ಬಸವಣ್ಣನ ತವರಲ್ಲಿ ನಾಲ್ಕು ಶಾಲೆಗಳ ಅಧ್ಯಕ್ಷನ ಭೀಕರ ಕೊಲೆ; ಆಸ್ತಿಯೋ, ಪ್ರೇಮ ಸಂಬಂಧವೋ ಕಾರಣ ತಿಳಿಯದ ಪೊಲೀಸರು

ಶಾಲೆಯ ಮೊದಲ ಮಹಡಿಯಲ್ಲಿ ಅದೇ ಶಾಲೆಯ ಮಾಲೀಕ ಹೀಗೆ ಶವವಾಗಿ ಬಿದ್ದಿದ್ದರೆ, ಇದೇ ಶಾಲೆಯ ಕೆಳಗಡೆ ಸೇರಿದ್ದ ನೂರಾರು ಜನ, ಅದರಲ್ಲಿಯೂ ಮಹಿಳೆಯರು ಗೋಳಾಡುತ್ತ ಕಣ್ಣೀರಿಡುತ್ತಿದ್ದ ದೃಶ್ಯ ದುರಂತವೊಂದಕ್ಕೆ ಸಾಕ್ಷಿಯಾಗಿತ್ತು.

news18-kannada
Updated:February 26, 2020, 12:55 PM IST
ಬಸವಣ್ಣನ ತವರಲ್ಲಿ ನಾಲ್ಕು ಶಾಲೆಗಳ ಅಧ್ಯಕ್ಷನ ಭೀಕರ ಕೊಲೆ; ಆಸ್ತಿಯೋ, ಪ್ರೇಮ ಸಂಬಂಧವೋ ಕಾರಣ ತಿಳಿಯದ ಪೊಲೀಸರು
ಕೊಲೆಯಾದ ದಾಮು ನಾಯಕನ ಸಂಬಂಧಿ
  • Share this:
ವಿಜಯಪುರ: ಇದು ಬಸವ ನಾಡಿನ ಜನರನ್ನು ಬೆಚ್ಚಿಬೀಳಿಸಿದ ಪಾತಕ ಕೃತ್ಯದ ಸುದ್ದಿ. ಹಲವು ವಿವಾದಗಳಿಗೆ ಸಿಲುಕಿದ್ದ ನಾಲ್ಕು ಶಾಲೆಗಳ ಅಧ್ಯಕ್ಷರೂ ಆಗಿದ್ದ 55 ವರ್ಷದ ದಾಮು ನಾಯಕನ ಕಗ್ಗೊಲೆಯಾಗಿದೆ. ಶ್ರೀ ಮಡಿವಾಳೇಶ್ವರ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದ ಈ ಹತ್ಯೆಗೆ ಕಾರಣ ಏನೆಂಬುದು ಪೊಲೀಸರಿಗೂ ನಿಗೂಢವಾಗಿದೆ.

55 ವರ್ಷದ ದಾಮು ನಾಯಕ ಕಣಕಾಲ, ಸಾತಿಹಾಳ, ಬಸವನ ಬಾಗೇವಾಡಿ, ಕಂಬಳೂರು ಕ್ರಾಸ್ ತೋಟದ ಬಳಿ ನಾಲ್ಕು ಶಾಲೆಗಳನ್ನು ತೆರೆದು ಅದರ ಮಾಲಿಕನಾಗಿದ್ದ. ಈತನ ಮೊದಲ ಹೆಂಡತಿ ತಾರಾಬಾಯಿಗೆ 4 ಜನ ಮಕ್ಕಳು. ನಿನ್ನೆ ಸಂಜೆ ತಾರಾಬಾಯಿ ಗಂಡನಿಗೆ ಬುತ್ತಿ ಕೊಟ್ಟು ಕಳುಹಿಸಿದ್ದಳು. ಆದರೆ, ಇಂದು ಬೆಳಗಿನ ಜಾವ ಬಸವನ ಬಾಗೇವಾಡಿ ಶಾಲೆಯ ಜವಾನ ಮಾಡಿದ ಕರೆ ಈ ಕುಟುಂಬಕ್ಕೆ ಮರ್ಮಾಘಾತ ನೀಡಿತ್ತು. ಮಾಲಿಕರನ್ನು ಕೊಲೆ ಮಾಡಲಾಗಿದೆ ಎಂದು ಮೊಬೈಲಿನಲ್ಲಿ ತಾರಾಬಾಯಿ ಸಂಬಂಧಿಗೆ ನೀಡಿದ ಮಾಹಿತಿ ಭೀಕರ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು. ಶಾಲೆಗೆ ಬಂದು ನೋಡಿದಾಗ ದಾಮು ನಾಯಕನಿಗೆ ಚಾಕುವಿನಿಂದ ಇರಿದು ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಆಗ ಲೋಕವೇ ಕಳಚಿ ಬಿದ್ದಂತಾದ ತಾರಾಬಾಯಿ ನೆಲಕ್ಕೆ ಕುಸಿದು ಬಿದ್ದಿದ್ದಳು. ಈ ಕೊಲೆಯ ಬಗ್ಗೆ ತಾರಾಬಾಯಿ ಬಿಚ್ಚಿಟ್ಟ ಮಾಹಿತಿ ದಾಮು ನಾಯಕನ ಎರಡನೇ ಹೆಂಡತಿಯ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿತ್ತು.

ಇದನ್ನೂ ಓದಿ: ನಿಲ್ಲದ ದಿಲ್ಲಿ ದಳ್ಳುರಿ; ಸೇನೆ ನಿಯೋಜನೆಗೆ ಕೇಜ್ರಿವಾಲ್ ಒತ್ತಾಯ; ಪೊಲೀಸರಿಗೆ ಹೈಕೋರ್ಟ್ ಛೀಮಾರಿ

ದಾಮು ನಾಯಕ ಸುಮಾರು 20 ವರ್ಷಗಳ ಹಿಂದೆ ಮಂಗಳೂರು ಮೂಲದ ಪ್ರೇಮಾ ಎಂಬುವರನ್ನು ಮದುವೆಯಾಗಿದ್ದ. ಆದರೆ, ಕಳೆದ ಆರು ವರ್ಷಗಳ ಹಿಂದೆ ಉಂಟಾದ ಆಸ್ತಿ ವಿವಾದ ಹಿನ್ನೆಲೆಯಲ್ಲಿ ದಾಮು ನಾಯಕ ತನ್ನ ಎರಡನೇ ಹೆಂಡತಿ ಪ್ರೇಮಾಗೆ ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದ. ಇದೇ ಸಿಟ್ಟಿನಿಂದ ಪ್ರೇಮಾ ಕೊಲೆ ಮಾಡಿಸಿದ್ದಾಳೆ ಎಂದು ತಾರಾಬಾಯಿ ಗಂಭೀರ ಆರೋಪ ಮಾಡಿದ್ದಾಳೆ.

ಈ ಆರೋಪವನ್ನು ತಳ್ಳಿ ಹಾಕಿದ ದಾಮು ನಾಯಕನ ಎರಡನೇ ಪತ್ನಿ ಪ್ರೇಮಾ ತಾನು ಈ ಕೊಲೆ ಮಾಡಿಸಿಲ್ಲ. ಯಾರು ಮಾಡಿದ್ದಾರೆ ಗೊತ್ತಿಲ್ಲ. ನಾನ್ಯಾಕೆ ಕೊಲೆ ಮಾಡಿಸಲಿ? ಅಸಲಿಗೆ ದಾಮು ನಾಯಕ ತನ್ನ ಮದುವೆಯ ವಿಷಯ ಮುಚ್ಚಿಟ್ಟು 20 ವರ್ಷಗಳ ಹಿಂದೆ ತನಗೆ ಮೋಸ ಮಾಡಿ ಬಾಲ್ಯ ವಿವಾಹವಾಗಿದ್ದಾನೆ. ಪೋಷಕರು ಮದುವೆ ಮಾಡಿಕೊಟ್ಟಿದ್ದರಿಂದ ಸತ್ತರೆ ಇಲ್ಲಿಯೇ ಸತ್ತರಾಯಿತು ಎಂದು ಬಸವನ ಬಾಗೇವಾಡಿಗೆ ಬಂದು ನೆಲೆಸಿದ್ದೇನೆ. ಕಣಕಾಲ ಶಾಲೆ ಮತ್ತು ತೋಟ ಹಾಗೂ ಮನೆಯ ಆಸ್ತಿ ವಿಚಾರವಾಗಿ ದಾಮು ನಾಯಕ ಕಳೆದ ಆರು ವರ್ಷಗಳ ಹಿಂದೆ ನನ್ನ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾನೆ ಎಂದು ಪ್ರೇಮಾ ಈ ಕೊಲೆಯಲ್ಲಿ ತನ್ನದೇನು ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

ಈ ಮಧ್ಯೆ ಎಂದಿನಂತೆ ಇಂದು ಬೆಳಗಿನ ಜಾವ ಬಸವನ ಬಾಗೇವಾಡಿಯಲ್ಲಿರುವ ಶ್ರೀ ಮಡಿವಾಳೇಶ್ವರ ಪ್ರಾಥಮಿಕ ಶಾಲೆಗೆ ಬಂದ ಜವಾನ ಪವಾಡೆಪ್ಪ ಯಮನಪ್ಪ ಚಲವಾದಿ, ಕಸಗುಡಿಸಲು ಮುಂದಾದಾಗ ಸಾತಿಹಾಳ ಶಾಲೆಯ ಶಿಕ್ಷಕಿಯೊಬ್ಬರು ಮೊಬೈಲ್ ಕರೆ ಮಾಡಿದ್ದಾರೆ. ಅಧ್ಯಕ್ಷರು ಮೊಬೈಲ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಆಗ, ಈ ಜವಾನ ಶಾಲೆಯ ಮೇಲ್ಮಹಡಿಗೆ ಹೋಗಿ ಅಧ್ಯಕ್ಷರನ್ನು ಮುಟ್ಟಿ ಎಬ್ಬಿಸಲು ಯತ್ನಿಸಿದಾಗ ಅವರು ಯಾವುದೇ ಉತ್ತರ ನೀಡಿಲ್ಲ. ಸಾತಿಹಾಳ ಶಾಲೆಯ ಶಿಕ್ಷಕಿಯ ಜೊತೆ ಮೊಬೈಲ್​ನಲ್ಲಿ ಮಾತನಾಡುತ್ತಲೇ ಅಧ್ಯಕ್ಷರ ಕೊಲೆಯಾಗಿದೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ದೊರೆಸ್ವಾಮಿ ವಿರುದ್ಧ ಶಾಸಕ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರ; ಪ್ರತಿಭಟನೆಗೆ ಕರೆ ನೀಡಿರುವ ಸಿದ್ದರಾಮಯ್ಯಈ ವಿಷಯವು ನಂತರ ಇಡೀ ಬಸವನ ಬಾಗೇವಾಡಿಯಾದ್ಯಂತ ಹರಡಿದೆ. ಈ ಕೊಲೆಯ ಸುದ್ದಿ ತಿಳಿಯುತ್ತಲೇ ಬಸವನ ಬಾಗೇವಾಡಿ ಪಿಎಸ್ಐ ಚಂದ್ರಶೇಖರ ಹೆರಕಲ್, ಸಿಪಿಐ ,ಸೋಮಶೇಖರ ಜುಟ್ಟದ ಮತ್ತು ಡಿವೈಎಸ್ಪಿ ಶಾಂತವೀರ ಇ. ಸ್ಥಳಕ್ಕೆ ದೌಡಾಯಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಯಿಸಿ ತನಿಖೆ ಕೈಗೊಂಡಿದ್ದಾರೆ. ಈ ಶಾಲೆಯಲ್ಲಿದ್ದ ಸಿಸಿಟಿವಿಗಳು ಸ್ಥಗಿತಗೊಂಡಿರುವುದು ಪೊಲೀಸರ ತನಿಖೆಯ ವಿಳಂಬಕ್ಕೆ ಕಾರಣವಾಗಿದೆ. ಪಂಚನಾನೆ ನಡೆಸಿದ ಪೊಲೀಸರು ದಾಮು ನಾಯಕ ಮೃತದೇಹವನ್ನು ವಿಜಯಪುರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿ ಕೊಟ್ಟಿದ್ದಾರೆ.

ಪೊಲೀಸರು ಎರಡು ದಿಕ್ಕಿನಲ್ಲಿ ಈ ಕೊಲೆಯ ರಹಸ್ಯವನ್ನು ಭೇದಿಸುವತ್ತ ಸಾಗಿದ್ದಾರೆ.  ಆಸ್ತಿ ವಿವಾದ ಈ ಕೊಲೆಗೆ ಕಾರಣನಾ ಅಥವಾ ಸಮ್ಮತ ಸಂಬಂಧ ಈ ಕೊಲೆಗೆ ಕಾರಣವಾಯಿತಾ ಎಂಬ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದಾರೆ. ಈ ಮುಂಚೆಯಿಂದಲೂ ದಾಮು ನಾಯಕ ವಿರುದ್ಧ ನಾನಾ ಆರೋಪಗಳು ಕೇಳಿ ಬರುತ್ತಿದ್ದವು ಎನ್ನಲಾಗಿದೆ. ಈ ಹಿಂದೆ ಈತನ ಶಾಲೆಗಳಲ್ಲಿ ಶಿಕ್ಷಕರಿಗೆ ಸಂಬಳ ಮತ್ತಿತರ ವಿಷಯಗಳಲ್ಲಿ ಮೋಸ ಮಾಡಿದ ಆರೋಪಗಳೂ ಇವೆ. ಆದರೆ, ಈಗ ಈ ಕೊಲೆಗೆ ನಿಖರ ಕಾರಣ ಏನು ಎಂಬುದರ ಕುರಿತು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 26, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading