Murugha Mutt Case: ಜೈಲು ಸೇರಿದ ಬೆನ್ನಲ್ಲೇ ಮುರುಘಾ ಸ್ವಾಮೀಜಿಗೆ ಕಾಡಿದ ಅನಾರೋಗ್ಯ, ಆಸ್ಪತ್ರೆಗೆ ಶಿಫ್ಟ್​!

ಜೈಲು ಸೇರಿದ್ದ ಮುರುಘಾ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎದೆ ನೋವು ಹಾಗೂ ಬಿಪಿ ಏರುಪೇರಾದ ಹಿನ್ನೆಲೆ ಮುರುಘಾ ಸ್ವಾಮೀಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೂ ದಾಖಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

 ಶಿವಮೂರ್ತಿ ಮುರುಘಾ ಶರಣರು

ಶಿವಮೂರ್ತಿ ಮುರುಘಾ ಶರಣರು

  • Share this:
ಬೆಂಗಳೂರು(ಸೆ.02):  ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual Assault Case) ಎಸಗಿದ ಆರೋಪದ ಮೇಲೆ ಕರ್ನಾಟಕದ ಪ್ರಭಾವಿ ಮುರುಗ ರಾಜೇಂದ್ರ ಲಿಂಗಾಯತ ಮಠದ (Muruga Rajendra Mutt) ಶಿವಮೂರ್ತಿ ಮುರುಘಾ ಶರಣರನ್ನು (Shivamurthy Sharanaru) ಗುರುವಾರ ತಡರಾತ್ರಿ ಬಂಧಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಆದರೀಗ ಜೈಲು ಸೇರಿದ್ದ ಮುರುಘಾ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಎದೆ ನೋವು ಹಾಗೂ ಬಿಪಿ ಏರುಪೇರಾದ ಹಿನ್ನೆಲೆ ಮುರುಘಾ ಸ್ವಾಮೀಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೂ ದಾಖಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೌದು ಕಳೆದೊಂದು ವಾರದಿಂದ ಇಡೀ ರಾಜ್ಯ ಹಾಗೂ ದೇಶದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಮುರುಘಾ ಸ್ವಾಮೀಜಿ ಅತ್ಯಾಚಾರ ಪ್ರಕರಣದಲ್ಲಿ ನಿನ್ನೆ, ಗುರುವಾರ ಬಹಳ ಪ್ರಮುಖವಾದ ಬೆಳವಣಿಗೆಗಳು ನಡೆದಿತ್ತು. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ತನಿಖೆಯಲ್ಲಾಗುತ್ತಿದ್ದ ವಿಳಂಬ ಧೋರಣೆ ದಲಿತ ಸಂಘಟನೆಗಳು ಸೇರಿದಂತೆ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರತಿಭಟನೆಗಳು ತೀವ್ರಗೊಳ್ಳುವ ಹಂತದಲ್ಲಿ ಎಚ್ಚೆತ್ತ ಪೊಲೀಸರು ಗುರುವಾರ ಸಂಜೆ ಮಪ್ತಿಯಲ್ಲಿ ಮಠಕ್ಕೆ ತೆರಳಿ ಮುರುಘಾ ಸ್ವಾಮೀಜಿಯ ವಿಚಾರಣೆ ಆರಂಭಿಸಿದ್ದರು.

ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರು, ಮಠದ ಆಡಳಿತಾಧಿಕಾರಿ ವಿರುದ್ಧ ದೂರು

ಬಳಿಕ ನಿನ್ನೆ ರಾತ್ರಿ 10.05ಕ್ಕೆ ಮಠದಲ್ಲೇ ಸ್ವಾಮೀಜಿಯನ್ನು ಬಂಧಿಸಿದ್ದ ಪೊಲೀಸರು ಮಧ್ಯರಾತ್ರಿ ಮೆಡಿಕಲ್ ಚೆಕಪ್ ಬಳಿಕ ಜಡ್ಜ್​ ಮುಂದೆ ಹಾಜರುಪಡಿಸಿದ್ದರು. ಇಲ್ಲಿ ವಿಚಾರಣೆ ನಡೆಸಿದ 2ನೇ ಜಿಲ್ಲಾ ಅಪರ ಸತ್ರ ನ್ಯಾಯಾಲಯದ ಜಡ್ಜ್ ಬಿ.ಕೆ.ಕೋಮಲಾ ಸ್ವಾಮೀಜಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಆದರೀಗ ಜೈಲು ಪಾಲಾದ ಬೆನ್ನಲ್ಲೇ ಮುರುಘಾ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಿನ ಕಾರಣದಿಂದ ಜಿಲ್ಲಾಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.ಜಯದೇವ ಆಸ್ಪತ್ರೆಗೆ ಶಿಫ್ಟ್?

ಇನ್ನು ಮುರುಘಾ ಸ್ವಾಮೀಜಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆ ಅಥವಾ ಚಿತ್ರದುರ್ಗದ ಬೇರೆ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಆದರೆ ಇದೆಲ್ಲವೂ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳು ನೀಡುವ ವರದಿ ಮೇಲೆ ನಿಂತಿದೆ. ಸದ್ಯದ ಆರೋಗ್ಯ ಸ್ಥಿತಿ ಯಾವ ರೀತಿ ಇದೆ ಅಂತ ಜೈಲಾಧಿಕಾರಿಗಳಿಗೆ ರಿಪೋರ್ಟ್ ಕೊಡುತ್ತಾರೆ. ಒಂದು ವೇಳೆ ಬೇರೆ ಆಸ್ಪತ್ರೆಗೆ ಶಿಫ್ಟ್​ ಮಾಡುವ ಅಗತ್ಯವಿದ್ದರೆ ಕೋರ್ಟ್​ಗೆ ಮಾಹಿತಿ ನೀಡಬೇಕಾಗುತ್ತದೆ.

ಏನಿದು ಪ್ರಕರಣ?

ಮಠದ ಹಾಸ್ಟೆಲ್‌ನಲ್ಲಿ ವಾಸವಿದ್ದ ಇಬ್ಬರು ಶಾಲಾ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ನೀಡಿದ ದೂರಿನ ಮೇರೆಗೆ ಅರ್ಚಕ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ (ಪೋಕ್ಸೊ) ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಕಿರಿಯ ಅರ್ಚಕ ಶಿವಮೂರ್ತಿ, ಹಾಸ್ಟೆಲ್ ಮುಖ್ಯಸ್ಥ ಪರಶಿವಯ್ಯ ಬಸವಾದಿತ್ಯ, ಮಠದ ಉದ್ಯೋಗಿ ಅಕ್ಕಮಹಾದೇವಿ ರಶ್ಮಿ, ವಕೀಲ ಗಂಗಾಧರಯ್ಯ ಸೇರಿದಂತೆ ಒಟ್ಟು 5 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ ಮೈಸೂರು ಮೂಲದ ಎನ್‌ಜಿಒ ಒಡನಾಡಿ ಸೇವಾ ಸಂಸ್ಥಾನದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು

ಇದಕ್ಕೂ ಮುನ್ನ ಗುರುವಾರ ಶಿವಮೂರ್ತಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಚಿತ್ರದುರ್ಗದ ಸ್ಥಳೀಯ ನ್ಯಾಯಾಲಯವು ಸೆಪ್ಟೆಂಬರ್ 2 ಕ್ಕೆ ಮುಂದೂಡಿತು. ಬಂಧನಕ್ಕೆ ಕೆಲ ದಿನಗಳ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಶಿವಮೂರ್ತಿ, ‘ಮಠದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ 15 ವರ್ಷಗಳಿಂದ ನಡೆಯುತ್ತಿದೆ. ಮಠದ ಒಳಗಿನ ಈ ಷಡ್ಯಂತ್ರಗಳು ಬಹಿರಂಗವಾಗಬಾರದಿತ್ತು. ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿರುವುದರಿಂದ ನಾನು ನಿರ್ಮಲವಾಗಿ ಹೊರಬರುತ್ತೇನೆ ಎಂದು ನಾನು ಹೇಳಬೇಕಾಗಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನೆರವಾಗಲಿದೆ. ಏಕೆಂದರೆ ಸತ್ಯವು ಮೇಲುಗೈ ಸಾಧಿಸುತ್ತದೆ ಮತ್ತು ನಮ್ಮ ಮುಗ್ಧತೆ ಸಾಬೀತಾಗುತ್ತದೆ ಎಂದಿದ್ದಾರೆ.
Published by:Precilla Olivia Dias
First published: