ಪೋಕ್ಸೋ ಪ್ರಕರಣದಡಿಯಲ್ಲಿ (POCSO Case) ಜೈಲು ಪಾಲಾಗಿರುವ ಮುರುಘಾ ಮಠದ (Murugha Mutt) ಸ್ವಾಮಿಯ ರಕ್ಷಣೆಗೆ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿರುವ ಮಾಹಿತಿ ನ್ಯೂಸ್ 18ಗೆ ಲಭ್ಯವಾಗಿದೆ. ಮುರುಘಾ ಸ್ವಾಮಿ (Murugha Swamy) ವಿರುದ್ಧ ದೂರು ಸಲ್ಲಿಸಿರುವ ದೂರುದಾರರಿಗೆ ಕೋಟಿ ಕೋಟಿಯ ಆಫರ್ ನೀಡಲಾಗುತ್ತಿರುವ ವಿಷಯ ಬಹಿರಂಗಗೊಂಡಿದೆ. ಮುರುಘಾ ಮಠ ಮತ್ತು ರಾಜಕೀಯ ನಾಯಕನೋರ್ವ (Political Leader) ಈ ಆಮಿಷ ನೀಡುತ್ತಿರುವ ಗಂಭೀರ ಆರೋಪಗಳು ಕೇಳಿ ಬಂದಿವೆ. ಮಠದ ಸಿಬ್ಬಂದಿ ಮತ್ತು ಒಬ್ಬ ರಾಜಕೀಯ ವ್ಯಕ್ತಿ ಒಡನಾಡಿ ಸಂಸ್ಥೆ ಮೇಲೆ ಒತ್ತಡ ಹಾಕಲಾಗುತ್ತಿದೆ. 15 ದಿನಗಳಲ್ಲಿ ಓರ್ವ ಮಹಿಳೆ (Woman) ಮೂಲಕ ಆಫರ್ ನೀಡಲಾಗುತ್ತಿದೆ ಎಂದು ಒಡನಾಡಿ ಸಂಸ್ಥೆ (Odanadi Organization) ಮುಖ್ಯಸ್ಥ ಪರಶು ಆರೋಪ ಮಾಡಿದ್ದಾರೆ. ಆದ್ರೆ ಪರಶು ಆಮಿಷ ನೀಡಿದವರು ಯಾರು ಎಂಬುದನ್ನು ಬಿಟ್ಟುಕೊಟ್ಟಿಲ್ಲ.
ನಾವು ಆಮಿಷಕ್ಕೆ ಬಗ್ಗಲ್ಲ ಎಂಬುವುದು ಅವರಿಗೂ ಗೊತ್ತಾಗಿದೆ. ಆಮಿಷ ಒಡ್ಡಲು ಬಂದವರಿಗೆ ನಿಮ್ಮ ಮಕ್ಕಳಿಗೆ ಹೀಗೆ ಆಗಿದ್ರೆ ನೀವೇನು ಮಾಡುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದೇನೆ. ಆದ್ರೆ ನಾಚಿಕೆ ಬಿಟ್ಟು ಅವರು ರಾಜಕೀಯ ನಾಯಕತ್ವ ನಿರ್ವಹಣೆ ಮಾಡುತ್ತಿರೋದು ನಾಚಿಕೆಗೇಡಿನ ಕೆಲಸ ಎಂದು ಛೀಮಾರಿ ಹಾಕಿದ್ದೇನೆ ಎಂದು ಹೇಳಿದರು.
ಲೋಕಾಯುಕ್ತಕ್ಕೆ ದೂರು ಕೊಡುತ್ತಾ ಒಡನಾಡಿ ಸಂಸ್ಥೆ?
ಮೊದಲು ಮಕ್ಕಳಿಗೆ ನ್ಯಾಯ ಸಿಗಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ. ತದನಂತರ ಆಮಿಷಕ್ಕೆ ಒಡ್ಡಿದವರ ವಿರುದ್ಧ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ. ಈ ಸಂಬಂಧ ನಮ್ಮ ವಕೀಲರ ಜೊತೆ ಚರ್ಚಿಸಿ, ಲೋಕಾಯುಕ್ತಕ್ಕೆ ಹೋಗಬೇಕಾ? ಕಾನೂನಿನಲ್ಲಿ ನಮಗೆ ಯಾವೆಲ್ಲಾ ಅವಕಾಶಗಳಿವೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳುತ್ತೇವೆ ಎಂದು ಹೇಳಿದರು.
ದೊಡ್ಡ ನಾಯಕನ ಜೊತೆಯಲ್ಲಿ ಬಂದಿದ್ರು
ದೊಡ್ಡ ನಾಯಕರ ಹೆಸರಲ್ಲಿ ನಮ್ಮ ಹತ್ತಿರ ಬಂದಿದ್ದಾರೆ. ಈ ಭಾಗದ ಪ್ರಮುಖ ನಾಯಕರು ಆಪ್ತರು. ಮೈಸೂರು ಭಾಗದ ನಾಯಕರೊಬ್ಬರು ಆಮಿಷ ಒಡ್ಡುವ ವ್ಯಕ್ತಿಯನ್ನು ಕರೆದುಕೊಂಡು ಪರಿಚಯಿಸಿ ಹೋದರು. ನಾನು ಈ ಪ್ರಕರಣದಲ್ಲಿ ಭಾಗಿಯಾಗಲ್ಲ ಎಂದು ಹೇಳಿ ಹೊರಟು ಹೋದರು. ಆಮಿಷ ನೀಡಲು ಬಂದಿದ್ದವರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಎಂದು ನ್ಯೂಸ್ 18ಗೆ ಹೇಳಿದರು.
ಇದನ್ನೂ ಓದಿ: Murugha Mutt: ಮುರುಘಾ ಮಠದಲ್ಲಿ 4 ವರ್ಷದ ಹೆಣ್ಣು ಮಗು ಪತ್ತೆ, ಮೂರನೇ ಆರೋಪಿಗೆ ಜಾಮೀನು
ಒಡನಾಡಿ ಸಂಸ್ಥೆಯ ವಿರುದ್ಧ ದೂರು
ಮುರುಘಾ ಸ್ವಾಮಿ ರಕ್ಷಣೆಗೆ ಮಠದ ಸಮಿತಿಯಿಂದ ಯತ್ನ ನಡೆಯುತ್ತಿದೆ. ಮುರುಘಾ ಸ್ವಾಮಿ ವಿರುದ್ಧ ಪಿತೂರಿ ಆಗಿದೆ ಅಂತ ದೂರು ದಾಖಲಾಗಿದೆ. ಒಡನಾಡಿ ಸಂಸ್ಥೆಯ ಮುಖ್ಯಸ್ಥರನ್ನ ಬಂಧಿಸಿ ತನಿಖೆ ಮಾಡಬೇಕು ಎಂದು ಮಠದ ಸಲಹಾ ಸಮಿತಿ ಸದಸ್ಯ ಜಿತೇಂದ್ರ ಹುಲಿಕುಂಟೆ ಎಂಬವರು ADGP ಅಲೋಕ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಜಿತೇಂದ್ರ ಹುಲಿಕುಂಟೆ ನೀಡಿರುವ ದೂರಿಗೆ ಪ್ರತಿಕ್ರಿಯಿಸಿದ ಪರಶು, ಪ್ರಜಾಪ್ರಭುತ್ವದಲ್ಲಿ ದೂರು ನೀಡಲು ಎಲ್ಲರಿಗೂ ಅವಕಾಶಗಳಿಗೆ. ಹುಲಿಕುಂಟೆ ವಿರುದ್ಧ ಮಟ್ಕಾ ಆಡಿಸುತ್ತಿದ್ದರು ಎಂಬ ಆರೋಪಗಳಿವೆ ಎಂದರು.
ಇದನ್ನೂ ಓದಿ: Murugha Swamy: ಹೆಣ್ಮಕ್ಕಳು ಸ್ವಾಮಿಗಳ ಬಳಿ ಹೋಗದ ಪರಿಸ್ಥಿತಿ ನಿರ್ಮಾಣ: ಶಾಸಕ ಶಾಮನೂರು ಶಿವಶಂಕರಪ್ಪ
694 ಪುಟಗಳ ಚಾರ್ಜ್ಶೀಟ್!
ಮುರುಘಾ ಸ್ವಾಮಿ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಒಟ್ಟು 694 ಪುಟಗಳ ಚಾರ್ಜ್ ಶೀಟ್ ನಲ್ಲಿ ಮಠದಲ್ಲಿ ನಡೆಯುತ್ತಿದೆ ಎನ್ನಲಾದ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ