HOME » NEWS » State » MURUGESH NIRANI CC PATIL LAMBLASTS POLITICIANS BEHIND PANCHAMASALI RESERVATION PROTEST SHM SNVS

ಯತ್ನಾಳ್ ಕಾಂಗ್ರೆಸ್​ನ ಬಿ ಟೀಮ್; ಪಕ್ಷೇತರನಾಗಿ ನಿಂತು ಗೆದ್ದು ಬರಲಿ: ಮುರುಗೇಶ್ ನಿರಾಣಿ ಸವಾಲು

ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನ ವಿಜಯಾನಂದ ಕಾಶಪ್ಪನವರ್, ಬಸನಗೌಡ ಪಾಟೀಲ್ ಯತ್ನಾಳ್ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ನಿರಾಣಿ, ಸಿಸಿ ಪಾಟೀಲ್ ಮೊದಲಾದ ಶಾಸಕರು ಆರೋಪಿಸಿದ್ದಾರೆ.

news18-kannada
Updated:February 22, 2021, 2:35 PM IST
ಯತ್ನಾಳ್ ಕಾಂಗ್ರೆಸ್​ನ ಬಿ ಟೀಮ್; ಪಕ್ಷೇತರನಾಗಿ ನಿಂತು ಗೆದ್ದು ಬರಲಿ: ಮುರುಗೇಶ್ ನಿರಾಣಿ ಸವಾಲು
ಮುರುಗೇಶ್ ನಿರಾಣಿ.
  • Share this:
ಬೆಂಗಳೂರು(ಫೆ. 22): ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಮಾಡುತ್ತಿರುವ ಹೋರಾಟವನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಮಾಜದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಇಂಥವರ ಕೈಗೊಂಬೆಯಾಗಬಾರದು ಎಂದು ಪಂಚಮಸಾಲಿ ಸಮುದಾಯದ ಮುರುಗೇಶ್ ನಿರಾಣಿ, ಸಿಸಿ ಪಾಟೀಲ್ ಮೊದಲಾದವರು ಅಭಿಪ್ರಾಯಪಟ್ಟರು. ಈ ಮೂಲಕ ಪಂಚಮಸಾಲಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ ಮತ್ತು ವಿಜಯಾನಂದ ಪಾಶಪ್ಪ ಅವರಿಗೆ ತಿರುಗೇಟು ನೀಡಿದರು. 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಡುತ್ತಿರುವ ಪಂಚಮಸಾಲಿ ಸಮುದಾಯದವರು ನಿನ್ನೆ ಸಮಾವೇಶ ನಡೆಸಿದ ಬಳಿಕ ಇದೀಗ ಮಾರ್ಚ್ 4ರವರೆಗೆ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಆರು ಪಂಚಮಸಾಲಿ ಶಾಸಕರು ಇಂದು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪ ಮೊದಲಾದವರ ವಿರುದ್ಧ ಹರಿಹಾಯ್ದರು.

ಸಚಿವರಾದ ಸಿ.ಸಿ. ಪಾಟೀಲ್ ಮತ್ತು ಮುರುಗೇಶ್ ನಿರಾಣಿ, ಶಾಸಕರಾದ ಮಹೇಶ್ ಕುಮಟಳ್ಳಿ, ಅರುಣ್ ಪೂಜಾರಿ, ಶಂಕರ್ ಪಾಟೀಲ್, ಸಂಸದ ಸಂಗಣ್ಣ ಕರಡಿ, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಮೋಹನ್ ಲಿಂಬಿಕಾಯಿ, ವಿರೂಪಾಕ್ಷಪ್ಪ ಬಳ್ಳಾರಿ ಮೊದಲಾದವರು ಈ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: 2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯದವರಿಂದ ಮಾರ್ಚ್ 4ರವರೆಗೆ ಧರಣಿ

ನಿನ್ನೆ ನಡೆದ ಪಂಚಮಸಾಲಿಗಳ ಸಮಾವೇಶದಲ್ಲಿ ಲಕ್ಷಾಂತರ ಜನರು ಪಾಲ್ಗೊಂಡು ಅರ್ಥಪೂರ್ಣವಾಗಿ ಕಾರ್ಯಕ್ರಮವಾಗಿದೆ. ಆದರೆ, ಕೆಲವರು ಸ್ವಾರ್ಥಕ್ಕಾಗಿ ಕಾರ್ಯಕ್ರಮವನ್ನು ಮತ್ತು ಶ್ರೀಗಳನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಶ್ರೀಗಳು ಈ ನಾಯಕರ ಕೈಗೊಂಬೆಯಾಗಬಾರದು ಎಂದು ಮನವಿ ಮಾಡಿದ ಸಚಿವ ಸಿ.ಸಿ. ಪಾಟೀಲ್, ಸರ್ಕಾರ ತನ್ನ ಪ್ರಯತ್ನ ಮಾಡುತ್ತಿದೆ. ಒಂದಷ್ಟು ಕಾಲಾವಕಾಶ ಕೊಡಬೇಕು. ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ವಿಚಾರವನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಒಬಿಸಿ ಆಯೋಗಕ್ಕೆ ಸೂಚನೆ ನೀಡಿದ್ದಾರೆ. ಸಮುದಾಯದವರು ತಾಳ್ಮೆ ವಹಿಸಬೇಕು ಎಂದು ಕೇಳಿಕೊಂಡರು.

ಮುರುಗೇಶ್ ನಿರಾಣಿ ಅವರಂತೂ ಬಸನಗೌಡ ಪಾಟೀಲ್ ಯತ್ನಾಳ ಮೇಲೆ ಹರಿಹಾಯ್ದು ಅವರನ್ನ ಕಾಂಗ್ರೆಸ್​ನ ಬಿ ಟೀಮ್ ಸದಸ್ಯ ಎಂದು ಕಿಚಾಯಿಸಿದರು. ತಾನು ಯಾರಿಗೂ ಪಂಪ್ ಹೊಡೆಯೋದಿಲ್ಲ, ಯಾವ ನೋಟೀಸ್​ಗೂ ಜಗ್ಗೋದಿಲ್ಲ. ಮುರುಗೇಶ್ ನಿರಾಣಿ, ಸಿಸಿ ಪಾಟೀಲ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿಕೆ ನೀಡಿದ್ದ ಯತ್ನಾಳ್​ಗೆ ನಿರಾಣಿ ತಿರುಗೇಟು ನೀಡಿದರು.

ಇದನ್ನೂ ಓದಿ: ಗ್ರಾಮ ವಾಸ್ತವ್ಯ: ದಲಿತರ ಮನೆಯಲ್ಲಿ ರಾಗಿ ರೊಟ್ಟಿ ತಿಂದ ಆರ್.ಅಶೋಕ್; ಬಡವರ ಮನೆಬಾಗಿಲಿಗೆ ಆಡಳಿತ ಯಂತ್ರ ಎಂದ ಸಚಿವ 

ತಾವು ಜನರಿಂದ ಶಾಸಕರಾಗಿ ಆಯ್ಕೆಯಾಗಿದ್ದೇವೆ. ಹೈಕಮಾಂಡ್ ನಮ್ಮನ್ನ ಸಚಿವರನ್ನಾಗಿ ಮಾಡಿದೆ. ಯತ್ನಾಳರಿಂದ ತಾವು ಸಚಿವರಾಗಿಲ್ಲ. ಯತ್ನಾಳ ಯಾರಿಗೂ ಪಂಪ್ ಹೊಡೆಯಲ್ಲ ಅಂತಾರೆ. ಹಿಂದೆ ಅವರು ಪಕ್ಷೇತರ ಶಾಸಕರಾಗಿದ್ದಾಗ ಯಾರೆಲ್ಲಾ ಸಹಾಯ ಪಡೆದಿದ್ದರು ಎಂದು ನೆನಪಿಸಿಕೊಳ್ಳಲಿ. ಅವರಿಗೆ ಧೈರ್ಯ ಇದ್ದರೆ ರಾಜೀನಾಮೆ ನೀಡಿ ಹೊರಬಂದು ಪಕ್ಷೇತರರಾಗಿ ನಿಂತು ಗೆದ್ದು ತೋರಿಸಲಿ ಎಂದು ಮುರುಗೇಶ್ ನಿರಾಣಿ ಸವಾಲು ಹಾಕಿದರು.ಇದೇ ವೇಳೆ, ತಾನು ಕೆಲ ರಾಜಕಾರಣಿಗಳ ಕೈಗೊಂಬೆಯಾಗಿದ್ದೇನೆ ಎಂಬ ಆರೋಪವನ್ನು ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾರಾಸಗಟಾಗಿ ತಳ್ಳಿಹಾಕಿದರು. ತಾವು ಈ ಹೋರಾಟಕ್ಕೆ ಕೈಹಾಕಿದಾಗ ಬಹಿರಂಗವಾಗಿ ಬೆಂಬಲ ನೀಡಿದ್ದು ವಿಜಯಾನಂದ ಕಾಶಪ್ಪನವರ ಅವರು. ಆಡಳಿತ ಪಕ್ಷದಿಂದ ಬಸನಗೌಡ ಪಾಟೀಲ ಯತ್ನಾಳ ಕೂಡ ಬೆಂಬಲ ನೀಡಿದ್ದನ್ನ ಸ್ವೀಕರಿಸಿದೆವು. ನಮಗೆ ಅವರು ಇವರು ಎಂಬುದಿಲ್ಲ. ನಮ್ಮ ಮಾತುಗಳಿಗೆ ಸ್ಪಂದಿಸಿ ಬೆಂಬಲ ನೀಡುವವರನ್ನ ಸ್ವಾಗತಿಸುತ್ತೇವೆ. ಬೇರೆಯವರ ಮಾತು ಕೇಳಿಕೊಂಡಿರಲು ತಾವು ಮರಿಸ್ವಾಮಿಗಳಲ್ಲ. ಒಂದು ಪೀಠದ ಜಗದ್ಗುರುಗಳು. ಇಂಥ ನೂರಾರು ಹೋರಾಟಗಳನ್ನ ನಮ್ಮ ಪೀಠ ಮಾಡಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by: Vijayasarthy SN
First published: February 22, 2021, 2:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories