Murugha Mutt Case: ಮುರುಘಾಶ್ರೀ ಜೈಲುಪಾಲು, ಸ್ವಾಮೀಜಿಗೆ 14 ದಿನ ನ್ಯಾಯಾಂಗ ಬಂಧನ!

ರಾತ್ರಿ 10.05ಕ್ಕೆ ಮಠದಲ್ಲೇ ಸ್ವಾಮೀಜಿಯನ್ನು ಬಂಧಿಸಿದ್ದ ಪೊಲೀಸರು ಮಧ್ಯರಾತ್ರಿ ಮೆಡಿಕಲ್ ಚೆಕಪ್ ಬಳಿಕ ಜಡ್ಜ್​ ಮುಂದೆ ಹಾಜರುಪಡಿಸಿದ್ದರು. ಇಲ್ಲಿ ವಿಚಾರಣೆ ನಡೆಸಿದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯದ ಜಡ್ಜ್ ಬಿ.ಕೆ.ಕೋಮಲಾ ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹೀಗಾಗಿ ಮಧ್ಯರಾತ್ರಿ 2.50ರ ಸುಮಾರಿಗೆ ಚಿತ್ರದುರ್ಗ ಜೈಲಿಗೆ ಸ್ವಾಮೀಜಿಯನ್ನು ರವಾನಿಸಲಾಗಿದೆ.

ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ

ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ

  • Share this:
ಚಿತ್ರದುರ್ಗ(ಸೆ.02):  ಪೋಕ್ಸೋ ಕೇಸ್​​ನಲ್ಲಿ (POCSO case against Murugha Mutt) A 1 ಆರೋಪಿಯಾಗಿದ್ದ ಚಿತ್ರದುರ್ಗದ ಪ್ರತಿಷ್ಠಿತ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ (Shivamurthy Murugha Sharanaru) ಕೊನೆಗೂ ಜೈಲುಪಾಲಾಗಿದ್ದಾರೆ. ಗುರುವಾರ ರಾತ್ರಿ ಮಠದಲ್ಲೇ ಶ್ರೀಗಳನ್ನು ವಿಚಾರಣೆ ನಡೆಸಿ ಬಂಧಿಸಿದ್ದ ಪೊಲೀಸರು, ಮಧ್ಯರಾತ್ರಿ ಮೆಡಿಕಲ್ ಚೆಕಪ್ ಬಳಿಕ ಜಡ್ಜ್​ ಮುಂದೆ ಹಾಜರುಪಡಿಸಿದ್ದರು. ಇಲ್ಲಿ ವಿಚಾರಣೆ ನಡೆಸಿದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯದ ಜಡ್ಜ್ ಬಿ.ಕೆ.ಕೋಮಲಾ ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹೀಗಾಗಿ ಮಧ್ಯರಾತ್ರಿ 2.50ರ ಸುಮಾರಿಗೆ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗ ಜೈಲಿಗೆ ರವಾನಿಸಲಾಗಿದೆ.

ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರು, ಮಠದ ಆಡಳಿತಾಧಿಕಾರಿ ವಿರುದ್ಧ ದೂರು

ಹೌದು ಅತ್ಯಾಚಾರ ಪ್ರಕರಣ ಸಂಬಂಧ ಮುರುಘಾ ಮಠದ ಶ್ರೀಗಳು ಸೇರಿದಂತೆ ಒಟ್ಟು ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕಳೆದ ಎಂಟು ದಿನಗಳ ಹಿಂದೆ ಪ್ರಕರಣ ದಾಖಲಾಗಿತ್ತು. ಹೀಗಿದ್ದರೂ ಈ ಕೇಸ್​ನಲ್ಲಿ ಹೆಚ್ಚಿನ ಬೆಳವಣಿಗೆಗಳಾಗಿರಲಿಲ್ಲ. ಪೊಲೀಸರು ಪ್ರಕರಣದ ತನಿಖೆಯಲ್ಲಿ ವಿಳಂಬ ತೋರುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಹೀಗಿರುವಾಗ ಸಿಪಿಐ ಬಾಲಚಂದ್ರ ನಾಯಕ್ ತಂಡ ಮುರುಘಾಶ್ರೀಗಳನ್ನು ಮಠದಲ್ಲೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿತ್ತು. ಬಳಿಕ ನಿನ್ನೆ ರಾತ್ರಿ 10.05ಕ್ಕೆ ಮಠದಲ್ಲೇ ಸ್ವಾಮೀಜಿಯನ್ನು ಬಂಧಿಸಲಾಗಿತ್ತು.

ಮಧ್ಯರಾತ್ರಿ ಮೆಡಿಕಲ್ ಚೆಕಪ್ ಬಳಿಕ ಜಡ್ಜ್​ ಮುಂದೆ ಹಾಜರು

ನಿನ್ನೆ ರಾತ್ರಿ 10.05ಕ್ಕೆ ಮಠದಲ್ಲೇ ಸ್ವಾಮೀಜಿಯನ್ನು ಬಂಧಿಸಿದ್ದ ಪೊಲೀಸರು ಮಧ್ಯರಾತ್ರಿ ಮೆಡಿಕಲ್ ಚೆಕಪ್ ಬಳಿಕ ಜಡ್ಜ್​ ಮುಂದೆ ಹಾಜರುಪಡಿಸಿದ್ದರು. ಇಲ್ಲಿ ವಿಚಾರಣೆ ನಡೆಸಿದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯದ ಜಡ್ಜ್ ಬಿ.ಕೆ.ಕೋಮಲಾ ಶ್ರೀಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹೀಗಾಗಿ ಮಧ್ಯರಾತ್ರಿ 2.50ರ ಸುಮಾರಿಗೆ ಚಿತ್ರದುರ್ಗ ಜೈಲಿಗೆ ಸ್ವಾಮೀಜಿಯನ್ನು ರವಾನಿಸಲಾಗಿದೆ.

Police Security To Murugha Mutt Increased mrq

ಈ ಮೂವರು ನಾಪತ್ತೆ:

ಇನ್ನು ಮುರುಘಾಶ್ರೀ ಪೋಕ್ಸೋ ಪ್ರಕರಣದ ಐವರು ಆರೋಪಿಗಳಲ್ಲಿ A-3 ಆರೋಪಿ, ಮಠದ ಉತ್ತರಾಧಿಕಾರಿ ಬಸವಾದಿತ್ಯ, A-4 ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಹಾಗೂ A-5 ಆರೋಪಿ ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ. ಇನ್ನು A-1 ಆರೋಪಿಯಾಗಿರುವ ಮುರುಘಾಶ್ರೀ ಯನ್ನು ತಡರಾತ್ರಿ ಬಂಧಿಸಲಾಗಿದೆ. ಅತ್ತ A- 2 ಆರೋಪಿಯಾಗಿರುವ ಲೇಡಿ ವಾರ್ಡನ್ ರಶ್ಮಿ ಸದ್ಯ ಸಾಂತ್ವನ ಕೇಂದ್ರದಲ್ಲಿದ್ದಾರೆ.

ಭಕ್ತವೃಂದಕ್ಕೆ ತೊಂದರೆ ಕೊಡಬಾರದೆಂದು ಶ್ರೀಗಳ ತೀರ್ಮಾನ

ಮುರುಘಾ ಶ್ರೀಗಳ ಬಂಧನದ ಬಳಿಕ ಬಸವೇಶ್ವರ ಆಸ್ಪತ್ರೆ ಸುಪರಿಡೆಂಟ್ ಪಾಲಕ್ಷಪ್ಪ ಪ್ರತಿಕ್ರಿಯಿಸಿದ್ದಾರೆ. ಮುರುಘಾ ಶ್ರೀಗಳು ವಾಲಂಟರಿಯಾಗಿ ಪೋಲೀಸರಿಗೆ ಶರಣಾಗಿದ್ದಾರೆ. ಭಕ್ತವೃಂದಕ್ಕೆ ತೊಂದರೆ ಕೊಡಬಾರದೆಂದು ಮುರುಘಾ ಶ್ರೀಗಳ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು

ಚಿತ್ರದುರ್ಗದಲ್ಲಿ ಹೈ ಅಲರ್ಟ್​

ಇನ್ನು ಪ್ರಕರಣ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂಬ ಕಾರಣದಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಭಾರೀ ಭದ್ರತೆ ಕಲ್ಪಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಮಠದ ಸುತ್ತ ಹಾಗೂ ನ್ಯಾಯಾಲಯದ ಸುತ್ತಲೂ ಪೊಲೀಸ್​ ಸರ್ಪಗಾವಲು ಏರ್ಪಡಿಸಲಾಗಿದೆ. ಇಷ್ಟೇ ಅಲ್ಲದೇ ಪಕ್ಕದ ಜಿಲ್ಲೆಯ ಪೊಲೀಸರನ್ನೂ ಇಲ್ಲಿ ಭದ್ರತೆಗೆ ನೇಮಿಸಲಾಗಿದ್ದು, ಬೆಂಗಳೂರಿನಿಂದ ನಾಲ್ಕು ಕೆಎಸ್​ಆರ್​ಪಿ ಬಸ್​ಗಳನ್ನೂ ರವಾನಿಸಲಾಗಿದೆ.
Published by:Precilla Olivia Dias
First published: