Rahul Gandhi ಪ್ರಧಾನಿಯಾಗುತ್ತಾರೆ ಎಂದ ಸ್ವಾಮೀಜಿ! ಮುರುಘಾ ಶರಣರಿಂದ ಆಕ್ಷೇಪ ವ್ಯಕ್ತವಾಗಿದ್ದೇಕೆ?

ಹಾವೇರಿಯ (Haveri) ಹೊಸಮಠದ ಸ್ವಾಮೀಜಿಯೊಬ್ಬರು ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನ ಮಂತ್ರಿ (Prime Minister) ಆಗುತ್ತಾರೆ ಅಂತ ಹೇಳಿದ್ರು. ಇದಕ್ಕೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರಣ ಏನು ಗೊತ್ತಾ?

ನಿನ್ನೆ ಮುರುಘಾ ಮಠಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ

ನಿನ್ನೆ ಮುರುಘಾ ಮಠಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ

  • Share this:
ಚಿತ್ರದುರ್ಗ: ನಿನ್ನೆ ಸಿದ್ದರಾಮಯ್ಯ (Siddaramaiah) ಅವರ 75ನೇ ಹುಟ್ಟುಹಬ್ಬದ (Birthday) ಪ್ರಯುಕ್ತ ಸಿದ್ದರಾಮೋತ್ಸವ (Siddaramotsava) ಎಂಬ ಅದ್ಧೂರಿ ಕಾರ್ಯಕ್ರಮ ನಡೆಯಿತು. ದಾವಣಗೆರೆಯಲ್ಲಿ (Davanagere) ನಡೆದ ಈ ಕಾರ್ಯಕ್ರಮಕ್ಕೆ ಎಸಿಸಿಸಿ ನಾಯಕ (AICC Leader) ರಾಹುಲ್ ಗಾಂಧಿ (Rahul Gandhi) ಮುಖ್ಯ ಅತಿಥಿಯಾಗಿ (Chief Guest) ಬಂದಿದ್ದರು. ಈ ವೇಳೆ ರಾಹುಲ್ ಗಾಂಧಿ ಚಿತ್ರದುರ್ಗದ (Chitradurga) ಪ್ರಸಿದ್ಧ ಮುರುಘಾ ಮಠಕ್ಕೆ (Murugha Mutt) ಭೇಟಿ ನೀಡಿ, ಮುರುಘಾ ಶ್ರೀಗಳಿಂದ (Murugha Sri) ಆಶೀರ್ವಾದ ಪಡೆದರು. ಬಳಿಕ ಶಿವಮೂರ್ತಿ ಮುರುಘಾ ಶರಣರಿಂದ ಇಷ್ಟಲಿಂಗ ದೀಕ್ಷೆ ಪಡೆದರು. ಈ ವೇಳೆ ಹಾವೇರಿಯ (Haveri) ಹೊಸಮಠದ ಸ್ವಾಮೀಜಿಯೊಬ್ಬರು ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನ ಮಂತ್ರಿ (Prime Minister) ಆಗುತ್ತಾರೆ ಅಂತ ಹೇಳಿದ್ರು. ಇದಕ್ಕೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದ ಹೊಸಮಠದ ಸ್ವಾಮೀಜಿ

ನಿನ್ನೆ ರಾಹುಲ್ ಗಾಂಧಿ ಅವರು ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹೊಸಮಠದ ಸ್ವಾಮೀಜಿ ಕೂಡ ಅಲ್ಲಿದ್ದರು. ಈ ವೇಳೆ ಮಾತನಾಡಿದ ಹೊಸಮಠದ ಸ್ವಾಮೀಜಿ, ರಾಹುಲ್ ಗಾಂಧಿಯವರು ಮುಂದೆ ದೇಶದ ಪ್ರಧಾನಿಯಾಗುತ್ತಾರೆ ಅಂತ ಭವಿಷ್ಯ ನುಡಿದ್ರು. ಅಜ್ಜಿ ಇಂದಿರಾಗಾಂಧಿ, ತಂದೆ ರಾಜೀವ್ ಗಾಂಧಿ ಅವರಂತೆ ರಾಹುಲ್ ಗಾಂಧಿ ಕೂಡ ಮುಂದೆ ಈ ದೇಶದ ಪ್ರಧಾನ ಮಂತ್ರಿ ಆಗಲಿದ್ದಾರೆ. ಅವರಿಗೆ ಲಿಂಗಾಯಿತ ದೀಕ್ಷೆ ನೀಡಲಾಗುತ್ತಿದೆ, ಹೀಗಾಗಿ ಅವರೂ ದೇಶದ ಪ್ರಧಾನಿ ಆಗಲಿದ್ದಾರೆ ಅಂತ ಹೇಳಿದ್ರು.

ರಾಜಕೀಯಕ್ಕೆ ಇದು ವೇದಿಕೆಯಲ್ಲ ಎಂದ ಮುರುಘಾ ಶರಣರು

ಹೊಸಮಠದ ಸ್ವಾಮೀಜಿ ಹೇಳಿಕೆಗೆ ಮುರುಘಾ ಮಠಾಧೀಶ ಶಿವಮೂರ್ತಿ ಮುರುಘಾ ಶರಣರು ಆಕ್ಷೇಪ ವ್ಯಕ್ತಪಡಿಸಿದ್ರು. ಹೊಸಮಠ ಸ್ವಾಮೀಜಿಗಳ ಮಾತಿನ ಮಧ್ಯೆ ಪ್ರವೇಶಿಸಿದ ಮುರುಘಾ ಶರಣರು, ಹಾಗೆ ಹೇಳಲು ಇದು ಸೂಕ್ತ ವೇದಿಕೆಯಲ್ಲ. ಅದನ್ನು ಜನನರು ನಿರ್ಧರಿಸಲಿದ್ದಾರೆ. ಇದು ರಾಜಕೀಯ ಮಾತನಾಡುವ ವೇದಿಕೆಯಲ್ಲ ಅಂತ ಆಕ್ಷೇಪ ವ್ಯಕ್ತಪಡಿಸಿದರು. ನಾವು ನಮ್ಮ ಮಠಕ್ಕೆ ಯಾರೇ ಭೇಟಿ ನೀಡಿದರೂ ಅವರಿಗೆ ಆಶೀರ್ವಾದ ನೀಡುತ್ತೇವೆ ಎಂದು ಹೇಳಿದರು ಅಂತ ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: Rahul Gandhi: ಶಿವಮೂರ್ತಿ ಮುರುಘಾ ಶರಣರಿಗೆ ಅಪಮಾನ ಮಾಡಿದ್ರಾ ರಾಹುಲ್ ಗಾಂಧಿ? ಇಷ್ಟಲಿಂಗಧಾರಣೆ ಪಡೆಯೋ ವೇಳೆ ಏನಾಯ್ತು?

ಡಿಕೆಶಿ ಜೊತೆಗೆ ಆಗಮಿಸಿದ್ದ ರಾಹುಲ್ ಗಾಂಧಿ

ಸಿದ್ದರಾಮೋತ್ಸವಕ್ಕೆ ಆಗಮಿಸುವ ಮುನ್ನ ರಾಹುಲ್ ಗಾಂಧಿ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರೊಂದಿಗೆ ಮುರುಘಾ ಮಠಕ್ಕೆ ಭೇಟಿ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ಹಲವು ಮಠಗಳ ಮಠಾಧೀಶರು ಆಗಮಿಸಿದ್ದರು.

ರಾಹುಲ್ ಗಾಂಧಿಗೆ ಲಿಂಗ ದೀಕ್ಷೆ

ರಾಹುಲ್ ಗಾಂಧಿಯವರಿಗೆ ಮುರುಘಾ ಶ್ರೀಗಳು ಹಣೆಗೆ ವಿಭೂತಿ ಹಚ್ಚಿ ಲಿಂಗಧಾರಣೆ ಮಾಡಿ ಲಿಂಗದೀಕ್ಷೆ ನೀಡಿದರು. ಮಠದ ಕರ್ತೃ ಮುರಿಗಿ ಶಾಂತವೀರ ಸ್ವಾಮೀಜಿ ಗದ್ದುಗೆಗೆ ಪುಷ್ಪಾರ್ಚನೆ ಮಾಡಿದ ರಾಹುಲ್ ಗಾಂಧಿ, ಅಲ್ಲಿ ಕೆಲ ಸಮಯ ಧ್ಯಾನದಲ್ಲಿ ನಿರತರಾದರು. ನಂತರ ಶಿವಮೂರ್ತಿ ಮುರುಘಾ ಶರಣರಲ್ಲಿ ಇಷ್ಟ ಲಿಂಗದ ಬಗ್ಗೆ ಮಾಹಿತಿ ಕೇಳಿದರು.

ಇದನ್ನೂ ಓದಿ: Siddaramotsava: ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಗುಣಗಾನ, ಸಾಮೂಹಿಕ ನಾಯಕತ್ವದ ಬಗ್ಗೆ ಡಿಕೆಶಿ ಜಪ!

ಲಿಂಗಾಯತ ಮತ ಸೆಳೆಯಲು ಕಾಂಗ್ರೆಸ್ ಕಸರತ್ತು

ಕರ್ನಾಟಕದ ಜನಸಂಖ್ಯೆಯ ಶೇಕಡಾ 17 ರಷ್ಟಿರುವ ಲಿಂಗಾಯತರು ರಾಜ್ಯದ ರಾಜಕೀಯ ನಿರ್ಧರಿಸುವಷ್ಟು ಪ್ರಬಲರಾಗಿದ್ದಾರೆ. ಅವರು ಸಾಂಪ್ರದಾಯಿಕವಾಗಿ ಬಿಜೆಪಿ ಮತದಾರರಾಗಿದ್ದಾರೆ. ಚುನಾವಣಾ ಕಣದಲ್ಲಿರುವ ರಾಜ್ಯಕ್ಕೆ ರಾಹುಲ್ ಗಾಂಧಿಯವರ ಭೇಟಿಯೊಂದಿಗೆ, ಕಾಂಗ್ರೆಸ್ ತನ್ನ ಮತದಾರರ ವ್ಯಾಪ್ತಿ ವಿಸ್ತರಿಸಲು ಆಶಿಸುತ್ತಿದೆ. ಮುಂದಿನ ವರ್ಷ ಮೇ ವೇಳೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ ನಡೆಸುತ್ತಿದೆ.
Published by:Annappa Achari
First published: