HOME » NEWS » State » MURATNA FACE ANOTHER PROBLEM FAKE VOTER ID CASE HAS RE OPENED RH

ಅನರ್ಹ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ; ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣ ರಿ ಓಪನ್

ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಕಲಿ ಮತದಾರರ ಗುರತಿನ ಚೀಟಿಗಳು ಪತ್ತೆಯಾಗಿದ್ದವು. ಈ ಪ್ರಕರಣವನ್ನು ಸಿಬಿಐ ವಿಚಾರಣೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಇಂದು ಹೈಕೋರ್ಟ್ ಅಂಗೀಕರಿಸಿದೆ. 

news18-kannada
Updated:March 17, 2020, 3:34 PM IST
ಅನರ್ಹ ಶಾಸಕ ಮುನಿರತ್ನಗೆ ಮತ್ತೆ ಸಂಕಷ್ಟ; ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣ ರಿ ಓಪನ್
ಅನರ್ಹ ಶಾಸಕ ಮುನಿರತ್ನ
  • Share this:
ಬೆಂಗಳೂರು: ಅನರ್ಹ ಶಾಸಕ ಮುನಿರತ್ನ ಅವರ ರಾಜಕೀಯ ಜೀವನಕ್ಕೆ ಮುಳ್ಳಾಗಿರುವ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣ ಇದೀಗ ಮತ್ತೆ ಮರು ಆರಂಭವಾಗಿದೆ. ಈ ಮೂಲಕ ರಾಜರಾಜೇಶ್ವರಿ ಕ್ಷೇತ್ರದ ಮುನಿರತ್ನಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಕಲಿ ಮತದಾರರ ಗುರತಿನ ಚೀಟಿಗಳು ಪತ್ತೆಯಾಗಿದ್ದವು. ಈ ಪ್ರಕರಣವನ್ನು ಸಿಬಿಐ ವಿಚಾರಣೆ ಕೋರಿದ್ದ

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಇಂದು ಹೈಕೋರ್ಟ್ ಅಂಗೀಕರಿಸಿದೆ.

ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣದ ಪ್ರಮುಖ ಸಾಕ್ಷಿದಾರರಾಗಿರುವ ಆನಂದ್ ಕುಮಾರ್, ಸಂತೋಷ್ ಕುಮಾರ್ ಎಂಬುವವರು ಇಂದು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ವಿಚಾರಣೆಗೆ ಹೈಕೋರ್ಟ್ ಅಂಗೀಕರಿಸಿದ ಬಳಿಕ ಅನರ್ಹ ಶಾಸಕ ಮುನಿರತ್ನ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬಿಐಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಇದನ್ನು ಓದಿ: ವೋಟರ್ ಐಡಿ ಅಕ್ರಮ ಸಂಗ್ರಹ ಪ್ರಕರಣ: ಆರ್.ಆರ್. ನಗರ ಚುನಾವಣೆ ಮುಂದೂಡಿಕೆಯಾಗುವ ಸಾಧ್ಯತೆ

ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರರು ನಾವಾಗಿದ್ದರೂ ನಮ್ಮ ಹೇಳಿಕೆಯನ್ನು ಪೋಲೀಸರು ದಾಖಲಿಸಿಲ್ಲ. ಈ ಹಿಂದೆ ರಾಕೇಶ್ ಎಂಬುವವರು ಸಿಬಿಐ ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದರು. ಮುನಿರತ್ನ ಬೆದರಿಕೆಯಿಂದಾಗಿ ಅವರು ಪ್ರಕರಣವನ್ನೇ ವಾಪಸ್ ಪಡೆದಿದ್ದಾರೆ. ಪ್ರಕರಣದಲ್ಲಿ ಪೊಲೀಸ್ ತನಿಖೆಯೇ ಲೋಪಯುಕ್ತವಾಗಿದೆ. ಮುನಿರತ್ನ ಪ್ರಭಾವಿ ವ್ಯಕ್ತಿಯಾಗಿರುವ ಕಾರಣ ಪ್ರಕರಣದಲ್ಲಿ ಪೊಲೀಸರು ಮುನಿರತ್ನ ಪರ ಕೆಲಸ ಮಾಡಿದ್ದಾರೆ. ಇದು ದೇಶದ ಗಮನ ಸೆಳೆದ ಪ್ರಕರಣ, ಪಾರದರ್ಶಕ ಚುನಾವಣೆಗೆ ಸವಾಲೊಡ್ಡಿದ ಪ್ರಕರಣವಿದು. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದರು. ಅರ್ಜಿದಾರರ ಮನವಿ ಆಲಿಸಿದ ನ್ಯಾಯಾಲಯ ಅರ್ಜಿ ವಿಚಾರಣೆಗೆ ಅಂಗೀಕರಿಸಿತು.
Youtube Video
First published: March 17, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories