• Home
  • »
  • News
  • »
  • state
  • »
  • Chitradurga: ನಾವು ಇನ್ನೊಬ್ಬರ ಆಸ್ತಿ, ಮಠ ಆಕ್ರಮಿಸಲ್ಲ, ನಮ್ಮದನ್ನು ಬಿಡಲ್ಲ ಎಂದ ಡಾ. ಶಿವಮೂರ್ತಿ ಮುರುಘಾ ಶ್ರೀಗಳು

Chitradurga: ನಾವು ಇನ್ನೊಬ್ಬರ ಆಸ್ತಿ, ಮಠ ಆಕ್ರಮಿಸಲ್ಲ, ನಮ್ಮದನ್ನು ಬಿಡಲ್ಲ ಎಂದ ಡಾ. ಶಿವಮೂರ್ತಿ ಮುರುಘಾ ಶ್ರೀಗಳು

ಡಾ. ಶಿವಮೂರ್ತಿ ಮುರುಘಾ ಶರಣರು

ಡಾ. ಶಿವಮೂರ್ತಿ ಮುರುಘಾ ಶರಣರು

ಬೇರೆಯವರ ಆಸ್ತಿಯನ್ನ ನಾವು ಅತಿಕ್ರಮಿಸಲ್ಲ ನಮ್ಮದಾಗಿದ್ರೆ ನಾವು ಬಿಡಲ್ಲ ಇದು ನಮ್ಮ ನೀತಿ ಇನ್ನೊಬ್ಬರ ಆಸ್ತಿ, ಮಠವನ್ನು ನಾವ್ಯಾಕೆ ಕಬಳಿಸಲು ಹೋಗಬೇಕು? ಅನವಶ್ಯಕವಾಗಿ ಸುಮ್ಮನೆ ತೊಂದ್ರೆ ಕೊಟ್ರೆ ನಾವು ಸುಮ್ಮನಿರಲು ಆಗುವುದಿಲ್ಲ ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶ್ರೀಗಳು ಹೇಳಿದ್ದಾರೆ.

ಮುಂದೆ ಓದಿ ...
  • Share this:

ಚಿತ್ರದುರ್ಗ(ಜೂ.15):  ನಾವು ಅನವಶ್ಯಕವಾಗಿ ಇನ್ನೊಬ್ಬರ ಆಸ್ತಿ, ಮಠವನ್ನು ಆಕ್ರಮಿಸಲ್ಲ, ಆಕ್ರಮಣ, ಅತಿಕ್ರಮಣ ಎರಡೂ ನಮ್ಮ ಮಠದಿಂದ (Mutt) ಇರುವುದಿಲ್ಲ, ಆದರೆ ನಮಗೆ ಸಂಬಂಧಪಟ್ಟದನ್ನ ನಾವು ಬಿಡುವುದಿಲ್ಲ ಬೇರೆಯವರ ಆಸ್ತಿಯನ್ನ ನಾವು ಅತಿಕ್ರಮಿಸಲ್ಲ ನಮ್ಮದಾಗಿದ್ರೆ ನಾವು ಬಿಡಲ್ಲ ಇದು ನಮ್ಮ ನೀತಿ ಇನ್ನೊಬ್ಬರ ಆಸ್ತಿ, ಮಠವನ್ನು ನಾವ್ಯಾಕೆ ಕಬಳಿಸಲು ಹೋಗಬೇಕು? ಅನವಶ್ಯಕವಾಗಿ ಸುಮ್ಮನೆ ತೊಂದ್ರೆ ಕೊಟ್ರೆ ನಾವು ಸುಮ್ಮನಿರಲು ಆಗುವುದಿಲ್ಲ ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶ್ರೀಗಳು (Shivamoorthy Murugha Shri) ಹೇಳಿದ್ದಾರೆ. ತುಮಕೂರು (Tumakuru) ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಪುಟ್ಟೇಶ್ವರ ಮಠದ ಆಸ್ತಿ ವಿವಾದ ಕುರಿತು  ಡಾ.ಶಿವಮೂರ್ತಿ ಮುರುಘಾ ಶರಣರು ಪ್ರತಿಕ್ರಿಯೆ ನೀಡಿದ್ದಾರೆ.


ಮುರುಘಾ ಮಠಕ್ಕೆ ರಾಜ್ಯಾದ್ಯಂತ ಹಾಗೂ ಹೊರ ರಾಜ್ಯದಲ್ಲಿಯೂ ಶಾಖಾ ಮಠಗಳಿವೆ, ಸೋಂಪುರ ಮಠವು ನೂರಾರು ವರ್ಷಗಳಿಂದ ನಮ್ಮ ಶಾಖಾ ಮಠವಾಗಿದೆ, ಹಿಂದಿನ ಸಿದ್ದಲಿಂಗೇಶ್ವರ ಸ್ವಾಮೀಜಿಯನ್ನು ನಮ್ಮ ಪೀಠದಿಂದಲೇ ಸ್ವಾಮಿ ಮಾಡಲಾಗಿದೆ, ಸೋಮಶೇಖರ ಸ್ವಾಮೀಜಿ ಕೂಡ ನಮ್ಮ ಪೀಠದಿಂದ ಉತ್ತಾರಾಧಿಕಾ ಸ್ವೀಕಾರ ಮಾಡಲಾಗಿದೆ, ಈಗಿನ ಬಸವ ಕಿರಣ ಸ್ವಾಮೀಜಿಗಳನ್ನು ನಾವೇ ಸ್ವಾಮೀಜಿ ಮಾಡಿದ್ದೀವಿ, ಎಲ್ಲಾ ರೀತಿಯ ದಾಖಲೆಗಳು ಶ್ರೀ ಮಠದ ಪರವಾಗಿವೆ ಎಂದು ಹೇಳಿದ್ದಾರೆ.


ನಮಗೆ ಸಂಬಂಧಿಸಿದ್ದನ್ನು ಬಿಡಲ್ಲ


ಇನ್ನೂನಾವು ಅನವಶ್ಯಕವಾಗಿ ಇನ್ನೊಬ್ಬರ ಆಸ್ತಿ, ಮಠವನ್ನು ಆಕ್ರಮಿಸಲ್ಲ,ಆಕ್ರಮಣ, ಅತಿಕ್ರಮಣ ಎರಡೂ ನಮ್ಮ ಮಠದಿಂದ ಇರುವುದಿಲ್ಲ, ಆದ್ರೆ ನಮಗೆ ಸಂಬಂಧಪಟ್ಟದನ್ನ ನಾವು ಬಿಡುವುದಿಲ್ಲ, ಬೇರೆಯವರ ಆಸ್ತಿಯನ್ನ ನಾವು ಅತಿಕ್ರಮಿಸಲ್ಲ. ನಮ್ಮದಾಗಿದ್ರೆ ನಾವು ಬಿಡಲ್ಲ ಇದು ನಮ್ಮ ನೀತಿ, ಇನ್ನೊಬ್ಬರ ಆಸ್ತಿ, ಮಠವನ್ನು ನಾವ್ಯಾಕೆ ಕಬಳಿಸಲು ಹೋಗ್ಲಿ, ತಪ್ಪು ತಿಳಿವಳಿಕೆಯಿಂದ ಗೊಂದಲಗಳು ಆಗಿವೆ.


ಕಾನೂನು ಬಾಹಿರ ಕೃತ್ಯಕ್ಕೆ ಶ್ರೀ ಮಠ ಯಾವತ್ತು ಕೂಡ ಮುಂದಾಗಲ್ಲ


ಕಾನೂನು ಬಾಹಿರ ಕೃತ್ಯಕ್ಕೆ ಶ್ರೀ ಮಠ ಯಾವತ್ತು ಕೂಡ ಮುಂದಾಗುವುದಿಲ್ಲ, ಬದಲಿಗೆ ಎಷ್ಟೇ ಊರುಗಳಲ್ಲಿ ಗದ್ದಲ ಆದ್ರೆ ಶಾಂತಿ ಸಾಮರಸ್ಯ ತರುವ ಕೆಲಸ ನಾವು ಮಾಡ್ತೀವಿ, ಅನವಶ್ಯಕವಾಗಿ ಸುಮ್ಮನೆ ತೊಂದ್ರೆ ಕೊಟ್ರೆ ನಾವು ಸುಮ್ಮನಿರಲು ಆಗುವುದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.


ಕಾನೂನಿಗೆ ಹೋಗಿ ಪ್ರಶ್ನೆ ಮಾಡಲಿ


ಇನ್ನೂ ಎಲ್ಲದರ ಮೇಲೆ ಕಾನೂನಿದೆ ಅಲ್ಲೋಗಿ ಪ್ರಶ್ನೆ ಮಾಡಲಿ, ಅವರ ದಾಖಲೆಗಳನ್ನು ಅವರು ಹಾಜರು ಪಡಿಸಲಿ, ನ್ಯಾಯಾಲಯ ಪರಿಶೀಲನೆ ಮಾಡುತ್ತೆ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಇದನ್ನ ಅರ್ಥ ಮಾಡಿಕೊಂಡರೆ ಬಹಳ ಚೆನ್ನಾಗಿರುತ್ತದೆ. ತರಾತುರಿ ಅಂತ ಏನಿಲ್ಲ ನಾವು ಸಹಜವಾಗಿ ಸ್ವಾಮೀಜಿ ನೇಮಕ ಮಾಡಿ ಬಂದಿದ್ದೀವಿ, ಇಲ್ಲಿ ಬಂದಿರುವುದು ಪರಂಪರೆಯ ವಿಚಾರಇವತ್ತು ಗದ್ದಲ ಮಾಡಿದವರೂ ಕೂಡ ಪರಂಪರೆ ಒಪ್ಪಿ, ನಮ್ಮ ಮಠಕ್ಕೆ ಕಮಿಟಿ ಮಾಡಿಕೊಡಿ ಎಂದು ಕೇಳಿದ್ದಾರೆ.


ಇದನ್ನೂ ಓದಿ: Chikkamagaluru: ಮುಸ್ಲಿಂ ಸಮುದಾಯದ ಹಸಿರು ಬಾವುಟಗಳಿದ್ದ ಅರಳಿ ಮರಕ್ಕೆ ಬೆಂಕಿ


ಅದಕ್ಕೆ ಪತ್ರಗಳೆಲ್ಲಾ ನಮ್ಮ ಬಳಿ ಇವೆ, ಯಾರು ಬೇಕಾದ್ರು ಯಾರ ಆಸ್ತಿಯನ್ನು ಲಪಟಾಯಿಸಬಹುದಾ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನೂರಾರು ವರ್ಷಗಳಿಂದ ನಡೆದಿರೋ ವ್ಯವಹಾರ ಹಾಗೂ ಪತ್ರಗಳ ಫೈಲ್ ನಮ್ಮ ಬಳಿಯಿದೆ, ಆ ಹಳ್ಳಿಯ ಜನರಿಗೆ ಎಲ್ಲಾ ಗೊತ್ತಿದೆ, ಇಲ್ಲಿಗೆ ಎರಡು ಮೂರು ಬಾರಿ ಬಂದಿದ್ದಾರೆ.


ದಾಖಲೆ ಇಡ್ಕೊಂಡು ಬಂದರೆ ಫೇಸ್ ಮಾಡಬಹುದು


ಬೆಂಗಳೂರಿನಲ್ಲಿಯೂ ಬಂದು ಅಲ್ಲಿಯೂ ಮೀಟಿಂಗ್ ಆಗಿವೆ. ಚಿತಾವಣೆಗೆ ಒಳಗಾಗಿ ಹಿಂಗೆ ಮಾಡಿದ್ರೆ ನಾವೇನ್ ಮಾಡೋಕ್ ಆಗುತ್ತೆ? ಅವರ ಕಡೆಯ ವಕೀಲರಿಗೆ ಎಲ್ಲಾ ದಾಖಲಾತಿ ತೋರಿಸಿದ್ದೀವಿ‌. ಇದು ಸುಪ್ರೀಂ ಕೋರ್ಟ್ ಗೆ ಹೋದ್ರು ನಿಮ್ಮ ಕಡೆ ಆಗುವುದಿಲ್ಲ ಎಂದು ನಾವು ಹೇಳಿದ್ದೀವಿ. ದಾಖಲೆಗಳಿವೆ ಇಟ್ಕೊಂಡ್ ಮುಂದೆ ಬಂದ್ರೆ ಎಲ್ಲಾ ರೀತಿ ನಾವು ಫೇಸ್ ಮಾಡಬಹುದು ಎಂದಿದ್ದಾರೆ.


ಇದನ್ನೂ ಓದಿ: Hassan Crime News: ತಾಳಿ ಕಟ್ಟಿದ ಪತಿಗೆ ಚಟ್ಟ ಕಟ್ಟಿದ ಪತ್ನಿ; ಪಾತಕಿಗೆ ಅಮ್ಮ, ಮಗ ಸಾಥ್​


ಸುಮ್ನೆ ಮುಂಗೈ ಜೋರು ಮೇಲೆ ಮಠ ನಮ್ಮದು ಅಂದ್ರೆ ಯಾರು ಸುಮ್ಮನೆ ಕೂರಲು ಸಾಧ್ಯ? ನಾಲ್ಕು ಜನ ಯಾರಾದ್ರು ಬರಲಿ ಕೂತು ಮಾತನಾಡೋಣ, ಈಗಾಗಲೇ ಮಾತನಾಡಿದ್ದೀವಿ ಅವರೆ ವಿಚಾರ ಮೀರುತ್ತಾರೆ ಅಂದ್ರೆ ನಾವೇನು ಮಾಡೋಕ್ ಆಗುತ್ತೆ ಎಂದಿದ್ದಾರೆ.

Published by:Divya D
First published: