ಬೆಳಗಾವಿ: ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagowda Patil Yatnal), ಪಂಚಮಸಾಲಿ ಸಮುದಾಯಕ್ಕೆ (Panchamasali Community) ಮೀಸಲಾತಿ ಸಿಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ನಂತರ ಸಚಿವ ಮುರುಗೇಶ್ ನಿರಾಣಿ (Minister Murugesh Nirani) ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಪಾರ್ಟಿ ಕಟ್ಟುವಾಗ ನಿರಾಣಿ ಎಲ್ಲಿದ್ದರು? ಅವನು ನನ್ನ ಮುಂದೆ ಬಚ್ಚಾ ಎಂದು ಟೀಕಿಸಿದರು. ನಮ್ಮ ಮನೆಗೆ ಟಿಕೆಟ್ ಕೇಳ್ಕೊಂಡು ಮುರುಗೇಶ್ ನಿರಾಣಿ ಬರುತ್ತಿದ್ದವ ಈಗ ಬಹಳ ಮಾತನಾಡುತ್ತಿದ್ದಾನೆ. ಅವರು ಹಿಂದು ದೇವತೆಗಳ ಬಗ್ಗೆ ಒಂದು ಆಡಿಯೋ ಬಿಟ್ಟಿದ್ದರು. ಅವರು ನಮಗೀಗ ಹಿಂದೂ ಸ್ವಾಮೀಜಿ ಬಗ್ಗೆ ಮಾತಾಡಬೇಡ ಅಂತಾರೆ. ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನಕರ ಮತ್ತು ಮರ್ಯಾದೆ ಇರಲ್ಲ ಎಂದು ಹೇಳಿದರು.
ನಾಳೆ ಶಕ್ತಿ ಪ್ರದರ್ಶನ ಆಗೋದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಐತಿಹಾಸಿಕ ನಿರ್ಧಾರ ಮಾಡ್ತಾರೆ. ನಾವು ಯಾರಿಗೂ ಆಹ್ವಾನ ಕೊಡ್ತಿಲ್ಲ. ಆದರೂ 25 ಲಕ್ಷ ಜನ ಬರುತ್ತಿದ್ದಾರೆ. ಮುರುಗೇಶ್ ನಿರಾಣಿ ಬಂದ್ರೆ ಸ್ಟೇಜ್ ಮೇಲ್ ಅಂತೂ ಕರೆಯಲ್ಲ. ಅವರಿಗಾಗಿ ಕೆಳಗೆ ಖುರ್ಚಿ ಹಾಕುತ್ತೇವೆ ಎಂದು ಹೇಳಿದರು.
ನಿರಾಣಿ ಸಚಿವರಾಗಿದ್ದು ದುರ್ದೈವ
ಮುರುಗೇಶ್ ನಿರಾಣಿ ಹೇಗೆ ಸಚಿವರಾದರು? ಏನೆಲ್ಲಾ ಪ್ರಸ್ತಾಪ ಮಾಡಿದರು ಅನ್ನೋ ವಿಷಯಗಳು ನಮಗೆ ಗೊತ್ತಿದೆ. ನಿರಾಣಿ ಅವರನ್ನು ಸಚಿವರನ್ನಾಗಿ ಮಾಡಿದ್ದು ದುರ್ದೈವ ಎಂದು ಟೀಕಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ನಮಗೂ ಈಗಲೂ ಸರ್ಕಾರದ ಮೇಲೂ ವಿಶ್ವಾಸವಿದೆ. ನಮಗೆ ಮೀಸಲಾತಿ ಸಿಗುವ ನಂಬಿಕೆಯಿದೆ ಎಂದರು.
ಬಿಎಸ್ವೈ ಪಾತ್ರ ಇರಲಿಲ್ಲ
ನಾನು ಕೇಂದ್ರ ಮಂತ್ರಿ ಆಗೋದರಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಅವರ ಪಾತ್ರ ಇರಲಿಲ್ಲ. ನಾನು ಮಂತ್ರಿ ಆದ್ಮೇಲೆಯೇ ಯಡಿಯೂರಪ್ಪ ಪುನರ್ಜನ್ಮ ಆಗಿದ್ದು ಎಂದು ಹೇಳುವ ಮೂಲಕ ಬಿಎಸ್ವೈ ವಿರುದ್ಧ ಅಸಮಾಧಾನ ಹೊರ ಹಾಕಿದರು.
ತಣ್ಣಗಾದ ಮಾಜಿ ಸಚಿವ ಈಶ್ವರಪ್ಪ
ಕಳೆದೆರಡು ದಿನಗಳಿಂದ ಬೆಳಗಾವಿ ಅಧಿವೇಶನ (Belagavi Session) ನಡೆಯುತ್ತಿದ್ದರೆ, ಇತ್ತ ಸದನಕ್ಕೆ ಗೈರಾಗಿ ಬಹಿರಂಗವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ಮೌನ ಪ್ರತಿಭಟನೆಗಿಳಿದಿದ್ದರು. ತಮಗೆ ಸಚಿವ ಸ್ಥಾನ ಕೊಡದೇ ಇದ್ದಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕುರಿತು ನಿನ್ನೆ ಮಹತ್ವದ ಸುದ್ದಿಗೋಷ್ಟಿ ಯನ್ನು ಕರೆದಿದ್ದರು. ಆದರೆ ಸುದ್ದಿಗೋಷ್ಟಿಯಲ್ಲಿ ಈಶ್ವರಪ್ಪ ತಮ್ಮ ಆಕ್ರೋಶಕ್ಕೆ ಇದ್ದಕ್ಕಿದ್ದಂತೆ ಇತಿಶ್ರೀ ಹಾಡಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಕೆಎಸ್ ಈಶ್ವರಪ್ಪ, ಹೇಳಬೇಕಾದ ಮುಖ್ಯ ವಿಚಾರ ಬಿಟ್ಟು ಉಳಿದ ವಿಚಾರ ಮಾತಾಡಿದ್ರು. ಪಕ್ಷಕ್ಕೆ ತಮ್ಮ ಸೇವೆ, ತ್ಯಾಗದ ಬಗ್ಗೆ ಮಾತು ಆರಂಭಿಸಿದ ಈಶ್ವರಪ್ಪ ಸಚಿವ ಸ್ಥಾನ ಸಿಗದೇ ಎದುರಿಸುತ್ತಿರುವ ಸನ್ನಿವೇಶದ ಬಗ್ಗೆ ಹೇಳಿಕೊಂಡರು.
ಇದನ್ನೂ ಓದಿ: Satish Jarkiholi: ಮರಾಠ ಸಮುದಾಯದಿಂದ ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ
ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಎಂದ ಈಶ್ವರಪ್ಪ
ಇವತ್ತು ಬೆಳಗ್ಗೆ ಸಿಎಂ ಅವರ ಖಾಸಗಿ ವಾಹಿನಿ ಸಂದರ್ಶನ ನೋಡಿದ ಬಳಿಕ ಸಮಾಧಾನ ಆಯ್ತು. ಆ ಸಂದರ್ಶನದಲ್ಲಿ ಕ್ಲೀನ್ಚಿಟ್ ಸಿಕ್ಕಿದ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಡಿಸಲಾಗುತ್ತೆ ಅಂತ ಸಿಎಂ ಹೇಳಿದ್ದಾರೆ. ಹೀಗಾಗಿ ಸಿಎಂ ಮೇಲೆ ನಂಬಿಕೆ ಇರಿಸಿ ಕಾಯ್ತೇನೆ. ತಮಗೆ ಹಾಗೂ ರಮೇಶ್ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ಇದೆ ಅಂತ ಈಶ್ವರಪ್ಪ ಸ್ಪಷ್ಟಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ