• Home
  • »
  • News
  • »
  • state
  • »
  • Murugha Swamy: ಮಠದಲ್ಲಿದ್ದ103 ಮಕ್ಕಳ ಆಪ್ತಸಮಾಲೋಚನೆಗೆ ಮುಹೂರ್ತ ನಿಗದಿ; ಸ್ವಾಮಿಯ ನ್ಯಾಯಾಂಗ ಬಂಧನ ವಿಸ್ತರಣೆ

Murugha Swamy: ಮಠದಲ್ಲಿದ್ದ103 ಮಕ್ಕಳ ಆಪ್ತಸಮಾಲೋಚನೆಗೆ ಮುಹೂರ್ತ ನಿಗದಿ; ಸ್ವಾಮಿಯ ನ್ಯಾಯಾಂಗ ಬಂಧನ ವಿಸ್ತರಣೆ

ಮುರುಘಾ ಸ್ವಾಮಿ

ಮುರುಘಾ ಸ್ವಾಮಿ

ಮುರುಘಾ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ (Judicial Custody) ವಿಸ್ತರಣೆ ಮಾಡಿ ಚಿತ್ರದುರ್ಗ 2ನೇ ಅಪರ & ಸತ್ರ ನ್ಯಾಯಾಲಯ ಆದೇಶ ನೀಡಿದೆ.

  • News18 Kannada
  • Last Updated :
  • Chitradurga, India
  • Share this:

ಮುರುಘಾ ಮಠದ ಸ್ವಾಮಿ (Murugha Mutt Swamy) ಜೈಲು ಸೇರಿ 2 ತಿಂಗಳಾದ್ರೂ ಮಠದ ಒಳಗಿನ ಒಂದೊಂದೇ ರಹಸ್ಯಗಳು ಬೆಳಕಿಗೆ ಬರುತ್ತಿವೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕೇಸ್​ ಆಯ್ತು. ಮಠದ ಆಸ್ತಿ (Property) ವಿವಾದ ಭುಗಿಲೇಳ್ತು. ಪೀಠತ್ಯಾಗಕ್ಕೆ ಒತ್ತಡ ಶುರುವಾಯ್ತು. ಮತ್ತೆ ನಾಲ್ವರು ಮಕ್ಕಳು ಲೈಂಗಿಕ ದೌರ್ಜನ್ಯ ಕೇಸ್​ ದಾಖಲಿಸಿದ್ರು. ಆಮೇಲೆ ಮಠದಲ್ಲಿರುವ 4 ವರ್ಷದ ಮಗುವಿಗೆ (Four year old baby) ಅಪ್ಪ ಯಾರು ಅನ್ನೋ ಪ್ರಶ್ನೆ ಕೋರ್ಟ್​ವರೆಗೂ ಹೋಯ್ತು. ಈಗ ಮಠದಲ್ಲಿದ್ದ 103 ಮಕ್ಕಳ ಆಪ್ತಸಮಾಲೋಚನೆಗೂ ಮುಹೂರ್ತ ನಿಗದಿ ಆಗಿದೆ.


ಮಕ್ಕಳ ರಕ್ಷಣಾ ನಿರ್ದೇಶನಾಲಯ ಚಿತ್ರದುರ್ಗದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಕೊಟ್ಟಿರೋ ಸೂಚನೆ ಇದಾಗಿದೆ. ಮುರುಘಾ ಮಠದ ಪ್ರಕರಣದ ಬಳಿಕ 103 ಮಕ್ಕಳಲ್ಲೂ ಆತಂಕವಿದೆ.


ನವೆಂಬರ್ 30ರೊಳಗೆ ವರದಿ ನೀಡಲು ಸೂಚನೆ


ಹಲವು ಅನುಮಾನಗಳಿವೆ ಅನ್ನೋ ದೂರು ಬಂದಿದೆ. ಹೀಗಾಗಿ ಎಲ್ಲಾ ಮಕ್ಕಳನ್ನೂ ಕೌನ್ಸೆಲಿಂಗ್ ನಡೆಸಿ ನವೆಂಬರ್​ 30ರೊಳಗೆ ವರದಿ ನೀಡಬೇಕು ಎಂದು ಆದೇಶ ನೀಡಲಾಗಿದೆ.


Murugha mutt swamy judicial custody extended till november 3 2022 mrq
ಮುರುಘಾ ಮಠ


ಫೋಕ್ಸೋ ಕೇಸ್​ನಲ್ಲಿ ಸ್ವಾಮೀಜಿ ಜೈಲು ಸೇರಿದ ಮೇಲೆ ಮಠದ ಹಾಸ್ಟೆಲ್‌ನಲ್ಲಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 103 ವಿದ್ಯಾರ್ಥಿನಿಯರನ್ನ ಶಿಫ್ಟ್​ ಮಾಡಲಾಗಿತ್ತು. 49 ವಿದ್ಯಾರ್ಥಿನಿಯರನ್ನು ಮಕ್ಕಳ ರಕ್ಷಣಾ ಘಟಕಗಳ ಆಯಾ ಜಿಲ್ಲೆಗಳಿಗೆ ಕಳುಹಿಸಿದ್ರೆ, 54 ವಿದ್ಯಾರ್ಥಿನಿಯರನ್ನು ಪೋಷಕರ ಜೊತೆ ಕಳಿಸಿದ್ದರು.  ಈಗ ಎಲ್ಲರನ್ನೂ ಕೌನ್ಸೆಲಿಂಗ್​​ ನಡೆಸಬೇಕಿದೆ


ನ್ಯಾಯಾಂಗ ಬಂಧನ ವಿಸ್ತರಣೆ


ಮುರುಘಾ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ (Judicial Custody) ವಿಸ್ತರಣೆ ಮಾಡಿ ಚಿತ್ರದುರ್ಗ 2ನೇ ಅಪರ & ಸತ್ರ ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣದ ಎರಡನೇ ಆರೋಪಿ ಲೇಡಿ ವಾರ್ಡನ್ ರಶ್ಮಿಯ ನ್ಯಾಯಾಂಗ ಬಂಧನ ವಿಸ್ತರಣೆ ಆಗಲಿದೆ. ನವೆಂಬರ್ 3ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ಮನೆಗೆ ಹೋದ ಅರ್ಧ ಗಂಟೆಯಲ್ಲಿ ಹಿಂದಿರುಗಿದ ಸಂತ್ರಸ್ತೆ


ಆಗಸ್ಟ್ 26ರಂದು ಮುರುಘಾ ಸ್ವಾಮಿ (Murugha Swamy Case) ವಿರುದ್ಧ ಎರಡನೇ ಪೋಕ್ಸೋ ಪ್ರಕರಣ (POCSO Case) ದಾಖಲಾಗಿತ್ತು. ಈ ಪ್ರಕರಣದ ಸಂತ್ರಸ್ತ ಬಾಲಕಿಯರನ್ನು (Victim) ಗುರುವಾರ ಪೋಷಕರ ಜೊತೆ ಮನೆಗೆ ಕಳುಹಿಸುವ ಪ್ರಕ್ರಿಯೆ ನಡೆಸಲಾಗಿತ್ತು.


ಇದನ್ನೂ ಓದಿ:  HD Devegowda: ಅವರ ಬಗ್ಗೆ ಕೊಂಕು ಮಾತಾಡಿದ್ರೆ ಸಹಿಸಲ್ಲ; ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

 ಪ್ರಕರಣ ದಾಖಲಾದ ದಿನದಿಂದ ಸಂತ್ರಸ್ತ ಬಾಲಕಿಯರನ್ನು ಚಿತ್ರದುರ್ಗದ (Chitradurga) ಬಾಲಮಂದಿರದಲ್ಲಿ ಇರಿಸಲಾಗಿತ್ತು. ಆದ್ರೆ ಇಬ್ಬರಲ್ಲಿ ಓರ್ವ ಬಾಲಕಿ ಮನೆಗೆ ತೆರಳಿ ಅರ್ಧ ಗಂಟೆಯಲ್ಲಿ ವಾಪಸ್ ಆಗಿದ್ದಾನೆ. ಬಾಲಮಂದಿರದಿಂದ ತೆರಳಿದ ಬಾಲಕಿ ಮಠದ ಮಾಜಿ ಆಡಳಿತಾಧಿಕಾರಿ ಎಸ್ ಕೆ ಬಸವರಾಜನ್ ಮನೆಗೆ ಹೋಗಿದ್ದಾಳೆ. ಅಲ್ಲಿ ಎಸ್ ಕೆ ಬಸವರಾಜನ್ ಮತ್ತು ಅವರ ಪತ್ನಿ ಸೌಭಾಗ್ಯರನ್ನು ಭೇಟಿಯಾಗಿದ್ದಾಳೆ.




Murugha mutt swamy judicial custody extended till november 3 2022 mrqMurugha mutt swamy judicial custody extended till november 3 2022 mrq
ಮುರುಘಾ ಸ್ವಾಮಿ




ಮತ್ತೆ ಬಾಲಮಂದಿರಕ್ಕೆ ಶಿಫ್ಟ್


ಮನೆಗೆ ಆಗಮಿಸಿದ್ದ ಬಾಲಕಿಯನ್ನು ಸೌಭಾಗ್ಯ ಮತ್ತು ಬಸವರಾಜನ್ ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಬಾಲಕಿ ತನ್ನ ಮನೆಯಲ್ಲಿ ಇರಲಾಗದು ಎಂದು ಹೇಳಿರುವ ಹಿನ್ನೆಲೆ ವಿಚಾರಣೆ ನಡೆಸಿ ಬಾಲ‌ಮಂದಿರಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ:  Davanagere: ಬೇರೆ ಯುವತಿ ಜೊತೆ ಮಾತು; ಕೋಪಗೊಂಡ ಸಲಿಂಗಕಾಮಿ ಗೆಳತಿಯಿಂದ ಹಲ್ಲೆ


ಮುರುಘಾ ಸ್ವಾಮಿ ವಿರುದ್ಧ ಮೂರನೇ ಎಫ್​ಐಆರ್


ಜೈಲಿನಲ್ಲಿರುವ ಮುರುಘಾ ಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮುರುಘಾ ಸ್ವಾಮಿ ವಿರುದ್ಧ ಮತ್ತೊಂದು FIR ದಾಖಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಠದ ಆವರಣದಲ್ಲಿರುವ ಹಾಸ್ಟೆಲ್​ನಲ್ಲಿ ಇಬ್ಬರು ಮಕ್ಕಳು ಪತ್ತೆ ಆಗಿದ್ದರು. ನಾಲ್ಕೂವರೆ ವರ್ಷದ ಓರ್ವ ಬಾಲಕಿ ಹಾಗೂ 16 ವರ್ಷದ ಮತ್ತೋರ್ವ ಬಾಲಕಿ ಪತ್ತೆ ಆಗಿದ್ದರು.

Published by:Mahmadrafik K
First published: