ಹುಡುಗಿಗಾಗಿ ಬೆಂಗಳೂರಿನಲ್ಲಿ ನಡೆಯಿತು ಬರ್ಬರ ಹತ್ಯೆ!; ಸ್ಕೆಚ್​ ಹಾಕಿದವನೇ ಕೊಲೆಯಾಗಿಹೋದ

ಸಲೀಂ ಎಂಬಾತ ಕೊಲೆಯಾದ ವ್ಯಕ್ತಿ. ಮುನೀರ್ ಮತ್ತು ಸಲೀಂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಇಬ್ಬರಿಗೂ ಅವಳನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲ. ಆ ಹುಡುಗಿಗಾಗಿ ಇಬ್ಬರೂ ಅನೇಕಬಾರಿ ಕಿತ್ತಾಡಿಕೊಂಡಿದ್ದರು.

Rajesh Duggumane | news18
Updated:March 26, 2019, 3:25 PM IST
ಹುಡುಗಿಗಾಗಿ ಬೆಂಗಳೂರಿನಲ್ಲಿ ನಡೆಯಿತು ಬರ್ಬರ ಹತ್ಯೆ!; ಸ್ಕೆಚ್​ ಹಾಕಿದವನೇ ಕೊಲೆಯಾಗಿಹೋದ
ಸಾಂದರ್ಭಿಕ ಚಿತ್ರ
  • News18
  • Last Updated: March 26, 2019, 3:25 PM IST
  • Share this:
ಮುನಿರಾಜು

ಬೆಂಗಳೂರು (ಮಾ.26): ಪ್ರೀತಿಸಿದ ಹುಡುಗಿಗಾಗಿ ಸಾಕಷ್ಟು ಕೊಲೆಗಳು ನಡೆದ ಉದಾಹರಣೆಗಳಿವೆ. ಬೆಂಗಳೂರಿನಲ್ಲಿ ಮಾ.23ರಂದು ನಡೆದ ಕೊಲೆಯ ಹಿಂದೆಯೂ ಇಂಥದ್ದೇ ಉದ್ದೇಶ ಇರುವ ವಿಚಾರ ಬೆಳಕಿಗೆ ಬಂದಿದೆ. ಒಂದು ಹುಡುಗಿಗಾಗಿ ಬರ್ಬರ ಹತ್ಯೆ ನಡೆದಿದೆ. ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ಈ ಕೊಲೆ ನಡೆದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಸಲೀಂ ಎಂಬಾತ ಕೊಲೆಯಾದ ವ್ಯಕ್ತಿ. ಮುನೀರ್ ಮತ್ತು ಸಲೀಂ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಇಬ್ಬರಿಗೂ ಅವಳನ್ನು ಪಡೆದುಕೊಳ್ಳಬೇಕು ಎನ್ನುವ ಹಂಬಲ. ಆ ಹುಡುಗಿಗಾಗಿ ಇಬ್ಬರೂ ಅನೇಕಬಾರಿ ಕಿತ್ತಾಡಿಕೊಂಡಿದ್ದರು. ಒಮ್ಮೆ ಕಿತ್ತಾಟದ ವೇಳೆ ಸಲೀಂಗೆ ಮುನೀರ್​ ಹಿಗ್ಗಾಮುಗ್ಗಾ ಥಳಿಸಿದ್ದ. ಇದೇ ದ್ವೇಷ ಇಟ್ಟುಕೊಂಡು ಮುನೀರ್ ಕೊಲೆಗೆ ಸಲೀಂ ಸ್ಕೇಚ್ ಹಾಕಿದ್ದ.

ಅಷ್ಟೇ ಅಲ್ಲ ಈ ವಿಚಾರವಾಗಿ ಸಲೀಂ ಬಹಿರಂಗವಾಗಿ ಹೇಳಿಕೆ ನೀಡಿಕೊಂಡು ಓಡಾಡುತ್ತಿದ್ದ. “ನಾನು ಅವನನ್ನು ಮುಗಿಸುತ್ತೇನೆ. ಹಾಗೆ ಸುಮ್ಮನೆ ಕೈಕಟ್ಟಿ ಕೂರುವುದಿಲ್ಲ,” ಎಂದು ಹೇಳುತ್ತಿದ್ದ.  ಈ ವಿಚಾರ ಕಿವಿಗೆ ಬೀಳುತ್ತಿದ್ದಂತೆ ಸಲೀಂನನ್ನೇ ಮುನೀರ್ ಕೊಲೆ ಮಾಡಿದ್ದಾನೆ.

ಸಲೀಂ ಇದ್ರೆ ನನ್ನನ್ನು ಕೊಲೆ ಮಾಡಿಸುತ್ತಾನೆ. ನನಗೆ ಖಂಡಿತವಾಗಿಯೂ ಭವಿಷ್ಯ ಇರುವುದಿಲ್ಲ ಎಂದು ನಿರ್ಧರಿಸಿ ಮುನೀರ್ ಈ ಕೊಲೆಗೈದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ, ಮುನೀರ್ ಹಾಗೂ ನಾಲ್ವರು ಸಹಚರರನ್ನು ಬಂಧಿಸಲಾಗಿದೆ. ಸದ್ಯ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಕಾರ್ಯಕರ್ತರ ಮುಂದೆ ಕಣ್ಣೀರು ಹಾಕಿದ ಬಿಜೆಪಿ ಬಂಡಾಯ ಅಭ್ಯರ್ಥಿ ಡಿ.ಎಸ್.​ ವೀರಯ್ಯ

First published: March 26, 2019, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading