ಸೊಸೆಗೆ ಮಕ್ಕಳಾಗದ್ದಕ್ಕೆ ಬೆಂಕಿ ಹಚ್ಚಿ ಕೊಂದ ಚಾಮರಾಜನಗರದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಚಾಮರಾಜನಗರ ತಾಲೂಕಿನ ಬೆಂಡರವಾಡಿಯ ಮಹೇಶ್ ಎಂಬಾತ 2007ರಲ್ಲಿ ಮಂಜುಳಾ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾಗಿ 7 ವರ್ಷಗಳಾದರೂ ಮಕ್ಕಳಾಗದ ಕಾರಣ ಮಂಜುಳಾ ಅವರ ಅತ್ತೆ ಬೆಳ್ಳಮ್ಮ, ಮೈದುನ ರಮೇಶ, ದೊಡ್ಡಮ್ಮ ಆಕೆಗೆ ಬೆಂಕಿ ಹಚ್ಚಿ ಸಾಯಿಸಿದ್ದರು.

news18-kannada
Updated:December 17, 2019, 12:06 PM IST
ಸೊಸೆಗೆ ಮಕ್ಕಳಾಗದ್ದಕ್ಕೆ ಬೆಂಕಿ ಹಚ್ಚಿ ಕೊಂದ ಚಾಮರಾಜನಗರದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ (ಡಿ. 17): ಮಗನಿಗೆ ಮದುವೆಯಾಗಿ 7 ವರ್ಷವಾದರೂ ಮಕ್ಕಳಾಗದ್ದಕ್ಕೆ ಸೊಸೆಯೇ ಕಾರಣ ಎಂದು ಹಿಂಸೆ ನೀಡಿ ಬೆಂಕಿ ಹಚ್ಚಿ ಕೊಂದಿದ್ದ ಚಾಮರಾಜನಗರದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಚಾಮರಾಜನಗರ ತಾಲೂಕಿನ ಬೆಂಡರವಾಡಿಯ ಮಹೇಶ್ ಎಂಬಾತ 2007ರಲ್ಲಿ ಮಂಜುಳಾ ಎಂಬಾಕೆಯನ್ನು ಮದುವೆಯಾಗಿದ್ದ. ಮದುವೆಯಾಗಿ 7 ವರ್ಷಗಳಾದರೂ ದಂಪತಿಗೆ ಮಕ್ಕಳಾಗಿರಲಿಲ್ಲ. ಇದರಿಂದ ಮಂಜುಳಾ ಅವರ ಅತ್ತೆ ಬೆಳ್ಳಮ್ಮ, ಮೈದುನ ರಮೇಶ, ದೊಡ್ಡಮ್ಮ ಆಕೆಗೆ ಸದಾ ಹಿಂಸೆ ನೀಡುತ್ತಿದ್ದರು. ಸೊಸೆಯನ್ನು ಬಂಜೆ ಎಂದು ನಿಂದಿಸುತ್ತಿದ್ದ ಅವರು ಮಂಜುಳಾಗೆ ಬೆಂಕಿ ಹಚ್ಚಿ ಕೊಲ್ಲಲು ಪ್ರಯತ್ನಿಸಿದ್ದರು. ಮೈತುಂಬ ಬೆಂಕಿ ಹೊತ್ತುಕೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಂಜುಳಾರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸೇರಿಸಲಾಗಿತ್ತು.

ಇದನ್ನೂ ಓದಿ: ರಾತ್ರೋರಾತ್ರಿ ಬೆಂಗಳೂರಿನ ರೌಡಿಶೀಟರ್ ಬರ್ಬರ ಹತ್ಯೆ; ಬಾರ್​ ಎದುರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಂಜುಳಾ ಮೃತಪಟ್ಟಿದ್ದರು. ಆಕೆ ಸಾಯುವ ಮೊದಲು ಪೊಲೀಸರಿಗೆ ನೀಡಿದ್ದ ಹೇಳಿಕೆಯನ್ನು ಆಧರಿಸಿ ಮೂವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಚಾಮರಾಜನಗರ ಜಿಲ್ಲಾ ಸೆಷನ್ಸ್ ಮತ್ತು ಪ್ರಧಾನ ನ್ಯಾಯಾಲಯದ ನ್ಯಾ. ಡಿ. ವಿನಯ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

(ವರದಿ: ನಂದೀಶ್)
First published:December 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ