ಚಿಕ್ಕಮಗಳೂರಿನ ಕಡೂರಿನಲ್ಲೊಂದು ಭೀಕರ ಘಟನೆ; 23 ದಿನದ ಕಂದಮ್ಮನನ್ನು ಒಲೆಯಲ್ಲಿಟ್ಟು ಬೆಂಕಿ ಹಚ್ಚಿದ ಅಮ್ಮ!

Chikmagalur Crime: ಅಡುಗೆಮನೆಯ ಒಲೆಯಲ್ಲಿ ಹೆಣ್ಣುಮಗುವನ್ನು ಹಾಕಿ, ಅದರ ಮೇಲೆ ಸೌದೆಗಳನ್ನಿಟ್ಟು ಬೆಂಕಿ ಹಚ್ಚಿದ ಅಮ್ಮನ ಕೃತ್ಯಕ್ಕೆ ಚಿಕ್ಕಮಗಳೂರು ಬೆಚ್ಚಿಬಿದ್ದಿದೆ.

news18-kannada
Updated:March 26, 2020, 11:14 AM IST
ಚಿಕ್ಕಮಗಳೂರಿನ ಕಡೂರಿನಲ್ಲೊಂದು ಭೀಕರ ಘಟನೆ; 23 ದಿನದ ಕಂದಮ್ಮನನ್ನು ಒಲೆಯಲ್ಲಿಟ್ಟು ಬೆಂಕಿ ಹಚ್ಚಿದ ಅಮ್ಮ!
ಮಗುವನ್ನು ಸುಟ್ಟು ಕೊಂದ ತಾಯಿ ಸಂಗೀತಾ
  • Share this:
ಚಿಕ್ಕಮಗಳೂರು (ಮಾ. 26): ಹೆಣ್ಣುಮಕ್ಕಳು ಹುಟ್ಟಿದರೆಂಬ ಕಾರಣಕ್ಕೆ ಅವರನ್ನು ತಾತ್ಸಾರವಾಗಿ ಕಾಣುವ ಕಾಲವೊಂದಿತ್ತು. ಆಗ ಹೆಣ್ಣುಭ್ರೂಣ ಹತ್ಯೆಯೂ ಹೆಚ್ಚಾಗಿತ್ತು. ಆದರೀಗ ಕಾಲ ಬದಲಾಗಿದ್ದು, ಹೆಣ್ಣು-ಗಂಡಿನ ಸಮಾನವಾದ ಆದ್ಯತೆ ನೀಡಲಾಗುತ್ತಿದೆ. ಇಷ್ಟಾದರೂ ಚಿಕ್ಕಮಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಹುಟ್ಟಿದ ಮಗು ಹೆಣ್ಣೆಂಬ ಕಾರಣಕ್ಕೆ ಆ ಮಗುವನ್ನು ತಾಯಿಯೇ ಒಲೆಯಲ್ಲಿ ಹಾಕಿ ಸುಟ್ಟು, ಕೊಂದ ಭಯಾನಕ ಘಟನೆ ನಡೆದಿದೆ.

ಇದು ನೀವು ಕಂಡು, ಕೇಳರಿಯದ ಘಟನೆ. ಜಗತ್ತಿನಲ್ಲಿ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂಬ ಮಾತನ್ನು ಚಿಕ್ಕಮಗಳೂರಿನ ಈ ಮಹಿಳೆ ಸುಳ್ಳಾಗಿಸಿದ್ದಾಳೆ. ತಾನು ಹೆತ್ತ ಮಗುವನ್ನು ನಿರ್ದಾಕ್ಷಿಣ್ಯದಿಂದ ಒಲೆಯೊಳಗೆ ಹಾಕಿ ಬೆಂಕಿ ಹಚ್ಚಿದ್ದಾಳೆ.

ಕಾಫಿನಾಡಲ್ಲಿ ಹೆತ್ತ ಅಮ್ಮನೇ ತನ್ನ ಮಗುವನ್ನು ಒಲೆಯೊಳಗೆ ಹಾಕಿ ಸುಟ್ಟ ಘಟನೆ ನಡೆದಿದೆ. ಹೆಣ್ಣು ಮಗುವೆಂದು ಕೋಪದಿಂದ ಅಡುಗೆಮನೆಯ ಒಲೆಯಲ್ಲಿ ಮಗುವನ್ನು ಹಾಕಿ, ಅದರ ಮೇಲೆ ಸೌದೆಗಳನ್ನಿಟ್ಟು ಬೆಂಕಿ ಹಚ್ಚಿದ ಅಮ್ಮನ ಕೃತ್ಯಕ್ಕೆ ಚಿಕ್ಕಮಗಳೂರು ಬೆಚ್ಚಿಬಿದ್ದಿದೆ. ಅಮ್ಮನ ಈ ಕೃತ್ಯದಿಂದ 23 ದಿನದ ಹಸುಗೂಸು ಒಲೆಯಲ್ಲಿ ಸುಟ್ಟು ಕರಕಲಾಗಿದೆ.

ಇದನ್ನೂ ಓದಿ: ನನಗೆ ಕೊರೋನಾ ಇದೆ, ಹತ್ರ ಬನ್ನಿ; ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ರಂಪಾಟ ಮಾಡಿದ ಟೆಕ್ಕಿಯೀಗ ಪೊಲೀಸರ ಅತಿಥಿ

ಚಿಕ್ಕಮಗಳೂರಿನ ಕಡೂರು ತಾಲೂಕಿನ ನಾಯಕನಹಟ್ಟಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಬಾಯಿಂದ ಮಗುವಿನ ಕುತ್ತಿಗೆ ಕಚ್ಚಿ ಒಲೆಗೆ ತುಂಬಿದ ತಾಯಿ 23 ದಿನಗಳ ಮಗುವನ್ನು ಸಾಯಿಸಿದ್ದಾಳೆ.

ಈ ಘಟನೆಯಿಂದ ಕಡೂರು ಬೆಚ್ಚಿಬಿದ್ದಿದ್ದು, ಮಗುವನ್ನು ಕೊಂದ ತಾಯಿ ಸಂಗೀತಾಳನ್ನು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಹುಟ್ಟಿತೆಂಬ ಕಾರಣಕ್ಕೆ ಮಗುವನ್ನು ಕೊಲ್ಲಲು ಪ್ರೇರೇಪಿಸಿದ ಸಂಗೀತಾಳ ಕುಟುಂಬಸ್ಥರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಸಂಗೀತಾಳ ಕುಟುಂಬಸ್ಥರಾದ ಬಾಬು, ರಮೇಶ್, ಚಂದ್ರಮ್ಮ ಪೊಲೀಸರ ವಶದಲ್ಲಿದ್ದಾರೆ.

ಇದನ್ನೂ ಓದಿ: Viral Video: ದೇಶವೇ ಲಾಕ್​ಡೌನ್​ ಆದರೂ ಲೆಕ್ಕಕ್ಕಿಲ್ಲ; ಪೊಲೀಸರಿಗೇ ಮಚ್ಚು ತೋರಿಸಿದ ಸ್ವಘೋಷಿತ ದೇವಮಾತೆ!
First published:March 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading