Wife Murder : ಕುಡಿದ ಮತ್ತಿನಲ್ಲಿ ಕಪಾಳಮೋಕ್ಷ ; ಗಂಡನಿಂದ ಹೆಂಡತಿ ಹತ್ಯೆ

ಆರೋಪಿ ಕುಡುಕ ಕುಮಾರನಿಗೆ ಇದು ಮೂರನೇ ಮದುವೆ ಎನ್ನಲಾಗಿದೆ. ಈ ಹಿಂದೆ ಇಬ್ಬರನ್ನು ಮದುವೆಯಾಗಿ ಬಿಟ್ಟು ಬಂದು ಈಕೆಗೆ ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ.

ಆರೋಪಿ ಕುಮಾರ

ಆರೋಪಿ ಕುಮಾರ

  • Share this:
ಆನೇಕಲ್(ಅಕ್ಟೋಬರ್​. 26): ಕುಡಿದ ಮತ್ತಿನಲ್ಲಿ ಹೆಂಡತಿಗೆ ಗಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೇಗಿಹಳ್ಳಿ ಗ್ರಾಮದಲ್ಲಿ ಜರುಗಿದೆ. ಗೌರಮ್ಮ(42)  ಕಟ್ಟಿಕೊಂಡ ಗಂಡನಿಂದಲೇ ದಾರುಣವಾಗಿ ಕೊಲೆಯಾದ ದುರ್ದೈವಿಯಾಗಿದ್ದಾಳೆ. ಕುಮಾರ್(48) ಹೆಂಡತಿಯನ್ನೇ ಕೊಂದ ಪಾಪಿ ಗಂಡ. ಮೂಲತಃ ಬೆಂಗಳೂರಿನ ಕೊತ್ತನೂರು ದಿಣ್ಣೆ ನಿವಾಸಿಗಳಾದ ಕುಮಾರ್ ಮತ್ತು ಗೌರಮ್ಮ ದಂಪತಿ ಕಳೆದ 8 ತಿಂಗಳಿಂದ ಬೇಗಿಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗೌರಮ್ಮ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ, ಕುಡುಕ ಗಂಡ ಕುಮಾರ್ ಹೆಸರಿಗೆ ಮಾತ್ರ ಪೇಯಿಂಟ್ ಕೆಲಸ ಅಂತ ಹೇಳಿಕೊಂಡು ಯಾವಾಗಲೂ ಹೆಂಡತಿಯ ಹಣದಲ್ಲಿ‌ಕುಡಿಯುವುದು ರಾತ್ರಿಯಾದ್ರೆ ಹೆಂಡತಿಯನ್ನೇ ಹೊಡೆದು ಗಲಾಟೆ ಮಾಡುವುದು ನಿತ್ಯದ ಕಾಯಕವಾಗಿರುತ್ತದೆ. ನಿನ್ನೆ ರಾತ್ರಿಯು ಸಹ ಕುಡಿದು ಹೊಟ್ಟೆ, ಎದೆ ಮೇಲೆ ಹೊಡೆದು ಹತ್ಯೆ ಮಾಡಿದ್ದಾನೆ. 

ಇನ್ನೂ ಆರೋಪಿ ಕುಮಾರ ಸದಾ ಕುಡಿದು ಮನೆಯಲ್ಲಿಯೇ ಬಿದ್ದಿರುತ್ತಿದ್ದ. ಅಪರೂಪಕ್ಕೊಮ್ಮೆ ಪೇಯಿಂಟ್ ಕೆಲಸಕ್ಕೆ ಹೋಗುತ್ತಿದ್ದ. ಆದರೆ, ಬಂದ ಹಣವನ್ನು ಕಂಠಪೂರ್ತಿ ಕುಡಿಯುತ್ತಿದ್ದ ಜೊತೆಗೆ ಹೆಂಡತಿ ಹೊಟೇಲ್​​ನಲ್ಲಿ ಕೆಲಸ ಮಾಡಿ ತಂದ ಹಣವನ್ನು ಕಸಿದು ಕುಡಿಯುತ್ತಿದ್ದ. ಸಾಲದಕ್ಕೆ ರಾತ್ರಿಯಾಯಿತು ಎಂದರೆ ಹೆಂಡತಿಯನ್ನು ಹೊಡೆಯುವುದು ಅವ್ಯಾಚ ಶಬ್ದಗಳಿಂದ ನಿಂದಿಸುವುದು ಸಾಮಾನ್ಯವಾಗಿತ್ತು.

ಅಕ್ಕಪಕ್ಕದವರು ಪ್ರಶ್ನಿಸಿದ್ರೆ ನನ್ನ ಹೆಂಡತಿಯನ್ನು ಹೊಡೆಯುತ್ತೇನೆ ಬಡಿಯುತ್ತೇನೆ ನೀವ್ಯಾರು ಪ್ರಶ್ನಿಸಲು ಎಂದು ಅವಾಜ್ ಹಾಕುತ್ತಿದ್ದ. ರಾತ್ರಿ ಕುಡಿದ ಮತ್ತಿನಲ್ಲಿ ಹೆಂಡತಿಗೆ ಹಲ್ಲೆ ಮಾಡಿ ಸಾಯಿಸಿದ್ದಾನೆ ಎಂದು ಸ್ಥಳೀಯರಾದ ರಾಜಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್‌ಗೆ ಸಂವಿಧಾನದ ಮೂಲ ಆಶಯಗಳ ಮೇಲೆ ನಂಬಿಕೆಯಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಅಂದಹಾಗೆ ಆರೋಪಿ ಕುಡುಕ ಕುಮಾರನಿಗೆ ಇದು ಮೂರನೇ ಮದುವೆ ಎನ್ನಲಾಗಿದೆ. ಈ ಹಿಂದೆ ಇಬ್ಬರನ್ನು ಮದುವೆಯಾಗಿ ಬಿಟ್ಟು ಬಂದು ಈಕೆಗೆ ತನಗೆ ಮದುವೆಯಾಗಿಲ್ಲ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ ಭೂಪ. ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಇದ್ದು, ಇದೀಗ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ಸದ್ಯ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಕುಮಾರನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಇರಲಿ ಪಾಪಿ ಅಪ್ಪ ಮಾಡಿದ ತಪ್ಪಿಗೆ ತಂದೆ ಮತ್ತು ತಾಯಿ ಇಲ್ಲದೆ ಮಕ್ಕಳು ಅನಾಥರಾಗಿರುವುದು ಮಾತ್ರ ಸುಳ್ಳಲ್ಲ.
Published by:G Hareeshkumar
First published: