ಚುನಾವಣೆ ನಂಬಿ ಕೂರಲು ಸಾಧ್ಯವಿಲ್ಲ, ನನ್ನನ್ನೂ ಪರಿಷತ್ ಸದಸ್ಯನನ್ನಾಗಿ ಮಾಡಿ; ಬಿಎಸ್​ವೈ ಭೇಟಿಯಾಗಿ ಒತ್ತಡ ಹಾಕಿರುವ ಮುನಿರತ್ನ

ಇದೇ ಜೂನ್ 29ರಂದು ಏಳು ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈಗಿರುವ ಪಕ್ಷಗಳ ಬಲಾಬಲದಂತೆ ಬಿಜೆಪಿಗೆ 4 ಸ್ಥಾನ, ಕಾಂಗ್ರೆಸ್​ಗೆ 2 ಮತ್ತು ಜೆಡಿಎಸ್​ಗೆ 1 ಸ್ಥಾನ ಗೆಲ್ಲುವ ಅವಕಾಶ ಇದೆ. ಬಿಜೆಪಿಯಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಸಿಪಿ ಯೋಗೇಶ್ವರ್, ಆರ್ ಶಂಕರ್, ಹೆಚ್ ವಿಶ್ವನಾಥ್ ಮೊದಲಾದವರು ತೀವ್ರ ಪ್ರಯತ್ನ ನಡೆಸಿದ್ದಾರೆ.

news18-kannada
Updated:June 15, 2020, 5:11 PM IST
ಚುನಾವಣೆ ನಂಬಿ ಕೂರಲು ಸಾಧ್ಯವಿಲ್ಲ, ನನ್ನನ್ನೂ ಪರಿಷತ್ ಸದಸ್ಯನನ್ನಾಗಿ ಮಾಡಿ; ಬಿಎಸ್​ವೈ ಭೇಟಿಯಾಗಿ ಒತ್ತಡ ಹಾಕಿರುವ ಮುನಿರತ್ನ
ಮುನಿರತ್ನ
  • Share this:
ನವದೆಹಲಿ: ಇದೇ ಜೂನ್ 29ರಂದು ವಿಧಾನ ಪರಿಷತ್​ನ 7 ಸ್ಥಾನಗಳಿಗೆ ​ಚುನಾವಣೆ ನಡೆಯಲಿದೆ. ಹಿನ್ನೆಲೆಯಲ್ಲಿ ಮೂರು ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ. ಆಡಳಿತ ಪಕ್ಷ ಬಿಜೆಪಿಯಲ್ಲಿ ಅಭ್ಯರ್ಥಿ ಆಕ್ಷಾಂಕ್ಷಿ ಪಟ್ಟಿ ದೊಡ್ಡದಾಗಿದ್ದು, ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ನನ್ನನ್ನೂ ಎಂಎಲ್​ಸಿ ಅಭ್ಯರ್ಥಿಯನ್ನಾಗಿ ಮಾಡಿ ಎಂದು ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ ಗೌಪ್ಯವಾಗಿ ಸಿಎಂ ಬಿಎಸ್​ವೈ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ನಿಮ್ಮ ಸರ್ಕಾರ ಬರಲು ನಾನು ಕಾರಣ. ಭಾರೀ ಒತ್ತಡದ ನಡುವೆಯೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಿಮ್ಮನ್ನು ನಂಬಿಕೊಂಡು ಬಿಜೆಪಿಗೆ ಬಂದಿದ್ದೇನೆ. ಆದರೆ ಈವರೆಗೆ ನನ್ನ ವಿರುದ್ಧದ ಕೇಸ್ ವಾಪಸ್ ತೆಗಿಸಲಿಲ್ಲ. ನನ್ನ ಕ್ಷೇತ್ರದಲ್ಲಿ ಚುನಾವಣೆ ನಡೆದಿದ್ದರೆ ನಾನೂ ಗೆದ್ದಿರುತ್ತಿದ್ದೆ. ನನ್ನ ಪರಿಸ್ಥಿತಿ ಏನಕ್ಕೂ ಬೇಡದ ರೀತಿಯಾಗಿದೆ.  ಚುನಾವಣೆ ನಂಬಿ ಕೂರಲು ಸಾಧ್ಯವಿಲ್ಲ. ನನ್ನನ್ನೂ ಪರಿಷತ್ ಸದಸ್ಯನನ್ನಾಗಿ ಮಾಡಿ ಎಂದು ಮುನಿರತ್ನ ಅವರು ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಇದನ್ನು ಓದಿ: ಪರಿಷತ್ ಫೈಟ್: ವಿಶ್ವನಾಥ್, ಮುನಿರತ್ನ, ಸೋಮಶೇಖರ್ ಸಭೆ; ರೋಷನ್ ಬೇಗ್ ಸಿಎಂ ಭೇಟಿ

ಇದೇ ಜೂನ್ 29ರಂದು ಏಳು ವಿಧಾನಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಈಗಿರುವ ಪಕ್ಷಗಳ ಬಲಾಬಲದಂತೆ ಬಿಜೆಪಿಗೆ 4 ಸ್ಥಾನ, ಕಾಂಗ್ರೆಸ್​ಗೆ 2 ಮತ್ತು ಜೆಡಿಎಸ್​ಗೆ 1 ಸ್ಥಾನ ಗೆಲ್ಲುವ ಅವಕಾಶ ಇದೆ. ಬಿಜೆಪಿಯಲ್ಲಿ ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಸಿಪಿ ಯೋಗೇಶ್ವರ್, ಆರ್ ಶಂಕರ್, ಹೆಚ್ ವಿಶ್ವನಾಥ್ ಮೊದಲಾದವರು ತೀವ್ರ ಪ್ರಯತ್ನ ನಡೆಸಿದ್ದಾರೆ.

First published: June 15, 2020, 5:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading