HOME » NEWS » State » MURDER CASE OF FORMER CORPORATOR REKHA KADIRESH THE COPS CAUGHT THE CLUE MAK

ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ಪ್ರಕರಣ; ಆರೋಪಿಗಳ ಸುಳಿವು ಹಿಡಿದ ಪೊಲೀಸರು

ಆರೋಪಿಗಳ ಬಂಧನಕ್ಕೆ ಬೆಂಗಳೂರು ಪೊಲೀಸರು ತಂಡ ರಚನೆ ಮಾಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ, ಪ್ರಮುಖ ಆರೋಪಿಗಳಾದ ರೇಖಾರ ಸಂಬಂಧಿ ಪೀಟರ್ ಹಾಗೂ ಸಹಚರರ ಬಗ್ಗೆ ಸುಳಿವು ಸಿಕ್ಕಿದೆ ಎನ್ನಲಾಗುತ್ತಿದೆ.

news18-kannada
Updated:June 25, 2021, 7:47 AM IST
ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್ ಕೊಲೆ ಪ್ರಕರಣ; ಆರೋಪಿಗಳ ಸುಳಿವು ಹಿಡಿದ ಪೊಲೀಸರು
ಗಂಡನ ಜೊತೆ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್
  • Share this:
ಬೆಂಗಳೂರು (ಜೂನ್ 25): ಗುರುವಾರ ಬೆಳಗ್ಗೆ ಚಲವಾದಿಪಾಳ್ಯದ ಮಾಜಿ ಕಾರ್ಪೊರೇಟರ್​​ ರೇಖಾ ಕದಿರೇಶ್​ರ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಹಣಕ್ಕಾಗಿ ಸಂಬಂಧಿಕರಿಂದಲೇ ಈ ಕೊಲೆ ನಡೆದಿರುವ ಪ್ರಾಥಮಿಕ ತನಿಖೆ ವೇಳೆ ಬಹಿರಂಗವಾಗಿದೆ. ಅಲ್ಲದೆ, ಈ ಪ್ರಕರಣವನ್ನು ಸಿಎಂ ಯಡಿಯೂರಪ್ಪ ಸಹ ಗಂಭೀರವಾಗಿ ಪರಿಗಣಿಸಿದ್ದು, 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಆರೋಪಿಗಳ ಬಂಧನಕ್ಕೆ ಬೆಂಗಳೂರು ಪೊಲೀಸರು ತಂಡ ರಚನೆ ಮಾಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಗೆ ಮುಂದಾಗಿದ್ದಾರೆ. ಅಲ್ಲದೆ, ಪ್ರಮುಖ ಆರೋಪಿಗಳಾದ ರೇಖಾರ ಸಂಬಂಧಿ ಪೀಟರ್ ಹಾಗೂ ಸಹಚರರ ಬಗ್ಗೆ ಸುಳಿವು ಸಿಕ್ಕಿದ್ದು, ಯಾವುದೇ ಸಂದರ್ಭದಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪೊಲೀಸರ ತನಿಖೆ ಆಯಾಮ;

ಆಯಾಮ-1; ರೌಡಿಶೀಟರ್ ಪೀಟರ್ ಮತ್ತು ಸೂರ್ಯ ಕೊಲೆ‌ ಮಾಡಲು ಕಾರಣವೇನು..? ಹಣಕಾಸಿನ ವ್ಯವಹಾರ ಮನಸ್ತಾಪವಿತ್ತಾ? ಪೀಟರ್ ಕೆಲಸ ಮಾಡಿಸಿದ್ದ ವಿಚಾರದಲ್ಲಿ ಬಿಲ್ ಆಗಿರಲಿಲ್ಲ. ಬಿಲ್ ಕೊಡಿಸುವಂತೆ ದುಂಬಾಲು ಬಿದ್ದಿದ್ದ ಪೀಟರ್. ರೇಖಾ ಪತಿ ದಿವಂಗತ ಕದಿರೇಶ್ ಗರಡಿಯಲ್ಲೇ ಬೆಳೆದಿದ್ದ ಪೀಟರ್ ಕೊಲೆ ಮಾಡಲು ಕಾರಣವೇನು? ವೈಯಕ್ತಿಕ ವಿಚಾರದಲ್ಲೂ ಜಗಳವಾಗಿತ್ತಾ?

ಆಯಾಮ-2: ಕೌಟುಂಬಿಕ ಕಲಹವೇ ಕೊಲೆಗೆ ಕಾರಣವೇ? ಕೊಲೆಯ ಮತ್ತೊಬ್ಬ ಆರೋಪಿ ಸ್ಟೀಫನ್ ಎನ್ನಲಾಗಿದೆ. ಸ್ಟೀಫನ್ ಕದಿರೇಶ್ ತಂಗಿಯ ಮಗ ಎನ್ನಲಾಗಿದೆ. ಮಾಜಿ‌ ಕಾರ್ಪೊರೇಟರ್ ಆಗಿದ್ದರು ಹಣಕಾಸಿನ ಸಹಾಯಕ್ಕೆ ಹಿಂದೇಟು. ಮಾವ ಕದಿರೇಶ್ ನಿಂದ ಕಾರ್ಪೋರೇಟರ್ ಆಗಿದ್ರು ರೇಖಾ ಅವರು ಸಂಬಂಧಿಗಳಿಗೆ ಸಹಾಯ ಮಾಡುತ್ತಿರಲಿಲ್ಲ ಅನ್ನೋ ಆರೋಪ. ಇದೇ ಆರೋಪವೇ ಕೊಲೆಗೆ ಕಾರಣವೇ?

ಆಯಾಮ-3; ಕೊಲೆಗೆ ರಾಜಕೀಯ ಕಾರಣ ಆಗಿರಬಹುದಾ? ಬಿಬಿಎಂಪಿ ಚುನಾವಣೆಗೆ ಸಜ್ಜಾಗಿದ್ದ ರೇಖಾ ಅವರ ರಾಜಕೀಯವಾಗಿ ಮುಂದುವರೆದ್ರೆ ಕಷ್ಟ ಅನ್ನೋ ಕಾರಣಕ್ಕೆ ಮುಹೂರ್ತವಿಟ್ರಾ..? ಚುನಾವಣೆ ಮೇಲೆ ಕಣ್ಣು ಹಾಕಿದ್ರಾ ಕದಿರೇಶ್ ಅಕ್ಕಾ ಮಾಲಾ? ಮಾಲಾ ವಿರುದ್ಧವೂ ರೌಡಿ ಶೀಟರ್ ತೆರೆಯಲಾಗಿದೆ. ಮಕ್ಕಳಿಗೆ ಅನುಕೂಲವಾಗಲು ಸ್ಕೆಚ್ ಹಾಕಿದ್ರ. ಮುಂದಿನ ಬಿಬಿಎಂಪಿ ಎಲೆಕ್ಷನ್ ಗೆ ಸಜ್ಜಾಗಲು ಕೊಲೆ ಮಾಡಿದ್ರಾ?

ಇದನ್ನೂ ಓದಿ: Karnataka Weather Today: ಕರಾವಳಿಯಲ್ಲಿ ಇಂದಿನಿಂದ 4 ದಿನ ಭಾರೀ ಮಳೆ; ಮಲೆನಾಡಿನಲ್ಲೂ ನಾಳೆ ವರುಣನ ಆರ್ಭಟ

ಆಯಾಮ - 4; ಕೊಲೆ ಆರೋಪಿ ಸೂರ್ಯ ಕಾಟನ್ ಪೇಟೆ ಠಾಣೆಯ ರೌಡಿಶೀಟರ್. ಇತ್ತೀಚೆಗೆ ಸೂರ್ಯನ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ. ಏರಿಯಾದಲ್ಲಿ ಹವಾ ಮೆಂಟೇನ್ ಗಾಗಿ ಹತ್ಯೆಗೆ ಕೈ ಜೋಡಿಸಿದನಾ? ಪೀಟರ್, ಸೂರ್ಯ, ಸ್ಟೀಫನ್ ಒಂದಾಗಿ ಪ್ಲಾನ್ ಮಾಡಲು ಕಾರಣವೇನು..?ಈ ನಾಲ್ಕು ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈವರೆಗೆ 15 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆಗೆ ಸಹಕಾರಿಯಾಗುವ ಹಳೇಯ ಕ್ರೈಂ ಸಿಬ್ಬಂದಿ ಕೂಡ ಬಳಸಿಕೊಳ್ಳಲಾಗುತ್ತಿದೆ. ಕಾಟನ್ ಪೇಟೆ ಠಾಣೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಸಿಬ್ಬಂದಿಯಿಂದ ಮಾಹಿತಿ ಪಡೆಯಲಾಗುತ್ತಿದೆ. ಸಿಎಂ ಆದೇಶದಂತೆ 24 ಗಂಟೆಯಲ್ಲೇ ಆರೋಪಿಗಳನ್ನು ಹಿಡಿಯಲು ಪ್ಲಾನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Israel Embassy Blast Case| ಇಸ್ರೇಲ್ ರಾಯಭಾರ ಕಚೇರಿ ಸ್ಪೋಟ ಪ್ರಕರಣ; 4 ಜನ ಕಾರ್ಗಿಲ್ ವಿದ್ಯಾರ್ಥಿಗಳ ಬಂಧನ

ಕೊಲೆ ಮಾಡಿದವರೇ ಜೈಲಿಂದ ರಿಲೀಸ್ ಆದ ಮೇಲೆ ಹೆಂಡತಿ ಕೊಲೆ ಮಾಡಿರುವುದು ಅನುಮಾನವಿದೆ. ಕಮಿಷನರ್ ಜೊತೆಗೆ ಸಿಎಂ ಮಾತನಾಡಿ ಕ್ರಮ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಘಟನೆ ಹಿಂದೆ ಯಾರ ಯಾರ ಕೈವಾಡ ಇದೆ ಅವರ ವಿರುದ್ದ ಕ್ರಮ ಆಗಬೇಕು ಎಂದು ಸಿಎಂ ಸೂಚಿಸಿದ್ದಾರೆ.
Youtube Video

ಮೃತದೇಹ ಹಸ್ತಾಂತರ;

ಈ ನಡುವೆ ರೇಖಾ ಕದಿರೇಶ್ ಅವರ ಮರಣೋತ್ತರ ಪರೀಕ್ಷೆ ಹಾಗೂ ಕೋವಿಡ್ ಪರೀಕ್ಷೆಯನ್ನು ಇಂದು ಬೆಳಗ್ಗೆ 9 ಗಂಟೆಗೆ ವೈದ್ಯರ ನಡೆಸಲಿದ್ದು, ಬೆಳಗ್ಗೆ 10 ಗಂಟೆ ವೇಳೆಗೆ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಿಪೋರ್ಟ್ ಬಂದ‌ ಬಳಿಕ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಶುರುವಾಗಲಿದೆ. ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Published by: MAshok Kumar
First published: June 25, 2021, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories