ಮಾನ ಮರ್ಯಾದೆ ಇದೆಯಾ? ತಾಕತ್ತಿದ್ದರೆ ರಾಜೀನಾಮೆ ನೀಡಿ ನನ್ನ ಮುಂದೆ ಬನ್ನಿ; ಸ್ಪೀಕರ್ ರಮೇಶ್​ ಕುಮಾರ್​ಗೆ ಮುನಿಯಪ್ಪ ಬಹಿರಂಗ ಸವಾಲು

ನಾನು ಯಾರ ಹಂಗಿನಲ್ಲೂ ಇಲ್ಲ, ನನ್ನೆಲ್ಲಾ ವಿರೋದಿಗಳು ನನ್ನ ಹಂಗಿನಲ್ಲೇ ಇದ್ದಾರೆ. ಚುನಾವಣೆ ಮುಗಿಯಲಿ ಏಪ್ರಿಲ್ 18ರ ನಂತರ ನಿಮಗೆ ನಾನು ಏನೆಂದು ತೋರಿಸ್ತೀನಿ,‌ ಎಲ್ಲರ ಬಂಡವಾಳ ಬಯಲು ಮಾಡ್ತೀನಿ ಎಂದು ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಆವಾಜ್ ಹಾಕಿರುವ ಕೆ.ಎಚ್. ಮುನಿಯಪ್ಪ.

MAshok Kumar | news18
Updated:April 16, 2019, 11:56 AM IST
ಮಾನ ಮರ್ಯಾದೆ ಇದೆಯಾ? ತಾಕತ್ತಿದ್ದರೆ ರಾಜೀನಾಮೆ ನೀಡಿ ನನ್ನ ಮುಂದೆ ಬನ್ನಿ; ಸ್ಪೀಕರ್ ರಮೇಶ್​ ಕುಮಾರ್​ಗೆ ಮುನಿಯಪ್ಪ ಬಹಿರಂಗ ಸವಾಲು
ಕೆ.ಎಚ್.ಮುನಿಯಪ್ಪ ಮತ್ತು ಆರ್.ರಮೇಶ್​ಕುಮಾರ್
MAshok Kumar | news18
Updated: April 16, 2019, 11:56 AM IST
ಕೋಲಾರ (ಏ.16): ಚುನಾವಣೆ ಮುಗಿಯಲಿ ನನಗೆ ಟಿಕೆಟ್ ಕೊಡಬಾರದು ಎಂದು ದೆಹಲಿವರೆಗೆ ಹೋಗಿ ಬಂದವರ ಬಂಡವಾಳ ಬಯಲು ಮಾಡುತ್ತೇನೆ ಎಂದು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೋಲಾರದ ಸಂಸದ ಕೆ.ಎಚ್​.ಮುನಿಯಪ್ಪ ಬಹಿರಂಗವಾಗಿ ಗುಡುಗಿದ್ದಾರೆ.

ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್  ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿರುವ ಮುನಿಯಪ್ಪ, “ನನಗೆ ಟಿಕೆಟ್ ಕೊಡಬಾರದು ಎಂದು ಯಾರ್ ಯಾರು ದೆಹಲಿಗೆ ಹೋಗಿದ್ರು ಅಂತ ನನಗೆ ಗೊತ್ತಿದೆ. ನೀವು ಏನ್  ಮಾಡ್ತಿದ್ದೀರಾ, ಯಾವ ಸಿಂಬಲ್ ನಲ್ಲಿ ನೀವು ಆಯ್ಕೆಯಾಗಿದ್ದು ಅಂತ ನೆನಪಿದೆಯಾ? ನಿಮಗೇನಾದರು ಮಾನಾ ಮರ್ಯಾದೆ ಇದ್ಯಾ, ತಾಕತ್ತಿದ್ದರೆ ರಾಜಿನಾಮೆ ನೀಡಿ ವಿರೋಧಿಗಳು‌ ನನ್ನ ಮುಂದೆ ಬರಲಿ" ಎಂದು ಸವಾಲು ಹಾಕಿದ್ದಾರೆ.

ಇದನ್ನೂ ಓದಿಚುನಾವಣಾ ಸಮೀಕ್ಷೆ; ಕೋಲಾರ ಲೋಕಸಭೆಯಲ್ಲಿ ಮೊದಲ ಬಾರಿಗೆ ಅರಳುವ ತವಕದಲ್ಲಿ ಕಮಲ..!

ಅಲ್ಲದೆ "ನಾನು ಯಾರ ಹಂಗಿನಲ್ಲೂ ಇಲ್ಲ, ನನ್ನೆಲ್ಲಾ ವಿರೋದಿಗಳು ನನ್ನ ಹಂಗಿನಲ್ಲೇ ಇದ್ದಾರೆ, ಮೇಧಾವಿಗಳ ಹಾಗೆ ಮಾತಾಡಿ ಮಾತುಗಾರಿಕೆಯಿಂದಲೇ ಕಾಂಗ್ರೆಸ್ ನವರಿಗೆ ಬ್ರೈನ್ ವಾಶ್ ಮಾಡಿದ್ದೀರ, ಚುನಾವಣೆ ಮುಗಿಯಲಿ ಏಪ್ರಿಲ್ 18ರ ನಂತರ ನಿಮಗೆ ನಾನು ಏನೆಂದು ತೋರಿಸ್ತೀನಿ,‌ ಎಲ್ಲರ ಬಂಡವಾಳ ಬಯಲು ಮಾಡ್ತೀನಿ ಎಂದು ನೇರಾನೇರವಾಗಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕೆಂಡ ಕಾರಿದ್ದಾರೆ.ಹಾಲಿ ಸಂಸದ ಮುನಿಯಪ್ಪನವರಿಗೆ ಈ ಬಾರಿ ಲೋಕಸಭಾ ಚುನಾವಣೆಗೆ  ಟಿಕೆಟ್ ನೀಡದಂತೆ ಒತ್ತಾಯಿಸಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಎಸ್ ಎನ್ ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ವಿ ಮುನಿಯಪ್ಪ, ನಸೀರ್ ಅಹಮದ್ ಸೇರಿದಂತೆ ಹಲವರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಗೆ ಮನವಿ ಸಲ್ಲಿಸಿದ್ದರು. ಆದರೂ, ರಾಜ್ಯ ನಾಯಕರ ಮಾತಿಗೆ ಬೆಲೆ ಕೊಡದ ಕಾಂಗ್ರೆಸ್ ಹೈಕಮಾಂಡ್ ಮುನಿಯಪ್ಪನವರಿಗೆ ಟಿಕೆಟ್ ಫೈನಲ್ ಮಾಡಿತ್ತು. ಇದು ಕೋಲಾರ ಕಾಂಗ್ರೆಸ್ ಇಬ್ಬಾಗವಾಗಲು ಕಾರಣವಾಗಿದೆ.ಇದನ್ನೂ ಓದಿ : 'ಜಿಲ್ಲೆಯಲ್ಲಿ ಒಕ್ಕಲಿಗರನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದೇನೆ' ಎಂಬ ಕೆ.ಎಚ್.ಮುನಿಯಪ್ಪ ವಿವಾದಾಸ್ಪದ ಹೇಳಿಕೆ; ವಿಡಿಯೋ ವೈರಲ್

ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಸೇರಿದಂತೆ ಬಹುತೇಕ ಹಿರಿಯ ಮುಖಂಡರು ಮುನಿಯಪ್ಪ ವಿರುದ್ಧ ಮುನಿಸಿಕೊಂಡಿದ್ದಾರೆ. ಅಲ್ಲದೆ ಈ ಬಾರಿ ಮುನಿಯಪ್ಪನವರ ಸೋಲಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಗುಮಾನಿಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದು ಸಾಮಾನ್ಯವಾಗಿ ಸಂಸದ ಮುನಿಯಪ್ಪನವರ ಆಕ್ರೋಶಕ್ಕೆ ಕಾರಣವಾಗಿದ್ದು, ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮುನಿಯಪ್ಪನವರ ಕೋಲಾರದ ಒಕ್ಕಲಿಗರನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ನೀಡಿದ್ದ ಹೇಳಿಕೆಯನ್ನು ವಿಡಿಯೋವನ್ನು ಸೋಮವಾರ ಅವರ ವಿರೋಧಿ ಕೊತ್ತೂರು ಮಂಜುನಾಥ್ ಬಿಡುಗಡೆ ಮಾಡಿದ್ದರು. ಅದರ ಮಾರನೇಯ ದಿನವೇ ರಮೇಶ್ ಕುಮಾರ್ ವಿರುದ್ಧ ಹಾಲಿ ಸಂಸದರು ಗುಡುಗಿರುವುದು ಕೋಲಾರ ಜಿಲ್ಲಾ ಕಾಂಗ್ರೆಸ್​ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
First published:April 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ