Murugha Shri case: ಮುರುಘಾ ಸ್ವಾಮೀಜಿಗೆ ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧನ

Murugha Shri case: ಇಂದು ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಮುರುಘಾ ಶರಣರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯ್ತು. ನ್ಯಾಯಾಲಯ ಮುರುಘಾ ಸ್ವಾಮೀಜಿಗಳಿಗೆ ಸೆ.14ವರೆಗೆ ನ್ಯಾಯಾಂಗ ಬಂಧನ (Judicial Custody) ನೀಡಿ ಆದೇಶಿಸಿದೆ.

ಮುರುಘಾ ಶ್ರೀ

ಮುರುಘಾ ಶ್ರೀ

  • Share this:
ಚಿತ್ರದುರ್ಗ ಕೋರ್ಟ್​ನಲ್ಲಿ (Chitradurga Court) ಇಂದು ಬೆಳಗ್ಗೆ 11ಕ್ಕೆ ವಿಚಾರಣೆ ನಡೆಯಿತು. ಈ ಮೊದಲು ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿಗೆ  (Police Custody) ನೀಡಲಾಗಿತ್ತು. ಇಂದು ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಮುರುಘಾ ಶರಣರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯ್ತು. ನ್ಯಾಯಾಲಯ ಮುರುಘಾ ಸ್ವಾಮೀಜಿಗಳಿಗೆ ಸೆ.14ವರೆಗೆ ನ್ಯಾಯಾಂಗ ಬಂಧನ (Judicial Custody) ನೀಡಿ ಆದೇಶಿಸಿದೆ. ಸದ್ಯಕ್ಕೆ ಸ್ವಾಮೀಜಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಸ್ವಾಮೀಜಿಗಳ ಪರ ವಕೀಲರು ಜಾಮೀನಿಗಾಗಿ (Bail) ಅರ್ಜಿ ಸಹ ಸಲ್ಲಿಕೆ ಮಾಡಿದ್ದರು.

ಮಠದಲ್ಲಿ ಮಹಜರು

ಭಾನುವಾರ ಮುರುಘಾ ಮಠಕ್ಕೆ ಆರೋಪಿಯಾಗಿ ಶಿವಮೂರ್ತಿ ಸ್ವಾಮೀಜಿ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಪೊಲೀಸರು ಶಿವಮೂರ್ತಿ ಸ್ವಾಮೀಜಿ ಅವರ ಬೆಡ್​​ರೂಂ, ಬಾತ್​ರೂಂ, ಕೊಠಡಿ ಮಹಜರು ಮಾಡಲಾಗಿತ್ತು. ಸಂತ್ರಸ್ತ ಬಾಲಕಿಯರು ತಮ್ಮ ಹೇಳಿಕೆಯಲ್ಲಿ ನೀಡಲಾದ ಎಲ್ಲಾ ಸ್ಥಳಗಳ ಪರಿಶೀಲನೆ ನಡೆಸಿದರು. ಕೃತ್ಯಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯಗಳ ಸಂಗ್ರಹ ಮಾಡಿರುವ ಮಾಹಿತಿ ಲಭ್ಯವಾಗಿತ್ತು. ಮಠದ ಸಿಬ್ಬಂದಿಯಿಂದ ಕೆಲ ಮಾಹಿತಿ ಸಂಗ್ರಹ ಮಾಡಲಾಗಿದೆ ಎನ್ನಲಾಗಿದೆ.

Murugha Mutt swamiji sent to judicial custody mrq
ಮುರುಘಾ ಶ್ರೀ


ಶ್ರೀಗಳ ಕೊಠಡಿಗೆ ಯಾರಿಗೆಲ್ಲಾ ಪ್ರವೇಶಾವಕಾಶ ಇತ್ತು? ಕೊಠಡಿಗೆ ಸ್ತ್ರೀಯರು ಏನಾದ್ರೂ ಹೋಗ್ತಾ ಇದ್ರಾ‌.?  ಹೋದ್ರೆ ಯಾರನ್ನ ಕರ್ಕೊಂಡು ಹೋಗ್ತಿದ್ರು? ಎಲ್ಲದರ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ  ಕೊಠಡಿಯಲ್ಲಿದ್ದ ಸ್ವಾಮೀಜಿಯ ಬಟ್ಟೆಯನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.

ಇನ್ನೂ ಮಠದಲ್ಲಿ ಮುರುಘಾ ಶ್ರೀಗಳನ್ನು ನೋಡಿದ ಸಿಬ್ಬಂದಿ ಒಂದು ಕ್ಷಣ ಭಾವುಕರಾದರಂತೆ. ಇತ್ತ ಮಠದಲ್ಲಿಯ ಸಿಬ್ಬಂದಿಯನ್ನು ಕಂಡು ಮುರುಘಾ ಶ್ರೀಗಳು ಸಹ ಭಾವುಕರಾದರು ಎನ್ನಲಾಗಿದೆ.

ಇದನ್ನೂ ಓದಿ:  Murugha Shri: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್

ಮೂರನೇ ಆರೋಪಿಯ ಬಂಧನ

ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಮೂರನೇ ಆರೋಪಿ ಬಸವಾದಿತ್ಯ ಸ್ವಾಮಿಯನ್ನು ಭಾನುವಾರ ಹೊಸಪೇಟೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಇಂದು ಕೋರ್ಟ್​ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ. ಕಸ್ಟಡಿಗೆ ಪಡೆದು ಇನ್ನಷ್ಟು ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮುಂದಾಗಬಹುದು.

Murugha Mutt swamiji sent to judicial custody mrq
ಮುರುಘಾ ಮಠ


ಮಠದ ಹಾಸ್ಟೆಲ್​ನಿಂದ ವಿದ್ಯಾರ್ಥಿನಿಯರ ಸ್ಥಳಾಂತರ

ಚಿತ್ರದುರ್ಗ ಮಠದ (Chitradurga Mutt) ಎರಡು ಹಾಸ್ಟೆಲ್​ಗಳಲ್ಲಿದ್ದ 37 ಬಾಲಕಿಯರನ್ನು ಸಮೀಪದ ಸರ್ಕಾರಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಮಠದಿಂದ ಬಸವ ಮತ್ತು ಅಕ್ಕಮಹಾದೇವಿ ಹೆಸರಿನಲ್ಲಿ ಎರಡು ಹಾಸ್ಟೆಲ್​ (Hostel) ಗಳನ್ನು ನಡೆಸಲಾಗುತ್ತಿದೆ. ಪ್ರಕರಣದ ಬೆನ್ನಲ್ಲೇ ಚಿತ್ರದುರ್ಗದ ಜಿಲ್ಲೆಯ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸ್ಥಳಾಂತರಿಸಲಾಗಿತ್ತು. ವಸತಿ ನಿಲಯದಲ್ಲಿರುವ ಮಕ್ಕಳು ಭಯದ ವಾತಾವರಣದಲ್ಲಿದ್ದರು. ಇತ್ತ ಪೋಷಕರು ಸಹ ಆತಂಕದಲ್ಲಿರುವ ಕಾರಣ ಮಕ್ಕಳನ್ನು ಸಮೀಪದ ಸರ್ಕಾರಿ ವಸತಿ ಶಾಲೆಗಳಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:  Kodagu: ವಿದ್ಯಾರ್ಥಿಗಳ ಗದ್ದೆ ನಾಟಿ ಕೆಲಸಕ್ಕೆ ಹುಬ್ಬೇರಿಸಿದ ಗ್ರಾಮಸ್ಥರು 

ಸ್ಥಳಾಂತರಗೊಂಡಿರುವ 38 ಮಕ್ಕಳ ಪೈಕಿ 10 ಮಂದಿ ಅನಾಥರಾಗಿದ್ದು, ಒಬ್ಬರಿಗೆ ತಾಯಿ ಮಾತ್ರ ಇದ್ದಾರೆ. ಹೊಸ ವಾತಾವಾರಣದಲ್ಲಿ ಮಕ್ಕಳು ಹೇಗೆ ಇರುತ್ತಾರೆ ಅನ್ನೋದು ಸಹ ಪೋಷಕರಿಗೆ ಚಿಂತೆಯಾಗಿದೆ.

ಏನಿದು ಪ್ರಕರಣ?

ಮಠದ ಹಾಸ್ಟೆಲ್‌ನಲ್ಲಿ ವಾಸವಿದ್ದ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ನೀಡಿದ ದೂರಿನ ಮೇರೆಗೆ ಅರ್ಚಕ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ (ಪೋಕ್ಸೊ) ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಕಿರಿಯ ಅರ್ಚಕ ಶಿವಮೂರ್ತಿ, ಹಾಸ್ಟೆಲ್ ಮುಖ್ಯಸ್ಥ ಪರಶಿವಯ್ಯ ಬಸವಾದಿತ್ಯ, ಮಠದ ಉದ್ಯೋಗಿ ಅಕ್ಕಮಹಾದೇವಿ ರಶ್ಮಿ, ವಕೀಲ ಗಂಗಾಧರಯ್ಯ ಸೇರಿದಂತೆ ಒಟ್ಟು 5 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ ಮೈಸೂರು ಮೂಲದ ಎನ್‌ಜಿಒ ಒಡನಾಡಿ ಸೇವಾ ಸಂಸ್ಥಾನದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
Published by:Mahmadrafik K
First published: