ರಾಕಿಂಗ್​ ಸ್ಟಾರ್​ ಯಶ್​ ಕೊಲೆಗೆ ಭೂಗತ ಪಾತಕಿಗಳಿಂದ ಸಂಚು?

news18
Updated:July 12, 2018, 1:39 PM IST
ರಾಕಿಂಗ್​ ಸ್ಟಾರ್​ ಯಶ್​ ಕೊಲೆಗೆ ಭೂಗತ ಪಾತಕಿಗಳಿಂದ ಸಂಚು?
ಟಗರು ಸಿನಿಮಾ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮಾತು
news18
Updated: July 12, 2018, 1:39 PM IST
ನ್ಯೂಸ್​ 18 ಕನ್ನಡ 

ಚಂದನವನದ ನಟ ರಾಕಿಂಗ್​ಸ್ಟಾರ್ ಯಶ್​ ಕೊಲೆಗೆ ಭೂಗತ ಪಾತಕಿಗಳು ಸಂಚು ರೂಪಿಸಿದ್ದರು ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಯಶ್​ ಕೊಲೆಗೆ ನಡೆದಿದ್ದ ಸಂಚಿನ ಗುಟ್ಟು ರೌಡಿ ಸೈಕಲ್​ ರವಿ ಬಂಧನದಿಂದ ಬಹಿರಂಗವಾಗಿದೆಯಂತೆ.

ಎರಡೂವರೆ ವರ್ಷದ ಹಿಂದೆಯೇ ಜೀವ ಬೆದರಿಕೆ ಇದೆ ಎಂದು ಯಶ್ ದೂರು ನೀಡಿದ್ದರು. ಬೆಂಗಳೂರು ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ಯಶ್​ ಕೇವಲ ಮೌಖಿಕವಾಗಿ ದೂರು ನೀಡಿದ್ದರು. ಆದರೆ ರೌಡಿ ಸೈಕಲ್​ ರವಿ ಬಂಧನದ ನಂತರ ಈ ಪ್ರಕರಣಕ್ಕೆ ಮರುಜೀವ ನೀಡಿದ್ದಾರೆ ಸಿಸಿಬಿ ಪೊಲೀಸರು.

ಯಶ್ ಬಗ್ಗೆ ಬೆಂಗಳೂರು ಹೊರವಲಯದಲ್ಲಿ ಕೆಲ ಪಾತಕಿಗಳಳು ಚರ್ಚೆ ನಡೆಸಿದ್ದರು ಎಂಬ ಸತ್ಯ ಸೈಕಲ್​ ರವಿ ತನಿಖೆ ವೇಳೆ ಬಾಯಿಬಿಟ್ಟಿದ್ದಾನೆ ಎನ್ನಲಾಗುತ್ತಿದೆ. ಇದರಿಂದಾಗಿ ಈಗ ಸೈಕಲ್ ರವಿ ಪ್ರಕರಣದೊಂದಿಗೆ ಯಶ್ ಅವರ ದೂರು ಸಹ ತನಿಖೆಯಾಗಲಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಜಂಟಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್, ತನಿಖೆ ವೇಳೆ ಯಶ್ ಹತ್ಯೆಗೆ ಯಾವುದೇ ಸಿದ್ದತೆ ನಡೆಸಿರಲಿಲ್ಲ ಎಂಬುದು ಬೆಳಕಿಗೆ ಬಂದಿದ್ದು, ಇದು ಸುಳ್ಳು ಸುದ್ದಿ ಎಂದು ತಳ್ಳಿಹಾಕಿದ್ದಾರೆ.

ಇನ್ನೂ ಈ ವಿಚಾರವಾಗಿ ಶಿವರಾಜ್ ಕುಮಾರ್ ಸಹ ಪ್ರತಿಕ್ರಿಸಿದ್ದು,  'ಅಪರಾಧಗಳೇ ನಡೆಯಬಾರದು ಎನ್ನುವುದು ನಮ್ಮ ಅಭಿಪ್ರಾಯ. ಯಶ್ ಅಂತ ಅಷ್ಟೇಅಲ್ಲ ಯಾರೇ ಆಗಿರಲಿ ಪ್ರತಿಯೊಬ್ಬರ ಪ್ರಾಣಕ್ಕೂ ಬೆಲೆ ಇದೆ.  ಸ್ವಲ್ಪ ಸಂಶಯ ಬರುತ್ತಿದ್ದಂತೆಯೇ ಪೊಲೀಸರು ಕ್ರಮ ಕೈಗೊಳ್ಳಬೇಕು. ಈ ರೀತಿಯ ವಿಷಯ ಗೊತ್ತಾದಾಗ ನಮಗೇಕೆ ಎಂದು ಸುಮ್ಮನಿರಬಾರದು. ಕೂಡಲೇ ಪೋಲೀಸರಿಗೆ ತಿಳಿಸಬೇಕು' ಎಂದು ಹೇಳಿದ್ದಾರೆ.

 
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...