• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Murugha Mutt Case: ಸ್ವಾಮೀಜಿ ಬಂಧನ ಗೆಲುವಲ್ಲ, ಅವಮಾನ; ವಂಚಿಸಿದವರ ಬಂಧನ ಆದ ಸಮಾಧಾನ ಇದೆ: ಪರಶು

Murugha Mutt Case: ಸ್ವಾಮೀಜಿ ಬಂಧನ ಗೆಲುವಲ್ಲ, ಅವಮಾನ; ವಂಚಿಸಿದವರ ಬಂಧನ ಆದ ಸಮಾಧಾನ ಇದೆ: ಪರಶು

ಮುರುಘಾ ಸ್ವಾಮೀಜಿ

ಮುರುಘಾ ಸ್ವಾಮೀಜಿ

ಮುರುಘಾ ಸ್ವಾಮೀಜಿ ಬಂಧನ ಆಗಿದ್ದು ಸ್ವಾಗತ, ಇದು ನಮ್ಮ ಸಂಸ್ಥಗೆ ಸಿಕ್ಕಿದ ಜಯ ಅಲ್ಲ, ಮಕ್ಕಳ ಹೋರಾಟಕ್ಕೆ ಸಿಕ್ಕ ಜಯ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಹೇಳಿದ್ದಾರೆ. ಇನ್ನು ಮುಂದೆ ಈ ಪ್ರಕರಣದ ತನಿಖೆ ವೇಗ ಪಡೆಯಲಿದೆ ಎಂದಿದ್ದಾರೆ.

  • Share this:

ಚಿತ್ರದುರ್ಗ(ಸೆ.02): ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual Assault Case) ಎಸಗಿದ ಆರೋಪದ ಮೇಲೆ ಕರ್ನಾಟಕದ ಪ್ರಭಾವಿ ಮುರುಗ ರಾಜೇಂದ್ರ ಲಿಂಗಾಯತ ಮಠದ (Muruga Rajendra Mutt) ಶಿವಮೂರ್ತಿ ಮುರುಘಾ ಶರಣರನ್ನು (Shivamurthy Sharanaru) ಗುರುವಾರ ತಡರಾತ್ರಿ ಬಂಧಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಆದರೀಗ ಜೈಲು ಸೇರಿದ್ದ ಮುರುಘಾ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಿರುವಾಗ ನ್ಯೂಸ್​ 18 ಜೊತೆ ಮಾತನಾಡಿದ ಒಡನಾಡಿ ಸಂಸ್ಥೆಯ ಸಂಸ್ಥಾಪಕ ಪರಶು ಮುರುಘಾ ಸ್ವಾಮೀಜಿ ಬಂಧನ ಆಗಿದ್ದು ಸ್ವಾಗತ, ಇದು ನಮ್ಮ ಸಂಸ್ಥಗೆ ಸಿಕ್ಕಿದ ಜಯ ಅಲ್ಲ, ಮಕ್ಕಳ ಹೋರಾಟಕ್ಕೆ ಸಿಕ್ಕ ಜಯ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಹೇಳಿದ್ದಾರೆ. ಇನ್ನು ಮುಂದೆ ಈ ಪ್ರಕರಣದ ತನಿಖೆ ವೇಗ ಪಡೆಯಲಿದೆ ಎಂದಿದ್ದಾರೆ.


ಹೌದು ಸ್ವಾಮೀಜಿ ಬಂಧನ ಸಂಬಂಧ ಮಾತನಾಡಿದ ಪರಶು ಈ ಪ್ರಕರಣ ಸಂಬಂಧ ನಾವು ಬಹಳ ಎಚ್ಚರಿಕೆಯಿಂದ ಮಾತನಾಡಬೇಕಾಗುತ್ತದೆ. ಮುರುಘಾ ಶ್ರೀಗಳ ಬಂಧನ ಯಾವುದೇ ಗೆಲುವಿನ ಪ್ರಶ್ನೆ ಅಲ್ಲ, ಅವಮಾನದ ಪ್ರಶ್ನೆ. ಮಕ್ಕಳನ್ನು ವಂಚಿಸಿದವರ ಬಂಧನ ಆಗಿದೆ. ಅದು ಬಿಟ್ಟು ಬೇರೇನೂ ಅಲ್ಲ. ಅದಕ್ಕೂ ಮುಖ್ಯವಾಗಿ ಅಪಾರ ಭಕ್ತರ, ಜನರ ನಂಬಿಕೆಯನ್ನು ಡ್ಯಾಮೇಜ್​ ಮಾಡಿದ್ದಾರೆ ಎಂಬುವುದನ್ನು ಗಮನಿಸಲೇಬೇಕಾಗುತ್ತದೆ. ಸಾವಿರಾರು ಜನರ, ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಈ ವಿಚಾರದಿಂದ ನಾನೂ ನೊಂದಿದ್ದೇನೆ. ಇದರಿಂದಾಗುವ ಲಾಭ, ನಷ್ಟಗಳ ಪ್ರಶ್ನೆಗಿಂತ ಹೆಚ್ಚಾಗಿ ಸ್ವಾಮೀಜಿ ಈ ರೀತಿ, ಅದರಲ್ಲೂ ಮಕ್ಕಳ ವಿಚಾರದಲ್ಲಿ ವಂಚಿಸಿದರಲ್ಲ ಎಂಬುವುದೇ ಬಹಳ ದುಃಖ ಉಂಟು ಮಾಡುತ್ತಿದೆ ಎಂದಿದ್ದಾರೆ. ಇನ್ನು ಆಗಸ್ಟ್​ 26ನೇ ತಾರೀಕಿನಂದು ಈ ಒಡನಾಡಿ ಸಂಸ್ಥೆ ಮೂಲಕವೇಋ ಮಕ್ಕಳ ದೌರ್ಜನ್ಯ ಪ್ರಕರಣ ಸಂಬಂಧ ಮುರುಘಾ ಸ್ವಾಮೀಜಿ ಸೇರಿ ಐದು ಜನರ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು ಎಂಬುವುದು ಉಲ್ಲೇಖನೀಯ.


ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರು, ಮಠದ ಆಡಳಿತಾಧಿಕಾರಿ ವಿರುದ್ಧ ದೂರು


ರಾಜಕೀಯ ನಾಯಕರು ಅಪಾರ ನಂಬಿಕೆ ಇಟ್ಟಿದ್ದರು


ರಾಜಕೀಯ ದುರೀಣರೂ ಕೂಡಾ ಈ ಸ್ವಾಮೀಜಿಯ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಪ್ರಕರಣ ಸಂಬಂಧ ಅವರು ಕೊಟ್ಟ ಹೇಳಿಕೆಗಳೂ ಈ ನಂಬಿಕೆ ಆಧಾರದಲ್ಲೇ ನೀಡಿದ್ದರು. ಆದರೀಗ ಈ ಎಲ್ಲಾ ನಂಬಿಕೆಗಳು ಹುಸಿಯಾಗಿವೆ. ಯಾವುದೇ ಧರ್ಮದ ಗುರು ಸತ್ಯದ, ವಿಚಾರದ ಪರವಾಗಿದ್ದಾರೆ. ಬಸವ ತತ್ವ, ವಚನ ತತ್ವ ನಂಬಿದ್ದಾರೆ ಎನ್ನುವ ಕಾರಣದಿಂದ ರಾಜಕೀಯ ನಾಯಕರು ಅವರ ಪರವಾಗಿ ಅಂತಹ ಹೇಳಿಕೆ ನೀಡಿರಬಹುದು. ಅದೇ ಕಾರಣದಿಂದ ತನಿಖಾಧಿಕಾರಿಗಳ ಮೇಲೆ ಒತ್ತಡವೂ ಬಿದ್ದಿರಬಹುದು. ಆದರೆ ಅವರಿಗೂ ಸತ್ಯ ತಿಳಿಯುತ್ತದೆ ಎಂಬ ದೃಢ ನಂಬಿಕೆ ನನಗಿತ್ತು. ಇಂದು ಅದು ಅವರಿಗೆ ತಿಳಿದಿದೆ. ಇದರಿಂದಾಗಿ ಇದು ಮಕ್ಕಳಿಗೆ ಸಿಕ್ಕ ಜಯವೇ ಹೊರತು, ನಮ್ಮಂತಹ ಚಿಕ್ಕ ಸಂಸ್ಥೆಗೆ ಸಿಕ್ಕ ಜಯ ಎಂದು ಹೇಳಲಾರೆ. ಇದು ಎಲ್ಲಾ ತಾಯಂದಿರಿಗೆ ಹಾಗೂ ಮಾನವೀಯ ಮನಸುಗಳಿಗೆ ಸಿಕ್ಕ ಸಣ್ಣ ಜಯ ಎಂದಿದ್ದಾರೆ.



ಜನ ದಂಗೆ ಎದ್ದರೆ ಯಾವ ಜಾತಿಯೂ ಮುಖ್ಯವಾಗಲ್ಲ


ನಿರ್ಲಕ್ಷ್ಯದಿಂದ ಈ ಪ್ರಕರಣ ಮುಚ್ಚಿ ಹೋಗುತ್ತೆ ಎಂದು ಎಲ್ಲರೂ ಕೈ ಚೆಲ್ಲಿದ್ದರು. ಆದರೆ ಒಂದು ಮಾಧ್ಯಮಗಳ ಹಾಗೂ ಜನಸಾಮಾನ್ಯರ ಮೂಲಕ ಜಯ ಸಿಗುತ್ತದೆ, ದಂಗೆ ಎದ್ದರೆ ಯಾವ ಧರ್ಮವನ್ನಾಗಲೀ, ಯಾವ ಜಾತಿಯನ್ನಾಗಲೀ, ಯಾವ ವಿಚಾರವನ್ನಾಗಲೀ ಜನರು ಗಮನ ಹರಿಸುವುದಿಲ್ಲ. ಇಂತಹ ವಿಚಾರದಲ್ಲಿ ಜನರು ಸಂಘಟಿತರಾಗುತ್ತಾರೆ. ಮಕ್ಕಳ ಪರವಾಗಿ ತುಡಿಯುವ ಮನಸ್ಸುಗಳು, ಅವರ ನೋವನ್ನು ಅರ್ಥ ಮಾಡಿಕೊಳ್ಳುವವರು, ಮಕ್ಕಳ ಪರ ಭಾವನೆ ಇಟ್ಟುಕೊಂಡವರೆಲ್ಲರಿಗೂ ಸಂದ್ ಜಯವಿದು. ಕಳೆದ ಆರು ದಿನಗಳಿಂದ ಮಲಗದ ಅವರು, ಇಂದು ನೆಮ್ಮದಿಯಿಂದ ಮಲಗುತ್ತಾರೆ ಎಂದು ಹೇಳಿದ್ದಾರೆ.


ರಾಜಕೀಯ ನಾಯಕರು ಮಕ್ಕಳ ಮಾತನ್ನು ಆಲಿಸಬೇಕಿತ್ತು


ಈ ಮಠ, ಇಲ್ಲಿನ ಈ ಸ್ವಾಮೀಜಿ ನಂಬಿಕೆ ದ್ರೋಹ ಮಾಡುವುದಿಲ್ಲ ಎಂಬ ನಂಬಿಕೆ ರಾಜಕೀಯ ನಾಯಕರಲ್ಲಿ ನಂಬಿಕೆ ಇತ್ತು. ಅದರಿಂದಲೇ ಅವರು ಈ ಬಗ್ಗೆ ತನಿಖೆ ನಡೆಸುವಾಗ ಎಚ್ಚರಿಕೆಯಿಂದಿರಿ ಎಂಬ ಸಂದೇಶ ರವಾನಿಸುತ್ತಿದ್ದರು. ಅವರಿಂದ ತಪ್ಪಾಗುವ ಸಾಧ್ಯತೆ ಕಡಿಮೆ ಇದೆ ಎಂಬ ಅಪಾರ ನಂಬಿಕೆಯಿಂದ ಹೀಗಾಗಿದೆ. ಇದೇ ಕಾರಣದಿಂದ ತನಿಖೆ ನಿಧಾನವಾಗಿ ಸಾಗಿದೆ. ಒಂದು ಜವಾಬ್ದಾಯಿತುತ ಸ್ಥಾನದಲ್ಲಿರುವವರು ಇಂತಹ ಚಟುವಟಿಕೆ ನಡೆಸಿದ್ದಾರೆಂದಾಗ ಒಂದೇ ಬಾರಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ನಾವು ಯೋಚಿಸಬೇಕು. ಅವರನ್ನು ನಾವು ಅವಮಾನಿಸುತಯ್ತಿದ್ದೇವಾ? ಅಂತಹ ವ್ಯಕ್ತಿ ರೇಪ್​ ಮಾಡಲು ಸಾಧ್ಯವಾ? ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆದರೆ ಅದೆಷ್ಟೇ ದೊಡ್ಡ ನಂಬಿಕೆ ಮಠದ ಸ್ವಾಮೀಜಿ ಮೇಲಿದ್ದರೂ ಮಕ್ಕಳ ನೋವನ್ನೂ ಆಲಿಸಬೇಕು. ಆದರೆ ಅವರು ಅಷ್ಟೊಂದು ಗಮನ ಹರಿಸಲಿಲ್ಲ. ಇದೊಂದೇ ಅವರು ಮಾಡಿದ ತಪ್ಪು ಎಂದು ನೋವು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರಿಂದ ದೂರು


ಅನೇಕ ಮಕ್ಕಳ ನೋವು ಅಡಗಿದೆ

top videos


    ಇದು ಕೇವಲ ಒಂದು ಎರಡು ಮಕ್ಕಳ ಪ್ರಕರಣ ಅಲ್ಲ, ಅಲ್ಲಿ ಬಹಳಷ್ಟು ಮಕ್ಕಳಿದ್ದಾರೆ. ಅವರೆಲ್ಲಾ ನೊಂದಿದ್ದಾರೆ, ನಲುಗಿದ್ದಾರೆ. ಅಲ್ಲಿ ನ್ಯಾಯ ಸಿಗಲಿಕ್ಕಿಲ್ಲ ಎಂದು ಮೌನ ವಹಿಸಿದ್ದಾರೆ. ಆ ಎಲ್ಲಾ ಮಕ್ಕಳನ್ನು ಸಂಗ್ರಹಿಸಿ ಏನೆಲ್ಲಾ ಆಗಿದೆ ಎಂದು ಕೇಳಿ ಅವರಿಗೆ ಸಮಾಧಾನ ಮಾಡಿ, ತಿಳಿ ಹೇಳಬೇಕು. ಅವರ ಜೀವನ ಬಹಳ ದೊಡ್ಡದಿದೆ. ಇದು ನಮ್ಮ ಜವಾಬ್ದಾರಿ ಎಂದಿದ್ದಾರೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು