Murugha Mutt Case: ಮುರುಘಾ ಸ್ವಾಮೀಜಿಯ ಪ್ರಕರಣದ ಬಗ್ಗೆ ಮಾತನಾಡೋಕೆ ವಾಕರಿಕೆ ಎಂದ ಈಶ್ವರಪ್ಪ!

ಮುರುಘಾ ಸ್ವಾಮೀಜಿಯನ್ನು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಇದರ ನಡುವೆ ಮುರುಘಾ ಸ್ವಾಮೀಜಿಯ ಈ ಪ್ರಕರಣದ ಬಗ್ಗೆ ಯಾವೊಬ್ಬ ನಾಯಕರು ತುಟಿ ಬಿಚ್ಚುತ್ತಿಲ್ಲ. ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರ ನಡುವೆ ಈ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಅಂತಾ ಈಶ್ವರಪ್ಪ ಹೇಳಿದ್ದಾರೆ.

ಮುರುಘಾ ಸ್ವಾಮೀಜಿ

ಮುರುಘಾ ಸ್ವಾಮೀಜಿ

  • Share this:
ಮುರುಘಾ ಸ್ವಾಮೀಜಿಗೆ (Murugha Shri) ಅತ್ಯಾಚಾರ ಕೇಸ್ (Rape Case) ಕಂಟಕ ಹೆಚ್ಚಾಗಿದೆ. ಚಿತ್ರದುರ್ಗ ಕೋರ್ಟ್ ಸ್ವಾಮೀಜಿಗೆ ಶಾಕ್ ಕೊಟ್ಟಿದೆ. ನ್ಯಾಯಾಲಯ ಮುರುಘಾ ಸ್ವಾಮೀಜಿಯನ್ನು ಮೂರು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ (Police Custody) ಒಪ್ಪಿಸಿದೆ. ಇತ್ತ ಬೆಳಗ್ಗೆಯಿಂದಲೇ ಡಿವೈಎಸ್ಪಿ ಕಚೇರಿಯಲ್ಲಿ ಮುರುಘಾ ಶರಣರನ್ನು ವಿಚಾರಣೆಗೆ (Enquiry) ಒಳಪಡಿಸಲಾಗಿದೆ. ಪ್ರಕರಣದ ತನಿಖಾಧಿಕಾರಿ ಆಗಿರುವ ಡಿವೈಎಸ್ಪಿ ಅನಿಲ್ ಕುಮಾರ್ ಪ್ರಶ್ನೆಗಳ ಪಟ್ಟಿಯನ್ನೇ ಇರಿಸಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರಿಗೆ (BJP Leaders)ಈ ಬಗ್ಗೆ ಏನೂ ಮಾತನಾಡದಂತೆ ಹೈಕಮಾಂಡ್ ಸೂಚಿಸಿದೆ. ಕಾಂಗ್ರೆಸ್ (Congress) ಕೂಡ ಮೌನ ತಾಳಿದೆ. ಹೀಗಿರೋವಾಗ ಇಂದು ಈಶ್ವರಪ್ಪ (Eshwarappa) ಪ್ರತಿಕ್ರಿಯಿಸಿದ್ದಾರೆ. ಮುರುಘಾ ಪ್ರಕರಣ ಮುಗಿದು ಹೋಗಿರುವುದು. ಅದರ ಬಗ್ಗೆ ಮಾತನಾಡುವುದಕ್ಕೆ ವಾಕರಿಕೆಯಾಗ್ತಿದೆ. ಅದಕ್ಕೆ ಇನ್ನೊಂದು ಪದ ಅಂದ್ರೆ ಅನಿಷ್ಠ ಅಂತಾ ಹೇಳಿದ್ದಾರೆ.

ಮುರುಘಾ ಸ್ವಾಮೀಜಿಯನ್ನು ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಇದರ ನಡುವೆ ಮುರುಘಾ ಸ್ವಾಮೀಜಿಯ ಈ ಪ್ರಕರಣದ ಬಗ್ಗೆ ಯಾವೊಬ್ಬ ನಾಯಕರು ತುಟಿ ಬಿಚ್ಚುತ್ತಿಲ್ಲ. ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರ ನಡುವೆ ಈ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಅಂತಾ ಈಶ್ವರಪ್ಪ ಹೇಳಿದ್ದಾರೆ.

ಮಠದ ಸ್ವಾಮಿಗಳು ಅಂದ್ರೆ ನನಗೆ ದೇವರಿದ್ದಂತೆ- ಈಶ್ವರಪ್ಪ
ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಮುರುಘಾ ಸ್ವಾಮೀಜಿ ಪ್ರಕರಣದ ಬಗ್ಗೆ ಮಾತನಾಡುವುದಕ್ಕೆ ವಾಕರಿಕೆಯಾಗುತ್ತಿದೆ. ಅದಕ್ಕೆ ಇನ್ನೊಂದು ಪದ ಅಂದ್ರೆ ಅನಿಷ್ಠ. ಮಠದ ಸ್ವಾಮಿಗಳು ಅಂದ್ರೆ ನನಗೆ ದೇವರಿದ್ದಂತೆ ಅಂತಾ ಹೇಳಿದ್ದಾರೆ.

Murugha Matt Case ex minister Eshwarappa said that talking about Swamiji s case is nauseating
ಕೆ ಎಸ್ ಈಶ್ವರಪ್ಪ


ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಪುರುಷತ್ವ ಪರೀಕ್ಷೆ; ಶರಣರ ಮುಂದೆ ತನಿಖಾಧಿಕಾರಿಗಳಿಂದ ಪ್ರಶ್ನೆಗಳ ಸುರಿಮಳೆ

ಮುರುಘಾ ಶ್ರೀ ಬಗ್ಗೆ ನನಗೆ ಗೌರವ ಕಡಿಮೆ ಆಗಿಲ್ಲ. ತನಿಖೆ ನಡೆಯುತ್ತಿದೆ. ಸತ್ಯವೋ ಸುಳ್ಳೋ ಹೊರಗೆ ಬರಲಿ. ಮಠ ಮಂದಿರ ಭಕ್ತಿ, ಜಾಗೃತಿ ಉಂಟು ಮಾಡುತ್ತದೆ. ಮುರುಘಾ ಮಠದ ಪ್ರಕರಣ ಸುಳ್ಳಾಗಲಿ ಎಂದು ಕೇಳಿಕೊಳ್ಳುತ್ತೇನೆ ಅಂತಾ ಹೇಳಿದರು.

ಮುಂದೆನೂ ಮುರುಘಾ ಮಠಕ್ಕೆ ಹೋಗ್ತೀನಿ- ಎಂ.ಬಿ.ಪಾಟೀಲ್
ಚಿತ್ರದುರ್ಗ ಮುರುಘಾ ಮಠ ಬಹಳ ಐತಿಹಾಸಿಕ ಮಠ. 5 ಸಾವಿರ ವಿರಕ್ತ ಶಾಖಾ ಮಠ ಹೊಂದಿದ್ದಂತಹ ದೊಡ್ಡ ಮಠ. ಅಲ್ಲಿ ಯಾರು ಇರ್ತಾರೆ, ಯಾರು ಇರಲ್ಲ ಅನ್ನೋದು ಮುಖ್ಯವಲ್ಲ. ನಾಳೆ ನಾನು ಚಿತ್ರದುರ್ಗಕ್ಕೆ ಹೋದರೆ ಮುರುಘಾ ಮಠಕ್ಕೆ ಹೋಗ್ತೀನಿ ಅಂತಾ ತುಮಕೂರಿನಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಮುರುಘಾ ಮಠದಲ್ಲಿ ಗದ್ದುಗೆಯಲ್ಲಿ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತೇನೆ. ರಾಹುಲ್ ಗಾಂಧಿ ಮಠಕ್ಕೆ ಬಂದು ಆಶೀರ್ವಾದ ಪಡೆದಿದ್ದಾರೆ. ಆ ಮಠಕ್ಕೆ ಎಲ್ಲಾ ಪಕ್ಷದವರು ಹೋಗಿದ್ದಾರೆ, ಮುಂದೆನೂ ಕೂಡ ಹೋಗ್ತಾರೆ. ಯಡಿಯೂರಪ್ಪ, ಅಮಿತ್ ಷಾ, ರಾಹುಲ್ ಗಾಂಧಿ ಒಳಗೊಂಡತೆ ನಾನು ಕೂಡ ಮಠಕ್ಕೆ ಹೋಗಿದ್ದೆ ಅಂತಾ ತಿಳಿಸಿದ್ರು.

ಇದನ್ನೂ ಓದಿ: ಸಾಯಿಯಲ್ಲ, ಈತ ಪ್ರೇಮಸಾಯಿಯಂತೆ; ಮಹಿಳೆಗೆ ಕಿರುಕುಳ, ಒಂದೂವರೆ ಕೋಟಿ ವಂಚಿಸಿದ ನಕಲಿ ಬಾಬಾ!

ಮುರುಘಾ ಸ್ವಾಮೀಜಿಯ ಪುರುಷತ್ವ ಪರೀಕ್ಷೆ
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಶಿವಮೂರ್ತಿ ಶರಣರ ಪುರುಷತ್ವ ಪರೀಕ್ಷೆ ನಡೆದಿದೆ. ಡಾ.ವೇಣು ಅವರ ನೇತೃತ್ವದಲ್ಲಿ ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಆದರೆ ಇನ್ನೂ ಪುರುಷತ್ವ ಪರೀಕ್ಷೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿಲ್ಲ. ಮತ್ತೊಂದು ಕಡೆ ಶರಣದ ರಕ್ತ, ಕೂದಲು ಮತ್ತು ಉಗುರಿನ ಮಾದರಿಯನ್ನು ಸಂಗ್ರಹಿಸ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ.

ಇಂದು ಮಠದಲ್ಲಿ ಮಹಜರು ಸಾಧ್ಯತೆ
ಇಂದು ಸ್ಥಳ ಮಹಜರು ನಡೆಸಲು ಮುರುಘಾ ಶರಣರನ್ನು ಮಠಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಮಠದ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಸಂತ್ರಸ್ತ ಬಾಲಕಿಯರು ಸಿಆರ್ಪಿಸಿ ಸೆಕ್ಷನ್ 164 ಹೇಳಿಕೆ ಅಡಿ ಸ್ವಾಮೀಜಿಗೆ ಪ್ರಶ್ನೆ ಮಾಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಪ್ರಶ್ನೆಗಳನ್ನು ಶರಣರ ಮುಂದೆ ಇರಿಸಲಾಗಿದೆ ಎನ್ನಲಾಗಿದೆ.
Published by:Thara Kemmara
First published: