• Home
  • »
  • News
  • »
  • state
  • »
  • Murugha Swamy Case: 'ಮುರುಘಾ' ನಗ್ನ ಸತ್ಯ, ಸ್ವಾಮಿಜಿಯ ಪೀಠ ತ್ಯಾಗಕ್ಕೆ ಹೆಚ್ಚಿದ ಒತ್ತಡ; ಮಠದಲ್ಲಿದ್ದ ಕಂದಮ್ಮನ ತಂದೆ ಇವರೇನಾ?

Murugha Swamy Case: 'ಮುರುಘಾ' ನಗ್ನ ಸತ್ಯ, ಸ್ವಾಮಿಜಿಯ ಪೀಠ ತ್ಯಾಗಕ್ಕೆ ಹೆಚ್ಚಿದ ಒತ್ತಡ; ಮಠದಲ್ಲಿದ್ದ ಕಂದಮ್ಮನ ತಂದೆ ಇವರೇನಾ?

ಮುರುಘಾ ಸ್ವಾಮೀಜಿ

ಮುರುಘಾ ಸ್ವಾಮೀಜಿ

Murugha Mutt: ಮುರುಘಾ ಸ್ವಾಮಿ ವಿರುದ್ದ 2ನೇ ಪ್ರಕರಣ ದಾಖಲಾಗುತ್ತಿದ್ದಂತೆ ಪೀಠತ್ಯಾಗಕ್ಕೆ ಒತ್ತಡ ಹೆಚ್ಚಾಗಿದೆ. ಈ ಸಂಬಂಧ ಇಂದು ವೀರಶೈವ ಮಹಾಸಭಾ ಪ್ರಮುಖರ ಸಭೆ ನಡೆಸುವ ಸಾಧ್ಯತೆಗಳಿವೆ.

  • News18 Kannada
  • Last Updated :
  • Karnataka, India
  • Share this:

ಚಿತ್ರದುರ್ಗದ ಮುರುಘಾ ಮಠದಲ್ಲಿ (Murugha Mutt, Chitradurga) ಪತ್ತೆಯಾದ ನಾಲ್ಕು ವರ್ಷದ ಹೆಣ್ಣು ಮಗು (Girl Baby) ಯಾರದ್ದು ಎಂಬ  ಪ್ರಶ್ನೆಗೆ ಪೊಲೀಸರು ಉತ್ತರ ಹುಡುಕಾಟದಲ್ಲಿದ್ದಾರೆ. ಈ ನಡುವೆ ಮಗು ಪತ್ತೆಯಾದ ದಿನ ನಡೆದಿದ್ದು ಏನು ಎಂಬುದರ ಬಗ್ಗೆ ಪ್ರತ್ಯಕ್ಷದರ್ಶಿ ಫೈರೋಜ್ ನ್ಯೂಸ್ 18ಗೆ ಹೇಳಿದ್ದರು. ಸದ್ಯ ನಾಲ್ಕು ವರ್ಷದ ಮಗು ಮಡಿಲು ಕೇಂದ್ರದ ಆಶ್ರಯದಲ್ಲಿದೆ. ಇತ್ತ ಮಗುವಿನ ಪೋಷಕರ (Baby parents) ಪತ್ತೆಗಾಗಿ ಪೊಲೀಸರು ಜಾಹೀರಾತು ಸಹ ಪ್ರಕಟಿಸಿದ್ದಾರೆ. ಆದರೆ ಇದುವರೆಗೂ ಮಗುವಿನ ಪೋಷಕರು ಯಾರು ಎಂಬುವುದು ಅಂತ ತಿಳಿದು ಬಂದಿಲ್ಲ. ನಾಲ್ಕು ವರ್ಷದ ಹಿಂದೆ ಮಗುವನ್ನು ಬಿಟ್ಟು ಹೋಗಿದ್ಯಾರು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಮಗು ಪತ್ತೆಯಾಗಿ ಮಠದಲ್ಲಿದ್ದರೂ ಅಲ್ಲಿಯ ಸಿಬ್ಬಂದಿ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿರಲ್ಲ ಎಂಬ ಸ್ಪೋಟಕ ಮಾಹಿತಿ ಸಹ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿ, ಮುರುಘಾ ಸ್ವಾಮಿಯ (Murugha Swamiji) ಡಿಎನ್​ಎ ಪರೀಕ್ಷೆಗೆ (DNA test) ಆಗ್ರಹಿಸಿದ್ದಾರೆ.


ಸ್ವಾಮಿಯ ಪೀಠ ತ್ಯಾಗಕ್ಕೆ ಹೆಚ್ಚಾದ ಒತ್ತಡ


ಮುರುಘಾ ಸ್ವಾಮಿ ವಿರುದ್ದ 2ನೇ ಪ್ರಕರಣ ದಾಖಲಾಗುತ್ತಿದ್ದಂತೆ ಪೀಠತ್ಯಾಗಕ್ಕೆ ಒತ್ತಡ ಹೆಚ್ಚಾಗಿದೆ. ಈ ಸಂಬಂಧ ಇಂದು ವೀರಶೈವ ಮಹಾಸಭಾ ಪ್ರಮುಖರ ಸಭೆ ನಡೆಸುವ ಸಾಧ್ಯತೆಗಳಿವೆ.


ಇಂದು ನಡೆಯುವ ಸಭೆಯಲ್ಲಿ ಮುರುಘಾ ಪೀಠ ತ್ಯಾಗದ ಕುರಿತು ಮಹತ್ವದ ಚರ್ಚೆಗಳು ನಡೆಸುವ ಸಾಧ್ಯತೆಗಳಿವೆ. ಬೇರೆ ಪೀಠಾಧ್ಯಕ್ಷರ ನೇಮಕ, ಆಯ್ಕೆ ಕುರಿತು ನಿರ್ಣಯಿಸಬಹುದು. ಈ ಹಿಂದಿನ ಸಮಾಲೋಚನ ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು.


ಮುಂದಿನ ಪೀಠಾಧಿಪತಿ ಬಗ್ಗೆ ಚರ್ಚೆ


ಶುಕ್ರವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು  ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪೀಠ ತ್ಯಾಗದ ಕುರಿತು ಚರ್ಚೆ ನಡೆಸಲಾಗಿತ್ತು. ಯಾವ ಸ್ವಾಮಿಯನ್ನ ಪ್ರಭಾರ ಪೀಠಾಧಿಪತಿ ಮಾಡಬೇಕು ಎಂಬುದರ ಬಗ್ಗೆ ದೀರ್ಘವಾದ ಚರ್ಚೆಗಳು ನಡೆದಿದ್ದವು.


ಡಾ.ಮಧುಕುಮಾರ್ ಹೇಳಿಕೆ


ಮುರುಘಾ ಮಠದ ವಸತಿ ಶಾಲೆಯಲ್ಲಿ ಮಗು ಪತ್ತೆ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಸಾಮಾಜಿಕ ಕಾರ್ಯಕರ್ತ ಡಾ.ಮಧುಕುಮಾರ್, ಮಗು ಸ್ವಾಮೀಜಿ ಅವರದ್ದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂಬ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.


DNA ಪರೀಕ್ಷೆ ನಡೆಯಲಿ ಅನ್ನೋದು ಜನರ ಅಭಿಪ್ರಾಯವಾಗಿದೆ. ಈ ಬಗ್ಗೆ ಕೋರ್ಟ್‌ ಮೂಲಕ CBI ತನಿಖೆಯಾಗಬೇಕು. ಹೈಕೋರ್ಟ್ ನಲ್ಲಿ PIL ಹಾಕಲು ಕೂಡಾ ಸಿದ್ಧತೆ ಮಾಡಿದ್ದೇವೆ ಎಂದು ಡಾ.ಮಧುಕುಮಾರ್ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Prabhakar Kore: ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ 75ನೇ ಅಮೃತ ಮಹೋತ್ಸವ ಸಮಾರಂಭ; ಹಲವು ಬಿಜೆಪಿ ನಾಯಕರು ಭಾಗಿ


DNA ಪರೀಕ್ಷೆ ನಡೆಯಲಿ


4.5 ವರ್ಷದ ಕಂದಮ್ಮ ಮಠದ ಆವರಣದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳು, CWC, ಮಕ್ಕಳ ರಕ್ಷಣಾ ಘಟಕಕ್ಕೆ ದೂರು ನೀಡಿ ಮಗುವಿನ ರಕ್ಷಣೆ & ಪೋಷಕರ ಪತ್ತೆ ಮಾಡಿ ಎಂದು ತಿಳಿಸಿದ್ದೆ. DNA ಪರೀಕ್ಷೆ ನಡೆಯಲಿ ಅನ್ನೋದು ಸಾರ್ವಜನಿಕ ಅಭಿಪ್ರಾಯವಾಗಿದೆ.


ಮಕ್ಕಳ ಪತ್ತೆ ಬಗ್ಗೆ ಸಿಬಿಐ ತನಿಖೆ ಆಗಲಿ


ಮಗು ಪತ್ತೆಯಾದ 10 ನಿಮಿಷದಲ್ಲಿ ಮುರುಘಾ ಸ್ವಾಮಿ ಗಮನಕ್ಕೆ ಬಂದಿದೆ. ಆ ಮಗು ಪತ್ತೆಯಾದ ಕೆಲವೇ ಕ್ಷಣದಲ್ಲಿ ಹೇಗೆ ಗೊತ್ತಾಯ್ತು? ಇದು ನಾಟಕೀಯವಾಗಿ ಕಾಣುತ್ತಿದೆ, ಅನುಮಾನ ಮೂಡಿದೆ. 15-20 ವರ್ಷದಲ್ಲಿ ಹತ್ತಾರು ಮಕ್ಕಳು ಮಠದ ಬಳಿ ಪತ್ತೆಯಾಗಿವೆ. ಮಕ್ಕಳು ಪತ್ತೆಯಾಗಿರೋದ್ರ ಬಗ್ಗೆ CBI ತನಿಖೆಯಾಗಬೇಕು. ಈ ಮಗು ಸ್ವಾಮೀಜಿ ಅವರದ್ದು ಎಂಬುದು ನನ್ನ ಅಭಿಪ್ರಾಯ. ಮುಂದಿನ ವಾರ ಕೋರ್ಟ್‌ ಮೊರೆ ಹೋಗುತ್ತಿದ್ದೇವೆ ಎಂದು ಡಾ.ಮಧುಕುಮಾರ್ ಹೇಳಿದ್ದಾರೆ.


ಇದನ್ನೂ ಓದಿ:  Hassan Deadly Accident: ಟೆಂಪೋ, ಲಾರಿ, ಬಸ್ ನಡುವೆ  ಭೀಕರ ಸರಣಿ ಅಪಘಾತ, 9 ಮಂದಿ ಸಾವು; 12 ಜನಕ್ಕೆ ಗಂಭೀರ ಗಾಯ


ಮೂರನೇ ಆರೋಪಿಗೆ ಜಾಮೀನು


ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧದ ಫೋಕ್ಸೋ ಪ್ರಕರಣದಲ್ಲಿ 3ನೇ ಆರೋಪಿಗೆ ಬಾಲ ನ್ಯಾಯ ಮಂಡಳಿ ಮಧ್ಯಂತರ ಜಾಮೀನು ನೀಡಿದೆ. ನಾಪತ್ತೆ ಆಗಿದ್ದ 3ನೇ ಆರೋಪಿ, ಮಠದ ಉತ್ತರಾಧಿಕಾರಿ ನಿನ್ನೆ ಬಾಲ ನ್ಯಾಯಮಂಡಳಿಗೆ ಶರಣಾಗಿದ್ದ. ಆದ್ರೆ ಪೊಲೀಸರು ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಪೊಲೀಸರೇ ಕೇಸ್​ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ.

Published by:Mahmadrafik K
First published: