• Home
  • »
  • News
  • »
  • state
  • »
  • ಎಸ್​ಎಮ್​ಎ​​ನ್​ ಸೌಹಾರ್ದದ ವಂಚನೆ ಆರೋಪ; ತಮಗೆ ಸಂಬಂಧವಿಲ್ಲ ಎಂದ ಮಾಜಿ ಸಚಿವ ನಿರಾಣಿ

ಎಸ್​ಎಮ್​ಎ​​ನ್​ ಸೌಹಾರ್ದದ ವಂಚನೆ ಆರೋಪ; ತಮಗೆ ಸಂಬಂಧವಿಲ್ಲ ಎಂದ ಮಾಜಿ ಸಚಿವ ನಿರಾಣಿ

 ಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ, ತಮಗೂ ಈ
ಸೌಹಾರ್ದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ, ತಮಗೂ ಈ ಸೌಹಾರ್ದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ, ತಮಗೂ ಈ ಸೌಹಾರ್ದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • Share this:

ವಿಜಯಪುರ (ನ. 27): ಎಸ್ ಎಮ್ ಎನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಹಣ ನೀಡದೆ ವಂಚಿಸಿದೆ ಎಂದು ಆರೋಪಿಸಿ ಮತ್ತು ನ್ಯಾಯ ಒದಗಿಸುವಂತೆ ಒತ್ತಾಯಿಸಿ ಠೇವಣಿದಾರರು ಮತ್ತು ಪಿಗ್ಮಿ ಎಜೆಂಟರು ನಗರದಲ್ಲಿ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಹಿಂದೆ ಶ್ರೀ ಮುರುಗೇಶ ನಿರಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಹೆಸರಿನಲ್ಲಿ ಹಣಕಾಸು ಸಂಸ್ಥೆ ಆರಂಭವಾಗಿತ್ತು.  ಆಗ ತಾವು ನಿರಾಣಿ ಅವರ ಹೆಸರು ಇದ್ದಿದ್ದರಿಂದ ಹಣ ಠೇವಣಿ ಇಟ್ಟಿದ್ದಾಗಿ ನಿವೃತ್ತ ನೌಕರರು ಮತ್ತು ವ್ಯಾಪಾರಿಗಳು ಹಾಗೂ ಠೇವಣಿದಾರರು ಆರೋಪಿಸಿದ್ದಾರೆ.  ಕಳೆದ ಒಂದೂವರೆ ವರ್ಷದಿಂದ ತಮ್ಮ ಠೇವಣಿ ಮತ್ತು ಬಡ್ಡಿ ಹಣವನ್ನು ಸೌಹಾರ್ದದ ಆಡಳಿತ ಮಂಡಳಿ ಮುಖ್ಯಸ್ಥ ಅನಿಲ ಕೆ. ದೇಶಪಾಂಡೆ ಈವರೆಗೂ ನೀಡಿಲ್ಲ.  ಈ ಹಿನ್ನೆಲೆಯಲ್ಲಿ ತಮಗೆ ನ್ಯಾಯ ಒದಗಿಸಬೇಕು.  ಇಲ್ಲದಿದ್ದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುಬೇಕಾಗುತ್ತದೆ ಎಂದು ಕೆಲವು ಠೇವಣಿದಾರರು ಮತ್ತು ಪಿಗ್ಮಿ ಏಜೆಂಟರು ಎಚ್ಚರಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ, ತಮಗೂ ಈ
ಸೌಹಾರ್ದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


ಈ ಕುರಿತು ಹೇಳಿಕೆ ನೀಡಿರುವ ಅವರು, ಮುರುಗೇಶ ನಿರಾಣಿಗೂ ಎಸ್ ಎಮ್ ಎನ್ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ.  ಆರಂಭದಿಂದಲೇ ಈ ಕುರಿತು ಸ್ಪಷ್ಟಪಡಿಸುತ್ತ ಬಂದಿದ್ದೇನೆ.  ಇದು ರಾಜಕೀಯ ಪ್ರೇರಿತವಾಗಿದೆ ಮತ್ತು ದುರುದ್ದೇಶದಿಂದ ಕೂಡಿದೆ.  ಈ ಪ್ರಕರಣದಲ್ಲಿ ವೈಯಕ್ತಿಕವಾಗಿ ನನ್ನ ತೇಜೋವಧೆ ಮಾಡಲಾಗುತ್ತಿದೆ.  ಸಹಕಾರಿ ಇಲಾಖೆ, ಸೌಹಾರ್ದ ಫೆಡರೇಶನ್ ಗೆ ಈ ಹಿಂದೆಯೇ ದಾಖಲೆ ಸಮೇತ ಮಾಹಿತಿ ಮತ್ತು ದೂರು ನೀಡಿದ್ದೇನೆ.  ಎಸ್ ಎಮ್ ಎನ್ ಎಂಬ ಹೆಸರಿನ ಸಹಕಾರಿ ಸಂಸ್ಥೆ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡಿದೆ.  ಹೆಸರು ದುರ್ಬಳಕೆ ಗೊತ್ತಾದ ತಕ್ಷಣ  ಸಹಕಾರಿ ಇಲಾಖೆಗೆ ದೂರು ನೀಡಿದ್ದೆ.  ಈ ಹಿನ್ನೆಲೆಯಲ್ಲಿ ಶ್ರೀ ಮುನೀಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಎಂದು ಮರು ನಾಮಕರಣ ಮಾಡಲಾಗಿದೆ.  ನಂತರವೂ ನಾಮಫಲಕ, ಹಣಕಾಸು ವ್ಯವಹಾರಗಳಲ್ಲಿ ಮುರುಗೇಶ ನಿರಾಣಿ ಹೆಸರಿನ ದಾಖಲೆ ದುರ್ಬಳಕೆಯಾಗುತ್ತಿತ್ತು.  ಈ ಹಿನ್ನೆಲೆ ಸಂಸ್ಥೆಯ ಅಧ್ಯಕ್ಷ ಅನಿಲ ಕೆ. ದೇಶಪಾಂಡೆ ಅವರಿಗೆ ಅನೇಕ ಬಾರಿ ಮೌಖಿಕವಾಗಿ ಹೇಳಿದ್ದೆ.  ಅಲ್ಲದೇ, ವಿಜಯಪುರ ಎಸ್ಪಿಗೆ  ದೂರು ನೀಡಿದ್ದೇನೆ ಎಂದರು.


ಈ ಕುರಿತು ಎಸ್ಪಿ ಮತ್ತು ಸಹಕಾರಿ ಇಲಾಖೆ ಹಾಗೂ ಸೌಹಾರ್ದ ಫೆಡರೇಶನ್ ಗಳಿಗೂ ನಾಮಫಲಕ ತೆರವು ಮತ್ತು ಇತರ ವ್ಯವಹಾರಗಳ ಕುರಿತು ದೂರು ನೀಡಿದ್ದೇನೆ.   ಕರ್ನಾಟಕ ಸೌಹಾರ್ದದ ಅಧ್ಯಕ್ಷ ಕೃಷ್ಣಾರೆಡ್ಡಿ ಮತ್ತು ಉಪಾಧ್ಯಕ್ಷ ಕವಟಗಿಮಠ ಅವರಿಗೂ ದೂರು ಕೊಟ್ಟಿದ್ದೇನೆ.  ಮೂರನೇ ಬಾರಿ ವಿಜಯಪುರ ಎಸ್ಪಿ ಮತ್ತು ಸಹಕಾರಿ ಇಲಾಖೆ ಹಾಗೂ ಸೌಹಾರ್ದ ಇಲಾಖೆಗೆಗಳಿಗೆ ಮತ್ತೊಮ್ಮೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದಾರೆ.


ಎಸ್ ಎಮ್ ಎನ್ ಸಂಸ್ಥೆಯಲ್ಲಿ ತಮ್ಮ, ಕುಟುಂಬದವರ ವೈಯಕ್ತಿಕ ಶೇರುಗಳಿಲ್ಲ.  ತಾವ್ಯಾರೂ ಹಣಕಾಸಿನ ವ್ಯವಹಾರವನ್ನೂ ಮಾಡಿಲ್ಲ.  ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ನೈಯ್ಯಾ ಪೈಸೆಯ ವ್ಯವಹಾರವಿಲ್ಲ.  ಈ ಸಂಸ್ಥೆಯೊಂದಿಗೆ ವ್ಯವಹರಿಸಲು ಅಥವಾ ಠೇವಣಿ ಇಡಲು ತಾವು ಯಾರಿಗೂ ಹೇಳಿಲ್ಲ.  ತಮ್ಮ ಕಡೆಯವರೂ ಗ್ರಾಹಕರಿಗೆ ವ್ಯವಹರಿಸುವಂತೆ ಹೇಳಿಲ್ಲ ಎಂದು ಮುರುಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ.
 
ಸೌಹಾರ್ದದ ಮುಖ್ಯಸ್ಥ ಅನಿಲ ಕೆ. ದೇಶಪಾಂಡೆ ಹೇಳಿದ್ದೇನು ಗೊತ್ತಾ?


ಈ ಮಧ್ಯೆ ಸೌಹಾರ್ದದ ಮುಖ್ಯಸ್ಥ ಅನಿಲ ಕೆ. ದೇಶಪಾಂಡೆ, ಈ ಪ್ರಕರಣದ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.  2009ರಲ್ಲಿ ತಾವು ಹೊಂದಿರುವ ಅಭಿಮಾನದಿಂದ ನಿರಾಣಿ ಅವರ ಹೆಸರಿನಲ್ಲಿ ಸೌಹಾರ್ದ ಸಹಕಾರಿ ಆರಂಭಿಸಿದ್ದೇವು.  ಆದರೆ, ನಿರಾಣಿ ಸಾಹೇಬರು ಆ ಹೆಸರನ್ನು ತೆಗೆದು ಹಾಕಲು ಸೂಚನೆ ಕೊಟ್ಟಿದ್ದರು.  ಆಗ ಸರಕಾರಿ ಕಾನೂನಿನಂತೆ ಅವರ ಹೆಸರನ್ನು ಬದಲಾಯಿಸಿ ಆರೇಳು ವರ್ಷಗಳಾಗಿವೆ.  ಅವರ ಹೆಸರಿನ ಸಂಬಂಧ ಈ ಸೌಹಾರ್ದಕ್ಕೆ ಯಾವುದೇ ರೀತಿಯಲ್ಲಿ ಇಲ್ಲ.  ನಿರಾಣಿ ಸಾಹೇಬರಾಗಲಿ ಅವರ ಪರಿವಾರದವರಾಗಲಿ ಈ ಎಸ್ ಎಮ್ ಎನ್ ಸೌಹಾರ್ದದಲ್ಲಿ ಯಾವುದೇ ರೀತಿಯ ಸಂಪರ್ಕವಿಲ್ಲ.  ಅಲ್ಲದೇ, ಅವರ ಕಡೆಯವರು ಯಾರೂ ಯಾವುದೇ ರೀತಿಯ ಷೇರುಗಳು ಮತ್ತು ಠೇವಣಿಗಳನ್ನು ಇಟ್ಟಿಲ್ಲ.  ಸಾಲಗಳನ್ನು ಹೊಂದಿಲ್ಲ.  ನಿರಾಣಿ ಅವರಿಗೂ ಎಸ್ ಎಮ್ ಎನ್ ಸೌಹಾರ್ದಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ವಿಡಿಯೋ ಹೇಳಿಕೆಯಲ್ಲಿ ಅನಿಲ ಕೆ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

Published by:Seema R
First published: