HOME » NEWS » State » MURDER TWO AGED PERSONS KILLED BY RELATIVES IN VIJAYAPURA IN PROPERTY DISPUTE SCT

24 ಗಂಟೆಯಲ್ಲಿ ಇಬ್ಬರ ಕಗ್ಗೊಲೆ; ವೃದ್ಧರ ಹತ್ಯೆಗೆ ಬೆಚ್ಚಿಬಿದ್ದ ವಿಜಯಪುರ

Crime News: ಹಳೆಯ ವೈಷ್ಯಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರವಾಗಿ ಕೊಲೆ ಮಾಡಿದ ಘಟನೆ ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದಲ್ಲಿ ನಡೆದಿದೆ. ಮಲಗಿದ್ದ ವೃದ್ಧನನ್ನು ದಾಯಾದಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಇಂಡಿ ತಾಲೂಕಿನ ಆಳೂರ ಗ್ರಾಮದಲ್ಲಿ ನಡೆದಿದೆ. 

news18-kannada
Updated:September 29, 2020, 3:27 PM IST
24 ಗಂಟೆಯಲ್ಲಿ ಇಬ್ಬರ ಕಗ್ಗೊಲೆ; ವೃದ್ಧರ ಹತ್ಯೆಗೆ ಬೆಚ್ಚಿಬಿದ್ದ ವಿಜಯಪುರ
ಸಾಂದರ್ಭಿಕ ಚಿತ್ರ
  • Share this:
ವಿಜಯಪುರ (ಸೆ. 29): ಕೇವಲ 24 ಗಂಟೆಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ವೃದ್ಧರ ಭೀಕರ ಕೊಲೆಯಾಗಿದ್ದು, ಹೆಚ್ಚುತ್ತಿರುವ ಕೊಲೆ ಪ್ರಕರಣಗಳಿಂದ ವಿಜಯಪುರ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ.ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ವೃದ್ಧರ ಕೊಲೆಯಾಗಿದೆ.  ಒಂದು ಕೊಲೆ ಮುಸ್ಸಂಜೆ ನಡೆದರೆ, ಮತ್ತೊಂದು ಕೊಲೆ ರಾತ್ರಿ ನಡೆದಿದೆ. ಮೊದಲ ಪ್ರಕರಣದಲ್ಲಿ ಆಸ್ತಿ ವಿವಾದ ಮತ್ತು ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ವಿಜಯಪುರ ತಾಲೂಕಿನಲ್ಲಿ ನಡೆದಿದೆ. ಇಂಡಿಯಲ್ಲಿ ನಡೆದ ಮತ್ತೊಂದು ಕೊಲೆ ಕೂಡ ದಾಯಾದಿಗಳ ಕಹದಿಂದ ನಡೆದಿದೆ.  ಹಳೆಯ ವೈಷ್ಯಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರವಾಗಿ ಕೊಲೆ ಮಾಡಿದ ಘಟನೆ ವಿಜಯಪುರ ತಾಲೂಕಿನ ಡೋಮನಾಳ ಗ್ರಾಮದಲ್ಲಿ ನಡೆದಿದೆ. ದನ ಮೇಯಿಸಲು ಹೋಗಿದ್ದ ಡೋಮನಾಳ ನಿವಾಸಿ ಶಾಂತಪ್ಪ ಈರಪ್ಪ ತೊರವಿ (65) ಎಂಬಾತ ಪರಿಚಯಸ್ಥರ ತೋಟದ ಮನೆಯಲ್ಲಿ ಸ್ನೇಹಿತನೊಂದಿಗೆ ಮಾತನಾಡುತ್ತ ಕುಳಿತಿದ್ದ.  ಆಗ ಬೈಕಿನಲ್ಲಿ ಬಂದ ಮೂರು ಜನ ವೃದ್ಧನ ಮೇಲೆ ಮಾರಾಕಾಸ್ತ್ರಗಳಿಂದ ಧಾಳಿ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಲೆಯಾದ ಶಾಂತಪ್ಪ ಈರಪ್ಪ ತೊರವಿಗೆ ಆತನ ಪತ್ನಿ ಶಾಂತಾಬಾಯಿ ತವರು ಕನ್ನೂರು ಗ್ರಾಮದಲ್ಲಿ ತವರು ಮನೆಯಿಂದ ಆಸ್ತಿ ಲಭಿಸಿತ್ತು.  ಈ ಸಂಬಂಧ ಸುಮಾರು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು.  ಅಲ್ಲದೆ, ಹೈಕೋರ್ಟ್ ಕೂಡ ಶಾಂತಾಬಾಯಿ ಹೆಸರಿಗೆ ಆಸ್ತಿ ಸೇರಿದೆ ಎಂದು ತೀರ್ಪು ನೀಡಿತ್ತು.  ಈ ಸಂಬಂಧ ಶಾಂತಾಬಾಯಿ ತವರು ಮನೆಯ ದಾಯಾದಿಗಳು ತಮಗೂ ಆಸ್ತಿ ನೀಡುವಂತೆ ತಕರಾರು ಮಾಡಿದ್ದರು ಎನ್ನಲಾಗಿದೆ.  ಇದೇ ಸಿಟ್ಟಿನಿಂದ ನಿನ್ನೆ ಈ ಕೊಲೆ ನಡೆದಿದೆ. ಕನ್ನೂರು ಗ್ರಾಮದ ಮೂರು ಜನರ ವಿರುದ್ಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂಡಿಯಲ್ಲಿ ವೃದ್ಧನ ಕೊಲೆ:
ಎರಡನೇ ಪ್ರಕರಣದಲ್ಲಿ ಮಲಗಿದ್ದ ವೃದ್ಧನನ್ನು ದಾಯಾದಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಆಳೂರ ಗ್ರಾಮದಲ್ಲಿ ನಡೆದಿದೆ. ಆಳೂರ ಗ್ರಾಮದಲ್ಲಿ ಸಮುದಾಯ ಭವನದ ಬಳಿ ಮಲಗಿದ್ದ ವಿಠೋಬಾ ಪರಸಪ್ಪ ಸಾಲೋಟಗಿ (75) ಎಂಬಾತನನ್ನು ನಿನ್ನೆ ಮಧ್ಯರಾತ್ರಿ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.ಈ ಕೊಲೆಗೆ ಹಳೆಯ ವೈಷಮ್ಯ, ದಾಯಾದಿ ಕಲಹ ಅಥವಾ ಮತ್ತೆ ಬೇರೆ ಏನಾದರೂ ಕಾರಣವಿದೆಯಾ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ವಿಜಯಪುರ ಜಿಲ್ಲೆಯ ಇಂಡಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

Youtube Video


ಇತ್ತೀಚಿನ ದಿನಗಳಲ್ಲಿ ವಿಜಯಪುರ ಪೊಲೀಸರು ಅಪರಾಧಗಳಿಗೆ ಕಡಿವಾಣ ಹಾಕಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದಾರೆ. ನಾನಾ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.  ಆದರೂ, ಒಂದಿಲ್ಲೊಂದು ಕಾರಣಗಳಿಂದಾಗಿ ಕೊಲೆ ಪ್ರಕರಣಗಳು ಮುಂದುವರೆದಿವೆ.
ಅದರಲ್ಲೂ ಕೇವಲ 24 ಗಂಟೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ವೃದ್ಧರ ಕೊಲೆಯಾಗಿರುವುದು ವಿಜಯಪುರ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ.
Published by: Sushma Chakre
First published: September 29, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories