ಯಡಿಯೂರಪ್ಪ- ಸ್ವಾಮಿ ವಚನಾನಂದ ವಾಗ್ವಾದದ ಬಗ್ಗೆ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ನಾನು ಲಿಂಗಾಯತ ಸಮುದಾಯದ ಸಂಘಟನೆ, ಪೀಠಕ್ಕೆ ದುಡಿದಿದ್ದೇನೆ. ವಚನಾನಂದ ಶ್ರೀಗಳು ಮತ್ತು ಸಿಎಂ ಯಡಿಯೂರಪ್ಪ ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಿಎಂ ಸಿಟ್ಟಾದ ಬಗ್ಗೆ ಅವರನ್ನೇ ಕೇಳಬೇಕು. ನನಗೇಕೆ ಕೇಳುತ್ತೀರಿ ಎಂದು ಮುರುಗೇಶ್ ನಿರಾಣಿ ಪ್ರಶ್ನಿಸಿದ್ದಾರೆ.

Sushma Chakre | news18-kannada
Updated:January 15, 2020, 8:50 AM IST
ಯಡಿಯೂರಪ್ಪ- ಸ್ವಾಮಿ ವಚನಾನಂದ ವಾಗ್ವಾದದ ಬಗ್ಗೆ ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ
ಮುರುಗೇಶ್​ ನಿರಾಣಿ
  • Share this:
ದಾವಣಗೆರೆ (ಜ.15): ಮುರುಗೇಶ್ ನಿರಾಣಿಯನ್ನು ಮಂತ್ರಿ ಮಾಡದಿದ್ದರೆ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹರಿಹರದಲ್ಲಿ ಮಂಗಳವಾರ ಎಚ್ಚರಿಕೆ ನೀಡಿದ್ದ ಶ್ವಾಸಗುರು ವಚನಾನಂದ ವಿರುದ್ಧ ಸಿಎಂ ಯಡಿಯೂರಪ್ಪ ವೇದಿಕೆಯಲ್ಲೇ ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುರುಗೇಶ್ ನಿರಾಣಿ, ಸಿಎಂಗೆ ನನ್ನ ಮೇಲೆ ಯಾವುದೇ ಬೇಸರವಿಲ್ಲ. ಅವರ ಕೋಪಕ್ಕೆ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ನನ್ನ ಮೇಲೆ ಯಡಿಯೂರಪ್ಪರಿಗೆ ಬೇಸರವಿಲ್ಲ. ಸಿಎಂ ಯಡಿಯೂರಪ್ಪನವರ ಸಿಟ್ಟಿನ ಬಗ್ಗೆ ಅಪಾರ್ಥ ಬೇಡ. ಬಿ.ಎಸ್.ಯಡಿಯೂರಪ್ಪ ನನ್ನ ತಂದೆ ಸಮಾನ. 25 ವರ್ಷದಿಂದ ಕುಟುಂಬದ ಸದಸ್ಯರಿದ್ದೇವೆ. ನನ್ನ, ವಚನಾನನಂದ ಶ್ರೀಗಳ ಬಗ್ಗೆ ಬೇಸರವಿಲ್ಲ. 115 ಮಂದಿಯೂ ಸಚಿವ ಸ್ಥಾನ ಆಕಾಂಕ್ಷಿಗಳು. ಯಾರು ಸಚಿವ ಸ್ಥಾನ ಬೇಡ ಅಂತಾರೆ ಹೇಳಿ? ಎಂದು ಹರಿಹರದಲ್ಲಿ ಮುರುಗೇಶ್ ನಿರಾಣಿ ಪ್ರಶ್ನಿಸಿದ್ದಾರೆ.

ನಾನು ಲಿಂಗಾಯತ ಸಮುದಾಯದ ಸಂಘಟನೆ, ಪೀಠಕ್ಕೆ ದುಡಿದಿದ್ದೇನೆ. ವಚನಾನಂದ ಶ್ರೀಗಳು ಮತ್ತು ಸಿಎಂ ಯಡಿಯೂರಪ್ಪ ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸಿಎಂ ಸಿಟ್ಟಾದ ಬಗ್ಗೆ ಅವರನ್ನೇ ಕೇಳಬೇಕು. ನನಗೇಕೆ ಕೇಳುತ್ತೀರಿ ಎಂದು ಮುರುಗೇಶ್ ನಿರಾಣಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನಿರಾಣಿ ಮಂತ್ರಿ ಮಾಡಿ, ಇಲ್ಲವೇ ಪರಿಣಾಮ ಎದುರಿಸಿ ಎಂದ.. ಸ್ವಾಮಿಗೆ ಬೆದರಿಸಬೇಡಿ ಎಂದು ಎಚ್ಚರಿಸಿದ ಯಡಿಯೂರಪ್ಪ!

ವೇದಿಕೆ ಮೇಲೆ ಶ್ವಾಸ ಗುರು ವಚನಾನಂದ ಸ್ವಾಮೀಜಿ ಅವರು ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು, ಇಲ್ಲವಾದಲ್ಲಿ ಪಂಚಮಸಾಲಿ ಸಮುದಾಯ ನಿಮ್ಮ ಕೈ ಬಿಡುತ್ತದೆ ಎಂದು ಎಚ್ಚರಿಕೆ ನೀಡಿದಾಗ ಕೋಪಗೊಂಡ ಸಿಎಂ ಬಿಎಸ್​ವೈ, ನೀವು ಹೀಗೆಲ್ಲಾ ಮಾತನಾಡಬಾರದು. ನೀವು ಸಲಹೆ ನೀಡಬೇಕೇ ಹೊರತು, ಬೆದರಿಕೆ ಹಾಕಬಾರದು, ಎಂದು ಕುರ್ಚಿಯಿಂದ ಮೇಲೆದ್ದು ಹೇಳಿದರು. ಈ ವೇಳೆ ಸಿಎಂ ಮತ್ತು ಸ್ವಾಮೀಜಿ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು.

ಮುಖ್ಯಮಂತ್ರಿಗಳೇ ಮುರುಗೇಶ್ ನಿರಾಣಿ ನಿಮಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ನಿಮ್ಮ ಬೆನ್ನ ಹಿಂದೆ ನಿಂತು ಬೆನ್ನೆಲುಬಾಗಿ ನಿಂತಿದ್ದಾರೆ. ಅವರನ್ನು ಕೈ ಬಿಡಲು ಹೋಗಬೇಡಿ. ಒಂದು ವೇಳೆ ನೀವು ನಿರಾಣಿಯನ್ನು ಕೈಬಿಟ್ಟರೆ ಇಡೀ ಅಖಂಡ ಪಂಚಮಸಾಲಿ ಸಮಾಜ ನಿಮ್ಮ ಕೈಬಿಡುತ್ತದೆ ಎಂದು ವಚನಾನಂದ ಸ್ವಾಮೀಜಿ ಹೇಳಿದ್ದರು.

ಇದನ್ನೂ ಓದಿ: ನಿರ್ಭಯಾ ಗಲ್ಲು ಶಿಕ್ಷೆ ಪ್ರಕರಣ; ಸುಪ್ರೀಂಕೋರ್ಟ್​ನಲ್ಲಿ ಇಬ್ಬರು ಅತ್ಯಾಚಾರಿಗಳ ಶುಶ್ರೂಷಾ ಅರ್ಜಿ ವಜಾಇದರಿಂದ ಸಿಡಿಮಿಡಿಗೊಂಡ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಅವರ ಮಾತನ್ನು ತಡೆದು, ಕುರ್ಚಿಯಿಂದ ಎದ್ದು, ನೀವು ಹೀಗೆಲ್ಲಾ ಮಾತನಾಡಿದರೆ ನಾನು ಎದ್ದು ಹೋಗುತ್ತೇನೆ, ಎಂದು ನಿಂತಾಗ, ಸ್ವಾಮೀಜಿಗಳು "ಅಲ್ಲಾ, ನಾವು ಸತ್ಯವನ್ನು ಹೇಳುತ್ತಿದ್ದೇವೆ. ಕುಳಿತುಕೊಳ್ಳಿ ನೀವು ಕುಳಿತುಕೊಳ್ಳಿ," ಎಂದು ಹೇಳಿದರು. ಆಗ ಸಿಎಂ, "ತಾವು ಹೀಗೆಲ್ಲಾ ಮಾತನಾಡಬಾರದು. ನಿಮ್ಮಿಂದ ಈ ಮಾತು ಬರುತ್ತದೆ ಎಂದುಕೊಂಡಿರಲಿಲ್ಲ. ಈಗಾದರೆ ನಾವು ಕೆಲಸ ಮಾಡಲು ಆಗುವುದಿಲ್ಲ. ತಾವು ಸಲಹೆ ನೀಡಬಹುದೇ ಹೊರತು ಬೆದರಿಸಬಾರದು," ಎಂದು ಸಿಎಂ ಗರಂ ಆಗಿ ಹೇಳಿದ್ದರು.

(ವರದಿ: ಎಚ್​ಎಂಪಿ ಕುಮಾರ್)

 

 
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading