ಅಸಮಾಧಾನ ಬೆನ್ನಲ್ಲೇ ನಿರಾಣಿ CM ಆಗ್ತಾರೆ ಹೇಳಿಕೆಯಿಂದ U Turn ಹೊಡೆದ ಸಚಿವ Eshwarappa

ಮುಂದೆ ಯಾವತ್ತೋ Murugesh Nirani ಮುಖ್ಯಮಂತ್ರಿ ಆಗ್ತಾರೆ, ಅವರಿಗೆ ಶಕ್ತಿ ಇದೆ ಎಂದಿದ್ದರು. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗಿ, ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತಿಯೇನಪ್ಪ ಎಂದು ವೇದಿಕೆ ಮೇಲೆಯೇ ನಿರಾಣಿಗೆ Eshwarappa ಪ್ರಶ್ನೆ ಮಾಡಿದ್ದರು.

ಸಚಿವ ಈಶ್ವರಪ್ಪ

ಸಚಿವ ಈಶ್ವರಪ್ಪ

  • Share this:
ಸಚಿವ ಮುರುಗೇಶ್ ನಿರಾಣಿ (Murugesh Nirani) ಆದಷ್ಟು ಬೇಗ ಮುಖ್ಯಮಂತ್ರಿ (Chief Minister) ಆಗ್ತಾರೆ ಎಂಬ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿಕೆಗೆ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈಶ್ವರಪ್ಪ ತಮ್ಮ ಹೇಳಿಕೆಯಿಂದ ಯು ಟರ್ನ್​​ (U Turn) ತೆಗೆದುಕೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಸಿಎಂ ಬದಲಾವಣೆ ವಿಚಾರದ ಬಗ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಚುನಾವಣೆ ಬರೋವರೆಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ. ನಾನು ಬದಲಾಗಬಹುದು ಅಂತಾ ಹೇಳಿದ್ದೇನೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು. ನಿನ್ನೆ  ಬೀಳಗಿ ಪಟ್ಟಣದಲ್ಲಿ ಬಿಜೆಪಿ ಓಬಿಸಿ ಘಟಕದ ಕಾರ್ಯಕಾರಿ ಸಭೆಯ ಭಾಷಣದ ವೇಳೆ ಈಶ್ವರಪ್ಪ, ಮುಂದೆ ಯಾವತ್ತೋ ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗ್ತಾರೆ, ಅವರಿಗೆ ಶಕ್ತಿ ಇದೆ ಎಂದಿದ್ದರು. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗಿ, ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡ್ತಿಯೇನಪ್ಪ ಎಂದು ವೇದಿಕೆ ಮೇಲೆಯೇ ನಿರಾಣಿಗೆ ಪ್ರಶ್ನೆ ಮಾಡಿದ್ದರು. ಈಶ್ವರಪ್ಪ ಮಾತಿಗೆ ಸಂಸತ ವ್ಯಕ್ತಪಡಿಸಿದ ನಿರಾಣಿ ಸಕ್ಸಸ್ ಗುರುತು ತೋರಿ ನಕ್ಕಿದ್ದರು.

ಈ ಸಮಯದಲ್ಲಿ ಸಿಎಂ ಬದಲಾವಣೆ ಮಾತು ಬೇಕೇ?

ಆದರೆ ಈಶ್ವರಪ್ಪ ಮಾತು ರಾಜಕೀಯ ಪಡಸಾಲೆ ಹೊಸ ಚರ್ಚೆಯನ್ನೇ ಹುಟ್ಟು ಹಾಕಿತು. ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಶೀಘ್ರವೇ ಕೆಳೆಗಿಳಿಸುತ್ತಾರೆ ಎಂಬವರೆಗೂ ಮಾತುಗಳು ಹೇಳಿ ಬಂತು. ಈಶ್ವರಪ್ಪ ಮಾತಿಗೆ ಗೋವಿಂದ ಕಾರಜೋಳ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು. ನಾವು ಕೊರೊನಾ, ಪ್ರವಾಹದಂತ ಸಂಕಷ್ಟದಲ್ಲಿದ್ದೇವೆ. ಈಗ ನಾಯಕತ್ವದ ವಿಚಾರಕ್ಕೆ ಹೋಗೋದು ಸರಿಯಲ್ಲ. ಆ ವಿಷಯ ಬಿಟ್ಟು ಹಾಕಿ. ನಾನು ಇಲ್ಲಿ ಮಾತನಾಡಿದ್ರೆ ಅದು ಈಶ್ವರಪ್ಪಗೆ ತಲುಪುತ್ತೆ ಬಿಡಿ ಎಂದು ಖಾರವಾಗಿಯೇ ಕಾರಜೋಳ ಪ್ರತಿಕ್ರಿಯಿಸಿದರು.

ಈಶ್ವರಪ್ಪ ತಮಾಷೆ ಮಾಡಿರೋದು

ಬೆಣ್ಣೆ ನಗರಿ ದಾವಣಗೆರೆಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಪ್ರಚಾರ ನಡೆಸಿದರು. ಮುಂದೆ ಮುರುಗೇಶ್​ ನಿರಾಣಿ ಸಿಎಂ ಆಗ್ತಾರೆ ಅನ್ನೋ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಎಸ್​ವೈ, ಈಶ್ವರಪ್ಪ ತಮಾಷೆ ಮಾಡಿದ್ದಾರೆ ಎನ್ನುವ ಮೂಲಕ ತೆರೆ ಎಳೆದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಯಿಂದ ಸಚಿವ ಈಶ್ವರಪ್ಪ ಹಿಂದೆ ಸರಿದು, ಹೊಸ ಚರ್ಚೆಗೆ ಅಂತ್ಯ ಹಾಡಲು ಯತ್ನಿಸಿದರು. ಜೊತೆ ಪರಿಷತ್​ ಚುನಾವಣೆ ಸಂಬಂಧ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು. \

ನಮಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ಬೇಕಿಲ್ಲ

ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ದಿಕ್ಸೂಚಿ ಅಂದ್ರೆ ನಾನು ಒಪ್ಪೊಕೆ ತಯಾರಿದ್ದೀವಿ. ನಮ್ಮದೇ ಈ ಬಾರಿ ಮೆಜಾರಿಟಿ ಬಹಳ ಇದೆ. ಶಾಸಕ, ಸಂಸದ, ಗ್ರಾ.ಪಂ ನಮ್ಮವರೆ ಜಾಸ್ತಿ ಇದ್ದಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ನಾವೇ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ವಿರೋಧ ಪಕ್ಷ ಅಂತಾ ಕರೆಯೋಕು ಆಗಲ್ಲ. ಇದೀಗ ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷ ಆಗಿದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ನವರಿಗೆ ರಾಷ್ಟ್ರೀಯವಾದ ಅನ್ನೋದೆ ಗೊತ್ತಿಲ್ಲ, ಗಾಂಧಿವಾದವನ್ನೆ ಕಾಂಗ್ರೆಸ್ ನಾಯಕರು ರಾಷ್ಟ್ರೀಯವಾದ ಅಂದುಕೊಂಡಿದ್ದಾರೆ. ಸಿದ್ದರಾಮಯ್ಯ ಮೋದಿ ಅವರನ್ನ ಬೈತಾರೆ, ನಮಗೆ ಸಿದ್ದರಾಮಯ್ಯ ಸರ್ಟಿಫಿಕೇಟ್ ಬೇಕಿಲ್ಲ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಈಶ್ವರಪ್ಪರನ್ನ ಪೆದ್ದ ಎಂದಿರುವ ಸಿದ್ದರಾಮಯ್ಯ ಸ್ವಯಂ ಘೋಷಿತ ಬುದ್ಧಿವಂತ: ಸಚಿವ Sriramulu ವ್ಯಂಗ್ಯ

ವಿಧಾನಪರಿಷತ್  ಚುನಾವಣೆಯಲ್ಲಿಯೂ ಹಣದ ವ್ಯವಹಾರ ನಡೆಯುತ್ತಿದೆ. ಹಣವನ್ನು ರಾಜಕೀಯ ಪಕ್ಷಗಳು ಯಾರೇ ಕೊಟ್ಟರೂ ತೆಗೆದುಕೊಳ್ಳುತ್ತಾರೆ. ಆದರೆ ಕೊನೆಗೆ ತಮಗೆ ಬೇಕಾದರವರಿಗೆ ವೋಟು ಹಾಕುತ್ತಾರೆ. ಈ ಭಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಿಂದ 15-16 ಜನ ಗೆಲ್ಲುತ್ತಾರೆ. ಈ ಬಾರಿ ಬಿಜೆಪಿಯಿಂದ 22 ಜನ ಸ್ಪರ್ಧಿಸಿದ್ದಾರೆ ಎಂದು ತಿಳಿಸಿದರು.
Published by:Kavya V
First published: