Murugha Shri: ಮೈಸೂರಿನಿಂದ ಚಿತ್ರದುರ್ಗಕ್ಕೆ ಮಕ್ಕಳು; ಇಂದು ಶರಣರನ್ನ ಪೊಲೀಸರು ವಶಕ್ಕೆ ಪಡೆಯೋ ಸಾಧ್ಯತೆ

ಇನ್ನೂ ಪ್ರಕರಣ ಮುನ್ನೆಲೆ ಬರುತ್ತಿದ್ದಂತೆಮ ವಿವಿಧ ಮಠಾಧೀಶರು ಮತ್ತು ಆಪ್ತರು ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ. ಇಂದು ಸಹ ಮಠಕ್ಕೆ ಭಕ್ತರು, ವಿವಿಧ ಸಮಾಜದ ಮುಖಂಡರು, ಮಠಾಧೀಶರು ಮಠಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ.

ಮುರುಘಾ ಶ್ರೀ

ಮುರುಘಾ ಶ್ರೀ

  • Share this:
ಮುರುಘಾ ಶ್ರೀಗಳ (Murugha Seer Shivamurthy Murugha Sharanaru) ವಿರುದ್ದ ಅತ್ಯಾಚಾರ, ಫೋಕ್ಸೋ ಪ್ರಕರಣ ದಾಖಲಾಗಿದ್ದು, ಸಂತ್ರಸ್ತ ವಿದ್ಯಾರ್ಥಿನಿಯರನ್ನು (Victims) ಮೈಸೂರಿನಿಂದ (Mysuru) ಚಿತ್ರದುರ್ಗಕ್ಕೆ (Chitradurga) ಕರೆದುಕೊಂಡು ಬರಲಾಗಿದೆ. ಬೆಳಗಿನ ಜಾವ ಸುಮಾರು 3.45ಕ್ಕೆ CWC ಅವರ ವಶಕ್ಕೆ ಮಕ್ಕಳನ್ನು ನೀಡಲಾಗಿದೆ. ಸದ್ಯ ಬಾಲಕಿಯರಿಬ್ಬರು ಬಾಲ ಮಂದಿರದಲ್ಲಿಯೇ ವಾಸವಾಗಿದ್ದಾರೆ. ತಡರಾತ್ರಿ ಮೈಸೂರಿಂದ ಬಿಗಿ ಭದ್ರತೆಯಲ್ಲಿ ಇಬ್ಬರು ಬಾಲಕಿಯರನ್ನು ಅಧಿಕಾರಿಗಳು ಕರೆತಂದಿದ್ದಾರೆ. ಬಾಲಕಿಯರ ಜೊತೆ  ಮೈಸೂರು ಒಡನಾಡಿ ಸಂಸ್ಥೆಯ (Odanadi Organization) ಇಬ್ಬರೂ ಪ್ರತಿನಿಧಿಗಳಿರುವ ಮಾಹಿತಿ ಲಭ್ಯವಾಗಿದೆ.  ಇಂದು ಬೆಳಗ್ಗೆ 10 ಗಂಟೆ ಬಳಿಕ ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರ ಮುಂದೆ ಬಾಲಕಿಯರನ್ನು ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಾದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆಗಳಿವೆ. ಮಕ್ಕಳ ಹೇಳಿಕೆ ಮತ್ತು ವೈದ್ಯಕೀಯ ಪರೀಕ್ಷೆ ಬಳಿಕ ಮುರುಘಾ ಶರಣರಿಗೆ ನೋಟಿಸ್ ನೀಡುವ ಸಾಧ್ಯತೆಗಳಿವೆ. ಇನ್ನೂ ನೋಟಿಸ್ ನೀಡಿದ ಬಳಿಕ ಮುರುಘಾ ಶರಣನ್ನು ಪೊಲೀಸರು ಯಾವುದೇ ಕ್ಷಣದಲ್ಲಿ ವಶಕ್ಕೆ ಪಡೆಯಬಹುದು ಎನ್ನಲಾಗಿದೆ.

ಶ್ರೀಗಳ ಆಡಿಯೋ ಹೇಳಿಕೆ

ಸದ್ಯ ಮುರುಘಾ ಮಠದಲ್ಲಿಯೇ ಶ್ರೀಗಳು ವಾಸವಾಗಿದ್ದರು. ನಿನ್ನೆ ಈ ಪ್ರಕರಣ ಸಂಬಂಧ ಆಡಿಯೋ ಹೇಳಿಕೆ ಬಿಡುಗಡೆಗೊಳಿಸಿದ್ದ ಶ್ರೀಗಳು, ಸಂಧಾನಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದರು. ಒಂದು ವೇಳೆ ಸಂಧಾನ ವಿಫಲವಾದ್ರೆ ಕಾನೂನು ಹೋರಾಟಕ್ಕೆ ಶ್ರೀಗಳು ಸಿದ್ಧ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Murugha Shri: ಮುರುಘಾ ಶ್ರೀಗಳ ಬೆಂಬಲಕ್ಕೆ ನಿಂತ ಭಕ್ತರು, ಮಠದ ಆಡಳಿತಾಧಿಕಾರಿ ವಿರುದ್ಧ ದೂರು

ಇನ್ನೂ ಪ್ರಕರಣ ಮುನ್ನೆಲೆ ಬರುತ್ತಿದ್ದಂತೆಮ ವಿವಿಧ ಮಠಾಧೀಶರು ಮತ್ತು ಆಪ್ತರು ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ. ಇಂದು ಸಹ ಮಠಕ್ಕೆ ಭಕ್ತರು, ವಿವಿಧ ಸಮಾಜದ ಮುಖಂಡರು, ಮಠಾಧೀಶರು ಮಠಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ.

ಶರಣರಿಗೆ ವಿವಿಧ ಸಂಘಟನಗಳ ಬೆಂಬಲ

ಮುರುಘಾ ಶರಣರ ಮೇಲೆ ಬಂದಿರುವ ಆರೋಪ ಆಧಾರರಹಿತ, ಅಲ್ಲದೇ ಮಠ ಹಾಗೂ ಮುರುಘಾ ಶರಣರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಭಾಗವಾಗಿ ಈ ರೀತಿ ಆರೋಪ ಮಾಡಲಾಗುತ್ತಿದೆ ಎನ್ನುವ ಮಾತುಗಳೂ ಕೂಡ ಕೇಳಿ ಬಂದಿದೆ. ಇದೀಗ ಸ್ವಾಮೀಜಿಗಳ ಬೆಂಬಲಕ್ಕೆ ಭಕ್ತರು ಹಾಗೂ ದಲಿತ ಸಂಘಟನೆಗಳು ನಿಂತಿವೆ.

ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದ ಸ್ವಾಮೀಜಿ

ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹಿನ್ನಲೆ ಮುರಾಘಾ ಮಠದಲ್ಲಿ ಸಭೆ ನಡೆಯಿತು. ಮುರುಘಾ ಶರಣರ ನೇತೃತ್ವದಲ್ಲಿ ಭಕ್ತರು ಮತ್ತು ಮಠಾಧೀಶರ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಶ್ರೀಗಳು, ಸುಳ್ಳು ಕೇಸ್ ವಿರುದ್ಧ ಧೈರ್ಯದಿಂದ ಒಗ್ಗಟ್ಟಾಗಿ ಹೋರಾಡುವುದಾಗಿ ಹೇಳಿದರು.

ಕಾನೂನು‌ ಹೋರಾಟಕ್ಕೆ ಸಭೆಯಲ್ಲಿ ತೀರ್ಮಾನ

ಮುರುಘಾ ಶ್ರೀಗಳ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು‌ ಹೋರಾಟಕ್ಕೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯ್ತು. ಸುಳ್ಳು ಪ್ರಕರಣ ದಾಖಲಿಸಿರುವವರು ಕ್ಷಮೆ ಕೇಳಿದರೆ ಕಾನೂನು ಹೋರಾಟ ಕೈ ಬಿಡುವಂತೆಯೂ ಚರ್ಚೆ ನಡೆಯಿತು. ಅಲ್ಲದೇ ಸುಳ್ಳು ಪ್ರಕರಣ ಎಂದು ಕ್ಷಮಾಪಣೆ ಕೇಳಿದ್ರೆ ರಾಜೀ ಸಂಧಾನಕ್ಕೂ ಚಿಂತನೆ ನಡೆದಿದೆ.

ಇದನ್ನೂ ಓದಿ: Murugha Seer: ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ, ರೇಪ್ ಆರೋಪ; ವಿದ್ಯಾರ್ಥಿನಿಯರು ನೀಡಿದ ದೂರಿನಲ್ಲಿ ಏನಿದೆ? ಇಲ್ಲಿದೆ ವಿವರ

ಮಠದ ಆಡಳಿತಾಧಿಕಾರಿ ವಿರುದ್ಧ ದೂರು

ಮುರುಘಾ ಮಠದ ಆಡಳಿತಾಧಿಕಾರಿ ಬಸರಾಜನ್ ಅವರ ಮೇಲೂ ದೂರು ನೀಡಲಾಗಿದೆ. ವಿದ್ಯಾರ್ಥಿಗಳನ್ನು ಮುಂದೆ ಬಿಟ್ಟು ದೂರು ಕೊಡಿಸಿ ಮುರುಘ ಶರಣರ ಮೇಲೆ ಬಸವರಾಜನ್ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೈಸೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಿಳಾ ವಾರ್ಡನ್ ನೀಡಿರುವ ದೂರಿನ ಅನ್ವಯ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಬಸವರಾಜನ್ ವಿರುದ್ಧ ಪ್ರಕರಣ ದಾಖಲಾಗಿದೆ.
Published by:Mahmadrafik K
First published: