• Home
 • »
 • News
 • »
 • state
 • »
 • Shivamogga Murder Case: ಭಜರಂಗದಳದ ಕಾರ್ಯಕರ್ತನ ಸಾವಿಗೆ ಕಂಬನಿ ಮಿಡಿದ ಸಿನಿಮಾ ರಂಗದ ಗಣ್ಯರು

Shivamogga Murder Case: ಭಜರಂಗದಳದ ಕಾರ್ಯಕರ್ತನ ಸಾವಿಗೆ ಕಂಬನಿ ಮಿಡಿದ ಸಿನಿಮಾ ರಂಗದ ಗಣ್ಯರು

ಹರ್ಷ

ಹರ್ಷ

Cinema industry personalities pays tribute:ಸದ್ಯ ಸಕ್ರಿಯ ರಾಜಕಾರಣದಿಂದ ದೂರ ಉಳಿದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಮಾಜಿ ಸಂಸದೆ ರಮ್ಯಾ ಕೂಡಾ ಹರ್ಷನ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

 • Share this:

  ಭಜರಂಗದಳದ (BajarangadalLಕಾರ್ಯಕರ್ತ ಹರ್ಷನ(Harsha) ಹತ್ಯೆ (Murder) ಪ್ರಕರಣ ಈಗ ರಾಷ್ಟ್ರಮಟ್ಟದಲ್ಲಿ (National)ಚರ್ಚೆಯಾಗುತ್ತಿದೆ.  ಹರ್ಷನ ಸಾವಿಗೆ ಚಿತ್ರರಂಗದ(Film industry) ಗಣ್ಯರು, ಸಿನಿಮಾ ತಾರೆಯರು ರಾಜಕಾರಣಿಗಳು (Politicians)ಕಂಬನಿ ಮಿಡಿಯುತ್ತಿದ್ದಾರೆ. ಹರ್ಷನ ಹತ್ಯೆ ಪ್ರಕರಣ ಖಂಡಿಸಿ ರಾಜ್ಯದ ಮೂಲೆಮೂಲೆಯಲ್ಲಿ ಪ್ರತಿಭಟನೆಗಳು (Protest)ನಡೆಯುತ್ತಿವೆ. ರಾಜಕೀಯ ತಿರುವು ಪಡೆದುಕೊಂಡಿರುವ ಹರ್ಷನ ಹತ್ಯೆ ಪ್ರಕರಣದಲ್ಲಿ ರಾಜಕೀಯ ನಾಯಕರು ಒಂದಲ್ಲಾ ಒಂದು ಹೇಳಿಕೆ ನೀಡಿ ಸಂತಾಪ ಸೂಚಿಸಿದ್ದಾರೆ.. ಹಾಗಿದ್ರೆ ಹರ್ಷನ ಹತ್ಯೆ ಪ್ರಕರಣಕ್ಕೆ ಯಾವ ಯಾವ ನಟರು, ಗಣ್ಯರು ಸಂತಾಪ ಸೂಚಿಸಿದ್ದಾರೆ ಎನ್ನುವುದನ್ನು ನೋಡೋಣ..


  ಒಡೆದು ಆಳುವ ರಾಜಕೀಯಕ್ಕೆ ಇನ್ನೆಷ್ಟು ಬಲಿ ಎಂದ ರಮ್ಯ..?


  ಸದ್ಯ ಸಕ್ರಿಯ ರಾಜಕಾರಣದಿಂದ ದೂರ ಉಳಿದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಮಾಜಿ ಸಂಸದೆ ರಮ್ಯಾ ಕೂಡಾ ಹರ್ಷನ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ..ಒಡೆದು ಆಳುವ ರಾಜಕೀಯಕ್ಕೆ ಇನ್ನೆಷ್ಟು ಜನರನ್ನು ನಾವು ಕಳೆದುಕೊಳ್ಳಬೇಕು?’’ ಎಂದು ಪ್ರಶ್ನಿಸಿರುವ ರಮ್ಯಾ, ‘‘ಶಾಂತಿ, ಏಕತೆ ಹಾಗೂ ಸಾಮರಸ್ಯ ಮಾತ್ರ ಮುಂದಿನ ಆಯ್ಕೆ’’ ಎಂದು ಅವರು ಹೇಳಿದ್ದಾರೆ.. ಇನ್ನು ಬಾಲಿವುಡ್ ನಟಿ ಕಂಗನಾ ರಾಣಾವತ್ ಸಹ ಹರ್ಷನ ಸಾವಿಗೆ ಕಂಬನಿ ಮಿಡಿದಿದ್ದು ಹರ್ಷನ ತಾಯಿ ರೋಧನೆ ಮಾಡುತ್ತಿರುವ ದೃಶ್ಯ ಹಂಚಿಕೊಂಡು ಇದು ಕರುಳು ಹಿಂಡುವ ದೃಶ್ಯ ಎಂದು ಬರೆದು ದುಃಖ ತೋಡಿಕೊಂಡಿದ್ದಾರೆ.


  ಇದನ್ನೂ ಓದಿ: 14 ದಿನ ನ್ಯಾಯಾಂಗ ಬಂಧನ: ನಟ ಚೇತನ್ ವಿರುದ್ಧ ದಾಖಲಾಗಿರುವ FIRನಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ


  ಹರ್ಷನ ಕುಟುಂಬ ನಟ ಪ್ರಥಮ್ ಸಹಾಯ


  ಸ್ಯಾಂಡಲ್​ವುಡ್ ನಟ ಪ್ರಥಮ್ ಹರ್ಷ ಅವರ ಕುಟುಂಬಕ್ಕೆ ಧನಸಹಾಯ ಮಾಡಿದ್ದಾರೆ. ಹುಡುಗನ ಕುಟುಂಬಕ್ಕೆ ₹ 25,000 ರೂಗಳನ್ನು ನೀಡಿರುವ ಅವರು, ‘ಪ್ರಸ್ತುತ ಕಷ್ಟದಲ್ಲಿದ್ದೇನೆ. ನಟಭಯಂಕರ ಚಿತ್ರ ರಿಲೀಸ್ ಆದ ನಂತರ ಮತ್ತಷ್ಟು ಸಹಾಯ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.ಇನ್ನು ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಜಸ್ಟೀಸ್ ಫಾರ್ ಹರ್ಷ ಎಂದು ಟ್ವೀಟ್ ಮಾಡಿದ್ದಾರೆ.ಇನ್ನು ಮಾಳವಿಕಾ ಅವಿನಾಶ್ ಘಟನೆಯ ಕುರಿತು ಪ್ರತಿಕ್ರಿಯಿಸಿ, ಹರ್ಷ ಅವರಿಗೆ ಸದ್ಗತಿ ದೊರೆಯಲಿ ಎಂದು ಕಂಬನಿ ಮಿಡಿದಿದ್ದು, ಸರ್ಕಾರ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದಿದ್ದಾರೆ  ಹರ್ಷನ ಮನೆಗೆ ರಾಜಕೀಯ ನಾಯಕರ ಭೇಟಿ


  ಶಿವಮೊಗ್ಗದ ಸೀಗೆಹಟ್ಟಿಯಲ್ಲಿರುವ ಹರ್ಷ ಮನೆಗೆ ಸಂಸದ ತೇಜಸ್ವಿ ಸೂರ್ಯಮುಖ್ಯಮಂತ್ರಿಗಳ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಶ್ರೀ ಸಂತೋಷ್ ಗುರೂಜಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.


  ಇನ್ನು ಹರ್ಷನ ಸಾವಿನ ಬಳಿಕ ಶಿವಮೊಗ್ಗ ಜಿಲ್ಲೆ ಹೊತ್ತಿ ಉರಿಯುತ್ತಿದ್ದು ನಿನ್ನೇ ದಿನವಿಡೀ ಉದ್ರಿಕ್ತ ಗುಂಪುಗಳು ಕಂಡ ಕಂಡಲ್ಲಿ ಆಸ್ತಿಪಾಸ್ತಿಗಳ ಮೇಲೆ ಕಲ್ಲು ತೂರಿ, ವಾಹನಗಳು, ಅಂಗಡಿಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರಕ್ಕಿಳಿದಿದ್ದು, ಈ ವೇಳೆ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ನಿಷೇಧಾಜ್ಞೆ ನಡುವೆಯೇ ನಡದ ಈ ಭಾರೀ ಹಿಂಸಾಚಾರ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿ ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿ ಗುಂಪು ಚದುರಿಸಿದರು.


  ಇದನ್ನೂ ಓದಿ: ಹರ್ಷನ ಕುಟುಂಬಕ್ಕೆ ಸಂಸದ Tejasvi Surya ಸಾಂತ್ವನ; ಬಿಜೆಪಿ ಯುವ ಮೋರ್ಚಾದಿಂದ 5 ಲಕ್ಷ ರೂ ನೆರವು


  ಹರ್ಷನ ಕೊಲೆ ಹೇಗಾಯ್ತು..?


  ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ರಸ್ತೆ ಪಕ್ಕದ ಬಡಾವಣೆಯಲ್ಲಿ ಕಾರಿನಲ್ಲಿ ಬಂದಿದ್ದ ಜನರ ಗುಂಪು, ಬಜರಂಗದಳ ಕಾರ್ಯಕರ್ತ ಹರ್ಷ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಹರ್ಷ ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿದ್ದನು. ಕೂಡಲೇ ಹರ್ಷನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ

  Published by:ranjumbkgowda1 ranjumbkgowda1
  First published: