಯ ಅವರ ವಿರುದ್ದದ ಮೊದಲ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, 14 ದಿನಗಳ ನ್ಯಾಯಾಂಗ ಬಂಧನ ಅವಧಿ ಅಂತ್ಯ ಆಗಿದ್ದು, ಆರೋಪಿ ಸ್ವಾಮಿಯನ್ನ ಪೊಲೀಸರು ನ್ಯಾಯಾಲಯದ ಮುಂದೆ ಹಾಜಪಡಿಸಿದ್ದಾರೆ. ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿರುವ ಕೋರ್ಟ್ ಸದ್ಯ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.


ಅಕ್ಟೋಬರ್ 13 ರಂದು ಚಿತ್ರದುರ್ಗ ಮುರುಘಾ ಸ್ವಾಮಿ ವಿರುದ್ದ ಮೈಸೂರಲ್ಲಿ ದಾಖಲಾಗಿದ್ದ 2ನೇ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಬಳಿಕ ಅಲ್ಲಿಂದ ಪ್ರಕರಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆಗಿತ್ತು. ಇದಾದ ಬಳಿಕ ಮಕ್ಕಳ ಹೇಳಿಕೆ, ಆಧರಿಸಿ ಮುರುಘಾ ಮಠದಲ್ಲಿ ಸ್ಥಳ ಮಹಜರು ಮಾಡಿಸಿ, ತನಿಖೆ ಪ್ರಾರಂಭ ಮಾಡಿದ್ರು. ಗುರುವಾರ ಚಿತ್ರದುರ್ಗ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕ್ಕೆ ಕರೆತಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.


ಇದನ್ನೂ ಓದಿ:  Hubballi: ಬಿಜೆಪಿ ಕಚೇರಿ ಮುಂದೆ ಹೈಡ್ರಾಮಾ; ಕಾಂಗ್ರೆಸ್ ಪ್ರತಿಭಟನೆಯಲ್ಲಿ ಹಾರಾಡಿದ ಕೇಸರಿ ಶಾಲು


ನವೆಂಬರ್ 8ರವೆಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ


ಈ ಪ್ರಕರಣ ಗ್ರಾಮಾಂತರ ಠಾಣೆ ತನಿಖಾಧಿಕಾರಿ ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ವಿಚಾರಣೆ ನಡೆದಿದೆ. ಮೊದಲ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 8ರವೆಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸುವಂತೆ ಕೋರ್ಟ್ ಆದೇಶ ನೀಡಿತು. ಕೋರ್ಟಿಗೆ ಹಾಜರಾಗಿದ್ದ ಮೊದಲ ಪ್ರಕರಣದ ಎ-2 ಹಾಸ್ಟೆಲ್ ವಾರ್ಡನ್ ಮಹಿಳೆಯನ್ನು ಶಿವಮೊಗ್ಗ ಮಹಿಳಾ ಕಾರಾಗೃಹದಿಂದ ಪೊಲೀಸರು ಕೋರ್ಟಿಗೆ ಹಾಜರುಪಡಿಸಿದ್ದರು. ಜೊತೆಗೆ ಎ4 ಮಠದ ಕಾರ್ಯದರ್ಶಿ ಪರಮಶಿವಯ್ಯ ಅವರನ್ನು ಕೋರ್ಟ್ ನವೆಂಬರ್ 8 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶಿಸಿದೆ.


8 ದಿನ ಕಸ್ಟಡಿಗೆ ಕೊಡಬೇಕೆಂದು ಮನವಿ


ಇನ್ನು ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು 8 ದಿನ ಕಸ್ಟಡಿಗೆ ಕೊಡಬೇಕೆಂದು ಮನವಿ ಮಾಡಿದ್ದರು. ಈ ಬಗ್ಗೆ ಮುರುಘಾ ಶರಣರ ಪರ ವಕೀಲರು ತಕರಾರು ಸಹ ಸಲ್ಲಿಸಿದ್ದರು. ಈ ವಿಚಾರಣೆಯನ್ನು ಕೋರ್ಟ್ 2:45ಕ್ಕೆ ಮುಂದೂಡಿತ್ತು. ಬಳಿಕ  ಮಧ್ಯಾಹ್ನ ಮುರುಘಾ ಶರಣರನ್ನು ತನಿಖೆಗಾಗಿ ಕಸ್ಟಡಿಗೆ ಕೇಳಿದ್ದ ಪೊಲೀಸರ ಕೋರಿಕೆಯ ಬಗ್ಗೆ  ವಿಚಾರಣೆ ನಡೆಸಿತು.


ಇದನ್ನೂ ಓದಿ:  Veerendra Heggade: ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸುಳ್ಳು ವದಂತಿ; ಮೆರವಣಿಗೆಯಲ್ಲಿ ಬಂದು ಕೋರ್ಟ್​ ಮುಂದೆ ಶರಣಾದ ವ್ಯಕ್ತಿ


ಎರಡನೇ ಪ್ರಕರಣದ ತನಿಖೆಗಾಗಿ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಲು ಚಿತ್ರದುರ್ಗ ಎರಡನೇ ಅಪರ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿತು. ಬಳಿಕ ಸ್ವಾಮಿಯನ್ನ ವಶಕ್ಕೆ ಪಡೆದ ಪೊಲೀಸರು, ಸ್ವಾಮಿಯನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆದೊಯ್ದು ರೆಗ್ಯುಲರ್ ಮೆಡಿಕಲ್ ಚೆಕಪ್ ಮಾಡಿಸಿದ್ರು. ನಂತರ ಅವರನ್ನು ಚಿತ್ರದುರ್ಗದ ಡಿವೈಎಸ್ಪಿ ಕಚೇರಿಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದಾರೆ.

Published by:Precilla Olivia Dias
First published: