• Home
 • »
 • News
 • »
 • state
 • »
 • Murugha Mutt Case: ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖ?

Murugha Mutt Case: ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖ?

ಶಿವಮೂರ್ತಿ ಮುರುಘಾ ಶರಣರು

ಶಿವಮೂರ್ತಿ ಮುರುಘಾ ಶರಣರು

ಇಬ್ಬರು ಅಪ್ರಾಪ್ತೆಯರ ವೈದ್ಯಕೀಯ ಪರೀಕ್ಷೆ ವರದಿಯಲ್ಲೇನಿದೆ ಎಂಬ ಮಾಹಿತಿ ನ್ಯೂಸ್​ 18 ಕನ್ನಡಕ್ಕೆ ಲಭ್ಯವಾಗಿದೆ. ಹೌದು ಕೋರ್ಟ್​ಗೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬ ಅಂಶ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

 • News18 Kannada
 • 2-MIN READ
 • Last Updated :
 • Chitradurga, India
 • Share this:

ಚಿತ್ರದುರ್ಗ(ಜ.04): ಇಡೀ ರಾಜ್ಯ ಹಾಗೂ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮುರುಘಾ ಸ್ವಾಮೀಜಿ (Murugha Swamiji Case) ಪ್ರಕರಣ ಸಂಬಂಧ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಇಬ್ಬರು ಅಪ್ರಾಪ್ತೆಯರ ವೈದ್ಯಕೀಯ ಪರೀಕ್ಷೆ (Medical Report) ವರದಿಯಲ್ಲೇನಿದೆ ಎಂಬ ಮಾಹಿತಿ ನ್ಯೂಸ್​ 18 ಕನ್ನಡಕ್ಕೆ ಲಭ್ಯವಾಗಿದೆ. ಹೌದು ಕೋರ್ಟ್​ಗೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ ಅಪ್ರಾಪ್ತೆಯರ ಮೇಲೆ ಅತ್ಯಾಚಾರ (Rape) ನಡೆದಿಲ್ಲ ಎಂಬ ಅಂಶ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 


ಕಳೆದ ವರ್ಷ ಸಪ್ಟೆಂಬರ್​ನಲ್ಲಿ ಮುರುಘಾ ಶ್ವಾಮೀಜಿ ವಿರುದ್ಧ ಇಬ್ಬರು ವಿದ್ಯಾರ್ಥಿನಿಯರು ಅತ್ಯಾಚಾರ ಆರೋಪ ಮಾಡಿದ್ದರು. ಶಿವಮೂರ್ತಿ ಸ್ವಾಮೀಜಿ ತಮ್ಮ ಮೇಲ;ಎ ಪದೇ ಪದೇ ಅತ್ಯಾಚಾರ ಮಾಡಿದ್ದಾರೆ ಎಂದು ಇಬ್ಬರೂ ತಮ್ಮ ದೂರಿನಲ್ಲಿ ತಿಳಿಸಿದ್ದು, ಇದರ ಬೆನ್ನಲ್ಲೇ ಚಿತ್ರದುರ್ಗ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಇಬ್ಬರು ಅಪ್ರಾಪ್ತೆಯರ ಪರೀಕ್ಷೆ ನಡೆಸಿದ್ದರು. ಆದರೀಗ ಈ ವರದಿಯಲ್ಲಿ ಸಂತ್ರಸ್ತೆಯರ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ ಎನ್ನಲಾಗಿದೆ.


ಆರೋಪ ಸಾಬೀತಾದ್ರೆ ಸ್ವಾಮೀಜಿಗೆ 20 ವರ್ಷ ಜೈಲು


ಇನ್ನು ಒಂದು ವೇಳೆ ವೈದ್ಯಕೀಯ ವರದಿಯಲ್ಲಿ ಸ್ವಾಮೀಜಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆಸಿರುವುದು ಸಾಬೀತಾದರೆ ಜೀವಾವಧಿ ಅಥವಾ ಕನಿಷ್ಠ ಇಪ್ಪತ್ತು ವರ್ಷ ಜೈ ಜೈಲು ಶಿಕ್ಷೆಯಾಗುತ್ತದೆ  ಎಂಬುವುದು ಉಲ್ಲೇಖನೀಯ. ಒಂದು ವೇಳೆ ಆರೋಪ ಸಾಬೀತಾಗದಿದ್ದರೆ ಅಥವಾ ಲೈಂಗಿಕ ಕ್ರಿಯೆ ನಡೆದಿಲ್ಲ ಎಂದಾದರೆ ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಪ್ರಕರಣದಡಿ ಮೂರರಿಂದ ಐದು ವರ್ಷ ಜೈಲಾಗುವ ಸಾಧ್ಯತೆ ಇದೆ.


ಇದನ್ನೂ ಓದಿ: Murugha Case: ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ: ನ್ಯಾಯ ಕೊಡಿಸಿ ಇಲ್ಲ, ದಯಾ ಮರಣ ನೀಡಿ!


ವಿದ್ಯಾರ್ಥಿನಿಯರು ಮಾಡಿದ ಆರೋಪವೇನು? ಚಾರ್ಜ್​ ಶೀಟ್​ನಲ್ಲೇನಿದೆ?


ಚಾರ್ಜ್ ಶೀಟ್​ನಲ್ಲಿ 16ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆಯಲ್ಲೂ ಗಂಭೀರ ಆರೋಪಗಳು ಕೇಳಿ ಬಂದಿವೆ. ಇದರಲ್ಲಿ ಸಂತ್ರಸ್ತ ಬಾಲಕಿ ನಾನು 7ನೇ ತರಗತಿಯಲ್ಲಿದ್ದಾಗ ಹುಷಾರಿರಲಿಲ್ಲ. ಆಗ ವಾರ್ಡನ್ ರಶ್ಮಿ ಶರಣರ ಬಳಿಗೆ ಹೋಗಲು ಸೂಚಿಸಿದರು. ಹಣ್ಣು ಕೊಡುತ್ತಾರೆಂದು ಶರಣರ ರೂಮಿಗೆ ಕರೆದೊಯ್ದರು. ಹಿಂದಿನ ಬಾಗಿಲಿನಿಂದ ಕರೆದುಕೊಂಡು ಹೋಗಿ ರೂಮಿಗೆ ಕಳಿಸಿದರು. ಶರಣರು ಕುಡಿಯುತ್ತ ಕುಳಿತಿದ್ದರು, ಹಣ್ಣು ಕೊಟ್ಟರು. ಹಣ್ಣು ತಿಂದ ನಂತರ ತಲೆ ಸುತ್ತು ಬಂದಂತಾಯಿತು. ಎಚ್ಚರ ಆದಾಗ ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಬಟ್ಟೆ ಹಾಕಿಕೊಂಡು ನಾನು ಹಾಸ್ಟೆಲ್ ಗೆ ಬಂದೆ ಎಂದು ಆರೋಪಿಸಿದ್ದಾರೆ.


ಮೂರು ತಿಂಗಳ ಬಳಿಕ ಮತ್ತೆ ಕರೆದ ಸ್ವಾಮೀಜಿ


3 ತಿಂಗಳ ಬಳಿಕ ಸ್ವಾಮೀಜಿ ಕರೆಯುತ್ತಿದ್ದಾರೆಂದು ರಶ್ಮಿ ಮತ್ತೆ ಕರೆದೊಯ್ದರು. ರೂಮಿಗೆ ಹೋದಾಕ್ಷಣ ನೀನು ಯಾರಿಗಾದರು ಹೇಳಿದ್ದೀಯಾ ಎಂದು ಕೇಳಿದರು‌. ನಂತರ ಸ್ನಾನಕ್ಕೆ ಹೋಗಿ ಬೆನ್ನು ಉಜ್ಜಲು ಕರೆದರು. ನನಗೂ ಬಟ್ಟೆ ಬಿಚ್ಚಲು ಹೇಳಿದರು, ಬೇಡವೆಂದು ಕಾಲು ಹಿಡಿದೆ. ಸ್ವಾಮೀಜಿ ಆಗ ನನಗೆ ಚಾಕು ತೋರಿಸಿ ಬೆದರಿಸಿದರು. ನಾನು 9ನೇ ತರಗತಿಯಲ್ಲಿದ್ದಾಗ ಮತ್ತೆ ಶರಣರ ರೂಂಗೆ ಹೋಗಲು ರಶ್ಮಿ ಹೇಳಿದರು. ರೂಮಿಗೆ ಹೋದಾಗ ಬಲವಂತದಿಂದ ಚಾಕೋಲೇಟ್ ನೀಡಿದರು. ಚಾಕೊಲೇಟ್ ತಿಂದ ಬಳಿಕ ತಲೆ‌ ಸುತ್ತು ಬಂತು, ನಂತರ‌ ಏನಾಯಿತು ಗೊತ್ತಿಲ್ಲ ಎಂದಿದ್ದಾಳೆ.


ಒಂದನೇ ತರಗತಿ ಮಗುವಿಗೆ ರಕ್ತ ಬರುವಂತೆ ಹೊಡೆದಿದ್ದ ರಶ್ಮಿ


ರಶ್ಮಿ ಬಗ್ಗೆಯೂ ಸಂತ್ರಸ್ತ ಬಾಲಕಿ ಆರೋಪಗಳನ್ನು ಮಾಡಿದ್ದು, ಒಬ್ಬರು ತಪ್ಪು ಮಾಡಿದರೂ ರಶ್ಮಿ ಎಲ್ಲರಿಗೂ ಹೊಡೆಯುತ್ತಿದ್ದರು. ಒಂದನೇ ಕ್ಲಾಸಿನ ಹುಡುಗಿಗೆ ರಕ್ತ ಬರುವಂತೆ ಹೊಡೆದಿದ್ದರು. ಅಪ್ಪನಿಗೆ ಕರೆ ಮಾಡಿದಾಗ ಯಾವುದೊ ಹುಡುಗನಿಗೆ ಕರೆ ಮಾಡಿದ್ದೀಯಾ ಎಂದು ರಶ್ಮಿ ಕೆಟ್ಟದ್ದಾಗಿ ಬಯ್ದರು. ನನ್ನ ಸಹಪಾಠಿಗೆ ಹೇಳಿದಾಗ ಇಬ್ಬರೂ ಹಾಸ್ಟೆಲ್ ಬಿಡಲು ನಿರ್ಧರಿಸಿದೆವು. 24/07/2022ರಂದು ಬೆಂಗಳೂರಿಗೆ ತೆರಳಿದೆವು. ಆಟೋ ಡ್ರೈವರ್ ಒಬ್ಬರು ಕಾಟನ್ ಪೇಟೆ ಠಾಣೆಗೆ ಬಿಟ್ಟರು. ಸೌಭಾಗ್ಯ ಬಸವರಾಜನ್ ನಮ್ಮನ್ನು ಮರಳಿ ಕರೆತಂದರು. ನಮ್ಮ ತಂದೆ ತಾಯಿ ಅವರನ್ನು ಸೌಭಾಗ್ಯ ಮನೆಗೆ ಕರೆಸಿದರು. ಸೌಭಾಗ್ಯ ಅವರ ಮನೆಯಲ್ಲಿ ಇರುತ್ತೇನೆಂದು ಹೇಳಿದೆ. ಕೆಲ ದಿನ ನಾವಿಬ್ಬರೂ ಸೌಭಾಗ್ಯ ಮನೆ & ಕೆಲ ದಿನ ನಮ್ಮ ಮನೆಯಲ್ಲಿದ್ದೆವು. ಸ್ವಾಮೀಜಿಯಿಂದ ಅತ್ಯಾಚಾರದ ವಿಚಾರ ಸೌಭಾಗ್ಯ ಅವರ ಬಳಿ ಹೇಳಿಕೊಂಡೆವು. 26/0/2022ರಂದು ಸೌಭಾಗ್ಯ ಅವರು ಮೈಸೂರಿಗೆ ಕರೆದೊಯ್ದರು. ನಜರಾಬಾದ್ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ಕೇಸ್ ದಾಖಲಿಸಿದೆವು ಎಂದಿದ್ದಾರೆ.


Four year old girl baby found in murugha mutt chitradurga mrq

ಮುರುಘಾ ಮಠಗಂಭೀರ ಆರೋಪ ಮಾಡಿದ 15 ವರ್ಷದ ಸಂತ್ರಸ್ತ ಬಾಲಕಿ


15 ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆಯಲ್ಲಿ ಗಂಭೀರ ಆರೋಪಗಳು ಕೇಳಿ ಬಂದಿವೆ. ಚಾರ್ಜ್​ಶೀಟ್​ನಲ್ಲಿ ಇವುಗಳನ್ನು ದಾಖಲಿಸಿದ್ದು, ಇಬ್ಬರು ಹುಡುಗಿಯರನ್ನು ಕಳಿಸಲು ಮುರುಘಾ ಸ್ವಾಮಿ ಚೀಟಿ ನೀಡುತ್ತಿದ್ದರು. ಪ್ರತಿ ಬಾನುವಾರ್ ಟ್ಯೂಷನ್ ನೆಪದಲ್ಲಿ ರೂಮಿಗೆ ಕರೆಸಿಕೊಳ್ಳುತ್ತಿದ್ದರು. ಮುರುಘಾ ಸ್ವಾಮಿ ಮೊದಲ ಸಲ ಪಕ್ಕದಲ್ಲಿ ಕೂರಿಸಿ ಚೆನ್ನಾಗಿ ಮಾತಾಡಿದರು. ಹಣ್ಣು ಮತ್ತು ಡ್ರೈಫ್ರೂಟ್ಸ್ ತಿನ್ನಲು ಕೊಟ್ಟಿದ್ದರು ಮತ್ತೊಮ್ಮೆ ಹೋದಾಗ ಖಾಸಗಿ ಅಂಗ ಮುಟ್ಟಿದ್ದರು. ಅವರು ಬೆತ್ತಲೆಯಾಗಿ ನನ್ನನ್ನೂ ಬೆತ್ತಲಾಗಿಸಿ ಅತ್ಯಾಚಾರ ಮಾಡಿದ್ರು. ಅಳುತ್ತ ಕುಳಿತಾಗ ನನ್ನೆದುರೇ ಡ್ರಿಂಕ್ಸ್ ಮಾಡಿ ಕೆಟ್ಟದಾಗಿ ಬೈದರು. ಮುಂದೆ ಸಿಸಿ ಕ್ಯಾಮೆರಾ ಇರುವ ಕಾರಣ ಹಿಂದಿನ ಡೋರಿನಿಂದ ಕರೆಸಿಕೊಳ್ಳುತ್ತಿದ್ದರು. ಪ್ರತಿದಿನ ಹೆಸರು ಬರೆದು ಕಳಿಸಿದ್ದವರನ್ನೇ ರಶ್ಮಿ ಕಳಿಸುತ್ತಿದ್ದರು. ಮರುಘಾ ಸ್ವಾಮಿ ಬಳಿಗೆ ಹೋಗಲು ಒಪ್ಪದಿದ್ದರೆ ರಶ್ಮಿ ಕೆಟ್ಟದಾಗಿ ಬೈಯುತ್ತಿದ್ದರು ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ:  Kodagu: ವಿದ್ಯಾರ್ಥಿಗಳ ಗದ್ದೆ ನಾಟಿ ಕೆಲಸಕ್ಕೆ ಹುಬ್ಬೇರಿಸಿದ ಗ್ರಾಮಸ್ಥರು 


ಅಲ್ಲದೇ ನಿನ್ನ ತಮ್ಮನನ್ನು ಚೆನ್ನಾಗಿ ಓದಿಸುತ್ತೇನೆ ಯಾರಿಗೂ ಹೇಳಬೇಡ ಎಂದು ಮುರುಘಾ ಸ್ವಾಮಿ ಹೇಳಿದ್ದರು. ನಾವು ಬಡವರು ಸ್ವಾಮಿ ಎಂದು ಕಾಲು ಹಿಡಿದಿದ್ದೆ. ಆದರೂ ಕೇಳದೆ ನನ್ನ ಬಟ್ಟೆಯನ್ನು ಬಿಚ್ಚಲು ಹೇಳಿದರು. ಮುರುಘಾ ಸ್ವಾಮೀಜಿಗೆ ಎ5 ವಕೀಲ ಗಂಗಾಧರ, ಎ3 ಮಠದ ಉತ್ತರಾಧಿಕಾರಿ (ಬಸವಾದಿತ್ಯ-17), ಎ2 ರಶ್ಮಿ, ಎ4 ಪರಮಶಿವಯ್ಯ ಸಪೋರ್ಟ್ ಮಾಡುತ್ತಿದ್ದರು. ಬೆಂಗಳೂರಿನ (ಎಸ್ತಾರಾಣಿ) ಎಂಬ ವಿದ್ಯಾರ್ಥಿ ನಮ್ಮ ಹಾಸ್ಟೆಲ್ ನಲ್ಲಿದ್ದಳು. ಆ ಬಾಲಕಿಗೆ ರೇಪ್ & ಮರ್ಡರ್ ಮಾಡಿದ್ದಾರೆ ಎಂದು ಹುಡುಗಿಯರು ಮಾತಾಡುತ್ತಿದ್ದರು. ಬಳಿಕ 24/07/2022ರಂದು ರಶ್ಮಿಗೂ ನನಗೂ ಕಿರಿಕ್ ಆಯಿತು, ರಶ್ಮಿ ಹೊಡೆದರು. ನನಗೆ ಸಾಯಬೇಕೆಂದು ಅನ್ನಿಸಿತ್ತು, ರಶ್ಮಿ ಸಾಯಿ ಅಂದರು.


ಸಹಪಾಠಿ ಜೊತೆ ಮಾತನಾಡಿ ಬೆಂಗಳೂರಿಗೆ


ನಾನು ಮತ್ತು ನನ್ನ ಸಹಪಾಠಿ ಮಾತಾಡಿಕೊಂಡೆವು. ಬಳಿಕ ಸಂಜೆ 4:30ಕ್ಕೆ ಮಠದಿಂದ ಹೊರಬಂದು ಇಬ್ಬರೂ ಆಟೋದಲ್ಲಿ ಬಸ್ ಸ್ಟ್ಯಾಂಡಿಗೆ ಹೋದೆವು. ಅಲ್ಲಿಂದ KSRTC ಬಸ್ ನಲ್ಲಿ ರಾತ್ರಿ 11ಕ್ಕೆ ಬೆಂಗಳೂರು ತಲುಪಿದೆವು. ಶರಣರು ಸಿಎಂ ಗೊತ್ತು, ಪೊಲೀಸರು ಗೊತ್ತು ಎಂದಿದ್ದು ನೆನಪಾಯಿತು. ಓರ್ವ ಆಟೋ ಚಾಲಕ ನಮ್ಮನ್ನು ಕಾಟನ್ ಪೇಟೆ ಠಾಣೆಗೆ ಬಿಟ್ಟರು. ಪೊಲೀಸರು ಸೌಭಾಗ್ಯ ಬಸವರಾಜನ್ ಅವರಿಗೆ ಕರೆ ಮಾಡಿದರು. ಬೆಳಗ್ಗೆ 4ಕ್ಕೆ ಸೌಭಾಗ್ಯ ಬೆಂಗಳೂರಿಗೆ ಬಂದು ಕರೆತಂದರು. ನಮ್ಮ ಚಿಕ್ಕಪ್ಪನನ್ನು ಕರೆಸಿ ಹೇಳಿದಾಗ ಸ್ಪಂದಿಸಲಿಲ್ಲ. ಸೌಭಾಗ್ಯ ಹಾಗೂ ಗೆಳತಿಯ ಮನೆಯಲ್ಲಿ ಉಳಿದಿದ್ದೆವು. ಸೌಭಾಗ್ಯ ಅವರು 26/08/2022ರಂದು ಮೈಸೂರಿಗೆ ಕರೆದೊಯ್ದರು. ಒಡನಾಡಿ ಸಂಸ್ಥೆಯಲ್ಲಿ ನಮ್ಮಿಬ್ಬರ ವಿಚಾರಣೆ ನಡೆಯಿತು. ಸಿಡಬ್ಲೂಸಿಗೆ ಕರೆದೊಯ್ದರು, ಬಳಿಕ ನಜರಾಬಾದ್ ಠಾಣೆಯಲ್ಲಿ ದೂರು ದಾಖಲು ಮಾಡಲಾಯ್ತು ಎಂದಿದ್ದಾಳೆ.


Murugha Swamy judicial custody extend 14 days mrq

ಮುರುಘಾ ಸ್ವಾಮೀಜಿ


 ಮುರುಘಾ ಸ್ವಾಮಿ ಲೈಂಗಿಕ ದೌರ್ಜನ್ಯದ ಬಗ್ಗೆ ಸ್ಪೋಟಕ ಮಾಹಿತಿ

2016ರಲ್ಲಿ ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದು 8ನೇ ತರಗತಿ ಅಧ್ಯಯನ ಮಾಡಿದ್ದ ಹಳೇ ವಿದ್ಯಾರ್ಥಿನಿಯಿಂದ ಪ್ರಕರಣ ಸಂಬಂಧ ಹೇಳಿಕೆ ದಾಖಲಿಸಲಾಗಿದೆ. ಇದರಲ್ಲಿ ಆಕೆ ಇಲ್ಲಿ ನಡೆಯುತ್ತಿದ್ದ ದೌರ್ಜನ್ಯವನ್ನು ವಿವರಿಸಿದ್ದಾಳೆ. ವಾರ್ಡನ್​ ರಶ್ಮಿ ಸ್ವಾಮೀಜಿ ಹಣ್ಣು ಕೊಡುತ್ತಾರೆಂದು ಅವರ ರೂಮಿಗೆ ಕಳುಹಿಸುತ್ತಿದ್ದರು. ಎರಡ್ಮೂರು ಸಲ ನಾನು ಹಾಗೂ ನನ್ನ ಸಹಪಾಠಿ ಹೋಗಿದ್ದೆವು. ರಾತ್ರಿ ಊಟದ ಬಳಿಕ ಹಿಂದಿನ ಬಾಗಿಲಿನಿಂದ ಹೋಗುತ್ತಿದ್ದೆವು. ನನ್ನನ್ನು ಸ್ವಾಮೀಜಿ ದೊಣಗ ಎಂದು ಕರೆಯುತ್ತಿದ್ದರು. ರೂಮಿಗೆ ಹೋದ ಬಳಿಕ ನನಗೆ ಬಟ್ಟೆ ಬಿಚ್ಚಲು ಹೇಳುತ್ತಿದ್ದರು. ಸ್ವಾಮೀಜಿ ಅವರ ಬಟ್ಟೆಗಳನ್ನು ಬಿಚ್ಚುತ್ತಿದ್ದರು. ತೊಡೆಯ ಮೇಲೆ ಕೂಡಿಸಿಕೊಂಡು ಖಾಸಗಿ ಅಂಗ ಮುಟ್ಟುತ್ತಿದ್ದರು. ಗಂಡ ಹೆಂಡತಿಯಂತೆ ಸೇರುತ್ತಿದ್ದರು, ಅಲಾರಂ ಇಟ್ಟುಕೊಂಡು ಬೆಳಗ್ಗೆ 5ಕ್ಕೆ ಹಾಸ್ಟಲ್ ಗೆ ಕಳಿಸುತ್ತಿದ್ದರು ಎಂದು ಆರೋಪಿಸಿದ್ದಾಳೆ.


ಇದಾದ ಬಳಿಕ ಅದೊಂದು ದಿನ ಸ್ವಾಮೀಜಿ ಬಳಿ ಬಂದು ಹೋಗುತ್ತಿರುವ ವಿಚಾರ ಬೇರೆಯವರಿಗೆ ಗೊತ್ತಾಗುತ್ತಿದೆ. ಸಿಸಿ ಕ್ಯಾಮಾರದಲ್ಲಿ ಸೆರೆ ಆಗುತ್ತಿದೆ, ಮಲ್ಲಾಡಿಹಳ್ಳಿಗೆ ಹೋಗು ಅಂತ ಪರಮಶಿವಯ್ಯ ಹೇಳಿದ್ದರು ಎಂದೂ ತಿಳಿಸಿದ್ದಾಳೆ ಸಂತ್ರಸ್ತ ಯುವತಿ. ಆದರೀಗ ನನಗೆ ಮದುವೆಯಾಗಿ ಎರಡು ವರ್ಷ ಆಗಿದೆ ಎಂದಿದ್ದಾರೆ.

Published by:Precilla Olivia Dias
First published: