• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Murder: ಕಾದು ಕುಳಿತು ನಡು ರಸ್ತೆಯಲ್ಲಿಯೇ ಯುವಕನ ಬರ್ಬರ ಕೊಲೆ: ದುಷ್ಕರ್ಮಿಗಳು ಪರಾರಿ

Murder: ಕಾದು ಕುಳಿತು ನಡು ರಸ್ತೆಯಲ್ಲಿಯೇ ಯುವಕನ ಬರ್ಬರ ಕೊಲೆ: ದುಷ್ಕರ್ಮಿಗಳು ಪರಾರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಆನೇಕಲ್ (ಅಕ್ಟೋಬರ್​. 30): ಕಂಪನಿಯೊಂದರ ಕೆಲಸಕ್ಕೆಂದು ಬೈಕ್​​ನಲ್ಲಿ ಸಾಗುತ್ತಿದ್ದ ಯುವಕನೋರ್ವನ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಮಾಯಸಂದ್ರ ದಿಣ್ಣೆ ಸಮೀಪದ ಡಿಎಚೆಲ್ ಕಂಪನಿ ಬಳಿ ಇಂದು ಬೆಳಗ್ಗೆ ನಡೆದಿದೆ. ಬೆಸ್ತಮಾನಹಳ್ಳಿ ವಾಸಿ ವಿನಿತ್ (21) ಮೃತ ಯುವಕ. ಮೃತನ ಕೊಲ್ಲಲು ಮೊದಲೇ ಹೊಂಚು ಹಾಕಿ ಕಾದು ಕುಳಿತ್ತಿದ್ದ ದುಷ್ಕರ್ಮಿಗಳು ಅವನ ಬೈಕ್​​ನಲ್ಲಿ ಬರುತ್ತಿದ್ದ ಹಾಗೆ ಸಿನಿಮೀಯ ರೀತಿಯಲ್ಲಿ ಅಡ್ಡಗಟ್ಟಿ ಹಾಡುಹಗಲೇ ಅಟ್ಯಾಕ್ ಮಾಡಿದ್ದಾರೆ. ಜನ ನಿಬಿಡವಾದ ನಡು ರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮಾಯಸಂದ್ರ ದಿಣ್ಣೆ ಬಳಿಯ‌ ಜಾಕಿ ಕಂಪನಿಯೊಂದರಲ್ಲಿ ಕೆಲಸ‌ ಮಾಡಿಕೊಂಡಿದ್ದ ವಿನಿತ್ ಪುಂಡ ಪೋಕರಿಗಳ ಸಹವಾಸ ಸ್ವಲ್ಪ ಹೆಚ್ಚೆ ಇತ್ತು ಎನ್ನಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸಹ ಆಗಿದ್ದ ವಿನಿತ್ ಕಳೆದ ಎರಡು ವರ್ಷಗಳ ಹಿಂದೆ ದೇವರಾಜ್ ಎಂಬುವವನ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ. ವರ್ಷದ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದ ವಿನಿತ್ ನನ್ನು ಇಂದು ಕೆಲಸಕ್ಕೆ ಬೈಕ್​​​ನಲ್ಲಿ ಬರುತ್ತಿದ್ದ ವೇಳೆ ಡಿಎಚ್ಎಲ್ ಕಂಪನಿ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳ ಗ್ಯಾಂಗ್ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಂದು ಪರಾರಿಯಾಗಿದೆ‌


ಇನ್ನೂ ಮೃತ ವಿನಿತ್ ಕೆಲಸಕ್ಕಾಗಿ ಬರುವುದನ್ನೆ ಕಾಯುತ್ತಿದ್ದ ಕಿಡಿಗೇಡಿಗಳು ಈತನನ್ನೆ ಫಾಲೋ ಮಾಡಿಕೊಂಡು ಬಂದಿದ್ದಾರೆ. ಪಕ್ಕಾ ಸ್ಕೆಚ್‌ ಹಾಕಿಕೊಂಡಿದ್ದ ಗ್ಯಾಂಗ್ ದೇವರಾಜು ಕೊಲೆಯಾದ ಕೂಗಳತೆ ದೂರದಲ್ಲಿಯೇ ಬೈಕ್​​ನಲ್ಲಿ ಹೋಗುತ್ತಿದ್ದ ವಿನಿತ್ ನನ್ನು ಅಡ್ಡಗಟ್ಟಿದ್ದಾರೆ. ಬಳಿಕ ತಮ್ಮ ಬಳಿಯಿದ್ದ ಮಾರಕಾಸ್ತ್ರಗಳಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ತಲೆಯನ್ನೇ ಟಾರ್ಗೆಟ್ ಮಾಡಿರುವ ಕಿರಾತರು ಕೊಚ್ಚಿ ಕೊಂದಿದ್ದಾರೆ.


ಇದನ್ನೂ ಓದಿ : ಚನ್ನಪಟ್ಟಣದಲ್ಲೊಂದು ಡಿಜಿಟಲ್​ ಗ್ರಾಮ; ಸಹೋದರರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ


ಎರಡು ಬೈಕ್​​ಗಳಲ್ಲಿ ಬಂದಿದ್ದ ನಾಲ್ವರ ತಂಡದಿಂದ ವಿನಿತ್ ನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದು, ಆರೋಪಿಗಳ ಪತ್ತೆಗಾಗಿ ಅತ್ತಿಬೆಲೆ ಇನ್ಸ್​​ಪೆಕ್ಟರ್​​ ಮತ್ತು ಸಬ್ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಲಕ್ಷ್ಮೀ ಗಣೇಶ್ ತಿಳಿಸಿದ್ದಾರೆ.


ಅಂದಹಾಗೆ ಬದುಕಿ ಬಾಳಬೇಕಿದ್ದ ವಿನಿತ್ ಪುಟ್ಟ ವಯಸ್ಸಿನಲ್ಲಿಯೇ ಪಾತಕ‌ ಲೋಕದ ನಂಟಿಗೆ ಬಿದ್ದು ಇಂದು ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾನೆ. ಒಮ್ಮೆ ಮಚ್ಚು ಹಿಡಿದು ಕೈಗೆ ರಕ್ತ ಮೆತ್ತಿಸಿಕೊಂಡ ಮೇಲೆ ತನಗೂ ಮಚ್ಚಿನಿಂದಲೇ ಸಾವು ಎಂಬುದು ಮತ್ತೊಮ್ಮೆ ಸಾಬೀತು ಆಗಿದೆ. ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಲಕ್ಷ್ಮೀ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

First published: