Murugha Mutt Case: ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ: ಮೂವರು ಆರೋಪಿಗಳು ನಾಪತ್ತೆ?

ಮುರುಘಾಶ್ರೀ ಪೋಕ್ಸೋ ಪ್ರಕರಣದ ಐವರು ಆರೋಪಿಗಳಲ್ಲಿ A-3 ಆರೋಪಿ. ಮಠದ ಉತ್ತರಾಧಿಕಾರಿ ಬಸವಾದಿತ್ಯ, A-4 ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಹಾಗೂ A-5 ಆರೋಪಿ ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ.

 ಮುರುಘಾಶ್ರೀ

ಮುರುಘಾಶ್ರೀ

  • Share this:
ಚಿತ್ರದುರ್ಗ(ಸೆ.01): ರಾಜ್ಯ ಹಾಗೂ ದೇಶಾದ್ಯಂತ ತೀವ್ರ ಸಂಚಲನ ಮೂಡಿಸುತ್ತಿರುವ ಚಿತ್ರದುರ್ಗದ ಮುರುಘಾಶ್ರೀ ಪೋಕ್ಸೋ ಪ್ರಕರಣ (POCSO case against Murugha Mutt) ಸಂಬಂಧ ದಿನಗಳೆದಂತೆ ಮಹತ್ವದ ಬೆಳವಣಿಗೆಳಾಗುತ್ತಿವೆ. ಸದ್ಯ ಲಭ್ಯವಾದ ಮಾಹಿತಿ ಅನ್ವಯ ಪ್ರಕರಣ ಸಂಬಂಧ ಮುರುಘಾಶ್ರೀ (Murugha Mutt Seer) ಸೇರಿ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರಲ್ಲಿ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆನ್ನಲಾಗಿದೆ. ಇವರ ಹುಡುಕಾಟಕ್ಕಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಮತ್ತೊಂದೆಡೆ ಚಿತ್ರದುರ್ಗದಲ್ಲಿರುವ ಮುರುಘಾ ಮಠ ಸೇರಿ ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಈ ಮೂವರು ನಾಪತ್ತೆ:

ಹೌದು ಮುರುಘಾಶ್ರೀ ಪೋಕ್ಸೋ ಪ್ರಕರಣದ ಐವರು ಆರೋಪಿಗಳಲ್ಲಿ A-3 ಆರೋಪಿ. ಮಠದ ಉತ್ತರಾಧಿಕಾರಿ ಬಸವಾದಿತ್ಯ, A-4 ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಹಾಗೂ A-5 ಆರೋಪಿ ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ. ಇನ್ನು A-1 ಆರೋಪಿಯಾಗಿರುವ ಮುರುಘಾಶ್ರೀ ಮುರುಘಾಮಠದಲ್ಲೇ ವಾಸ್ತವ್ಯ ಹೂಡಿದ್ದಾರೆ. ಅತ್ತ A- 2 ಆರೋಪಿಯಾಗಿರುವ ಲೇಡಿ ವಾರ್ಡನ್ ರಶ್ಮಿ ಸದ್ಯ ಸಾಂತ್ವನ ಕೇಂದ್ರದಲ್ಲಿದ್ದಾರೆ.

ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರು, ಮಠದ ಆಡಳಿತಾಧಿಕಾರಿ ವಿರುದ್ಧ ದೂರು

ಮುರುಘಾ ಶ್ರೀ ಪೊಲೀಸರ ವಶಕ್ಕೆ, ವಿಚಾರಣೆ

ಇನ್ನು ಈ ಪ್ರಕರಣ ದಾಖಲಾಗಿ ಸುಮಾರು ಒಂದು ವಾರ ಕಳೆದರೂ ಯಾವುದೇ ಪ್ರಮುಖ ಬೆಳವಣಿಗೆಗಳಾಗಿರಲಿಲ್ಲ. ಈ ಸಂಬಂಧ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿತ್ತು. ಹೀಗಿರುವಾಗ ಮುರುಘಾಶ್ರೀ ಪರ ಅವರನ್ನು ಬೆಂಬಲಿಸಿ ಹಲವರು ಧ್ವನಿ ಎತ್ತಿದ್ದರು. ಆದರೀಗ ಈ ಪರ ವಿರೋಧಗಳ ನಡುವೆ ಸದ್ಯ ಪೊಲೀಸರು ಮುರುಘಾಶ್ರೀಗಳನ್ನು ಮಠದಲ್ಲೇ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆನ್ನಲಾಗಿದೆ. ಈ ವಿಚಾರಣೆ ಸಿಪಿಐ ಬಾಲಚಂದ್ರ ನಾಯಕ್ ತಂಡದಿಂದ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ಅಧಿಕಾರಿಗಳು ಮಪ್ತಿಯಲ್ಲಿ ಮುರುಘಾಶ್ರೀ ಭೇಟಿಗೆ ತೆರಳಿದ್ದಾರೆ.

Police Security To Murugha Mutt Increased mrq

ಇನ್ನು ಯಾವುದೇ ಕ್ಷಣದಲ್ಲಾದರೂ ಶ್ರೀಗಳನ್ನು ಬಂಧಿಸಿ ಇಂದು ರಾತ್ರಿಯೇ ಜಡ್ಜ್ ಎದುರು ಹಾಜರು ಪಡಿಸುವ ಜಾಮೀನು ಸಾಧ್ಯತೆಯೂ ಕಂಡು ಬಂದಿದೆ. ಇನ್ನು ನಾಳೆ ಮುರುಘಾಶ್ರೀಗಳ ಜಾಮೀನು ಅರ್ಜಿ ವಿಚಾರಣೆ ಇದೆ ಎಂಬುವುದೂ ಉಲ್ಲೇಖನೀಯ.

ಇದನ್ನೂ ಓದಿ: Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು

ಚಿತ್ರದುರ್ಗದಲ್ಲಿ ಹೈ ಅಲರ್ಟ್​

ಇನ್ನು ಪ್ರಕರಣ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂಬ ಕಾರಣದಿಂದ ಚಿತ್ರದುರ್ಗ ಜಿಲ್ಲೆಯಾದ್ಯಂತ ಭಾರೀ ಭದ್ರತೆ ಕಲ್ಪಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಮಠದ ಸುತ್ತ ಹಾಗೂ ನ್ಯಾಯಾಲಯದ ಸುತ್ತಲೂ ಪೊಲೀಸ್​ ಸರ್ಪಗಾವಲು ಏರ್ಪಡಿಸಲಾಗಿದೆ. ಇಷ್ಟೇ ಅಲ್ಲದೇ ಪಕ್ಕದ ಜಿಲ್ಲೆಯ ಪೊಲೀಸರನ್ನೂ ಇಲ್ಲಿ ಭದ್ರತೆಗೆ ನೇಮಿಸಲಾಗಿದ್ದು, ಬೆಂಗಳೂರಿನಿಂದ ನಾಲ್ಕು ಕೆಎಸ್​ಆರ್​ಪಿ ಬಸ್​ಗಳನ್ನೂ ರವಾನಿಸಲಾಗಿದೆ. ಮುಂದೆ ಈ ಪ್ರಕರಣದಲ್ಲಿ ಯಾವೆಲ್ಲಾ ಬೆಳವಣಿಗೆಗಳಾಗಲಿವೆ ಎಂಬ ಮಾಹಿತಿ ತಿಳಿಯಲು ನಿಮ್ಮ ನ್ಯೂಸ್​ 18 ಕನ್ನಡ ವೆಬ್​ಸೈಟ್​ಗೆ ಭೇಟಿ ನೀಡಿ.
Published by:Precilla Olivia Dias
First published: